'ಲಾವಾ Z53' ಸ್ಮಾರ್ಟ್‌ಫೋನ್‌ ಬಿಡುಗಡೆ.!..ಬೆಲೆ 4,829 ರೂ.!

|

ಕಡಿಮೆ ಬೆಲೆಯ ಸ್ಮಾರ್ಟ್‌ಫೋನ್‌ಗಳ ಭಾರತೀಯ ಮಾರುಕಟ್ಟೆಯಲ್ಲಿ ಪರಿಚಯಿಸೋ ಮೂಲಕ ಈಗಾಗ್ಲೆ ಲಾವಾ ಕಂಪೆನಿ ಸೈ ಎನಿಸಿಕೊಂಡಿದೆ. ಬಜೆಟ್‌ ಬೆಲೆಯ ಗ್ರಾಹಕರಿಗೆ ತಕ್ಕಂತೆ ಫೀಚರ್ಸ್‌ಗಳನ್ನು ಒಳಗೊಂಡ ಸ್ಮಾರ್ಟ್‌ಫೋನ್‌ಗಳನ್ನ ಬಿಡುಗಡೆ ಮಾಡುವ ಲಾವಾ ಕಂಪೆನಿ. ಇದೀಗ ಹೊಸ ಆವೃತ್ತಿಯ ಲಾವಾ Z53 ಎಂಟ್ರಿ ಲೆವೆಲ್ ಸ್ಮಾರ್ಟ್‌ಫೋನ್ ಅನ್ನು ಭಾರತದಲ್ಲಿ ಲಾಂಚ್‌ ಮಾಡಿದೆ.

ಹೌದು

ಹೌದು, ಲಾವಾ ಕಂಪೆನಿ ಹೊಸ ಲಾವಾ Z53 ಎಂಟ್ರಿ ಲೆವೆಲ್ ಸ್ಮಾರ್ಟ್‌ಫೋನ್ ಅನ್ನು ಭಾರತೀಯ ಮಾರುಕಟ್ಟೆಗೆ ಪರಿಚಯಿಸಿದ್ದು, ಈ ಸ್ಮಾರ್ಟ್‌ಫೋನ್‌ ಬೆಲೆ ಕೇವಲ 4,829 ರೂ ಆಗಿದೆ. ಅಲ್ಲದೆ ಪ್ರಾರಂಭಿಕ ಮಾರಾಟದ ಪ್ರಯುಕ್ತ ಜಿಯೋ ಬಳಕೆದಾರರು ಖರೀದಿಸಿದರೆ 1,200 ರೂ. ಇನಸ್ಟಂಟ್‌ ಕ್ಯಾಶ್‌ಬ್ಯಾಕ್‌ ಅನ್ನು ಸಹ ನೀಡಲಾಗ್ತಿದೆ. ಜೊತೆಗೆ ಲಾವಾ Z53 ಖರೀದಿದಾರರು ಜಿಯೋ ಆಪ್‌ನಲ್ಲಿ ಪ್ರತಿ ರೀಚಾರ್ಜ್‌ಗೆ 50GB ಹೆಚ್ಚುವರಿ ಡೇಟಾವನ್ನು ಸಹ ನೀಡಲಾಗ್ತಿದೆ. ಸದ್ಯ ಬಜೆಟ್‌ ಬೆಲೆಯ ಸ್ಮಾರ್ಟ್‌ಫೋನ್‌ ಆಗಿರುವ ಲಾವಾ Z53 ಒಳಗೊಂಡಿರುವ ಫೀಚರ್ಸ್‌ಗಳೇನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿ.

ಡಿಸ್‌ಪ್ಲೇ

ಡಿಸ್‌ಪ್ಲೇ

ಲಾವಾ Z53 ಸ್ಮಾರ್ಟ್‌ಫೋನ್‌ 600 x 1280 ಪಿಕ್ಸೆಲ್‌ ರೆಸಲ್ಯೂಶನ್ ಹೊಂದಿರುವ 6.1-ಇಂಚಿನ ಡಿಸ್‌ಪ್ಲೇಯನ್ನ ಹೊಂದಿದೆ. ಅಲ್ಲದೆ ಈ ಡಿಸ್‌ಪ್ಲೇ 19: 9 ಆಸ್ಪೆಕ್ಟ್‌ ರೆಶೀಯೋ ಹೊಂದಿದ್ದು,

ಸ್ಕ್ರೀನ್‌ ಟು ಬಾಡಿ ರೆಶೀಯೋ 102.49 % ಅನುಪಾತವನ್ನು ಹೊಂದಿದೆ. ಇನ್ನು ಈ ಡಿಸ್‌ಪ್ಲೇ ವಾಟರ್‌ಡ್ರಾಪ್‌ ನಾಚ್‌ ಶೈಲಿಯನ್ನ ಹೊಂದಿದ್ದು, TFT ವಿನ್ಯಾಸವನ್ನು ಹೊಂದಿದೆ. ಜೊತೆಗೆ 232 ಪಿಪಿಐ ರೆಸಲ್ಯೂಶನ್‌ ಸಾಂದ್ರತೆಯನ್ನ ಒಳಗೊಂಡಿದೆ. ಅಷ್ಟೇ ಅಲ್ಲ ಇದು ಕೇವಲ 0.4 ಸೆಕೆಂಡುಗಳಲ್ಲಿ ಫೋನ್ ಅನ್ನು ಅನ್ಲಾಕ್ ಮಾಡಬಹುದು ಎಂದು ಕಂಪನಿ ಹೇಳಿಕೊಂಡಿದೆ.

ಪ್ರೊಸೆಸರ್‌

ಪ್ರೊಸೆಸರ್‌

ಈ ಸ್ಮಾರ್ಟ್‌ಫೋನ್‌ 1.4GHz ಕ್ವಾಡ್-ಕೋರ್ ಪ್ರೊಸೆಸರ್ ಹೊಂದಿದ್ದು,ಆಂಡ್ರಾಯ್ಡ್‌ 9 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಇನ್ನು ಲಾವಾ Z53 ಸ್ಮಾರ್ಟ್‌ಫೋನ್‌ 1GB ಮತ್ತು 2GB RAM ವೇರಿಯೆಂಟ್‌ ಆಯ್ಕೆಗಳಲ್ಲಿ ಲಭ್ಯವಿದ್ದು, 16GB ಶೇಖರಣಾ ಸಾಮರ್ಥ್ಯವನ್ನ ಹೊಂದಿದೆ. ಅಲ್ಲದೆ ಮೆಮೊರಿ ಕಾರ್ಡ್‌ ಮೂಲಕ 256GB ವರೆಗೆ ಶೇಖರಣಾ ಸಾಮರ್ಥ್ಯವನ್ನ ವಿಸ್ತರಿಸಬಹುದಾಗಿದೆ.

ಕ್ಯಾಮೆರಾ ವಿನ್ಯಾಸ

ಕ್ಯಾಮೆರಾ ವಿನ್ಯಾಸ

ಲಾವಾ Z53 ಸ್ಮಾರ್ಟ್‌ಫೋನ್‌ ರಿಯರ್‌ ಕ್ಯಾಮೆರಾ ಸೆಟ್‌ಆಪ್‌ ಹೊಂದಿದ್ದು, ರಿಯರ್‌ ಕ್ಯಾಮೆರಾ 8ಮೆಗಾ ಪಿಕ್ಸೆಲ್‌ ಸೆನ್ಸಾರ್‌ ಅನ್ನು ಹೊಂದಿದ್ದು, ಸೆಲ್ಫ ಕ್ಯಾಮೆರಾದಲ್ಲಿ 5ಮೆಗಾ ಪಿಕ್ಸೆಲ್‌ ಸೆನ್ಸಾರ್‌ ಅನ್ನು ಒಳಗೊಂಡಿದೆ. ಇನ್ನು ಈ ಕ್ಯಾಮೆರಾದಲ್ಲಿ 3264 x 2448 ಪಿಕ್ಸೆಲ್‌ ಇಮೇಜ್‌ ರೆಸಲ್ಯೂಶನ್‌ ಹೊಂದಿದ್ದು, ಹೈ ಡೈನಾಮಿಕ್ ರೇಂಜ್ ಮೋಡ್, ಬರ್ಸ್ಟ್ ಮೋಡ್, ಹಾಗೂ ಡಿಜಿಟಲ್ ಜೂಮ್ ಫೀಚರ್ಸ್‌ ಗಳನ್ನ ನೀಡಲಾಗಿದ್ದು,ಈ ಕ್ಯಾಮೆರಾ ಎಲ್ಇಡಿ ಫ್ಲ್ಯಾಶ್ ಅನ್ನು ಒಳಗೊಂಡಿದೆ.

ಬ್ಯಾಟರಿ

ಬ್ಯಾಟರಿ

ಇನ್ನು ಈ ಸ್ಮಾರ್ಟ್‌ಫೋನ್‌ 4,120mAh ಬ್ಯಾಟರಿ ಪ್ಯಾಕ್‌ ಆಪ್‌ ಅನ್ನು ಹೊಂದಿದ್ದು, 5W ವೇಗದ ಚಾರ್ಜರ್ ಸಹ ಹೊಂದಿದೆ. ಇದಲ್ಲದೆ ಇದು ಅಲ್ಟ್ರಾ-ಪವರ್ ಸೇವರ್ ಮೋಡ್‌ ಅನ್ನು ಹೊಂದಿದ್ದು, ಗ್ರಾಹಕರು 2 ದಿನಗಳ ಬ್ಯಾಟರಿ ಬ್ಯಾಕಪ್ ಮತ್ತು ವಾಯ್ಸ್‌ ಕಾಲಿಂಗ್‌ ನಲ್ಲಿ 35 ಗಂಟೆಗಳ ಬ್ಯಾಟರಿ ಬ್ಯಾಕ್‌ ಆಪ್‌ ನೀಡಲಿದೆ ಎಂದು ಕಂಪೆನಿ ಹೇಳಿಕೊಂಡಿದೆ. ಬಜೆಟ್‌ ಬೆಲೆಯಲ್ಲಿ ಉತ್ತಮ ಬ್ಯಾಟರಿ ಬ್ಯಾಕ್‌ಆಪ್‌ ನೀಡಬಲ್ಲ ಸ್ಮಾರ್ಟ್‌ಫೋನ್‌ ಇದಾಗಿದೆ, ಎಂದು ಲಾವಾ ಹೇಳಿದೆ.

ಇತರೆ

ಇತರೆ

ಲಾವಾ Z53 ಸ್ಮಾರ್ಟ್‌ಫೋನ್ ಗೂಗಲ್ ಅಸಿಸ್ಟೆಂಟ್ ಬಟನ್ ಅನ್ನು ಸಹ ಹೊಂದಿದೆ. ಅಲ್ಲದೆ ಉರ್ದು, ಬಂಗಾಳಿ, ಮರಾಠಿ, ತಮಿಳು, ತೆಲುಗು, ಮಲಯಾಳಂ, ಕನ್ನಡ ಮತ್ತು ಗುಜರಾತಿ ಸೇರಿದಂತೆ 8 ಭಾರತೀಯ ಪ್ರಾದೇಶಿಕ ಭಾಷೆಗಳನ್ನು ಬೆಂಬಲಿಸುತ್ತದೆ. ಜೊತೆಗೆ ತನ್ನ ಕ್ಯಾಮೆರಾಗಳಲ್ಲಿ ಬ್ಯೂಟಿ ಮೋಡ್, ನೈಟ್ ಶಾಟ್, ಕ್ವಿಕ್ ಕ್ಯಾಪ್ಚರ್ ಮೋಡ್ ಮತ್ತು 9 ಲೆವೆಲ್ ಫಿಲ್ಟರ್‌ಗಳನ್ನು ಬೆಂಬಲಿಸುತ್ತದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಇನ್ನು ಈ ಸ್ಮಾರ್ಟ್‌ಫೋನ್‌ 4,829 ರೂ, ಬೆಲೆಯನ್ನ ಹೊಂದಿದ್ದು, ಆಫ್‌ಲೈನ್ ಮಳಿಗೆಗಳು ಮತ್ತು ಫ್ಲಿಪ್‌ಕಾರ್ಟ್ ನಲ್ಲಿ ಖರೀದಿಸಬಹುದಾಗಿದೆ. ಸದ್ಯ ಈ ಸ್ಮಾರ್ಟ್‌ಫೋನ್‌ ಪ್ರಿಸ್ಮ್ ರೋಸ್ ಮತ್ತು ಪ್ರಿಸ್ಮ್ ಬ್ಲೂ ಗ್ರೇಡಿಯಂಟ್ ಫಿನಿಶ್ ಕಲರ್‌ನಲ್ಲಿ ಲಭ್ಯವಿದೆ.

Most Read Articles
Best Mobiles in India

English summary
Lava Z53 comes with a Reliance Jio offer under which users get an instant cashback of Rs 1,200 and 50GB additional data.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X