ಭಾರತದಲ್ಲಿ ಎರಡು ಹೊಸ ಇಯರ್‌ಫೋನ್‌ ಅನಾವರಣ ಮಾಡಿದ ಎಲ್‌ಜಿ ಸಂಸ್ಥೆ!

|

ಟೆಕ್‌ ವಲಯದ ಎಲೆಕ್ಟ್ರಾನಿಕ್ಸ್‌ ದೈತ್ಯ ಎನಿಸಿಕೊಂಡಿರುವ ಎಲ್‌ಜಿ ಕಂಪೆನಿ ತನ್ನ ಹೊಸ ಇಯರ್‌ಫೋನ್‌ಗಳನ್ನ ಬಿಡುಗಡೆ ಮಾಡಿದೆ. ಸದ್ಯ ಎಲ್‌ಜಿ ಟೋನ್ ಫ್ರೀ HBS-FN6 ಮತ್ತು HBS-FN7 ಟ್ರೂಲಿ ವಾಯರ್‌ಲೆಸ್‌ ಸ್ಟಿರಿಯೊ ಎಂಬ ಎರಡು ಇಯರ್‌ಫೋನ್‌ಗಳನ್ನು ಭಾರತದಲ್ಲಿ ಅನಾವರಣಗೊಳಿಸಿದೆ. ಇದರ ಬೆಲೆ ರೂ. 24,990 ಮತ್ತು ರೂ. 29,990 ಬೆಲೆಯನ್ನು ಹೊಂದಿದ್ದು, ಚಾರ್ಜಿಂಗ್ ಕೇಸಿಂಗ್‌ನಲ್ಲಿ ಇಯರ್‌ಪೀಸ್‌ಗಳ ಯುವಿ ಸ್ಯಾನಿಟೈಸೇಶನ್ ಅನ್ನು ಹೊಂದಿವೆ. ಜೊತೆಗೆ ಎಲ್‌ಜಿ ಟೋನ್ ಫ್ರೀ HBS-FN7 ಸಹ ಆಕ್ಟಿವ್‌ ನಾಯ್ಸ್‌ ಕ್ಯಾನ್ಸಲೇಶನ್‌ ಅನ್ನು ಹೊಂದಿದೆ.

ಎಲ್‌ಜಿ

ಹೌದು, ಎಲ್‌ಜಿ ಸಂಸ್ಥೆ ತನ್ನ ಹೊಸ ಎರಡು ಇಯರ್‌ಫೋನ್‌ಗಳನ್ನ ಭಾರತದಲ್ಲಿ ಪರಿಚಯಿಸಿದೆ. ಈ ಇಯರ್‌ಫೋನ್‌ಗಳು ಟೋನ್ ಫ್ರೀ TWS ಇಯರ್‌ಫೋನ್‌ಗಳಾಗಿದ್ದು, ಬ್ರಿಟಿಷ್ ಲೌಡ್‌ಸ್ಪೀಕರ್‌ ಮೇಕರ್ ಮೆರಿಡಿಯನ್ ಆಡಿಯೋ ಸಹಯೋಗದೊಂದಿಗೆ ಸೌಂಡ್ ಟ್ಯೂನಿಂಗ್ ಅನ್ನು ಸಹ ಹೊಂದಿವೆ. ಇನ್ನುಳಿದಂತೆ ಈ ಇಯರ್‌ಫೋನ್‌ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಎಲ್‌ಜಿ ಟೋನ್ ಫ್ರೀ HBS-FN6

ಎಲ್‌ಜಿ ಟೋನ್ ಫ್ರೀ HBS-FN6

ಈ ಇಯರ್‌ಫೋನ್‌ ಇಯರ್‌ಪೀಸ್‌ಗಳಿಗೆ ಯುವಿ ಸ್ಯಾನಿಟೈಸೇಶನ್ ಸಿಸ್ಟಮ್ ಅನ್ನು ನೀಡಲಾಗಿದೆ. ಚಾರ್ಜಿಂಗ್ ಕೇಸ್‌ನಲ್ಲಿ ಇರಿಸಿದಾಗ, ಇದು ಇಯರ್‌ಪೀಸ್‌ಗಳನ್ನು ಸ್ವಚ್ಚಗೊಳಿಸಲು ಯುವಿ ಬೆಳಕನ್ನು ಬಳಸುತ್ತದೆ. ಅಲ್ಲದೆ ಇಯರ್‌ಪೀಸ್‌ಗಳ ಒಳ ಜಾಲರಿಯ ಮೇಲಿನ ಸಾಮಾನ್ಯ ಸೂಕ್ಷ್ಮಜೀವಿಗಳು ಮತ್ತು ಬ್ಯಾಕ್ಟೀರಿಯಾಗಳನ್ನು ತೆಗೆದುಹಾಕುತ್ತದೆ ಎಂದು ಹೇಳಲಾಗಿದೆ. ಈ ಇಯರ್‌ಫೋನ್‌ಗಳು ಎಸ್‌ಬಿಸಿ ಮತ್ತು ಎಎಸಿ ಬ್ಲೂಟೂತ್ ಕೋಡೆಕ್‌ಗಳನ್ನು ಬೆಂಬಲಿಸುತ್ತವೆ ಮತ್ತು ಮೆರಿಡಿಯನ್ ಆಡಿಯೊ ಸಹಯೋಗದೊಂದಿಗೆ ಟ್ಯೂನ್ ಮಾಡುತ್ತವೆ. ಜೊತೆಗೆ ಆರು ಗಂಟೆಗಳ ಬ್ಯಾಟರಿ ಅವಧಿಯನ್ನು ಕಂಪನಿಯು ಭರವಸೆ ನೀಡಿದೆ.

ಎಲ್‌ಜಿ ಟೋನ್ ಫ್ರೀ HBS-FN7

ಎಲ್‌ಜಿ ಟೋನ್ ಫ್ರೀ HBS-FN7

ಎಲ್‌ಜಿ ಕಂಪೆನಿಯ HBS-FN7 ಇಯರ್‌ಫೋನ್‌ ಆಕ್ಟಿವ್‌ ನಾಯ್ಸ್‌ ಕ್ಯಾನ್ಸಲೇಶನ್‌ ಹೆಚ್ಚುವರಿ ಫೀಚರ್ಸ್‌ ಅನ್ನು ಹೊಂದಿದೆ. ಇನ್ನು ಈ ಇಯರ್‌ಫೋನ್‌ ಐದು ಗಂಟೆಗಳವರೆಗೆ ಬ್ಯಾಟರಿ ಅವಧಿಯನ್ನು ಮತ್ತು ಚಾರ್ಜಿಂಗ್ ಕೇಸ್‌ನಿಂದ ಇನ್ನೂ ಎರಡು ಚಾರ್ಜ್‌ಗಳನ್ನು ಹೊಂದಿದ್ದು, ಕಾರ್ಯಾಚರಣೆಯಲ್ಲಿ ಸಕ್ರಿಯ ಶಬ್ದ ರದ್ದತಿಯನ್ನು ಒಳಗೊಂಡಿದೆ. ಇದಲ್ಲದೆ ಎಲ್‌ಜಿ ಟೋನ್ ಫ್ರೀ HBS-FN7 ಪ್ರತಿ ಇಯರ್‌ಪೀಸ್‌ನಲ್ಲಿ ಮೂರು ಮೈಕ್ರೊಫೋನ್‌ಗಳನ್ನು ಹೊಂದಿರುತ್ತದೆ. ಇನ್ನು ಕನೆಕ್ಟಿವಿಟಿ ಆಯ್ಕೆಯಲ್ಲಿ ಬ್ಲೂಟೂತ್ 5 ಅನ್ನು ಬಳಸುತ್ತದೆ ಮತ್ತು 6mm ಡೈನಾಮಿಕ್ ಡ್ರೈವರ್‌ಗಳಿಂದ ನಿಯಂತ್ರಿಸಲ್ಪಡುತ್ತದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಎಲ್‌ಜಿ ಟೋನ್ ಫ್ರೀ HBS-FN6 ಇಯರ್‌ ಫೋನ್‌ ಬೆಲೆ 24,990 ರೂ ಹೊಂದಿದೆ. ಹಾಗೇಯೆ ಎಲ್‌ಜಿ ಟೋನ್ ಫ್ರೀ HBS-FN7 ಇಯರ್‌ಫೋನ್‌ 29,990 ರೂ. ಬೆಲೆಯನ್ನು ಹೊಂದಿದೆ. ಎಲ್‌ಜಿ ಟೋನ್ ಫ್ರೀ ಶ್ರೇಣಿ ಈಗಾಗಲೇ ಎಲ್‌ಜಿ ಆನ್‌ಲೈನ್ ಸ್ಟೋರ್‌ನಲ್ಲಿ ಲಭ್ಯವಿದೆ. ಸದ್ಯ ಮುಂದಿನ ವಾರದಿಂದ ಆಫ್‌ಲೈನ್ ರಿಟೇಲ್‌ ಮತ್ತು ಇ-ಕಾಮರ್ಸ್ ಪೋರ್ಟಲ್‌ಗಳ ಮೂಲಕ ಮಾರಾಟವಾಗಲಿದೆ.

Most Read Articles
Best Mobiles in India

English summary
LG Tone Free HBS-FN6 and HBS-FN7 true wireless stereo (TWS) earphones with UV sanitisation cases have been launched in India.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X