Just In
- 5 hrs ago
ಜಬ್ರೋನಿಕ್ಸ್ ಡ್ರಿಪ್ ಸ್ಮಾರ್ಟ್ವಾಚ್ ಬಿಡುಗಡೆ! ಲಾಂಗ್ ಬ್ಯಾಟರಿ ಬ್ಯಾಕ್ಅಪ್ ವಿಶೇಷ!
- 6 hrs ago
ಡಿಜಿಟಲ್ ಇಂಡಿಯಾಗಾಗಿ ನಾಲ್ಕು ಹೊಸ ಯೋಜನೆಗಳನ್ನು ಪರಿಚಯಿಸಿದ ಪ್ರಧಾನಿ ಮೋದಿ!
- 8 hrs ago
ಭಾರತದಲ್ಲಿ ಬಹುನಿರೀಕ್ಷಿತ ಐಫೋನ್ 14 ಪ್ರೊ ಬೆಲೆ ಎಷ್ಟಿರಬಹುದು?..ಫೀಚರ್ಸ್ ಏನು?
- 10 hrs ago
ಸಾರ್ವಜನಿಕರೇ ನಿಮ್ಮ ಮನೆ ಮೇಲೆ ಮೊಬೈಲ್ ಟವರ್ ಹಾಕಿಸುವ ಮುನ್ನ ಎಚ್ಚರ?
Don't Miss
- News
ಯುಎಪಿಎ ಅಡಿ ಯಾವುದೇ ವಕ್ತಿಯನ್ನು ವಿಚಾರಣೆಗೊಳಪಡಿಸಬಹುದು-ಹೈಕೋರ್ಟ್ ಆದೇಶ
- Movies
ಹಿಂದಿಗೆ ಹೋಗುತ್ತಿದೆ ಏಳು ವರ್ಷ ಹಳೆಯ ಕನ್ನಡ ಸಿನಿಮಾ: ಅಕ್ಷಯ್-ಶಾಹಿದ್ ನಡುವೆ ಪೈಪೋಟಿ!
- Finance
ಸರ್ವೀಸ್ ಚಾರ್ಜ್ ಬಗ್ಗೆ ಗ್ರಾಹಕರು ದೂರು ನೀಡುವುದು ಹೇಗೆ?
- Sports
ICC Womens ODI Ranking: ಅಗ್ರ 10ರೊಳಗೆ ಸ್ಮೃತಿ ಮಂಧಾನ, 11ನೇ ಸ್ಥಾನದಲ್ಲಿ ರಾಜೇಶ್ವರಿ
- Lifestyle
ಯಾರೂ ಇಲ್ಲದಿದ್ದಾಗ ಪುರುಷ ಈ ರೀತಿ ವಿಲಕ್ಷಣವಾಗಿ ವರ್ತಿಸುತ್ತಾನೆ, ಗೊತ್ತಾ? ಇದನ್ನು ಓದಿದ್ರೆ ನೀವು ಶಾಕ್ ಆಗೋದು ಪಕ್ಕಾ!
- Automobiles
ದೇಶದ ಮೊದಲ 150kWh ಡಿಸಿ ಇವಿ ಫಾಸ್ಟ್ ಚಾರ್ಜರ್ ಸ್ಥಾಪಿಸಿದ ಕಿಯಾ ಇಂಡಿಯಾ
- Education
Karnataka Second PUC Results 2022 : ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಉತ್ತರ ಪತ್ರಿಕೆಯ ಪ್ರತಿಗಳು ಜು.6ರಿಂದ ಲಭ್ಯ
- Travel
ಸೂರ್ಯ, ಅಲೆಗಳು ಮತ್ತು ಮರಳು ಇವುಗಳ ಸಮ್ಮಿಲನ ಕಡಲತೀರದ ಪಟ್ಟಣ - ಮಲ್ಪೆ
ಭಾರತದಲ್ಲಿ ಎಲ್ಜಿ OLED 2022 ಸ್ಮಾರ್ಟ್ ಟಿವಿ ಸರಣಿ ಅನಾವರಣ!
ಸ್ಮಾರ್ಟ್ಟಿವಿ ಮಾರುಕಟ್ಟೆಯಲ್ಲಿ ಎಲ್ಜಿ ಕಂಪೆನಿ ಸಾಕಷ್ಟು ಪ್ರಸಿದ್ಧಿಯನ್ನು ಪಡೆದಿದೆ. ತನ್ನ ಆಕರ್ಷಕ ಸ್ಮಾರ್ಟ್ಟಿವಿಗಳ ಮೂಲಕ ಮಾರುಕಟ್ಟೆಯಲ್ಲಿ ತನ್ನ ಸ್ಥಾನ ಭದ್ರಪಡಿಸಿಕೊಂಡಿದೆ. ಸದ್ಯ ಇದೀಗ ಭಾರತದಲ್ಲಿ ತನ್ನ ಬಹು ನಿರೀಕ್ಷಿತ 2022 OLED ಟಿವಿ ಸರಣಿಯನ್ನು ಪರಿಚಯಿಸಿದೆ. ಈ ಸರಣಿಯಲ್ಲಿ 42 ಇಂಚಿನ OLED ಟಿವಿಯಿಂದ 97 ಇಂಚಿನ OLED ಟಿವಿಯನ್ನು ಕೂಡ ಕಾಣಬಹುದಾಗಿದೆ. ಇದರ ಜೊತೆಗೆ, LG ತನ್ನ C2 ಸರಣಿಯಲ್ಲಿ LD OLED Evo ಅನ್ನು ಸಹ ಪರಿಚಯಿಸಿದೆ.

ಹೌದು, ಎಲ್ಜಿ ಕಂಪೆನಿ ಹೊಸ ಮಾದರಿಯ ಸ್ಮಾರ್ಟ್ಟಿವಿಗಳನ್ನು ಲಾಂಚ್ ಮಾಡಿದೆ. ಜೊತೆಗೆ LG ಸಿಗ್ನೇಚರ್ R OLED ಎಂಬ ತನ್ನ ರೋಲ್ ಮಾಡಬಹುದಾದ ಸ್ಮಾರ್ಟ್ಟಿವಿಯನ್ನು ಪರಿಚಯಿಸಿದೆ. ಸಿಗ್ನೇಚರ್ R OLED, ಇದು ರೋಲ್ ಮಾಡಬಹುದಾದ OLED ಪ್ಯಾನೆಲ್ ಅನ್ನು ಹೊಂದಿದೆ. ಇದು ನಿಮಗೆ ಸ್ಕ್ರೀನ್ ಅಗತ್ಯವಿಲ್ಲದಿದ್ದಾಗ ಧ್ವನಿ ವ್ಯವಸ್ಥೆಗೆ ಬದಲಾಯಿಸಿಕೊಳ್ಳಬಹುದಾದ ಅವಕಾಶವನ್ನು ನೀಡಲಿದೆ. ಹಾಗಾದ್ರೆ ಎಲ್ಜಿ ಕಂಪೆನಿ ಪರಿಚಯಿಸಿರುವ ಹೊಸ ಸ್ಮಾರ್ಟ್ಟಿವಿಗಳ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

LG OLED Evo
ಎಲ್ಜಿ ಕಂಪೆನಿಯ LG OLED Evo ಸ್ಮಾರ್ಟ್ಟಿವಿ ಹೊಸ α (ಆಲ್ಫಾ) 9 Gen 5 ಪ್ರೊಸೆಸರ್ ಮತ್ತು ಚಿತ್ರ ಅಲ್ಗಾರಿದಮ್ಗಳನ್ನು ಒಳಗೊಂಡಿದೆ. ಇದು LG ಯ Evo ತಂತ್ರಜ್ಞಾನವನ್ನು ಒಳಗೊಂಡಿದ್ದು 2022 G2 ಸರಣಿ ಮತ್ತು C2 ಸರಣಿಯಲ್ಲಿ ನಿರ್ಮಿಸಲಾಗಿದೆ. ಇನ್ನು LG OLED Evo ಟಿವಿಗಳು ಹೊಸ ಬ್ರೈಟ್ನೆಸ್ ಬೂಸ್ಟರ್ ಮ್ಯಾಕ್ಸ್ ತಂತ್ರಜ್ಞಾನವನ್ನು ಹೊಂದಿದೆ. ಇದು G2 ಸರಣಿಯನ್ನು 30% ಬ್ರೈಟ್ನೆಸ್ ಹೆಚ್ಚು ಮಾಡಲಿದೆ. ಹಾಗೆಯೇ C2 ಸರಣಿಯನ್ನು 20% ಬ್ರೈಟ್ನೆಸ್ ನೀಡಲಿದೆ.

ಇನ್ನು ಎಲ್ಜಿ ಪರಿಚಯಿಸಿರುವ ಹೊಸ ಸರಣಿಯು 42 ಇಂಚಿನಿಂದ ಬೃಹತ್ 97 ಇಂಚಿನ ಟಿವಿಗಳು ಒಳಗೊಂಡಿದೆ. ಇನ್ನು ಎಲ್ಜಿ G2 ಸರಣಿಯು 55 ಇಂಚಿನ ಮತ್ತು 65 ಇಂಚಿನ ಮಾದರಿಗಳಲ್ಲಿ ಲಭ್ಯವಿರುತ್ತದೆ. ಹಾಗೆಯೇ LG ಯ C2 ಸರಣಿಯು 2022 ಶ್ರೇಣಿಯು ಒಟ್ಟು ಆರು ಆಯ್ಕೆಗಳೊಂದಿಗೆ ನೀಡುತ್ತದೆ. ಇದರಲ್ಲಿ C2 ಸರಣಿಯ ಮೊದಲ 42 ಇಂಚಿನ OLED ಟಿವಿಯನ್ನು ಸಹ ಪಡೆಯುತ್ತದೆ. ಇತರ ಆಯ್ಕೆಗಳಲ್ಲಿ 97 ಇಂಚಿನ, 83-ಇಂಚಿನ, 77-ಇಂಚಿನ, 65-ಇಂಚಿನ, 55-ಇಂಚಿನ, 48-ಇಂಚಿನ ಟಿವಿಗಳು ಸೇರಿವೆ. ಜೊತೆಗೆ B2 OLED ಟಿವಿ ಸರಣಿಯು 65 ಇಂಚಿನ ಮತ್ತು 55 ಇಂಚಿನ ಎರಡು ಸ್ಕ್ರೀನ್ ಗಾತ್ರಗಳಲ್ಲಿ ಬರಲಿದೆ. ಇನ್ನು A2 ಸರಣಿಯು 65-ಇಂಚಿನ, 55-ಇಂಚಿನ ಮತ್ತು 48-ಇಂಚಿನ ಮೂರು ಪರದೆಯ ಗಾತ್ರಗಳಲ್ಲಿ ಲಭ್ಯವಿರುತ್ತದೆ.

ಪ್ರೊಸೆಸರ್
ಎಲ್ಜಿ ಕಂಪೆನಿಯ ಈ ಹೊಸ ಸ್ಮಾರ್ಟ್ಟಿವಿಗಳು LG α9 Gen 5 ಪ್ರೊಸೆಸರ್ ಅನ್ನು ಒಳಗೊಂಡಿವೆ. ಈ ಪ್ರೊಸೆಸರ್ G2, C2 ಮತ್ತು Z2 ಸರಣಿಯ ಮಾದರಿಗಳಲ್ಲಿ ಕಂಡುಬರುತ್ತದೆ. α9 Gen 5 ಹೊಸ ಡೈನಾಮಿಕ್ ಟೋನ್-ಮ್ಯಾಪಿಂಗ್ ಪ್ರೊ ಅಲ್ಗಾರಿದಮ್ ಅನ್ನು ಹೊಂದಿದೆ. ಜೊತೆಗೆ AI ಸೌಂಡ್ ಪ್ರೊ ಫೀಚರ್ಸ್ ಸಹಾಯದಿಂದ ಧ್ವನಿಯನ್ನು ಹೆಚ್ಚಿಸಬಹುದಾಗಿದೆ. ಇನ್ನು α9 Gen 5 AI ಪ್ರೊಸೆಸರ್ OLED ಟಿವಿಗೆ 2 ಚಾನೆಲ್ ಆಡಿಯೊವನ್ನು ವರ್ಚುವಲ್ 7.1.2 ಧ್ವನಿಗೆ ಅಪ್-ಮಿಕ್ಸ್ ಮಾಡಲು ಅನುಮತಿಸುತ್ತದೆ. ಅಲ್ಲದೆ B2 ಮತ್ತು A2 ಸರಣಿಯ ಟಿವಿಗಳು ಕಂಪನಿಯ ಆಟೋ-ಲೈಟ್ ಟೆಕ್ನಾಲಜಿಯನ್ನು ಒಳಗೊಂಡಿದೆ.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
44,999
-
15,999
-
20,449
-
7,332
-
18,990
-
31,999
-
54,999
-
17,091
-
17,091
-
13,999
-
31,830
-
31,499
-
26,265
-
24,960
-
21,839
-
15,999
-
11,570
-
11,700
-
7,070
-
7,086