ಮಾರ್ಕ್ಯೂ ಬೈ ಫ್ಲಿಪ್‌ಕಾರ್ಟ್ ನಿಂದ ಮೂರು ಹೊಸ ಸ್ಮಾರ್ಟ್‌ಟಿವಿ ಬಿಡುಗಡೆ!

|

ಸ್ಮಾರ್ಟ್‌ಟಿವಿ ಲೋಕದಲ್ಲಿ ಸಾಕಷ್ಟು ಆಪ್ಡೇಟ್‌ ಆಗುತ್ತಲೇ ಇದೆ. ಹೊಸ ಮಾದರಿಯ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ ಸ್ಮಾರ್ಟ್‌ಟಿವಿಗಳು ಬಿಡುಗಡೆ ಆಗುತ್ತಲೇ ಇವೆ. ಸದ್ಯ ಇದೀಗ ಮಾರ್ಕ್ಯೂ ಕಂಪೆನಿ ಭಾರತದಲ್ಲಿ ಮೂರು ಹೊಸ ಸ್ಮಾರ್ಟ್ ಟಿವಿಗಳನ್ನು ಬಿಡುಗಡೆ ಮಾಡಿದೆ. ಇವುಗಳಲ್ಲಿ 32 ಇಂಚಿನ ಹೆಚ್‌ಡಿ ಟಿವಿ, 43 ಇಂಚಿನ ಫುಲ್‌-ಹೆಚ್‌ಡಿ ಟಿವಿ ಮತ್ತು 4K ಅಲ್ಟ್ರಾ ಹೆಚ್‌ಡಿ ಮಾದರಿಯನ್ನು ಒಳಗೊಂಡಿದೆ. ಇನ್ನು ಈ ಹೊಸ ಸ್ಮಾರ್ಟ್‌ಟಿವಿಗಳನ್ನ ಫ್ಲಿಪ್‌ಕಾರ್ಟ್‌ನಲ್ಲಿ ಖರೀದಿಸಬಹುದಾಗಿದೆ.

ಮಾರ್ಕ್ಯೂ ಬೈ ಫ್ಲಿಪ್‌ಕಾರ್ಟ್

ಹೌದು, ಮಾರ್ಕ್ಯೂ ಬೈ ಫ್ಲಿಪ್‌ಕಾರ್ಟ್‌ ತನ್ನ ಮೂರು ಹೊಸ ಸ್ಮಾರ್ಟ್‌ಟಿವಿಗಳನ್ನ ಪರಿಚಯಿಸಿದೆ. ಈ ಮೂರು ಹೊಸ ಸ್ಮಾರ್ಟ್‌ಟಿವಿಗಳು ವಿವಿಧ ಇಂಚಿನ ಮಾದರಿಗಳಲ್ಲಿ ಲಭ್ಯವಾಗಲಿದೆ. ಇನ್ನು ಹೊಸ ಶ್ರೇಣಿಯ ಸ್ಮಾರ್ಟ್‌ಟಿವಿ ಬೆಲೆ ರೂ. 11,999 ಆಗಿದ್ದು. ಈ ಮಾದರಿಗಳು ಇ-ಕಾಮರ್ಸ್ ಸೈಟ್ ಫಿಪ್‌ಕಾರ್ಟ್‌ ಮೂಲಕ ಖರೀದಿಸಲು ಲಭ್ಯವಿದೆ. ಅಲ್ಲದೆ ಈ ಸ್ಮಾರ್ಟ್‌ಟಿವಿಗಳು ಆಂಡ್ರಾಯ್ಡ್ 9 ಬೆಂಬಲದೊಂದಿಗೆ ಕಾರ್ಯನಿರ್ವಹಿಸುತ್ತವೆ. ಜೊತೆಗೆ ಇಂಟರ್‌ಬಿಲ್ಟ್‌ ಕ್ರೋಮ್‌ಕಾಸ್ಟ್ ಮತ್ತು ಡಾಲ್ಬಿ ಆಡಿಯೊ ಬೆಂಬಲವನ್ನು ಹೊಂದಿವೆ. ಇನ್ನುಳಿದಂತೆ ಇದರ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಮಾರ್ಕ್ಯೂ ಬೈ ಫ್ಲಿಪ್‌ಕಾರ್ಟ್

ಮಾರ್ಕ್ಯೂ ಬೈ ಫ್ಲಿಪ್‌ಕಾರ್ಟ್‌ ಸ್ಮಾರ್ಟ್ ಟಿವಿ ಕಣ್ಣಿನ ಒತ್ತಡವನ್ನು ಖಚಿತಪಡಿಸಿಕೊಳ್ಳಲು ರೆಟಿನಾ-ಸುರಕ್ಷಿತ ಟೆಕ್ನಾಲಜಿಯನ್ನು ಒಳಗೊಂಡಿದೆ. ಅಲ್ಲದೆ ಇದರಲ್ಲಿ 20W ಸ್ಪೀಕರ್‌ಗಳನ್ನು ಡಾಲ್ಬಿ ಆಡಿಯೊ ಸರೌಂಡ್ ಸೌಂಡ್ ಮತ್ತು ಇಂಟರ್‌ಬಿಲ್ಟ್‌ Chromecast ಅನ್ನು ಪ್ಯಾಕ್‌ ಮಾಡಲಾಗಿದೆ. ಇದಲ್ಲದೆ ಈ ಎಲ್ಲಾ ಮೂರು ಟಿವಿ ಸೆಟ್‌ಗಳು ಕ್ವಾಡ್-ಕೋರ್ ಮೀಡಿಯಾ ಟೆಕ್ CA53 ಪ್ರೊಸೆಸರ್ ನಿಂದ ನಿಯಂತ್ರಿಸಲ್ಪಡುತ್ತವೆ. ಇದನ್ನು ಮಾಲಿ 470 ಜಿಪಿಯು ಜೊತೆ ಜೋಡಿಸಲಾಗಿದೆ. ಅಲ್ಲದೆ ವಾಯರ್‌ಲೆಸ್ ಕನೆಕ್ಟಿವಿಟಿಗಾಗಿ ಇವು ಬ್ಲೂಟೂತ್ 5.0 ಅನ್ನು ಸಹ ಬೆಂಬಲಿಸುತ್ತವೆ.

ಸಾಮರ್ಥ್ಯ

ಇನ್ನು 32 ಇಂಚಿನ ಮತ್ತು 43 ಇಂಚಿನ ಹೆಚ್‌ಡಿ ಮಾದರಿಯ ಟಿವಿಗಳು 1GB RAM ಮತ್ತು 8GB ಇಂಟರ್‌ ಸ್ಟೋರೇಜ್‌ ಸಾಮರ್ಥ್ಯವನ್ನು ಹೊಂದಿವೆ. ಜೊತೆಗೆ ಈ ಎರಡು ಮಾದರಿಗಳು ಕ್ರೋಮಾ ಡಿಸ್‌ಪ್ಲೇ ಎಂಜಿನ್ ಟೆಕ್ನಾಲಜಿಯ ಜೊತೆಗೆ ಕಸ್ಟಮ್ ಪಿಕ್ಚರ್ ಮತ್ತು ಆಡಿಯೊ ಟ್ಯೂನಿಂಗ್ ಅನ್ನು ಬೆಂಬಲಿಸುತ್ತವೆ. ಇವು ಮೂರು HDMI ಪೋರ್ಟ್‌ಗಳು ಮತ್ತು ವೈರ್ಡ್ ಸಂಪರ್ಕಕ್ಕಾಗಿ ಎರಡು ಯುಎಸ್‌ಬಿ ಪೋರ್ಟ್‌ಗಳೊಂದಿಗೆ ಬರುತ್ತವೆ. ಇದಲ್ಲದೆ 43 ಇಂಚಿನ 4K ಅಲ್ಟ್ರಾ ಹೆಚ್‌‌ಡಿ ಮಾದರಿಯು ಕಸ್ಟಮ್ ಪಿಕ್ಚರ್ ಮತ್ತು ಆಡಿಯೊ ಟ್ಯೂನಿಂಗ್ ಅನ್ನು ಸಹ ನೀಡುತ್ತದೆ.

 ಡಿಸ್‌ಪ್ಲೇ

ಇನ್ನು ವಿವೋಡ್ ಪ್ರೊ 4K ತಂತ್ರಜ್ಞಾನ ಮತ್ತು ಹೆಚ್‌ಡಿಆರ್ 10 ನೊಂದಿಗೆ ಕ್ರೋಮಾ ಡಿಸ್‌ಪ್ಲೇ ಎಂಜಿನ್‌ಗೆ ಬೆಂಬಲವನ್ನು ನೀಡುತ್ತದೆ. ಅಲ್ಲದೆ ಪ್ರೀಮಿಯಂ ಮಾದರಿಯು 1.5 GB RAM ಮತ್ತು 8GB ಆಂತರಿಕ ಸಂಗ್ರಹಣೆಯನ್ನು ಪ್ಯಾಕ್ ಮಾಡುತ್ತದೆ. ಇದು ನಾಲ್ಕು HDMI ಪೋರ್ಟ್‌ಗಳನ್ನು ಮತ್ತು ಮೂರು ಯುಎಸ್‌ಬಿ ಪೋರ್ಟ್‌ಗಳನ್ನು ಹೊಂದಿದೆ. ಈ ಎಲ್ಲಾ ಮೂರು ಟಿವಿ ಸೆಟ್‌ಗಳು ಲೋಹದ ರಿಬ್ಬನ್ ಸ್ಟ್ಯಾಂಡ್‌ನೊಂದಿಗೆ ಬರುತ್ತವೆ. ಸದ್ಯ ಮಾರ್ಕ್ಯೂ ಬೈ ಫ್ಲಿಪ್‌ಕಾರ್ಟ್‌ ಭಾರತದಲ್ಲಿ 32 ಇಂಚಿನ ಮಾದರಿಯ ಟಿವಿಗೆ 11,999 ರೂ. ಬೆಲೆಯನ್ನು, 43 ಇಂಚಿನ ಹೆಚ್‌ಡಿ ಮಾದರಿಯ ಬೆಲೆ ರೂ. 20,999. ಪ್ರೀಮಿಯಂ 4K ಅಲ್ಟ್ರಾ ಎಚ್‌ಡಿ ಮಾದರಿಯ ಬೆಲೆ 21,999 ರೂ. ಆಗಿದೆ. ಈ ಎಲ್ಲಾ ಉತ್ಪನ್ನಗಳು ಫ್ಲಿಪ್ಕಾರ್ಟ್ ಮೂಲಕ ಖರೀದಿಗೆ ಲಭ್ಯವಿದೆ.

Most Read Articles
Best Mobiles in India

English summary
MarQ by Flipkart has launched three new smart TVs in India. The new lineup includes a 32-inch HD TV, a 43-inch full-HD TV, and a 4K Ultra HD model.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X