ಒಂದೇ ತಿಂಗಳಲ್ಲಿ 19 ಮಿಲಿಯನ್ ಚಂದಾದಾರರನ್ನು ಕಳೆದುಕೊಂಡ ಜಿಯೋ!

|

ದೇಶದ ಟೆಲಿಕಾಂ ವಲಯದಲ್ಲಿ ಜಿಯೋ ಟೆಲಿಕಾಂ ಅಗ್ರಸ್ಥಾನದಲ್ಲಿದೆ. ಆದರೆ ಎರಡನೇ ತ್ರೈಮಾಸಿಕ ವರದಿ ಜಿಯೋ ಟೆಲಿಕಾಂಗೆ ಬಿಗ್‌ ಶಾಕ್‌ ನೀಡಿದೆ. ಅಗ್ಗದ ಬೆಲೆಯಲ್ಲಿ ಅಧಿಕ ಡೇಟಾ ಸೇರಿದಂತೆ ಅನೇಕ ಪ್ರಯೋಜನಗಳನ್ನು ನೀಡುತ್ತಾ ಬಂದಿದೆ. ಆದರೆ ಎರಡನೇ ತ್ರೈಮಾಸಿಕದಲ್ಲಿ ಭಾರ್ತಿ ಏರ್‌ಟೆಲ್‌ ಟೆಲಿಕಾಂ ಜಿಯೋಗೆ ಸೆಡ್ಡು ಹೊಡೆದಿದೆ. ಅದರಲ್ಲೂ ಈ ವರ್ಷದ ಸೆಪ್ಟೆಂಬರ್‌ ತಿಂಗಳಿನಲ್ಲಿ ಜಿಯೋ ಟೆಲಿಕಾಂ ಮೊಬೈಲ್ ಚಂದಾದಾರರ ಸಂಖ್ಯೆಯಲ್ಲಿ ಹೆಚ್ಚಿನ ನಷ್ಟವನ್ನು ಅನುಭವಿಸಿದೆ.

ಟೆಲಿಕಾಂ

ಹೌದು, ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ (TRAI) ಪ್ರಕಾರ, ಜಿಯೋ ಟೆಲಿಕಾಂ ಎರಡನೇ ತ್ರೈಮಾಸಿಕದಲ್ಲಿ ನಷ್ಟ ಅನುಭವಿಸಿದೆ. ತನ್ನ ಚಂದಾದಾರರ ಸಂಖ್ಯೆಯಲ್ಲಿ ಗಣನೀಯವಾದ ನಷ್ಟ ಅನುಭವಿಸಿದೆ. ಅದರಲ್ಲೂ ಜಿಯೋ ಟೆಲಿಕಾಂ ಈ ಅವಧಿಯಲ್ಲಿ 19 ಮಿಲಿಯನ್ ಚಂದಾದಾರರನ್ನು ಕಳೆದುಕೊಂಡಿದೆ. ಅದರೇ ಇದೇ ಸಮಯದಲ್ಲಿ ಭಾರ್ತಿ ಏರ್‌ಟೆಲ್ 2.74 ಲಕ್ಷ ಹೊಸ ಮೊಬೈಲ್ ಚಂದಾದಾರರನ್ನು ಗಳಿಸಿದೆ. ಹಾಗಾದ್ರೆ ಟ್ರಾಯ್‌ ನೀಡಿರುವ ಎರಡನೇ ತ್ರೈಮಾಸಿಕ ವರದಿಯಲ್ಲಿ ಏನಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಜಿಯೋ

ಕಳೆದ ಸೆಪ್ಟೆಂಬರ್‌ ತಿಂಗಳಿನಲ್ಲಿ ಜಿಯೋ 19 ಮಿಲಿಯನ್ ಚಂದಾದಾರರನ್ನು ಕಳೆದುಕೊಂಡಿದೆ. ಇದೇ ಸಮಯದಲ್ಲಿ ಭಾರ್ತಿ ಏರ್‌ಟೆಲ್ 2.74 ಲಕ್ಷ ಹೊಸ ಮೊಬೈಲ್ ಚಂದಾದಾರರನ್ನು ಗಳಿಸಿದೆ. ಅಲ್ಲದೆ ದೇಶದ ಮೂರನೇ ಅತಿದೊಡ್ಡ ಟೆಲಿಕಾಂ ಕಂಪನಿ ವೊಡಾಫೋನ್ ಐಡಿಯಾ 10.77 ಲಕ್ಷ ಸಂಪರ್ಕಗಳನ್ನು ಕಳೆದುಕೊಂಡಿದೆ. ಈ ಎರಡು ಟೆಲಿಕಾಂಗಳಿಗೆ ನಷ್ಟವಾದರೆ ಏರ್‌ಟೆಲ್ ಮಾತ್ರ ತನ್ನ ಚಂದಾದಾರರ ಸಂಖ್ಯೆಯನ್ನು ಆಗಸ್ಟ್‌ನಲ್ಲಿ 35.41 ಕೋಟಿಯಿಂದ ಸೆಪ್ಟೆಂಬರ್‌ನಲ್ಲಿ 35.44 ಮಿಲಿಯನ್‌ಗೆ ಏರಿಕೆ ಮಾಡಿಕೊಂಡಿದೆ.

ಮೊಬೈಲ್

ಇನ್ನು ಟ್ರಾಯ್‌ ನೀಡಿರುವ ವರದಿ ಪ್ರಕಾರಣ ಜಿಯೋದ ಮೊಬೈಲ್ ಚಂದಾದಾರರ ಸಂಖ್ಯೆ 42.48 ಮಿಲಿಯನ್ ಆಗಿದ್ದು, ಸೆಪ್ಟೆಂಬರ್‌ನಲ್ಲಿ 1.9 ಕೋಟಿ ಸಂಪರ್ಕಗಳನ್ನು ಕಳೆದುಕೊಂಡಿದೆ. ಈ ಅವಧಿಯಲ್ಲಿ ವೊಡಾಫೋನ್ ಐಡಿಯಾ ಗ್ರಾಹಕರ ಸಂಖ್ಯೆ 26.99 ಕೋಟಿಗೆ ಇಳಿದಿದೆ. ಇನ್ನು ಏರ್‌ಟೆಲ್‌ನ ವಾಯರ್‌ಲೆಸ್ ಚಂದಾದಾರರ ಮಾರುಕಟ್ಟೆ ಪಾಲು ಶೇಕಡಾ 0.08 ರಷ್ಟು ಹೆಚ್ಚಳವನ್ನು ದಾಖಲಿಸಿದೆ. ಇದಕ್ಕೆ ವ್ಯತಿರಿಕ್ತವಾಗಿ, ಜಿಯೋ ಮಾರುಕಟ್ಟೆ ಪಾಲು ಶೇಕಡಾ 4.29 ರಷ್ಟು ನಷ್ಟವನ್ನು ಅನುಭವಿಸಿದೆ.

ಮಾರುಕಟ್ಟೆ

ಇದಲ್ಲದೆ ಖಾಸಗಿ ಪ್ರವೇಶ ಸೇವಾ ಪೂರೈಕೆದಾರರು ವಾಯರ್‌ಲೆಸ್ ಚಂದಾದಾರರ ಮಾರುಕಟ್ಟೆಯಲ್ಲಿ 89.99% ಮಾರುಕಟ್ಟೆ ಪಾಲನ್ನು ಹೊಂದಿವೆ. ಆದರೆ ಇದೇ ಅವಧಿಯಲ್ಲಿ ಸರ್ಕಾರಿ-ಚಾಲಿತ MTNL ಮತ್ತು BSNL 10.01% ಮಾರುಕಟ್ಟೆ ಪಾಲನ್ನು ಪಡೆದುಕೊಂಡಿವೆ ಎಂದು ಟ್ರಾಯ್‌ ಹೇಳಿದೆ. ಸದ್ಯದ ಡೇಟಾ ಪ್ರಕಾರ, ಸೆಪ್ಟೆಂಬರ್ ಅಂತ್ಯದಲ್ಲಿ ಒಟ್ಟು ವಾಯರ್‌ಲೆಸ್ ಚಂದಾದಾರರು 1.74% ನಿಂದ 116.60 ಮಿಲಿಯನ್‌ಗೆ ಇಳಿದಿದ್ದಾರೆ. ಆದರೆ ಇದೇ ಅವಧಿಯಲ್ಲಿ, ನಗರ ಪ್ರದೇಶಗಳಲ್ಲಿ ವೈರ್‌ಲೆಸ್ ಚಂದಾದಾರಿಕೆಗಳು ಶೇಕಡಾ 1.92 ರಿಂದ ಸುಮಾರು 638 ಮಿಲಿಯನ್‌ಗೆ ಇಳಿಕೆ ಕಂಡಿವೆ. ಜೊತೆಗೆ ಗ್ರಾಮೀಣ ಪ್ರದೇಶಗಳಲ್ಲಿ ವಾಯರ್‌ಲೆಸ್ ಚಂದಾದಾರಿಕೆಗಳು ಶೇಕಡಾ 1.53 ರಷ್ಟು ಕುಸಿದು 528 ಮಿಲಿಯನ್‌ ಸಂಖ್ಯೆಗೆ ತಲುಪಿದೆ.

ಏರ್‌ಟೆಲ್‌

ಇದರ ನಡುವೆ ಏರ್‌ಟೆಲ್‌ನ ಅಂಕಿ ಅಂಶಗಳನ್ನು ಗಮನಿಸಿದರೆ ಎರಡನೇ ತ್ರೈಮಾಸಿಕದಲ್ಲಿ ಗಮನಾರ್ಹ ಬೆಳವಣಿಗೆ ಕಂಡಿದೆ. ಈ ಅವಧಿಯಲ್ಲಿ ಏರ್‌ಟೆಲ್‌ನ ಚಂದಾದಾರರ ಸಂಖ್ಯೆಯಲ್ಲಿ 1.38 ಲಕ್ಷ ಹೆಚ್ಚಳವಾಗಿದೆ. ಅಲ್ಲದೆ ಸೆಪ್ಟೆಂಬರ್ ನಲ್ಲಿ 2.74 ಲಕ್ಷ ಏರಿಕೆಯಾಗಿದೆ. ಆಗಸ್ಟ್‌ನಲ್ಲಿ ಗರಿಷ್ಠ 6.5 ಲಕ್ಷ ಬಳಕೆದಾರರು ಜಿಯೋ ಕನೆಕ್ಟಿವಿಟಿ ಹೊಂದಿದ್ದವರು, ಸೆಪ್ಟೆಂಬರ್ ನಲ್ಲಿ 1.9 ಕೋಟಿಗೆ ಕುಸಿದಿದ್ದಾರೆ. ಆದರೂ ಈ ಕುಸಿತವನ್ನು ವಿ ಟೆಲಿಕಾಂ ಲಾಭವಾಗಿಸಿಕೊಳ್ಳುವಲ್ಲಿ ಸೋತಿದೆ. ಜಿಯೋ ಟೆಲಿಕಾಂ ನಷ್ಟವನ್ನು ಏರ್‌ಟೆಲ್‌ ಪಡೆದುಕೊಂಡಿದ್ದರೆ ವಿ ಟೆಲಿಕಾಂ ಎಂದಿನಂತೆ ತನ್ನ ಚಂದಾದಾರರನ್ನು ಕಳೆದುಕೊಳ್ಳುತ್ತಾ ಸಾಗಿದೆ. ಅಕ್ಟೋಬರ್‌ನಲ್ಲಿ 8.33 ಲಕ್ಷದ ನಂತರ, ಸೆಪ್ಟೆಂಬರ್‌ನಲ್ಲಿ Vi ಬಳಕೆದಾರರಲ್ಲಿ 10.77 ಲಕ್ಷ ಇಳಿಕೆಯಾಗಿದೆ.

ಏರ್‌ಟೆಲ್‌

ಇನ್ನು ಇದರ ನಡುವೆ ಎರಡು ದಿನಗಳ ಹಿಂದೆ ಏರ್‌ಟೆಲ್‌ ಹಾಗೂ ವಿ ಟೆಲಿಕಾಂಗಳು ತಮ್ಮ ಪ್ರಿಪೇಯ್ಡ್‌ ಪ್ಲಾನ್‌ಗಳ ಬೆಲೆಯನ್ನು ಹೆಚ್ಚಳ ಮಾಡಿವೆ. ಪ್ರಿಪೇಯ್ಡ್‌ ಪ್ಲಾನ್‌ಗಳ ಬೆಲೆ ಮಾತ್ರ ಹೆಚ್ಚಳವಾಗಿದ್ದು, ಪ್ರಯೋಜನಗಳಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಿಲ್ಲ. ಸದ್ಯ ಈ ಹೊಸ ಬೆಲೆಗಳು ಇದೇ ನವೆಂಬರ್ 25 ರಿಂದ ಜಾರಿಗೆ ಬರಲಿದೆ. ಸದ್ಯ ಏರ್‌ಟೆಲ್‌ ಮತ್ತು ವಿ ಟೆಲಿಕಾಂ ಮಾತ್ರ ಬೆಲೆ ಹೆಚ್ಚಳ ಮಾಡಿವೆ. ಜಿಯೋ ಟೆಲಿಕಾಂ ಕೂಡ ಇದೇ ಹಾದಿಯಲ್ಲಿ ನಡೆಯುವ ಸಾದ್ಯತೆ ಇದೆ. ಒಂದು ವೇಳೆ ಜಿಯೋ ಟೆಲಿಕಾಂ ಬೆಲೆ ಹೆಚ್ಚಳ ಮಾಡದೆ ಹೋದರೆ ಜಿಯೋ ಗ್ರಾಹಕರಿಗೆ ಲಾಭವಾಗಲಿದೆ.

Most Read Articles
Best Mobiles in India

Read more about:
English summary
The number of mobile subscribers of Jio remains at 42.48 million and lost 1.9 crore connections in September.to know more visit to kannada.gizbot.com.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X