ಲಾಕ್‌ಡೌನ್‌ ಸಮಯ ಕಳೆಯಲು ಇಲ್ಲಿವೆ ಟಾಪ್‌ 10 ಆನ್‌ಲೈನ್‌ ಗೇಮ್ಸ್‌!

|

ಚೀನಾದಲ್ಲಿ ಜನಿಸಿ ಇಡೀ ಜಗತ್ತನ್ನೇ ಬೆಚ್ಚಿ ಬೀಳಿಸಿರುವ ಮಹಾಮಾರಿ ಕೊರನಾ ವೈರಸ್‌, ಭಾರತದಲ್ಲಿಯೂ ತನ್ನ ಕಾಲುರಿದೆ. ಕೊರೊನಾ ನಿಯಂತ್ರಿಸಲು ಸರ್ಕಾರ ಲಾಕ್‌ಡೌನ್ ಅನ್ನು ಮತ್ತೆ ಮುಂದುವರಿಸಿದೆ. ಈ ಸಂದರ್ಭದಲ್ಲಿ ಎಲ್ಲರೂ ಮನೆಯಲ್ಲಿ ಇದ್ದು, ಹೆಂಗಪ್ಪಾ ಲಾಕ್‌ಡೌನ್‌ ಬೇಸರ ಕಳೆಯೊದು ಅಂದುಕೊಂಡವರಿಗೆ ಆನ್‌ಲೈನ್ ಗೇಮ್‌ಗಳು ಸಾಕಷ್ಟು ಮನರಂಜನೆ ನೀಡುತ್ತಿವೆ ಹಾಗೂ ಸಮಯ ಕಳೆಯಲು ನೆರವಾಗಿವೆ. ಹೀಗಾಗಿ ಬಹುತೇಕರು ಗೇಮಿಂಗ್‌ನಲ್ಲಿ ತೊಡಗಿದ್ದಾರೆ.

ಲಾಕ್‌ಡೌನ್‌ ಜಾರಿ

ಹೌದು, ಮೇ 3, 2020ರ ವರೆಗೂ ಲಾಕ್‌ಡೌನ್‌ ಜಾರಿಯಲ್ಲಿದ್ದು, ಆನಂತರವು ಮುಂದುವರೆಯುವ ಸಾಧ್ಯತೆಗಳಿವೆ. ಸದ್ಯ ಲಾಕ್‌ಡೌನ್‌ ಅವಧಿಯಲ್ಲಿ ಮನೆಯಲ್ಲಿ ಇರುವುದು ಬೇಸರ ಎನ್ನುವವರಿಗೆ ಅವರ ಬೇಸರ ಕಳೆಯಲು ಆನ್‌ಲೈನ್‌ ಗೇಮ್‌ಗಳು ಜೊತೆಯಾಗಿವೆ. ಈಗಾಗಲೆ ಪಬ್‌ಜಿ, ಕಾಲ್‌ ಆಫ್‌ ಡ್ಯುಟಿ ಸಿಕ್ಕಾಪಟ್ಟೆ ಕ್ರೇಜ್ ಮೂಡಿಸಿವೆ. ಅವುಗಳೊಂದಿಗೆ ಮತ್ತಷ್ಟು ಹೊಸ ಗೇಮ್‌ಗಳು ಟ್ರೆಂಡ್‌ ಮೂಡಿಸಿವೆ. ಬಹುತೇಕ ಗೇಮ್‌ಗಳು ಸಿಂಗಲ್‌ ಪ್ಲೇಯರ್, ಮಲ್ಟಿಪ್ಲೇಯರ್ ಹಾಗೂ ಆನ್‌ಲೈನ್‌ ಮೂಲಕ ಆಡುವ ಸೌಲಭ್ಯ ಪಡೆದಿವೆ. ಅಂತಹ ಟಾಪ್‌ ಹತ್ತು ಗೇಮ್‌ಗಳ ಬಗ್ಗೆ ಈ ಲೇಖನದಲ್ಲಿ ತಿಳಿಸಲಾಗಿದೆ. ಮುಂದೆ ಓದಿರಿ.

ಲುಡೊ ಕಿಂಗ್ ಗೇಮ್

ಲುಡೊ ಕಿಂಗ್ ಗೇಮ್

ಬಹುಬೇಗನೇ ಜನಪ್ರಿಯ ಪಡೆದಿರುವ ಲುಡೊ ಕಿಂಗ್ ಗೇಮ್ ಲಾಕ್‌ಡೌನ್‌ ಅವಧಿಯಲ್ಲಿ ಭಾರಿ ಡಿಮ್ಯಾಂಡ್‌ ಕಂಡುಕೊಂಡಿದೆ. ಈ ಆಟವನ್ನು ಆಡುವ ಬಗ್ಗೆ ಹಿರಿಯರಿಗೂ ಗೊತ್ತಿದ್ದು, ಎಲ್ಲ ವಯೋಮಾನದವರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ. ಸಿಂಗಲ್ ಪ್ಲೇಯರ್, ಮಲ್ಟಿಪ್ಲೇಯರ್, ಹಾಗೂ ಆನ್‌ಲೈನ್ ಪ್ಲೇಯರ್ಸ್‌ ಜೊತೆಗೆ ಆಟವನ್ನು ಆಡಬಹುದಾದ ಆಯ್ಕೆಗಳಿವೆ.

ಫಿಫಾ ಸಾಕರ್-​FIFA Soccer

ಫಿಫಾ ಸಾಕರ್-​FIFA Soccer

ಎಲೆಕ್ಟ್ರಾನಿಕ್ ಆರ್ಟ್ಸ್ ಫಿಫಾ ಸಾಕಷ್ಟು ಜನಪ್ರಿಯ ಆಟವಾಗಿದ್ದು ಅದು ಉತ್ತಮ ಗ್ರಾಫಿಕ್ಸ್ ಮತ್ತು ವಾಸ್ತವಿಕ ಗೇಮಿಂಗ್ ಅನುಭವವನ್ನು ನೀಡುತ್ತದೆ. ಫಿಫಾ ಸಾಕರ್ ಎಂದು ಕರೆಯಲ್ಪಡುವ ಈ ಆಟವು ಮೊಬೈಲ್ ಮತ್ತು ಪಿಸಿ ಆವೃತ್ತಿಯನ್ನು ಬೆಂಬಲಿಸುತ್ತವೆ. ರಿಯಲ್‌ ಟೈಮ್‌ನಲ್ಲಿ 11 v 11 ಮಲ್ಟಿಪ್ಲೇಯರ್ ಮೋಡ್‌ನಲ್ಲಿ ಭಾಗವಹಿಸಲು ಅನುಮತಿಸುತ್ತದೆ.

ಯುನೊ-UNO ಗೇಮ್

ಯುನೊ-UNO ಗೇಮ್

ಕಾರ್ಡ್ ಗೇಮ್ ಇಷ್ಟಪಡುವವರಿಗೆ ಯುನೊ ಗೇಮ್‌ ಅತ್ಯುತ್ತಮ ಪ್ಲಾಟ್‌ಫಾರ್ಮ್ ಆಗಿದೆ. ಈ ಯುನೊ ಕಾರ್ಡ್‌ ಗೇಮ್‌ನಲ್ಲಿ ಟೊರ್ನಾಮೆಂಟ್‌, 2 vs 2, ಸೇರಿದಂತೆ ಹಲವು ಗೇಮ್‌ ಮೋಡ್‌ ಆಯ್ಕೆಗಳಿವೆ. ಯುನೊ ಗೇಮ್‌ನ ರೂಲ್ಸ್‌ ಸುಲಭವಾಗಿ ಅರ್ಥೈಸಿಕೊಳ್ಳಬಹುದಾಗಿದೆ. ಆಟಗಾರರು ಟೀಮ್ ರಚಿಸಿಕೊಂಡು ಗೇಮ್ ಆಡಬಹುದಾಗಿದೆ. ಆಪ್‌/ಪ್ಲೇ ಸ್ಟೋರ್‌ನಿಂದ ಡೌನ್‌ಲೋಡ್ ಮಾಡಿಕೊಳ್ಳಬಹುದು.

ಫೋರ್ಟ್‌ನೈಟ್-Fortnite

ಫೋರ್ಟ್‌ನೈಟ್-Fortnite

ಫೋರ್ಟ್‌ನೈಟ್ ಎಂಬುದು ಯುದ್ಧದ ರಾಯಲ್ ಪರಿಕಲ್ಪನೆಯನ್ನು ಜನಸಾಮಾನ್ಯರಿಗೆ ಜನಪ್ರಿಯಗೊಳಿಸಿದ ಆಟವಾಗಿದೆ. ಅದ್ದೂರಿಯಾಗಿ ಕಾಣುವ ಗ್ರಾಫಿಕ್ಸ್, ಸ್ಪರ್ಶ ಆಪ್ಟಿಮೈಸ್ಡ್ ನಿಯಂತ್ರಣಗಳು, ನಿಯಮಿತ ಅಪ್‌ಡೇಟ್‌ಗಳು ಆಟದ ಕ್ರೇಜ್‌ ಅನ್ನು ಆಸಕ್ತಿದಾಯಕ ಮಾಡಿವೆ. ಕ್ರಾಸ್‌ ಪ್ಲಾಟ್‌ಫಾರ್ಮ್ ಗೇಮ್‌ಪ್ಲೇ ಸಫೋರ್ಟ್‌ ಇದೆ.

ಕಾಲ್ ಆಫ್ ಡ್ಯುಟಿ ಗೇಮ್

ಕಾಲ್ ಆಫ್ ಡ್ಯುಟಿ ಗೇಮ್

ಕಾಲ್ ಆಫ್ ಡ್ಯುಟಿ ಗೇಮ್ ಸಹ ಗೇಮ್ಸ್‌ ಪ್ರಿಯರಿಂದ ಹೆಚ್ಚಿನ ಆಕರ್ಷಣೆ ಪಡೆದಿದೆ. ಲಾಕ್‌ಡೌನ್‌ ಬೇಸರ ಕಳೆಯಲು ಅನೇಕರು ಈ ಗೇಮ್ ಮೊರೆ ಹೋಗಿದ್ದಾರೆ. ಟೀಮ್ ಡೆತ್‌ಮ್ಯಾಚ್, ಡೊಮಿನೇಶನ್, ಸರ್ಚ್ ಆಂಡ್ ಡಿಸ್ಟ್ರಾಯ್ ಸೇರಿದಂತೆ ಹಲವು ಗೇಮ್‌ ಮೋಡ್‌ಗಳು ಆ ಆಟದಲ್ಲಿ ಕಾಣಿಸುತ್ತವೆ. ಈ ಗೇಮ್ ಸಹ ಆಂಡ್ರಾಯ್ಡ್ ಹಾಗೂ ಐಓಎಸ್‌ ಎರಡು ಓಎಸ್‌ನಲ್ಲಿಯೂ ಲಭ್ಯವಿದೆ.

ಕ್ಲಾಷ್ ಆಫ್ ಕ್ಲಾನ್ಸ್

ಕ್ಲಾಷ್ ಆಫ್ ಕ್ಲಾನ್ಸ್

ಕ್ಲಾಷ್ ಆಫ್ ಕ್ಲಾನ್ಸ್ ಯುದ್ಧ ಮಾದರಿಯ ಆಟವಾಗಿದ್ದು, ಸಾಮ್ರಾಜ್ಯವನ್ನು ನಿರ್ಮಿಸಿ ಮತ್ತು ಅದನ್ನು ಮೂರನೇ ವ್ಯಕ್ತಿಯ ಆಟದ ಸ್ವರೂಪದಲ್ಲಿ ರಕ್ಷಿಸಲು ಯುದ್ಧ ಮಾಡುವುದು. ಕ್ಯಾಶ್ ಆಫ್ ಕ್ಲಾನ್ಸ್ ನಲ್ಲಿ ತಮ್ಮ ತಂಡದೊಂದಿಗೆ ಆಟಗಾರರು ತಮ್ಮ ಗ್ರಾಮವನ್ನು ಶತ್ರುಗಳಿಂದ ರಕ್ಷಿಸಬೇಕಾದ ತಂತ್ರದ ಆಟವಾಗಿದೆ.

ಕ್ಯಾರಮ್ ಪೂಲ್-Carrom Pool

ಕ್ಯಾರಮ್ ಪೂಲ್-Carrom Pool

ಸಾಮಾನ್ಯವಾಗಿ ಕೇರಮ್‌ ಆಟವನ್ನು ಎಲ್ಲರೂ ಆಡಿರುತ್ತಾರೆ. ಆದರೆ ಈ ಕ್ಯಾರಮ್ ಪೂಲ್ ಮೊಬೈಲ್ ಕೇರಮ್ ಗೇಮ್ ಆಗಿದ್ದು, ಮಲ್ಟಿಪ್ಲೇಯರ್‌ ಸೇರಿ ಆಡಬಹುದಾಗಿದೆ. ಸದ್ಯದ ಲಾಕ್‌ಡೌನ್‌ ಅವಧಿಗೆ ಸ್ನೇಹಿತರು ಮತ್ತು ಕುಟುಂಬದೊಂದಿಗೆ ಗೇಮ್ ಆಡಲು ಸೂಕ್ತವಾಗಿದೆ.

8 ಬಾಲ್‌ ಪೂಲ್-8 Ball Pool

8 ಬಾಲ್‌ ಪೂಲ್-8 Ball Pool

ಮೊಬೈಲ್‌ನಲ್ಲಿ ಲಭ್ಯವಿರುವ ಪೂಲ್‌ ಗೇಮ್‌ಗಳಲ್ಲಿ ಈ 8 ಬಾಲ್‌ ಪೂಲ್ ಗೇಮ್ ಒಂದು ಅತ್ಯುತ್ತಮ ಎನಿಸಿಕೊಂಡಿದೆ. ಮೊಬೈಲ್‌ ಪ್ಲಾಟ್‌ಫಾರ್ಮ್ ನಲ್ಲಿ ಈ ಗೇಮ್‌ ಅನ್ನು 1 vs 1 ಮಲ್ಟಿಪ್ಲೇಯರ್ ಮೋಡ್ ನಲ್ಲಿ ಆಡಬಹುದಾಗಿದೆ.

ಪಬ್‌ಜಿ ಗೇಮ್

ಪಬ್‌ಜಿ ಗೇಮ್

ಪಬ್‌ಜಿ ಗೇಮ್‌ ಬಗ್ಗೆ ಹೆಚ್ಚು ಹೇಳುವ ಅಗತ್ಯವಿಲ್ಲ. ಏಕೆಂದರೇ ಪಬ್‌ಜಿ ಗೇಮ್‌ ಯುವ ಸಮೂಹವನ್ನು ಎಷ್ಟು ಆವರಿಸಿಕೊಂಡಿದೆ ಎಂಬುದು ತಿಳಿದಿರುವ ಸಂಗತಿಯೇ ಆಗಿದೆ. ಈ ಲಾಕ್‌ಡೌನ್ ಅವಧಿಯಲ್ಲಿಯೂ ಪಬ್‌ಜಿ ಕ್ರೇಜ್ ಇನ್ನು ಅಧಿಕವಾಗಿದೆ. ಪಬ್‌ಜಿಯ ಇತ್ತೀಚಿನ ಹೊಸ ಆವೃತ್ತಿಗಳು ಆಟದ ಸೊಬಗನ್ನು ಹೆಚ್ಚಿಸಿದೆ. ಈ ಗೇಮ್ ಆಂಡ್ರಾಯ್ಡ್ ಹಾಗೂ ಐಓಎಸ್‌ ಎರಡು ಓಎಸ್‌ನಲ್ಲಿಯೂ ಲಭ್ಯವಿದೆ.

ವರ್ಲ್ಡ್ ವಿತ್ ಫ್ರೇಂಡ್ಸ್‌ 2

ವರ್ಲ್ಡ್ ವಿತ್ ಫ್ರೇಂಡ್ಸ್‌ 2

ಬೋರ್ಡ್ ಗೇಮ್ ಸ್ಕ್ರ್ಯಾಂಬಲ್ ಅನ್ನು ಆಡಲು ನೀವು ಇಷ್ಟಪಟ್ಟರೆ, ನಿಮಗೆ ಈ ವರ್ಲ್ಡ್ ವಿತ್ ಫ್ರೇಂಡ್ಸ್‌ 2 ಅತ್ಯುತ್ತಮ ಗೇಮ್ ಆಗಿದೆ. ಇನ್ನು ಈ ಗೇಮ್ ಆಂಡ್ರಾಯ್ಡ್ ಮತ್ತು ಐಒಎಸ್‌ ನಲ್ಲಿಯೂ ಲಭ್ಯವಿದೆ. ಹಾಗೆಯೇ ಇದು ಅತ್ಯುತ್ತಮ ಪದ ಒಗಟು ಆನ್‌ಲೈನ್ ಮಲ್ಟಿಪ್ಲೇಯರ್ ಆಟಗಳಲ್ಲಿ ಒಂದಾಗಿದೆ.

Most Read Articles
Best Mobiles in India

English summary
These top 10 popular multiplayer games that you can enjoy playing with your friends and family.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more