ಇಂದು ಚಂದ್ರಗ್ರಹಣ: ಎಲ್ಲಿ ಗೋಚರಿಸಲಿದೆ?..ಹೇಗೆ ವೀಕ್ಷಿಸಬಹುದು?

|

ಪ್ರಸಕ್ತ ವರ್ಷದ ಮೂರನೇ ಚಂದ್ರಗ್ರಹಣ ಇಂದು (ಭಾನುವಾರ) ಸಂಭವಿಸಲಿದೆ. ಲ್ಯಾಟಿನ್ ಅಮೆರಿಕನ್ ದೇಶಗಳು, ಯುಎಸ್‌ಎ, ಮೆಕ್ಸಿಕೊ, ಕೆನಡಾ, ಕ್ಯೂಬಾ ಸೇರಿದಂತೆ ಪಶ್ಚಿಮ ಯೂರೋಪಿಯನ್ ರಾಷ್ಟ್ರಗಳಲ್ಲಿ ಈ ಪೆನಂಬ್ರಲ್ ಚಂದ್ರಗ್ರಹಣ ಗೋಚರಿಸಲಿದೆ. ಈ ಚಂದ್ರಗ್ರಹಣವು ಭಾರತದಲ್ಲಿ ಗೋಚರವಾಗುವುದಿಲ್ಲ.

ಚಂದ್ರ ಗ್ರಹಣ

ಪೆನಂಬ್ರಲ್ ಚಂದ್ರ ಗ್ರಹಣ ಎಂದರೆ ಭೂಮಿಯು ಸೂರ್ಯನ ಬೆಳಕನ್ನು ನೇರವಾಗಿ ಚಂದ್ರನನ್ನು ತಲುಪದಂತೆ ತಡೆಯುತ್ತದೆ ಮತ್ತು ಭೂಮಿಯ ನೆರಳಿನ ಹೊರಭಾಗವನ್ನು ಪೆನಂಬ್ರಾ ಎಂದು ಕರೆಯಲಾಗುತ್ತದೆ. ಇದು ಭೂಮಿಯ ನೆರಳು ಚಂದ್ರನ ಮೇಲೆ ಬಿದ್ದು ಉಂಟಾಗುವ ಚಂದ್ರಗ್ರಹಣವಾಗಿರುವುದರಿಂದ ಇದನ್ನು ನೆರಳು ಚಂದ್ರಗ್ರಹಣ ಎಂದು ಕೂಡ ಕರೆಯುತ್ತಾರೆ.

ಚಂದ್ರಗ್ರಹಣ ಕಾಲಮಾನ

ಚಂದ್ರಗ್ರಹಣ ಕಾಲಮಾನ

ಚಂದ್ರಗ್ರಹಣ ಸಮಯ ಜುಲೈ 4 ಮತ್ತು 5 ರ ರಾತ್ರಿ ಚಂದ್ರ ಗ್ರಹಣ ನಡೆಯಲಿದೆ. ಭಾರತದಲ್ಲಿ, ಇದು ಜುಲೈ 5 ರ ಬೆಳಿಗ್ಗೆ 8:30 ರಿಂದ 11:30 ರವರೆಗೆ ಇರುತ್ತದೆ. ಗ್ರಹಣವು 2 ಗಂಟೆ 45 ನಿಮಿಷಗಳವರೆಗೆ ಇರುತ್ತದೆ. ಈ ಚಂದ್ರ ಗ್ರಹಣ ಬೆಳಗ್ಗೆ 8.30 ಕ್ಕೆ ಆರಂಭಗೊಳ್ಳಲಿದೆ. ಬೆಳಗ್ಗೆ 9.59 ಕ್ಕೆ ಗ್ರಹಣ ಉಚ್ರಾಯ ಸ್ಥಿತಿಗೆ ತಲುಪಲಿದ್ದು, ಬೆಳಗ್ಗೆ 11.30ಕ್ಕೆ ಇದು ಅಂತ್ಯವಾಗಲಿದೆ. ಈ ಗ್ರಹಣದ ಒಟ್ಟು ಅವಧಿ 2 ಗಂಟೆ 45 ನಿಮಿಷ ಇರಲಿದೆ.

ಯಾವ ಪ್ರದೇಶಗಳಲ್ಲಿ ಕಾಣಿಸಿಕೊಳ್ಳಲಿದೆ

ಯಾವ ಪ್ರದೇಶಗಳಲ್ಲಿ ಕಾಣಿಸಿಕೊಳ್ಳಲಿದೆ

ಉತ್ತರ ಅಮೆರಿಕಾ, ದಕ್ಷಿಣ ಅಮೆರಿಕಾ, ದಕ್ಷಿಣ / ಪಶ್ಚಿಮ ಯುರೋಪ್, ಆಫ್ರಿಕಾ, ಹಿಂದೂ ಮಹಾಸಾಗರ, ಪೆಸಿಫಿಕ್, ಅಂಟಾರ್ಕ್ಟಿಕಾ ಮತ್ತು ಅಟ್ಲಾಂಟಿಕ್‌ನ ಜನರು ಈ ಗ್ರಹಣಕ್ಕೆ ಸಾಕ್ಷಿಯಾಗಲು ಸಾಧ್ಯವಾಗುತ್ತದೆ.

ಯೂಟ್ಯೂಬ್‌ನಲ್ಲಿ ಚಂದ್ರಗ್ರಹಣ ವೀಕ್ಷಣೆ

ಯೂಟ್ಯೂಬ್‌ನಲ್ಲಿ ಚಂದ್ರಗ್ರಹಣ ವೀಕ್ಷಣೆ

ಯೂಟ್ಯೂಬ್‌ನಲ್ಲಿನ Slooh ಮತ್ತು website Virtual Telescope ನಂತಹ ಕೆಲವು ಚಾನೆಲ್‌ಗಳು ಚಂದ್ರಗ್ರಹಣ ವೀಕ್ಷಣೆಗೆ ವೇದಿಕೆ ಸಜ್ಜುಗೊಳಿಸುತ್ತವೆ. ಈ ತಾಣಗಳ ಮೂಲಕ ಗ್ರಹಣ ವೀಕ್ಷಿಸಬಹುದಾಗಿದೆ.

ಗುರು ಪೂರ್ಣಿಮೆ - ಚಂದ್ರ ಗ್ರಹಣ

ಗುರು ಪೂರ್ಣಿಮೆ - ಚಂದ್ರ ಗ್ರಹಣ

ಇಂದು ಗುರು ಪೂರ್ಣಿಮೆ/ ಆ‍ಷಾಢ ಪೌರ್ಣಿಮೆ ಇದೆ. ಇದೆ ದಿನ ಚಂದ್ರ ಗ್ರಹಣವು ಗೋಚರಿಸಲಿದೆ. ಈ ರೀತಿ ಎರಡು ಒಟ್ಟಿಗೆ ಬಂದಿರುವುದು ಇದೇ ಮೊದಲೇನಲ್ಲ. ಇದಕ್ಕೂ ಮೊದಲು 2018ರಲ್ಲಿ ಜುಲೈ 27ರಂದು ಮತ್ತು 2019ರಲ್ಲಿ ಜುಲೈ 16ರಂದಯ ಗುರು ಪೂರ್ಣಿಮೆ ಮತ್ತು ಚಂದ್ರಗ್ರಹಣ ಒಂದೇ ದಿನ ನಡೆದಿತ್ತು.

Most Read Articles
Best Mobiles in India

English summary
This lunar eclipse will start at 11:07pm EDT on July 4 (8:37am IST on July 5) and reach its peak at 12:29am EDT on July 5 (9:59am IST on July 5).

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X