Lenovo Dussehra Festival Sale:ಲ್ಯಾಪ್ ಟಾಪ್ ಗಳಿಗೆ 40% ದ ವರೆಗೆ ರಿಯಾಯಿತಿ

By Gizbot Bureau
|

ಕೈಗೆಟುಕುವ ಬೆಲೆಯಿಂದ ಹಿಡಿದು ದುಬಾರಿ ಬೆಲೆಯ ಲ್ಯಾಪ್ ಟಾಪ್ ಗಳಿಗೆ ಫೇಮಸ್ ಆಗಿರುವ ಬ್ರ್ಯಾಂಡ್ ಎಂದರೆ ಅದು ಲೆನೊವಾ. ಕಂಪೆನಿಯು ಇದೀಗ ತನ್ನ ವೆಬ್ ಸೈಟ್ ನಲ್ಲಿ ವಿಶೇಷ ಮಾರಾಟ ಪ್ರಕ್ರಿಯೆ ಆರಂಭಿಸಿದ್ದು ಅದನ್ನು ಲೆನೊವಾ ದಸರಾ ಫೆಸ್ಟಿವಲ್ ಸೇಲ್ ಎಂದು ಹೇಳಿಕೊಂಡಿದೆ. ಈ ಸೇಲ್ ನಲ್ಲಿ ತನ್ನ ಲ್ಯಾಪ್ ಟಾಪ್ ಗಳಿಗೆ 40 ಶೇಕಡಾದವರೆಗೆ ರಿಯಾಯಿತಿಯನ್ನು ನೀಡುತ್ತಿದೆ.

ಲ್ಯಾಪ್ ಟಾಪ್

ಕೆಲವು ದಿನಗಳವರೆಗೆ ಇರುವ ಈ ಆಫರ್ ನ್ನು ನೀವು ಪಡೆದುಕೊಳ್ಳುವುದು ಒಳ್ಳೆಯದು. ಯಾಕಂದರೆ ಕೆಲವು ದಿನಗಳ ನಂತರ ಪುನಃ ಲ್ಯಾಪ್ ಟಾಪ್ ಗಳನ್ನು ಎಂಆರ್ ಪಿ ಬೆಲೆಯಲ್ಲೇ ಮಾರಾಟ ಮಾಡಲಾಗುತ್ತದೆ. ನಾವಿಲ್ಲಿ ಆಫರ್ ನಲ್ಲಿರುವ ಕೆಲವು ಲೆನೊವಾ ಡಿವೈಸ್ ಗಳ ಬಗ್ಗೆ ತಿಳಿಸಿಕೊಡುತ್ತಿದ್ದೇವೆ.

ಲೆನೊವಾ ಥಿಂಕ್ ಪ್ಯಾಡ್ ಎಕ್ಸ್1 ಯೋಗ 35.5cms - ಕಪ್ಪು (MRP: Rs. 241,160 ಆಫರ್ ಬೆಲೆ: Rs. 159,990)

ಲೆನೊವಾ ಥಿಂಕ್ ಪ್ಯಾಡ್ ಎಕ್ಸ್1 ಯೋಗ 35.5cms - ಕಪ್ಪು (MRP: Rs. 241,160 ಆಫರ್ ಬೆಲೆ: Rs. 159,990)

ಲೆನೊವಾ ಥಿಂಕ್ ಪ್ಯಾಡ್ ಎಕ್ಸ್2 ಯೋಗ ಲ್ಯಾಪ್ ಟಾಪ್ ನ ಎಂಆರ್ ಪಿ ಬೆಲೆ 241,160.ಆದರೆ ಸದ್ಯ ಈ ಲ್ಯಾಪ್ ಟಾಪ್ ನಿಮಗೆ 159,990 ಬೆಲೆಗೆ ಸಿಗುತ್ತದೆ. ಇದು 10ನೇ ಜನರೇಷನ್ನಿನ ಇಂಟೆಲ್ ಕೋರ್ ಐ7 ಪ್ರೊಸೆಸರ್ ಜೊತೆಗೆ 16GB RAM ಮತ್ತು 512GB NVMe SSD ಆಧಾರಿತ ಸ್ಟೋರೇಜ್ ವ್ಯವಸ್ಥೆಯನ್ನು ಹೊಂದಿದೆ.

ಲೆನೊವಾ ಐಡಿಯಾ ಪ್ಯಾಡ್ ಎಸ್340 35.5cms – ಪ್ಲಾಟಿನಂ ಗ್ರೇ (MRP: Rs. 74,790 ಆಫರ್ ಬೆಲೆ: Rs. 57,790)

ಲೆನೊವಾ ಐಡಿಯಾ ಪ್ಯಾಡ್ ಎಸ್340 35.5cms – ಪ್ಲಾಟಿನಂ ಗ್ರೇ (MRP: Rs. 74,790 ಆಫರ್ ಬೆಲೆ: Rs. 57,790)

ಲೆನೊವಾ ಐಡಿಯಾ ಪ್ಯಾಡ್ ಎಸ್ 340 ಇದೀಗ 57,790 ರುಪಾಯಿಗೆ ಸಿಗುತ್ತದೆ. ಈ ಲ್ಯಾಪ್ ಟಾಪ್ ಕ್ವಾಡ್ ಕೋರ್ 10ನೇ ಜನರೇಷನ್ನಿನ ಇಂಟೆಲ್ ಕೋರ್ ಐ5 ಪ್ರೊಸೆಸರ್ ಜೊತೆಗೆ 8GB RAM, 256GB SSD, ಮತ್ತು 1TB 5200RPM HDD ಯನ್ನು ಹೊಂದಿದೆ.

ಲೆನೊವಾ ಐಡಿಯಾ ಪ್ಯಾಡ್ ಸ್ಲಿಮ್ 3ಐ (15, ಇಂಟೆಲ್) (MRP: Rs. 69,890 ಆಫರ್ ಬೆಲೆ: Rs. 49,990)

ಲೆನೊವಾ ಐಡಿಯಾ ಪ್ಯಾಡ್ ಸ್ಲಿಮ್ 3ಐ (15, ಇಂಟೆಲ್) (MRP: Rs. 69,890 ಆಫರ್ ಬೆಲೆ: Rs. 49,990)

ಲೆನೊವಾ ಐಡಿಯಾ ಪ್ಯಾಡ್ ಸ್ಲಿಮ್ 3ಐ 15-ಇಂಚಿನ FHD ಸ್ಕ್ರೀನ್ ಹೊಂದಿದೆ. 10ನೇ ಜನರೇಷನ್ನಿನ ಇಂಟೆಲ್ ಕೋರ್ ಐ5 ಪ್ರೊಸೆಸರ್ ನ್ನು ಹೊಂದಿರುವ ಈ ಲ್ಯಾಪ್ ಟಾಪ್ ಇದೀಗ 49,990 ರುಪಾಯಿ ಬೆಲೆಗೆ ಸಿಗುತ್ತದೆ. ಈ ಲ್ಯಾಪ್ ಟಾಪ್ ನಲ್ಲಿ ಒಟ್ಟು 8GB DDR4 RAM ಜೊತೆಗೆ 2400MHz ಕ್ಲಾಕ್ ಸ್ಪೀಡ್ ಹೊಂದಿದೆ ಜೊತೆಗೆ 1TB HDD ಆಧಾರಿತ ಸ್ಟೊರೇಜ್ ವ್ಯವಸ್ಥೆ ಹೊಂದಿದೆ.

ಲೆನೊವಾ ಲೆಜಿನ್ 5ಪೈ (MRP: Rs. 188,890 ಆಫರ್ ಬೆಲೆ: Rs. 131,690)

ಲೆನೊವಾ ಲೆಜಿನ್ 5ಪೈ (MRP: Rs. 188,890 ಆಫರ್ ಬೆಲೆ: Rs. 131,690)

ಲೆನೊವಾ ಲೆಜಿನ್ 5ಪೈ ಅತ್ಯಧಿಕ ಪ್ರದರ್ಶನವಿರುವ ಗೇಮಿಂಗ್ ಲ್ಯಾಪ್ ಟಾಪ್ ಆಗಿದೆ. ಇದು 131,690 ರುಪಾಯಿಗೆ ಸದ್ಯ ಸಿಗುತ್ತದೆ. 10ನೇ ಜನರೇಷನ್ನಿನ ಹೆಚ್ ಸರಣಿ ಇಂಟೆಲ್ ಕೋರ್ ಐ7 ಪ್ರೊಸೆಸರ್ ಜೊತೆಗೆ NVIDIA RTX GPU ವನ್ನು ಹೊಂದಿದೆ. 16GB RAM ಮತ್ತು 1TB PCIe 3.0 ಆಧಾರಿತ ಸ್ಟೋರೇಜ್ ವ್ಯವಸ್ಥೆ ಇದರಲ್ಲಿದೆ.

ಲೆನೊವಾ ಐಡಿಯಾ ಪ್ಯಾಡ್ ಗೇಮಿಂಗ್ 3ಐ (15) (MRP: Rs. 111,890 ಆಫರ್ ಬೆಲೆ: Rs. 74,290)

ಲೆನೊವಾ ಐಡಿಯಾ ಪ್ಯಾಡ್ ಗೇಮಿಂಗ್ 3ಐ (15) (MRP: Rs. 111,890 ಆಫರ್ ಬೆಲೆ: Rs. 74,290)

ಲೆನೊವಾ ಐಡಿಯಾ ಪ್ಯಾಡ್ ಗೇಮಿಂಗ್ 3ಐ 10ನೇ ಜನರೇಷನ್ನಿನ ಇಂಟೆಲ್ ಕೋರ್ ಐ5 ಹೆಚ್ ಸರಣಿ ಪ್ರೊಸೆಸರ್ ಜೊತೆಗೆ 8GB RAM ಮತ್ತು ಹೈಬ್ರಿಡ್ ಸ್ಟೋರೇಜ್ ವ್ಯವಸ್ಥೆ ಹೊಂದಿದೆ. ಇದರಲ್ಲಿ 256GB SSD ಮತ್ತು 1TB HDD ಇರಲಿದೆ. ಸದ್ಯ ಈ ಮಾಡೆಲ್ 74,290 ರುಪಾಯಿ ಬೆಲೆಗೆ ಸಿಗುತ್ತದೆ..

ಲೆನೊವಾ ಯೋಗ ಸ್ಲಿಮ್ 7ಐ (14, ಇಂಟೆಲ್) (MRP: Rs. 132,890 ಆಫರ್ ಬೆಲೆ: Rs. 91,490)

ಲೆನೊವಾ ಯೋಗ ಸ್ಲಿಮ್ 7ಐ (14, ಇಂಟೆಲ್) (MRP: Rs. 132,890 ಆಫರ್ ಬೆಲೆ: Rs. 91,490)

ಲೆನೊವಾ ಯೋಗ ಸ್ಲಿಮ್ 7ಐ ಕಾಂಪ್ಯಾಕ್ಟ್ 14-ಇಂಚಿನ ಅತ್ಯಧಿಕ ಪ್ರದರ್ಶನವಿರುವ ಲ್ಯಾಪ್ ಟಾಪ್ ಆಗಿದೆ. ಇದರಲ್ಲಿ 10ನೇ ಜನರೇಷನ್ನಿನ ಇಂಟೆಲ್ ಕೋರ್ ಐ7 ಪ್ರೊಸೆಸರ್ ಜೊತೆಗೆ 8GB RAM ಮತ್ತು 512GB SSD ಆಧಾರಿತ ಸ್ಟೊರೇಜ್ ವ್ಯವಸ್ಥೆ ಹೊಂದಿರಲಿದೆ. 91,490 ರುಪಾಯಿ ಬೆಲೆಗೆ ಇದು ಕೈಗೆಟುಕುತ್ತದೆ.

Most Read Articles
Best Mobiles in India

English summary
Lenovo is a brand known for offering laptops from the budget to the high-end segment. The company is now holding a sale on its website called Lenovo Dussehra Festival Sale, where the brand is offering up to 40 percent discount on select Lenovo laptops.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X