ಆಕರ್ಷಕ ಆಯ್ಕೆ!..ಲಾವಾ ಅಗ್ನಿ 5G ಫೋನಲ್ಲಿ ನಿಮ್ಮಿಷ್ಟದ ಹೆಸರು ಬರೆಯಬಹುದು!

|

ಭಾರತದ ಪ್ರಮುಖ ಸ್ವದೇಶಿ ಮೊಬೈಲ್ ಕಂಪನಿಗಳಲ್ಲಿ ಒಂದಾದ ಲಾವಾ ಮೊಬೈಲ್ಸ್, ಅಗ್ನಿ 5G ಸ್ಮಾರ್ಟ್‌ಫೋನ್ ಅನ್ನು ವೈಯಕ್ತೀಕರಿಸಲು ನಿಮಗೆ ಅವಕಾಶ ನೀಡುತ್ತದೆ. 'MyAgni' ಎಂದು ಕರೆಯಲ್ಪಡುವ ಈ ಆಯ್ಕೆಯು ಅಗ್ನಿ 5G ಫೋನಿನ ಹಿಂಭಾಗದಲ್ಲಿ ನಿಮ್ಮ ಹೆಸರು, ನಿಮ್ಮ ಸಂಗಾತಿಯ ಹೆಸರು ಅಥವಾ ನಿಮ್ಮ ಇಷ್ಟದ ಹೆಸರನ್ನು ನಮೂದಿಸಲು ನಿಮಗೆ ಅನುಮತಿಸುತ್ತದೆ. ಈ ಹೊಸ ವೈಯಕ್ತೀಕರಣ ಆಯ್ಕೆಯು ಇಂದಿನಿಂದ ಲಾವಾ ಇಂಟರ್‌ನ್ಯಾಶನಲ್ ವೆಬ್‌ಸೈಟ್‌ನಲ್ಲಿ ಲಭ್ಯವಾಗಲಿದೆ.

ವಿನ್ಯಾಸ

ಹೌದು, ಲಾವಾ ಮೊಬೈಲ್ಸ್ ಇದೀಗ ಫೋನಿನ ಹಿಂಭಾಗದಲ್ಲಿ ಹೆಸರು ನಮೂದಿಸುವ ಆಯ್ಕೆ ತಿಳಿಸಿದೆ. ಅಂದಹಾಗೇ ಅಗ್ನಿ 5G ಸ್ಮಾರ್ಟ್‌ಫೋನ್‌ಗಾಗಿ ಮಾತ್ರ ಈ ವಿಶೇಷ ಆಯ್ಕೆ ಪರಿಚಯಿಸಿದೆ. 'ಇದು ಸ್ಮಾರ್ಟ್‌ಫೋನ್ ತಯಾರಕರು ಪರಿಚಯಿಸಿದ ಮೊದಲ-ರೀತಿಯ ವಿನ್ಯಾಸ ಅಂಶವಾಗಿದೆ. ಇದು ದೊಡ್ಡ-ಪ್ರಮಾಣದ ಗ್ರಾಹಕರ ಗಮನವನ್ನು ಸೆಳೆಯುವ ಗುರಿಯನ್ನು ಹೊಂದಿದೆ. ಈ ಆಯ್ಕೆಗಾಗಿ ಗ್ರಾಹಕರು ಲಾವಾ ಇಂಟರ್‌ನ್ಯಾಷನಲ್‌ನ ಅಧಿಕೃತ ವೆಬ್‌ಸೈಟ್‌ನಲ್ಲಿ ಆರ್ಡರ್‌ಗಳನ್ನು ಬುಕ್ ಮಾಡಬಹುದು' ಎಂದು ಲಾವಾ ಮೊಬೈಲ್ಸ್ ತಿಳಿಸಿದೆ.

ಸ್ಮಾರ್ಟ್‌ಫೋನ್‌ಗಾಗಿ

ಲಾವಾ ಇಂಟರ್‌ನ್ಯಾಶನಲ್ ಲಿಮಿಟೆಡ್ ಭಾರತೀಯ ಫೋನ್ ತಯಾರಕ ಕಂಪನಿಯು ಉತ್ಪನ್ನ ನಾವೀನ್ಯತೆ ಮತ್ತು ವಿನ್ಯಾಸದ ಅನ್ವೇಷಣೆಯನ್ನು ನಿರಂತರವಾಗಿ ಮುಂದುವರಿಸುತ್ತಿದೆ. ಅದೇ ಹಾದಿಯಲ್ಲಿ ಮುಂದುವರೆದಿರುವ ಲಾವಾ ಈಗ ತನ್ನ ಅಗ್ನಿ 5G ಸ್ಮಾರ್ಟ್‌ಫೋನ್‌ಗಾಗಿ ಈ ಹೊಸ ಆಯ್ಕೆ ಪ್ರಕಟಿದೆ. ಗ್ರಾಹಕರು ತಮ್ಮ ಫೋನ್‌ಗಳನ್ನು ಫೋನ್‌ನ ಹಿಂಭಾಗದಲ್ಲಿ ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ ತಮ್ಮ ಫೋನ್‌ಗಳನ್ನು ವೈಯಕ್ತೀಕರಿಸಲು ಅನುವು ಮಾಡಿಕೊಡುತ್ತದೆ.

ವೆಚ್ಚವಿಲ್ಲದೆ

ಗ್ರಾಹಕರು LAVA E-Store (www.lavamobiles.com) ನಿಂದ ಗ್ರಾಹಕೀಕರಣ ಆಯ್ಕೆಯ ಪ್ರಯೋಜನವನ್ನು ಪಡೆಯಬಹುದು. ಕೂಪನ್ ಕೋಡ್ ಅನ್ನು ರಚಿಸಲು ತಮ್ಮ ವಿವರಗಳನ್ನು ಸರಳವಾಗಿ ನಮೂದಿಸುವ ಮೂಲಕ ಮತ್ತು ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ ವೈಯಕ್ತಿಕಗೊಳಿಸಿದ ಕೆತ್ತನೆಯನ್ನು ಪಡೆಯಲು ಅದನ್ನು ಬಳಸಿಕೊಳ್ಳಬಹುದು. ಹಾಗಾದರೇ ಲಾವಾ ಲಾವಾ ಅಗ್ನಿ 5G ಫೋನಿನ ಫೀಚರ್ಸ್‌ಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಲಾವಾ ಅಗ್ನಿ 5G ಫೀಚರ್ಸ್‌

ಲಾವಾ ಅಗ್ನಿ 5G ಫೀಚರ್ಸ್‌

ಲಾವಾ ಅಗ್ನಿ 5G ಫೋನ್ 90Hz ರಿಫ್ರೆಶ್ ದರದೊಂದಿಗೆ 6.78 ಇಂಚಿನ ಪೂರ್ಣ ಹೆಚ್‌ಡಿ+ ಡಿಸ್‌ಪ್ಲೇ ಅನ್ನು ಹೊಂದಿದೆ. ಇದು ಆಂಡ್ರಾಯ್ಡ್‌ 11 OS ನಲ್ಲಿ ಕಾರ್ಯ ನಿರ್ವಹಿಸುತ್ತದೆ. ಹಾಗೆಯೇ ಈ ಫೋನ್ ಆಕ್ಟಾ ಕೋರ್ ಮೀಡಿಯಾ ಟೆಕ್ ಡೈಮೆನ್ಸಿಟಿ 810 ಪ್ರೊಸೆಸರ್ ಸಾಮರ್ಥ್ಯವನ್ನು ಒಳಗೊಂಡಿದ್ದು, ಜೊತೆಗೆ ಇದು 8GB RAM ಮತ್ತು 128 GB ಆಂತರಿಕ ಸಂಗ್ರಹಣೆಯ ಆಯ್ಕೆಯನ್ನು ಪಡೆದುಕೊಂಡಿದೆ.

ಪಿಕ್ಸೆಲ್

ಈ ಫೋನ್ ಟ್ರಿಪಲ್‌ ಕ್ಯಾಮೆರಾ ರಚನೆಯನ್ನು ಪಡೆದಿದ್ದು, ಇದು 64 ಮೆಗಾ ಪಿಕ್ಸೆಲ್ ಪ್ರಾಥಮಿಕ ಸಂವೇದಕ, 5 ಮೆಗಾ ಪಿಕ್ಸೆಲ್ ವೈಡ್-ಆಂಗಲ್ ಕ್ಯಾಮೆರಾ, 2 ಮೆಗಾ ಪಿಕ್ಸೆಲ್ ಡೆಪ್ತ್ ಸೆನ್ಸಾರ್ ಮತ್ತು 2 ಮೆಗಾ ಪಿಕ್ಸೆಲ್ ಮ್ಯಾಕ್ರೋ ಕ್ಯಾಮೆರಾ ಸೇರಿದಂತೆ ಸೂಪರ್ ನೈಟ್, AI ಮೋಡ್ ಮತ್ತು ಪ್ರೊ ಮೋಡ್‌ನಂತಹ ಆಯ್ಕೆಗಳನ್ನು ಪಡೆದಿದೆ. ಜೊತೆಗೆ ಮುಂಭಾಗದಲ್ಲಿ 16 ಮೆಗಾ ಪಿಕ್ಸೆಲ್ ಕ್ಯಾಮೆರಾ ಇದೆ.

ಬಳಸುತ್ತದೆ

ಹಾಗೆಯೇ ಲಾವಾ ಅಗ್ನಿ 5G ನಲ್ಲಿ ಬಯೋಮೆಟ್ರಿಕ್ಸ್‌ಗಾಗಿ ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ರೀಡರ್ ಮತ್ತು ಮುಖದ ಗುರುತಿಸುವಿಕೆ ಇದೆ. ಫೋನ್ 5,000mAh ಬ್ಯಾಟರಿಯನ್ನು ಬಳಸುತ್ತದೆ ಅದು 30W ವೇಗದ ಚಾರ್ಜಿಂಗ್ ಪರಿಹಾರವನ್ನು ಬೆಂಬಲಿಸುತ್ತದೆ. ಸಂಪರ್ಕ ಆಯ್ಕೆಗಳು ಸೇರಿವೆ- 5G, 4G VoLTE, Wi-Fi, ಬ್ಲೂಟೂತ್, GPS/ A-GPS, ಮತ್ತು USB-C ಪೋರ್ಟ್.

ಈ ಫೋನಿನ ಬೆಲೆ ಎಷ್ಟು?

ಈ ಫೋನಿನ ಬೆಲೆ ಎಷ್ಟು?

ಲಾವಾ ಅಗ್ನಿ 5G ಕಳೆದ ವರ್ಷ ನವೆಂಬರ್‌ನಲ್ಲಿ ಕಂಪನಿಯ ಮೊದಲ 5G ಸ್ಮಾರ್ಟ್‌ಫೋನ್ ಆಗಿ ಬಿಡುಗಡೆಯಾಯಿತು. ಆರಂಭದಲ್ಲಿ ಈ ಫೋನ್ 17,999 ರೂ.ಗಳ ಪರಿಚಯಾತ್ಮಕ ಬೆಲೆಯಲ್ಲಿ ಬಂದಿದೆ. ಆದರೆ ಮೂಲ ಬೆಲೆ 19,999 ರೂ. ಆಗಿದೆ. ಹಾಗೆಯೇ ಇದರ ಪ್ರಸ್ತುತ ಬೆಲೆ ಸಹ 19,999 ರೂ. ಆಗಿದೆ.

Best Mobiles in India

English summary
Lava announces customisation feature in Agni 5G Smartphones: Details.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X