ಲೆನೊವೊ ಸಂಸ್ಥೆಯಿಂದ ಎರಡು ಹೊಸ ಲ್ಯಾಪ್‌ಟಾಪ್‌ ಬಿಡುಗಡೆ!

|

ಲೆನೊವೊ ಕಂಪನಿಯು ಈಗಾಗಲೇ ಭಿನ್ನ ಶ್ರೇಣಿಯ ಲ್ಯಾಪ್‌ಟಾಪ್‌ಗಳಿಂದ ಟೆಕ್‌ ಮಾರುಕಟ್ಟೆಯಲ್ಲಿ ಗುರುತಿಸಿಕೊಂಡಿದೆ. ಇದೀಗ ಹೊಸದಾಗಿ ಮಾರುಕಟ್ಟೆಗೆ ಲೆನೊವೊ ಯೋಗಾ ಸ್ಲಿಮ್ 7 ಕಾರ್ಬನ್ ಮತ್ತು ಲೆನೊವೊ ಯೋಗಾ ಸ್ಲಿಮ್ 7 ಪ್ರೊ ಹೆಸರಿನ ಎರಡು ಲ್ಯಾಪ್‌ಟಾಪ್‌ ಡಿವೈಸ್‌ಗಳನ್ನು ಬಿಡುಗಡೆ ಮಾಡಿ ಅಚ್ಚರಿ ಮೂಡಿಸಿದೆ. ಈ ಎರಡು ಲ್ಯಾಪ್‌ಟಾಪ್‌ಗಳು ಎಎಮ್‌ಡಿ ರೈಜೆನ್ ಸಿಪಿಯು ಹಾಗೂ ವಿಂಡೋಸ್‌ 11 ಓಎಸ್‌ ಸಫೋರ್ಟ್‌ನಲ್ಲಿ ಕಾರ್ಯನಿರ್ವಹಿಸಲಿವೆ.

ನೂತನವಾಗಿ

ಹೌದು, ಲೆನೊವೊ ಕಂಪನಿಯು ನೂತನವಾಗಿ ಈಗ ಲೆನೊವೊ ಯೋಗಾ ಸ್ಲಿಮ್ 7 ಕಾರ್ಬನ್ ಮತ್ತು ಲೆನೊವೊ ಯೋಗಾ ಸ್ಲಿಮ್ 7 ಪ್ರೊ ಲ್ಯಾಪ್‌ಟಾಪ್‌ ಲಾಂಚ್ ಮಾಡಿದೆ. ಇನ್ನು ಎರಡೂ ಲ್ಯಾಪ್‌ಟಾಪ್‌ಗಳು 16GB RAM ಮತ್ತು 1TB SSD ಸಂಗ್ರಹದ ಆಯ್ಕೆಗಳನ್ನು ಒಳಗೊಂಡಿದ್ದು, ವಿಂಡೋಸ್‌ 11 ಓಎಸ್‌ ಬೆಂಬಲ ಪಡೆದಿವೆ. ಲೆನೊವೊ ಯೋಗಾ ಸ್ಲಿಮ್ 7 ಪ್ರೊ ಲ್ಯಾಪ್‌ಟಾಪ್‌ 2.10ಕೆಜಿ ತೂಕ ಹೊಂದಿದ್ದು, ಲೆನೊವೊ ಯೋಗಾ ಸ್ಲಿಮ್ 7 ಕಾರ್ಬನ್ ಲ್ಯಾಪ್‌ಟಾಪ್‌ 1.10ಕೆಜಿ ತೂಕ ಪಡೆದಿದೆ. ಇನ್ನುಳಿದಂತೆ ಈ ಎರಡು ಲ್ಯಾಪ್‌ಟಾಪ್‌ಗಳ ಕಾನ್ಫಿಗರೇಶನ್‌ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಲೆನೊವೊ ಯೋಗ ಸ್ಲಿಮ್ 7 ಕಾರ್ಬನ್ ಲ್ಯಾಪ್‌ಟಾಪ್‌ ಫೀಚರ್ಸ್‌

ಲೆನೊವೊ ಯೋಗ ಸ್ಲಿಮ್ 7 ಕಾರ್ಬನ್ ಲ್ಯಾಪ್‌ಟಾಪ್‌ ಫೀಚರ್ಸ್‌

ಲೆನೊವೊ ಯೋಗ ಸ್ಲಿಮ್ 7 ಕಾರ್ಬನ್ ವಿಂಡೋಸ್ 11 ನಲ್ಲಿ ಕಾರ್ಯನಿರ್ವಹಿಸುತ್ತದೆ. ಇದು 14 ಇಂಚಿನ QHD+ OLED ಡಿಸ್‌ಪ್ಲೇಯನ್ನು ಒಳಗೊಂಡಿದೆ. ಹಾಗೆಯೇ ಸ್ಯಾಮ್‌ಸಂಗ್ 16:10 ಆಕಾರ ಅನುಪಾತ ಹೊಂದಿದೆ. ಇದರೊಂದಿಗೆ ಈ ಲ್ಯಾಪ್‌ಟಾಪ್ ಶೇ 100 DECI-P3 ಕಲರ್ ಗಾಮಟ್ ಹೊಂದಿದ್ದು, 90Hz ರಿಫ್ರೆಶ್ ದರವನ್ನು ಪಡೆದಿದೆ. ಹಾಗೆಯೇ 600 ನಿಟ್ಸ್ ಗರಿಷ್ಠ ಬ್ರೈಟ್ನೆಸ್‌ ಸಹ ಹೊಂದಿದೆ. ಟಿಯುವಿ ಹೊಂದಿದೆ ರೈನ್‌ಲ್ಯಾಂಡ್ ಕಣ್ಣಿನ ರಕ್ಷಣೆ ಪ್ರಮಾಣೀಕರಣ, ವೆಸಾ ಡಿಸ್‌ಪ್ಲೇ ಎಚ್‌ಡಿಆರ್ ಟ್ರೂ ಬ್ಲಾಕ್ 500 ಪ್ರಮಾಣೀಕರಣ, ಮತ್ತು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ರಕ್ಷಣೆ.

ಪ್ರೊಸೆಸರ್

ಹಾಗೆಯೇ ಲೆನೊವೊ ಯೋಗ ಸ್ಲಿಮ್ 7 ಕಾರ್ಬನ್ AMD ರೈಜನ್ 7 5800 ಯು ಆಕ್ಟಾ-ಕೋರ್ ಪ್ರೊಸೆಸರ್ ಅನ್ನು ಎಎಮ್‌ಡಿ ರೇಡಿಯನ್ ಗ್ರಾಫಿಕ್ಸ್ ಮತ್ತು Nvidia GeForce ಎಂಎಕ್ಸ್ 450 ಗ್ರಾಫಿಕ್ಸ್‌ನ ಸೌಲಭ್ಯ ಪಡೆದಿದೆ. ಈ ಲ್ಯಾಪ್‌ಟಾಪ್‌ 16GB RAM ಮತ್ತು 1TB SSD ಆಂತರಿಕ ಸಂಗ್ರಹಣೆ ಆಯ್ಕೆಯನ್ನು ಹೊಂದಿದೆ. ಇದರೊಂದಿಗೆ ಈ ಲ್ಯಾಪ್‌ಟಾಪ್ 61Whr ಬ್ಯಾಟರಿಯೊಂದಿಗೆ ಡ್ಯುಯಲ್ ಚಾರ್ಜರ್ ಸೌಲಭ್ಯವನ್ನು ಒಳಗೊಂಡಿದ್ದು, ಜಸ್ಟ್‌ 15 ನಿಮಿಷಗಳ ಚಾರ್ಜಿಂಗ್‌ನೊಂದಿಗೆ 3 ಗಂಟೆಗಳ ಬ್ಯಾಟರಿ ಅವಧಿಯನ್ನು ನೀಡುತ್ತದೆ.

ಲೆನೊವೊ ಯೋಗ ಸ್ಲಿಮ್ 7 ಪ್ರೊ ಲ್ಯಾಪ್‌ಟಾಪ್‌ ಫೀಚರ್ಸ್‌

ಲೆನೊವೊ ಯೋಗ ಸ್ಲಿಮ್ 7 ಪ್ರೊ ಲ್ಯಾಪ್‌ಟಾಪ್‌ ಫೀಚರ್ಸ್‌

ಲೆನೊವೊ ಯೋಗ ಸ್ಲಿಮ್ 7 ಪ್ರೊ ಲ್ಯಾಪ್‌ಟಾಪ್‌ ಸಹ ವಿಂಡೋಸ್ 11 ನಲ್ಲಿ ಕೆಲಸ ಮಾಡುತ್ತದೆ. ಇದು 16 ಇಂಚಿನ QHD IPS ಟಚ್‌ಸ್ಕ್ರೀನ್ ಡಿಸ್‌ಪ್ಲೇ ಹೊಂದಿದ್ದು, 16:10 ಆಕಾರ ಅನುಪಾತ ಪಡೆದಿದೆ. ಜೊತೆಗೆ 500 ನಿಟ್‌ಗಳ ಗರಿಷ್ಠ ಬ್ರೈಟ್ನೆಸ್‌ ಪಡೆದಿದ್ದು, 120Hz ರಿಫ್ರೆಶ್ ದರ ಹೊಂದಿದೆ. TUV ರೀನ್‌ಲ್ಯಾಂಡ್ ಸೌಲಭ್ಯ ಒಳಗೊಂಡಿದ್ದು, ಡಿಸ್‌ಪ್ಲೇ HDR 400 ಮತ್ತು 100 ಪ್ರತಿಶತ sRGB ಬಣ್ಣದ ಆಯ್ಕೆ ಪಡೆದಿದೆ.

ಬ್ಯಾಟರಿಯು

ಹಾಗೆಯೇ ಇದು ಲೆನೊವೊ ಯೋಗ ಸ್ಲಿಮ್ 7 ಪ್ರೊ AMD ರೈಜೆನ್ 7 5800 ಎಚ್ ಪ್ರೊಸೆಸರ್‌ಗಳನ್ನು ಹೊಂದಿದೆ ಮತ್ತು ಇದನ್ನು Nvidia GeForce RTX 3050 ಜಿಪಿಯು ಸಂಯೋಜನೆ ಪಡೆದಿದೆ. ಇದು 16GB RAM, 1TB ವರೆಗೆ SSD2 ಸ್ಟೋರೇಜ್, ಮತ್ತು 75Whr ಬ್ಯಾಟರಿಯು 12.5 ಗಂಟೆಗಳ ಬ್ಯಾಟರಿ ಅವಧಿಯನ್ನು ನೀಡುತ್ತದೆ. ಇದು ಇನ್‌ಬಿಲ್ಟ್‌ ಅಲೆಕ್ಸಾ ಧ್ವನಿ ಕಮಾಂಡ್ ಬೆಂಬಲದೊಂದಿಗೆ ಬರುತ್ತದೆ. ಇದು ಡಾಲ್ಬಿ ಅಟ್ಮಾಸ್ ಮತ್ತು ಡಾಲ್ಬಿ ವಿಷನ್ ಅನ್ನು ಸಹ ಬೆಂಬಲಿಸುತ್ತದೆ.

ಲೆನೊವೊ ಯೋಗ ಸ್ಲಿಮ್ 7i ಕಾರ್ಬನ್ ಲ್ಯಾಪ್‌ಟಾಪ್‌

ಲೆನೊವೊ ಯೋಗ ಸ್ಲಿಮ್ 7i ಕಾರ್ಬನ್ ಲ್ಯಾಪ್‌ಟಾಪ್‌

ಲೆನೊವೊ ಯೋಗ ಸ್ಲಿಮ್ 7i ಕಾರ್ಬನ್ ಲ್ಯಾಪ್‌ಟಾಪ್‌ 2,560x1,600 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 13.3-ಇಂಚಿನ ಕ್ಯೂಎಚ್‌ಡಿ ಡಿಸ್‌ಪ್ಲೇಯನ್ನು ಹೊಂದಿದೆ. ಇದು 300 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್‌, ಡಾಲ್ಬಿ ವಿಷನ್ ಬೆಂಬಲ ಮತ್ತು ಟಿಯುವಿ ರೈನ್‌ಲ್ಯಾಂಡ್ ಪ್ರಮಾಣೀಕರಣವನ್ನು ಹೊಂದಿದೆ. ಜೊತೆಗೆ ಇದು ಲೆನೊವೊ ಎನ್‌ಟಿಎಸ್‌ಸಿಯ 72% ಮತ್ತು ಎಸ್‌ಆರ್‌ಜಿಬಿ ಬಣ್ಣದ ಹರವುಗಳ 100 % ವ್ಯಾಪ್ತಿಯನ್ನು ಹೊಂದಿದೆ.

Most Read Articles
Best Mobiles in India

English summary
Lenovo Yoga Slim 7 Carbon, Lenovo Yoga Slim 7 Pro Laptops Launched.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X