ಭಾರತದಲ್ಲಿ ಲೆನೊವೊ ಯೋಗ 9i, ಯೋಗ 7i, ಐಡಿಯಾಪ್ಯಾಡ್ ಸ್ಲಿಮ್ 5i ಬಿಡುಗಡೆ!

|

ವೈವಿಧ್ಯಮಯ ಲ್ಯಾಪ್‌ಟಾಪ್‌ಗಳಿಗೆ ಹೆಸರುವಾಸಿಯಾಗಿರುವ ಲೆನೊವೊ ಸಂಸ್ಥೆ ತನ್ನ 2021 ಲ್ಯಾಪ್‌ಟಾಪ್ ಸರಣಿಯನ್ನು ಬಿಡುಗಡೆ ಮಾಡಿದೆ. ಇದು 11 ನೇ ತಲೆಮಾರಿನ ಇಂಟೆಲ್ ಟೈಗರ್ ಲೇಕ್ ಪ್ರೊಸೆಸರ್‌ ಅನ್ನು ಹೊಂದಿದ್ದು, ಭಾರತದಲ್ಲಿ ಅನಾವರಣಗೊಳಿಸಲಾಗಿದೆ. ಇನ್ನು ಈ ಸರಣಿಯಲ್ಲಿ ಯೋಗ 9i, ಯೋಗ 7i ಮತ್ತು ಐಡಿಯಾಪ್ಯಾಡ್ ಸ್ಲಿಮ್ 5i ಲ್ಯಾಪ್‌ಟಾಪ್‌ಗಳನ್ನು ಒಳಗೊಂಡಿದೆ. ಇದರಲ್ಲಿ ಯೋಗ 9i ಹೆಚ್ಚಿನ ಪ್ರೀಮಿಯಂ ಆಗಿದ್ದು, ಇದು 1,69,990 ರೂ.ಗಳಿಂದ ಪ್ರಾರಂಭವಾಗಲಿದೆ.

ಲೆನೊವೊ

ಹೌದು, ಲೆನೊವೊ ಸಂಸ್ಥೆ ತನ್ನ ಯೋಗ ಸರಣಿಯ ಹೊಸ ಲ್ಯಾಪ್‌ಟಾಪ್‌ಗಳನ್ನು ಬಿಡುಗಡೆ ಮಾಡಿದೆ. ಇನ್ನು ಯೋಗ 7i ಮೂಲ ರೂಪಾಂತರಕ್ಕೆ 99,000 ರೂ. ಬೆಲೆಯನ್ನು ಹೊಂದಿದ್ದು, ಐಡಿಯಾಪ್ಯಾಡ್ ಸ್ಲಿಮ್ 5i 63,990 ರೂಗಳಿಂದ ಪ್ರಾರಂಭವಾಗುತ್ತದೆ. ಇದಲ್ಲದೆ ಯೋಗ 9i ಜನವರಿ 12 ರಿಂದ ಮಾರಾಟವಾಗಲಿದೆ. ಯೋಗ 7i ಜನವರಿ 15 ರಿಂದ ಲಭ್ಯವಾಗಲಿದೆ ಮತ್ತು ಐಡಿಯಾಪ್ಯಾಡ್ ಸ್ಲಿಮ್ 5i ಈಗಾಗಲೇ ಖರೀದಿಗೆ ಲಭ್ಯವಿದೆ. ಇನ್ನುಳಿದಂತೆ ಈ ಲ್ಯಾಪ್‌ಟಾಪ್‌ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಲೆನೊವೊ ಯೋಗ 9i

ಲೆನೊವೊ ಯೋಗ 9i

ಲೆನೊವೊ ಯೋಗ 9i ಲ್ಯಾಪ್‌ಟಾಪ್‌ 3840x2160 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 14 ಇಂಚಿನ UHD IPS ಡಿಸ್‌ಪ್ಲೇಯನ್ನು ಹೊಂದಿದೆ. ಇಂಟೆಲ್ ಐರಿಸ್ XE ಗ್ರಾಫಿಕ್ಸ್‌ನೊಂದಿಗೆ ಜೋಡಿಯಾಗಿರುವ ಇಂಟೆಲ್ 11 ನೇ-ಜನ್ ಕೋರ್ I7-1185 G7 ಪ್ರೊಸೆಸರ್ ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಇನ್ನು ಈ ಡಿವೈಸ್‌ 16 GB RAM ಮತ್ತು 1TB SSD ಸಂಗ್ರಹದೊಂದಿಗೆ ಬರುತ್ತದೆ. ಇದು ಮೈಕ್ರೋಸಾಫ್ಟ್‌ನ ವಿಂಡೋಸ್ 10 ಹೋಮ್ ಅಥವಾ ಪ್ರೊ ಆಪರೇಟಿಂಗ್ ಸಿಸ್ಟಮ್ ಅನ್ನು ಚಾಲನೆ ಮಾಡುತ್ತದೆ. ಇದು 60Wh ಬ್ಯಾಟರಿಯನ್ನು ಹೊಂದಿದೆ. ಇನ್ನು ಈ ಡಿವೈಸ್‌ ವಿಜಿಎ ​​ವೆಬ್‌ಕ್ಯಾಮ್ ಅನ್ನು ಹೊಂದಿದೆ ಮತ್ತು 360 ಡಿಗ್ರಿ ಹಿಂಜ್ ಹೊಂದಿದೆ. ಅಲ್ಟ್ರಾಸಾನಿಕ್ ಫಿಂಗರ್‌ಪ್ರಿಂಟ್ ರೀಡರ್, ಸ್ಮಾರ್ಟ್ ಸೆನ್ಸರ್ ಟಚ್‌ಪ್ಯಾಡ್ ಮತ್ತು ಹೆಚ್ಚಿನದನ್ನು ನಿಯಂತ್ರಿಸಲು ಇದು ಸ್ಟೈಲಸ್‌ನೊಂದಿಗೆ ಬರುತ್ತದೆ.

ಲೆನೊವೊ ಯೋಗ 7i

ಲೆನೊವೊ ಯೋಗ 7i

ಯೋಗ 7i ಲ್ಯಾಪ್‌ಟಾಪ್‌ 360 ಡಿಗ್ರಿ ಹಿಂಜ್‌ನೊಂದಿಗೆ ಬರುತ್ತದೆ. ಇದು 1920 × 1080 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 15.6 ಇಂಚಿನ ಫುಲ್‌ ಹೆಚ್‌ಡಿ ಐಪಿಎಸ್ ಡಿಸ್‌ಪ್ಲೇಯೊಂದಿಗೆ ಬರುತ್ತದೆ. ಇದು ಇಂಟೆಲ್ 11 ನೇ-ಜನ್ ಕೋರ್ ಐ 7-1165 ಜಿ 7 ಪ್ರೊಸೆಸರ್ ಅನ್ನು ಹೊಂದಿದೆ. ಜೊತೆಗೆ ಇಂಟೆಲ್ ಐರಿಸ್ ಎಕ್ಸ್ ಗ್ರಾಫಿಕ್ಸ್‌ನೊಂದಿಗೆ ಜೋಡಿಸಲ್ಪಟ್ಟಿದೆ. ಈ ಡಿವೈಸ್‌ 16GB RAM ಮತ್ತು 1TB ಇಂಟರ್‌ ಸಾಮರ್ಥ್ಯವನ್ನು ಹೊಂದಿದೆ. ಅಲ್ಲದೆ ಮೈಕ್ರೋಸಾಫ್ಟ್ ವಿಂಡೋಸ್ 10 ಹೋಮ್ ಆಪರೇಟಿಂಗ್ ಸಿಸ್ಟಮ್ ಅನ್ನು ಚಾಲನೆ ಮಾಡಲಿದೆ. ಇದು ಸಿಂಗಲ್‌ ಚಾರ್ಜ್‌ನಲ್ಲಿ 16 ಗಂಟೆಗಳವರೆಗೆ ಇರುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.

ಲೆನೊವೊ ಐಡಿಯಾಪ್ಯಾಡ್ ಸ್ಲಿಮ್ 5i

ಲೆನೊವೊ ಐಡಿಯಾಪ್ಯಾಡ್ ಸ್ಲಿಮ್ 5i

ಲೆನೊವೊ ಐಡಿಯಾಪ್ಯಾಡ್ ಸ್ಲಿಮ್ 5i 14 ಇಂಚಿನ ಫುಲ್‌ ಹೆಚ್‌ಡಿ ಐಪಿಎಸ್ ಡಿಸ್‌ಪ್ಲೇಯನ್ನು ಹೊಂದಿದ್ದು, ಆಂಟಿ-ಗ್ಲೇರ್ ಲೇಪನದೊಂದಿಗೆ ಬರಲಿದೆ. ಇದು 11 ನೇ-ಜನ್ ಇಂಟೆಲ್ ಕೋರ್ I7 ಟೈಗರ್ ಲೇಕ್‌ನಿಂದ ಎನ್ವಿಡಿಯಾ ಜೀಫೋರ್ಸ್ MX450 GPU ಜೊತೆ ಜೋಡಿಸಲ್ಪಟ್ಟಿದೆ. ಇನ್ನು ಈ ಡಿವೈಸ್‌ 16GB ಮತ್ತು 1TB ವರೆಗೆ ಇಂಟರ್‌ ಸ್ಟೋರೇಜ್‌ ಅನ್ನು ಹೊಂದಿದೆ. ಇದು ವಿಂಡೋಸ್ 10 ಹೋಮ್ ಆವೃತ್ತಿಯನ್ನು ನಡೆಸುತ್ತದೆ ಮತ್ತು 15 ನಿಮಿಷಗಳ ಚಾರ್ಜ್‌ನಲ್ಲಿ ಮೂರು ಗಂಟೆಗಳ ಬ್ಯಾಟರಿ ಅವಧಿಯನ್ನು ನೀಡುತ್ತದೆ ಎನ್ನಲಾಗಿದೆ.

Most Read Articles
Best Mobiles in India

English summary
Lenovo has launched its 2021 laptop series powered by the 11th-generation Intel Tiger Lake processors in India.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X