ಭಾರತದಲ್ಲಿ ಲೆನೊವೊ ಯೋಗ ಸ್ಲಿಮ್‌ 7i ಕಾರ್ಬನ್‌ ಲ್ಯಾಪ್‌ಟಾಪ್‌ ಲಾಂಚ್‌!

|

ಇತ್ತೀಚಿನ ದಿನಗಳಲ್ಲಿ ಲ್ಯಾಪ್‌ಟಾಪ್‌ಗಳ ಬಳಕೆ ಹೆಚ್ಚಾಗುತ್ತಿದೆ. ಇದೇ ಕಾರಣಕ್ಕೆ ಹಲವು ಕಂಪೆನಿಗಳು ತಮ್ಮದೇ ಆದ ಲ್ಯಾಪ್‌ಟಾಪ್‌ಗಳನ್ನು ಪರಿಚಯಿಸಿವೆ. ಇದರಲ್ಲಿ ಲೆನೊವೊ ಕಂಪೆನಿ ಕೂಡ ಒಂದಾಗಿದೆ. ಇನ್ನು ಈಗಾಗಲೇ ಲೆನೊವೊ ಕಂಪೆನಿ ಸಾಕಷ್ಟು ವೈವಿಧ್ಯಮಯವಾದ ಲ್ಯಾಪ್‌ಟಾಪ್‌ಗಳನ್ನು ಪರಿಚಯಿಸಿ ಸೈ ಎನಿಸಿಕೊಂಡಿದೆ. ಸದ್ಯ ಇದೀಗ ಹೊಸ ಲೆನೊವೊ ಯೋಗ ಸ್ಲಿಮ್‌ 7i ಕಾರ್ಬನ್‌ ಲ್ಯಾಪ್‌ಟಾಪ್‌ ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಇದು ಇತ್ತೀಚಿನ 11 ನೇ ಜನ್ ಇಂಟೆಲ್ ಟೈಗರ್ ಲೇಕ್ ಸಿಪಿಯುಗಳನ್ನು ಒಳಗೊಂಡಿದೆ.

ಲೆನೊವೊ

ಹೌದು, ಲೆನೊವೊ ಕಂಪೆನಿ ಹೊಸ ಲೆನೊವೊ ಯೋಗ ಸ್ಲಿಮ್‌ 7i ಕಾರ್ಬನ್‌ ಲ್ಯಾಪ್‌ಟಾಪ್‌ ಅನ್ನು ಭಾರತದಲ್ಲಿ ಲಾಂಚ್‌ ಮಾಡಿದೆ. ಆದರೆ ಈ ಲ್ಯಾಪ್‌ಟಾಪ್‌ ಕಳೆದ ವರ್ಷ ಅಕ್ಟೋಬರ್‌ ತಿಂಗಳಲ್ಲಿ ಆಸ್ಟ್ರೇಲಿಯಾ, ಹಾಂಗ್ ಕಾಂಗ್, ಸಿಂಗಾಪುರ್‌ನಲ್ಲಿ ಬಿಡುಗಡೆ ಮಾಡಿತ್ತು. ಇದೀಗ ಭಾರತೀಯ ಮಾರುಕಟ್ಟೆಗೆ ಎಂಟ್ರಿ ನೀಡಿದೆ. ಇನ್ನು ಲೆನೊವೊ ಯೋಗ ಸ್ಲಿಮ್ 7i ಕಾರ್ಬನ್ 13 ಇಂಚಿನ ಕ್ಯೂಎಚ್‌ಡಿ ಡಿಸ್‌ಪ್ಲೇಯನ್ನು ಹೊಂದಿದ್ದು, 16:10 ರಚನೆಯ ಅನುಪಾತ ಮತ್ತು ನಿಖರವಾದ ಬಣ್ಣಗಳನ್ನು ಹೊಂದಿದೆ. ಇನ್ನುಳಿದಂತೆ ಈ ಲ್ಯಾಪ್‌ಟಾಪ್‌ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಲೆನೊವೊ

ಲೆನೊವೊ ಯೋಗ ಸ್ಲಿಮ್ 7i ಕಾರ್ಬನ್ ಲ್ಯಾಪ್‌ಟಾಪ್‌ 2,560x1,600 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 13.3-ಇಂಚಿನ ಕ್ಯೂಎಚ್‌ಡಿ ಡಿಸ್‌ಪ್ಲೇಯನ್ನು ಹೊಂದಿದೆ. ಇದು 300 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್‌, ಡಾಲ್ಬಿ ವಿಷನ್ ಬೆಂಬಲ ಮತ್ತು ಟಿಯುವಿ ರೈನ್‌ಲ್ಯಾಂಡ್ ಪ್ರಮಾಣೀಕರಣವನ್ನು ಹೊಂದಿದೆ. ಜೊತೆಗೆ ಇದು ಲೆನೊವೊ ಎನ್‌ಟಿಎಸ್‌ಸಿಯ 72% ಮತ್ತು ಎಸ್‌ಆರ್‌ಜಿಬಿ ಬಣ್ಣದ ಹರವುಗಳ 100 % ವ್ಯಾಪ್ತಿಯನ್ನು ಹೊಂದಿದೆ. ಇನ್ನು ಯೋಗ ಸ್ಲಿಮ್ 7i ಕಾರ್ಬನ್ 11 ನೇ ತಲೆಮಾರಿನ ಇಂಟೆಲ್ ಕೋರ್ i7-1165G7 ಜಿಪಿಯು ಪ್ರೊಸೆಸರ್‌ ಅನ್ನು ಹೊಂದಿದ್ದು, ಇದು 16GB RAM ಮತ್ತು 1TB ಇಂಟರ್‌ ಸ್ಟೋರೇಜ್‌ ಸಾಮರ್ಥ್ಯವನ್ನು ಹೊಂದಿದೆ. ಇದು 11ನೇ ತಲೆಮಾರಿನ ಇಂಟೆಲ್‌ ಟೈಗರ್‌ ಲೇಕ್‌ ಸಿಪಿಯು ಒಳಗೊಂಡಿದೆ.

ಲೆನೊವೊ

ಇನ್ನು ಲೆನೊವೊ ಯೋಗ ಸ್ಲಿಮ್ 7i ಕಾರ್ಬನ್ ಇಂಟೆಲ್ 2x2 802.11ax ವೈ-ಫೈ 6, ಬ್ಲೂಟೂತ್ 5.0, ಎರಡು ಯುಎಸ್‌ಬಿ ಟೈಪ್-ಸಿ ಥಂಡರ್ಬೋಲ್ಟ್ 4 ಪೋರ್ಟ್‌ಗಳು, ಯುಎಸ್‌ಬಿ ಟೈಪ್-ಸಿ 3.0 ಜನ್ 1 ಪೋರ್ಟ್ ಮತ್ತು ಆಡಿಯೊ ಜ್ಯಾಕ್ ಅನ್ನು ಒಳಗೊಂಡಿದೆ. ಇದು ಡಾಲ್ಬಿ ಅಟ್ಮೋಸ್‌ಗೆ ಬೆಂಬಲವನ್ನು ನೀಡಲಿದೆ. ಇದರಲ್ಲಿ ಎರಡು 2W ಹರ್ಮನ್ ಕಾರ್ಡನ್ ಸ್ಪೀಕರ್‌ಗಳನ್ನು ನಿರ್ವಹಿಸುತ್ತಾರೆ ಮತ್ತು ಎರಡು ಡಿಜಿಟಲ್ ಮೈಕ್‌ಗಳಿವೆ. ಅಲ್ಲದೆ 1080p ವಿಡಿಯೋ ಪ್ಲೇಬ್ಯಾಕ್‌ನೊಂದಿಗೆ, ಬ್ಯಾಟರಿ 15 ಗಂಟೆಗಳವರೆಗೆ ಇರುತ್ತದೆ ಎಂದು ಲೆನೊವೊ ಹೇಳಿದೆ. ಇದು ಕೊರ್ಟಾನಾ ಮತ್ತು ಅಲೆಕ್ಸಾ ಧ್ವನಿ ಆಜ್ಞೆಗಳಿಗೆ ಸಕ್ರಿಯವಾಗಿದೆ, ಮತ್ತು ಹಿಂಜ್ ಯಾಂತ್ರಿಕ ವ್ಯವಸ್ಥೆಯನ್ನು ಹೊಂದಿದ್ದು, ಪರದೆಯನ್ನು 180 ಡಿಗ್ರಿಗಳಷ್ಟು ಓರೆಯಾಗಿಸಲು ಅನುವು ಮಾಡಿಕೊಡುತ್ತದೆ.

ಲೆನೊವೊ

ಲೆನೊವೊ ಯೋಗ ಸ್ಲಿಮ್ 7i ಕಾರ್ಬನ್ ಬೆಲೆ 1,19,990ರೂ ಆಗಿದೆ. ಇದು ಸಿಂಗಲ್‌ ಮೂನ್ ವೈಟ್ ಕಲರ್ ಆಯ್ಕೆಯಲ್ಲಿ ನೀಡಲಾಗುತ್ತದೆ. ಇನ್ನು ಈ ಲ್ಯಾಪ್‌ಟಾಪ್‌ ಲೆನೊವೊ.ಕಾಮ್ ಮೂಲಕ ಲಭ್ಯವಿದೆ. ಜೊತೆಗೆ ಮಾರ್ಚ್ 25 ರಿಂದ ಇದು ಲೆನೊವೊ ಎಕ್ಸ್‌ಕ್ಲೂಸಿವ್ ಸ್ಟೋರ್‌ಗಳು ಸೇರಿದಂತೆ ಇತರ ಚಾನೆಲ್‌ಗಳಿಂದ ಲಭ್ಯವಿರುತ್ತದೆ. ಇನ್ನು ಲೆನೊವೊ ಯೋಗ ಸ್ಲಿಮ್ 7i ಕಾರ್ಬನ್ 2020 ರ ಅಕ್ಟೋಬರ್‌ನಲ್ಲಿ ಹಾಂಗ್ ಕಾಂಗ್ ಮತ್ತು ಸಿಂಗಾಪುರದಲ್ಲಿ ಬಿಡುಗಡೆ ಆಗಿತ್ತು. ಅಲ್ಲದೆ ಆಸ್ಟ್ರೇಲಿಯಾ, ಇಂಡೋನೇಷ್ಯಾ, ಜಪಾನ್, ಮಲೇಷ್ಯಾ, ನ್ಯೂಜಿಲೆಂಡ್, ಥೈಲ್ಯಾಂಡ್ ಮತ್ತು ವಿಯೆಟ್ನಾಂನಲ್ಲಿ ಕೂಡ ಈಗಾಗಲೇ ಬಿಡುಗಡೆ ಆಗಿದೆ.

Most Read Articles
Best Mobiles in India

English summary
Lenovo Yoga Slim 7i Carbon weighs under 1kg and is MIL-STD-810G certified.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X