Just In
Don't Miss
- News
ರಾಜೀವ್ ಹಂತಕರ ಬಿಡುಗಡೆ: 3-4 ದಿನದಲ್ಲಿ ತಮಿಳುನಾಡು ರಾಜ್ಯಪಾಲರ ನಿರ್ಧಾರ
- Automobiles
ದೇಶಾದ್ಯಂತ ಹತ್ತು ಹೊಸ ಶೋರೂಂಗಳನ್ನು ತೆರೆಯಲಿದೆ ಸಿಟ್ರನ್
- Finance
Gold, Silver Rate: ಪ್ರಮುಖ ನಗರಗಳಲ್ಲಿ ಜ. 21ರ ಚಿನ್ನ, ಬೆಳ್ಳಿ ದರ
- Movies
ನಡೆದಾಡುವ ದೇವರ ಪುಣ್ಯ ಸ್ಮರಣೆ: 'ಅವರ ಕೆಲಸದಿಂದ ಸದಾ ಜೀವಂತ' ಎಂದ ದರ್ಶನ್
- Lifestyle
ವಾಸ್ತು ಪ್ರಕಾರ ನಿಮ್ಮ ಮನೆಯ ಬಣ್ಣ ಈ ರೀತಿ ಇದ್ದರೆ ಒಳ್ಳೆಯದು
- Sports
ಥೈಲ್ಯಾಂಡ್ ಓಪನ್: ಸಮೀರ್, ಸಾತ್ವಿಕ್-ಪೊನ್ನಪ್ಪ ಕ್ವಾರ್ಟರ್ ಫೈನಲ್ಗೆ
- Education
BMRCL Recruitment 2021: ಸೀನಿಯರ್ ಅರ್ಬನ್ ಮತ್ತು ಟ್ರಾನ್ಸ್ ಪೋರ್ಟ್ ಪ್ಲಾನರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಭಾರತದ ಮಾರುಕಟ್ಟೆಯಲ್ಲಿ ಲೆನೊವೊ ಲೀಜನ್ 5 ಗೇಮಿಂಗ್ ಲ್ಯಾಪ್ಟಾಪ್ ಬಿಡುಗಡೆ!
ಲ್ಯಾಪ್ಟಾಪ್ ಮಾರುಕಟ್ಟೆಯಲ್ಲಿ ಲೆನೊವೊ ಕಂಪೆನಿ ತನ್ನದೇ ಆದ ವಿಶಿಷ್ಟ ಲ್ಯಾಪ್ಟಾಪ್ಗಳಿಂದ ಗುರುತಿಸಿಕೊಂಡಿದೆ. ಈಗಾಗಲೇ ಹಲವು ಮಾದರಿಯ ಲ್ಯಾಪ್ಟಾಪ್ಗಳನ್ನ ಪರಿಚಯಿಸಿರುವ ಲೆನೊವೊ ಇದೀಗ ತನ್ನ ಹೊಸ ಲೆನೊವೊ ಲೀಜನ್ 5 ಲ್ಯಾಪ್ಟಾಪ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಇದು ಆರು ಅಲ್ಟ್ರಾ-ಸ್ಪಂದಿಸುವ ಕೋರ್ಗಳೊಂದಿಗೆ AMD ರೈಜೆನ್ 5 4600 ಹೆಚ್ ಮೊಬೈಲ್ ಪ್ರೊಸೆಸರ್ ಹೊಂದಿದೆ. ಜೊತೆಗೆ ಎನ್ವಿಡಿಯಾ ಜಿಫೋರ್ಸ್ ಜಿಟಿಎಕ್ಸ್ 1650T ಡಿಸ್ಕ್ರೀಟ್ ಗ್ರಾಫಿಕ್ಸ್ನೊಂದಿಗೆ ಕಾನ್ಫಿಗರ್ ಮಾಡಬಹುದಾಗಿದೆ.

ಹೌದು, ಲೆನೊವೊ ಸಂಸ್ಥೆ ತನ್ನ ಹೊಸ ಲೆನೊವೊ ಲೀಜನ್ 5 ಲ್ಯಾಪ್ಟಾಪ್ ಅನ್ನು ಭಾರತದಲ್ಲಿ ಪರಿಚಯಿಸಿದೆ. ಇನ್ನು ಈ ಲ್ಯಾಪ್ಟಾಪ್ 120Hz ಡಿಸ್ಪ್ಲೇ ರಿಫ್ರೆಶ್ ರೇಟ್ ಅನ್ನು ಹೊಂದಿದೆ. ಅಲ್ಲದೆ ಬ್ಯಾಟರಿ ಸೇವ್ ಹೈಬ್ರಿಡ್ ಮೋಡ್ ಆನ್ ಆಗಿರುವಾಗ ಎಂಟು ಗಂಟೆಗಳವರೆಗೆ ಬ್ಯಾಟರಿ ಅವಧಿಯನ್ನು ನೀಡುತ್ತದೆ ಎಂದು ಲೆನೊವೊ ಕಂಪೆನಿ ಹೇಳಿದೆ. ಇನ್ನುಳಿದಂತೆ ಈ ಲ್ಯಾಪ್ಟಾಪ್ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಲೆನೊವೊ ಲೀಜನ್ 5 ಲ್ಯಾಪ್ಟಾಪ್ 1,920x1,080 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಸನ್ ಸಾಮರ್ಥ್ಯದ 15.6 ಇಂಚಿನ ಡಿಸ್ಪ್ಲೇ ಹೊಂದಿದೆ. ಇದು 120Hz ರಿಫ್ರೆಶ್ ರೇಟ್ ಅನ್ನು ಹೊಂದಿದೆ. ಇನ್ನು ಈ ಲ್ಯಾಪ್ಟಾಪ್ ವಿಂಡೋಸ್ 10 ಹೋಮ್ ಸಾಫ್ಟ್ವೇರ್ನಲ್ಲಿ ಚಲಿಸುತ್ತದೆ. ಇದು ಎಎಮ್ಡಿ ರೈಜೆನ್ 5 4600 ಹೆಚ್ ಪ್ರೊಸೆಸರ್ ಹೊಂದಿದ್ದು, 4GB RAM ಮತ್ತು 256GB ಸಂಗ್ರಹ ಸಾಮರ್ಥ್ಯವನ್ನು ಹೊಂದಿದೆ. ಅಲ್ಲದೆ ಈ ಲ್ಯಾಪ್ಟಾಪ್ ಎನ್ವಿಡಿಯಾ ಜಿಫೋರ್ಸ್ GTX 1650 Ti ಡಿಸ್ಕ್ರೀಟ್ ಗ್ರಾಫಿಕ್ಸ್ ಅನ್ನು ಹೊಂದಿದೆ.

ಇನ್ನು ಈ ಲ್ಯಾಪ್ಟಾಪ್ ಹೈಬ್ರಿಡ್ ಮೋಡ್ ಅನ್ನು ಬಳಸುವುದರೊಂದಿಗೆ 8 ಗಂಟೆಗಳವರೆಗೆ ಇರುತ್ತದೆ. ಈ ಮೋಡ್ ಲೆನೊವೊ ಲೀಜನ್ 5 ಲ್ಯಾಪ್ಟಾಪ್ನಲ್ಲಿ ಬ್ಯಾಟರಿ ಅವಧಿಯನ್ನು ವಿಸ್ತರಿಸಲು ಸಹಾಯ ಮಾಡುತ್ತದೆ. ಈ ಎಎಮ್ಡಿ-ಚಾಲಿತ ಲ್ಯಾಪ್ಟಾಪ್ ಬ್ಯಾಕ್ಲಿಟ್ ಕೀಲಿಗಳನ್ನು ಹೊಂದಿರುವ ಲೆನೊವೊ ಲೀಜನ್ ಟ್ರೂಸ್ಟ್ರೈಕ್ ಕೀಬೋರ್ಡ್ ಹೊಂದಿದ್ದು, ಉಷ್ಣ ದಕ್ಷತೆಗಾಗಿ ಲೆನೊವೊ ಲೀಜನ್ ಕೋಲ್ಡ್ಫ್ರಂಟ್ 2.0 ಅನ್ನು ಹೊಂದಿದೆ. ಇದು ವೇಗದ ಚಾರ್ಜಿಂಗ್ಗಾಗಿ ರಾಪಿಡ್ ಚಾರ್ಜ್ ಪ್ರೊ ಮತ್ತು ಸಿಸ್ಟಮ್ ವೋಲ್ಟೇಜ್ ಮತ್ತು ಫ್ಯಾನ್ ವೇಗವನ್ನು ನಿಯಂತ್ರಿಸಲು ಲೆನೊವೊ ಕ್ಯೂ-ಕಂಟ್ರೋಲ್ 3.0 ಅನ್ನು ಸಹ ಬೆಂಬಲಿಸುತ್ತದೆ.

ಇದಲ್ಲದೆ ಹೆಚ್ಚುವರಿ ಸುರಕ್ಷತೆಗಾಗಿ ಲೆನೊವೊ ಲೀಜನ್ 5 ಗೌಪ್ಯತೆ ಶಟರ್ನೊಂದಿಗೆ ಇಂಟರ್ಬಿಲ್ಟ್ ಹೆಚ್ಡಿ 720p ವೆಬ್ಕ್ಯಾಮ್ ಅನ್ನು ಹೊಂದಿದೆ. ಈ ಗೇಮಿಂಗ್ ಲ್ಯಾಪ್ಟಾಪ್ ಎರಡು 2W ಹರ್ಮನ್ ಕಾರ್ಡನ್ ಸ್ಪೀಕರ್ಗಳು ಮತ್ತು ಡಾಲ್ಬಿ ಅಟ್ಮೋಸ್ ಹೆಡ್ಫೋನ್ ಬೆಂಬಲದೊಂದಿಗೆ ಬರುತ್ತದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ ವೈ-ಫೈ, ಮತ್ತು ಬ್ಲೂಟೂತ್ ವಿ5 ಅನ್ನು ಬೆಂಬಲಿಸಲಿದೆ. ಇನ್ನು ಈ ಹೊಸ ಲೆನೊವೊ ಲೀಜನ್ 5 ಲ್ಯಾಪ್ಟಾಪ್ ಭಾರತದಲ್ಲಿ 75,990 ರೂ. ಬೆಲೆಯನ್ನು ಹೊಂದಿದೆ. ಇದನ್ನು ಫ್ಯಾಂಟಮ್ ಬ್ಲ್ಯಾಕ್ ಬಣ್ಣದಲ್ಲಿ ಮಾತ್ರ ದೇಶದಲ್ಲಿ ಬಿಡುಗಡೆ ಮಾಡಲಾಗಿದ್ದು, ಲೆನೊವೊ.ಕಾಂನಲ್ಲಿ ಮಾರಾಟವಾಗಲಿದೆ. ಗ್ರಾಹಕರು ಅದನ್ನು ಆಫ್ಲೈನ್ನಲ್ಲಿ ಖರೀದಿಸಲು ಲೆನೊವೊ ಎಕ್ಸ್ಕ್ಲೂಸಿವ್ ಸ್ಟೋರ್ಗಳಿಗೆ ಹೋಗಬಹುದು.
-
92,999
-
17,999
-
39,999
-
29,400
-
38,990
-
29,999
-
16,999
-
23,999
-
18,170
-
21,900
-
14,999
-
17,999
-
42,099
-
16,999
-
23,999
-
29,495
-
18,580
-
64,900
-
34,980
-
45,900
-
17,999
-
54,153
-
7,000
-
13,999
-
38,999
-
29,999
-
20,599
-
43,250
-
32,440
-
16,190