ಲಾವಾ ಸಂಸ್ಥೆಯಿಂದ ಇಂಡಿಯನ್ ಆವೃತ್ತಿ ‌ಫೋನ್‌ ಬಿಡುಗಡೆ!

|

ದೇಶದಲ್ಲಿ 74 ನೇ ಸ್ವಾತಂತ್ರ್ಯ ದಿನಾಚರಣೆಯ ಆಚರಣೆಗೆ ಇನ್ನೇನು ಕೆಲವೇ ದಿನಗಳಷ್ಟೇ ಬಾಕಿ ಉಳಿದಿವೆ. ಇದೇ ಸಂದರ್ಭದಲ್ಲಿ ಲಾವಾ ಕಂಪೆನಿ ತನ್ನ ಲಾವಾ Z 61 ಪ್ರೊ, ಲಾವಾ A5 ಮತ್ತು ಲಾವಾ A9 ‌ಫೋನ್‌ಗಳು ಭಾರತದಲ್ಲಿ 'ಪ್ರೌಡ್ಲಿ ಇಂಡಿಯನ್' ವಿಶೇಷ ಆವೃತ್ತಿಯ ರೂಪಾಂತರಗಳನ್ನು ಪಡೆದುಕೊಂಡಿವೆ. ಈ ಸೀಮಿತ ಆವೃತ್ತಿಯ ಫೋನ್‌ಗಳು ರಿಯರ್‌ ಸೈಡ್‌ನಲ್ಲಿ embossed # ಪ್ರಾಡ್ಲಿ ಇಂಡಿಯನ್ ಲೋಗೊ ಅಥವಾ ಟ್ರೈ-ಕಲರ್ ಪ್ರೇರಿತ ರಿಯರ್‌ ಕವರ್ ಅನ್ನು ಒಳಗೊಂಡ ಡಿಸೈನ್‌ ಅನ್ನು ಒಳಗೊಂಡಿದೆ.

ಲಾವಾ

ಹೌದು, ಲಾವಾ ಕಂಪೆನಿ 74 ನೇ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಪ್ರೌಡ್ಲಿ ಇಂಡಿಯನ್' ವಿಶೇಷ ಆವೃತ್ತಿಯ ರೂಪಾಂತರದ ಸ್ಮಾರ್ಟ್‌ಫೋನ್‌ಗಳನ್ನ ಹೊರತಂದಿದೆ. ಈ ವರ್ಷದ ಜುಲೈನಲ್ಲಿ ಬಿಡುಗಡೆ ಆಗಿದ್ದ, ಲಾವಾ Z 61 ಪ್ರೊ, # ಪ್ರೌಡ್ಲಿ ಇಂಡಿಯನ್ ಲೋಗೋ ಅಡಿಯಲ್ಲಿ ಷಾಂಪೇನ್ ಗೋಲ್ಡ್ ರೂಪಾಂತರದಲ್ಲಿ ಹೊಸ ವಿನ್ಯಾಸದಲ್ಲಿ ಲಭ್ಯವಾಗಲಿದೆ. ಇತರ ಎರಡು ಫೋನ್‌ಗಳು ಟ್ರೈ-ಕಲರ್ ಬ್ಯಾಕ್ ಪ್ಯಾನೆಲ್‌ಗಳನ್ನು ಪಡೆದುಕೊಂಡಿದ್ದು, ಎಲ್ಲಾ ಮೂರು ಮಾದರಿಯ ಸ್ಮಾರ್ಟ್‌ಫೋನ್‌ಗಳು ಶೀಘ್ರದಲ್ಲೇ ಮಳಿಗೆಗಳು ಮತ್ತು ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳ ಮೂಲಕ ಲಭ್ಯವಾಗಲಿವೆ ಎಂದು ಕಂಪನಿ ಹೇಳಿದೆ. ಹಾಗಾದ್ರೆ ಹೊಸ ವಿನ್ಯಾಸ ಹೊಂದಿರುವ ಈ ಸ್ಮಾರ್ಟ್‌ಫೋನ್‌ಗಳ

ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಲಾವಾ Z61 ಪ್ರೊ ‌ಫೋನ್‌

ಲಾವಾ Z61 ಪ್ರೊ ‌ಫೋನ್‌

ಲಾವಾ Z61 ಪ್ರೊ ‌ಫೋನ್‌ 5.45 ಇಂಚಿನ ಎಚ್‌ಡಿ + ಡಿಸ್‌ಪ್ಲೇಯನ್ನು ಹೊಂದಿದ್ದು. ಡಿಸ್‌ಪ್ಲೇ ದಪ್ಪವಾದ ಬೆಜೆಲ್ ವಿನ್ಯಾಸವನ್ನು ಹೊಂದಿದೆ. ಇದು 18: 9 ರಚನೆ ಅನುಪಾತವನ್ನು ಹೊಂದಿದೆ. ಇನ್ನು ಈ ‌ಫೋನ್‌ 1.6GHz ಆಕ್ಟಾ-ಕೋರ್ ಪ್ರೊಸೆಸರ್ ಹೊಂದಿದ್ದು, 2GB RAM ಮತ್ತು 16GB ಇಂಟರ್‌ ಸ್ಟೋರೇಜ್‌ ಅನ್ನು ಹೊಂದಿದೆ. ಅಲ್ಲದೆ ಮೆಮೊರಿ ಕಾರ್ಡ್ ಮೂಲಕ 128GB ವರೆಗೆ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸಬಹುದಾಗಿದೆ. ಇನ್ನುಳಿದಂತೆ ಈ ಸ್ಮಾರ್ಟ್‌ಫೋನ್‌ 8 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸಿಂಗಲ್‌ ರಿಯರ್‌ ಕ್ಯಾಮೆರಾ ಮತ್ತು 5 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ. ಅಲ್ಲದೆ ಇದು 3,100mAh ಬ್ಯಾಟರಿ ಸಾಮರ್ಥ್ಯವನ್ನು ಹೊಂದಿದೆ.

ಲಾವಾ A5 ‌ಫೋನ್‌

ಲಾವಾ A5 ‌ಫೋನ್‌

ಲಾವಾ A5 ‌ಫೋನ್‌ 240x320 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 2.4-ಇಂಚಿನ QVGA ಡಿಸ್‌ಪ್ಲೇಯನ್ನು ಹೊಂದಿದೆ. ಇನ್ನು ಇದು ಕೂಡ ಸಿಂಗಲ್‌ ರಿಯರ್‌ಕ್ಯಾಮೆರಾ ಹೊಂದಿದ್ದು, ಇದು 0.3 ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಹೊಂದಿದೆ. ಜೊತೆಗೆ ಈ ಸ್ಮಾರ್ಟ್‌ಫೋನ್‌ನಲ್ಲಿ ಸಂಗ್ರಹ ಸಾಮರ್ಥ್ಯವನ್ನು 32GB ವರೆಗೆ ವಿಸ್ತರಿಸಬಹುದಾಗಿದೆ. ಅಲ್ಲದೆ ಇದು ಬ್ಲೂಟೂತ್ ಕನೆಕ್ಟಿವಿಟಿ ಮತ್ತು 1,000mAh ಬ್ಯಾಟರಿ ಸಾಮರ್ಥ್ಯವನ್ನು ಹೊಂದಿದೆ.

ಲಾವಾ A9 ಫೋನ್‌

ಲಾವಾ A9 ಫೋನ್‌

ಇನ್ನು ಲಾವಾ A9 ಫೀಚರ್ ಫೋನ್ 240x320 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 2.8 ಇಂಚಿನ QVGA ಡಿಸ್‌ಪ್ಲೇಯನ್ನು ಹೊಂದಿದೆ. ಇದಲ್ಲದೆ ಈ ‌ಫೋನ್‌ ಸಿಂಗಲ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಹೊಂದಿದ್ದು, 1.3 ಮೆಗಾಪಿಕ್ಸೆಲ್ ಸೆನ್ಸಾರ್‌ ಕ್ಯಾಮೆರಾವನ್ನು ಹೊಂದಿದೆ. ಹಾಗೇಯೇ 4MB RAM ಮತ್ತು 32GB ವರೆಗೆ ಆಂತರಿಕ ಸಂಗ್ರಹ ಸಾಮರ್ಥ್ಯವನ್ನು ಹೊಂದಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಬ್ಲೂಟೂತ್, FM ಮತ್ತು 3.5mm ಹೆಡ್‌ಫೋನ್ ಜ್ಯಾಕ್‌ ಅನ್ನು ಹೊಂದಿದೆ. ಅಲ್ಲದೆ ಇದು 1,700mAh ಬ್ಯಾಟರಿ ಸಾಮರ್ಥ್ಯವನ್ನು ಹೊಂದಿದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಲಾವಾ Z61 ಪ್ರೊ ‌ಫೋನ್‌ ಬೆಲೆ 5,777 ರೂ ಆಗಿದ್ದು, ಷಾಂಪೇನ್ ಗೋಲ್ಡ್ ಕಲರ್ ರೂಪಾಂತರದಲ್ಲಿ ಬರುತ್ತದೆ, ಇದು ಮೊದಲೇ ಹೇಳಿದಂತೆ ಹಿಂಭಾಗದಲ್ಲಿ # ಪ್ರೌಡ್ಲಿ ಇಂಡಿಯನ್ ಲೋಗೊವನ್ನು ಹೊಂದಿದೆ. ಇನ್ನು ಲಾವಾ A5 ಮತ್ತು ಲಾವಾ A9 ಫೋನ್‌ಗಳು ರಾಷ್ಟ್ರೀಯ ಬಣ್ಣಗಳಾದ ತ್ರಿ ಬಣ್ಣದ ಬ್ಯಾಕ್ ಪ್ಯಾನಲ್ ಅನ್ನು ಹೊಂದಿವೆ. ಲಾವಾ A5 ಬೆಲೆ 1,333,ರೂ ಮತ್ತು ಲಾವಾ A9 ಬೆಲೆ 1,574 ರೂ ಆಗಿದೆ.

Most Read Articles
Best Mobiles in India

English summary
Lava Z61 Pro was launched in July at Rs. 5,774 in Midnight Blue and Amber Red colour options.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X