Just In
Don't Miss
- Lifestyle
Today Rashi Bhavishya: ಸೋಮವಾರದ ದಿನ ಭವಿಷ್ಯ: ಕರ್ಕ, ತುಲಾ, ಕುಂಭ ರಾಶಿಯ ಉದ್ಯೋಗಿಗಳಿಗೆ ಶುಭ ದಿನ
- Sports
ಕ್ರಿಕೆಟ್ ಅಭಿಮಾನಿಗಳಿಗೆ ಸಿಹಿ ಸುದ್ದಿ: ರೋಹಿತ್ ಶರ್ಮಾ ಕೋವಿಡ್ ವರದಿ ನೆಗೆಟಿವ್; ಟಿ20 ಸರಣಿಗೆ ರೆಡಿ
- Movies
ಗುಬ್ಬಿ ವೀರಣ್ಣ ಪುತ್ರಿ, ಹಿರಿಯ ನಟಿ ಹೇಮಲತಾ ನಿಧನ
- News
ISWA: ಆಸ್ಟ್ರೇಲಿಯಾದ ಅನಿವಾಸಿ ಭಾರತೀಯರೊಂದಿಗೆ ಸಚಿವ ಪ್ರಲ್ಹಾದ್ ಜೋಶಿ ನಿಯೋಗ ಭೇಟಿ
- Finance
Gold Rate Today: ಚಿನ್ನ ಸ್ಥಿರ: ಪ್ರಮುಖ ನಗರಗಳಲ್ಲಿ ಜು.3ರಂದು ಬೆಲೆ ಎಷ್ಟು
- Automobiles
ಜೂನ್ ತಿಂಗಳಿನಲ್ಲಿ 4.84 ಲಕ್ಷಕ್ಕೂ ಹೆಚ್ಚು ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿದ ಹೀರೋ ಮೋಟೊಕಾರ್ಪ್
- Education
JNV Result 2022 : 6ನೇ ತರಗತಿ ತಾತ್ಕಾಲಿಕ ಆಯ್ಕೆ ಪಟ್ಟಿ ಜು.10ರಂದು ಪ್ರಕಟ ಸಾಧ್ಯತೆ
- Travel
ಕೆಮ್ಮಣ್ಣು ಗುಂಡಿ - ಒಂದು ಮನಮೋಹಕ ತಾಣ!
ವಾಟ್ಸಾಪ್ನಿಂದ ಹೊಸ ಕ್ಲೌಡ್ ಎಪಿಐ ಘೋಷಣೆ! ಇದರ ಉಪಯೋಗ ಏನು?
ಮೆಟಾ ಕಂಪೆನಿ ತನ್ನ ವಾಟ್ಸಾಪ್ ಬ್ಯುಸಿನೆಸ್ ಆವೃತ್ತಿಯಲ್ಲಿ ಹೊಸ ವಾಟ್ಸಾಪ್ ಕ್ಲೌಡ್ ಎಪಿಐ ಅನ್ನು ಘೋಷಣೆ ಮಾಡಿದೆ. ಇದು ಬ್ಯಸಿನೆಸ್ ಮತ್ತು ಡೆವಲಪರ್ಗಳಿಗೆ ವಾಟ್ಸಾಪ್ನ ಬ್ಯುಸಿನೆಸ್ ಅಪ್ಲಿಕೇಶನ್ ಅನ್ನು ಬಿಲ್ಡ್ ಮಾಡುವುದಕ್ಕೆ ಅವಕಾಶ ನೀಡಲಿದೆ. ಇದಲ್ಲದೆ ವ್ಯಾಪಾರ ಮತ್ತು ಅವರ ಗ್ರಾಹಕರ ಆಧಾರದ ಮೇಲೆ ಅವರ ಅನುಭವವನ್ನು ಕಸ್ಟಮೈಸ್ ಮಾಡಲು ಅನುಮತಿಸುತ್ತದೆ. ಇದಲ್ಲದೆ ಬ್ಯುಸಿನೆಸ್ ಅಕೌಂಟ್ ಮಲ್ಟಿ ಡಿವೈಸ್ ಅನ್ನು ಬೆಂಬಲಿಸಲಿದೆ ಎನ್ನಲಾಗಿದೆ.

ಹೌದು, ಮೆಟಾ ಕಂಪೆನಿ ಹೊಸ ವಾಟ್ಸಾಪ್ ಕ್ಲೌಡ್ ಎಪಿಐ ಅನ್ನು ಹೋಸ್ಟ್ ಮಾಡಿದೆ. ಈ ಕ್ಲೌಡ್ ಡೆವಲಪರ್ಗಳು ಮತ್ತು ಬ್ಯುಸಿನೆಸ್ ಮ್ಯಾನೇಜ್ , ನೆಟ್ವರ್ಕ್, ಕಂಪ್ಯೂಟ್ ಸಾಮರ್ಥ್ಯಗಳು ಮತ್ತು ಸಂಗ್ರಹಣೆಯಂತಹ ಮೂಲಸೌಕರ್ಯವನ್ನು ಒದಗಿಸುತ್ತದೆ. ಅಲ್ಲದೆ ಬಳಕೆದಾರರ ಅನುಭವವನ್ನು ಕಸ್ಟಮೈಸ್ ಮಾಡುವುದರ ಜೊತೆಗೆ, ಬ್ಯುಸಿನೆಸ್ ಈ ಟೂಲ್ ಅನ್ನು ಬಳಸಿಕೊಂಡು ಹೆಚ್ಚಿನ ಗ್ರಾಹಕರೊಂದಿಗೆ ಸಂವಹನ ನಡೆಸಲು ಅವಕಾಶ ನೀಡಲಿದೆ. ಹಾಗಾದ್ರೆ ಹೊಸ ವಾಟ್ಸಾಪ್ ಕ್ಲೌಡ್ ಎಪಿಐನ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ವಾಟ್ಸಾಪ್ ಕ್ಲೌಡ್ ಎಪಿಐ ಬ್ಯುಸಿನೆಸ್ ಮ್ಯಾನೇಜ್, ನೆಟ್ವರ್ಕ್ ಸೇರಿದಂತೆ ಹೆಚ್ಚಿನ ವ್ಯವಹಾರಗಳನ್ನು ಜನರೊಂದಿಗೆ ಸಂಪರ್ಕಿಸಲು ಸಹಾಯ ಮಾಡಲಿದೆ. ಅಲ್ಲದೆ ಹೆಚ್ಚಿನ ಜನರು ತಾವು ಬಯಸುವ ವ್ಯಾಪಾರಗಳಿಗೆ ಸಂದೇಶವನ್ನು ನೀಡಲು ಸಹಾಯ ಮಾಡಲಿದೆ. ಬ್ಯುಸಿನೆಸ್ಗೆ ವಾಟ್ಸಾಪ್ ಪ್ಲಾಟ್ಫಾರ್ಮ್ನಲ್ಲಿ ತಮ್ಮ ಅನುಭವವನ್ನು ಕಸ್ಟಮೈಸ್ ಮಾಡಲು ಅನುಮತಿಸುತ್ತದೆ. ಜೊತೆಗೆ ಗ್ರಾಹಕರೊಂದಿಗೆ ಸಂವಹನ ನಡೆಸುವ ವೇಗ ಮತ್ತು ವಿಧಾನವನ್ನು ಹೆಚ್ಚಿಸುತ್ತದೆ. ಅಲ್ಲದೆ ಇದು ವೆಚ್ಚದಾಯಕ ಸರ್ವರ್ ವೆಚ್ಚಗಳನ್ನು ನಿವಾರಿಸುತ್ತದೆ. ಬ್ಯುಸಿನೆಸ್ ಗ್ರಾಹಕರಿಗೆ ಹೊಸ ಗ್ರಾಹಕೀಯಗೊಳಿಸಬಹುದಾದ ಕ್ಲಿಕ್-ಟು-ಚಾಟ್ ಲಿಂಕ್ಗಳನ್ನು ಸಹ ಒದಗಿಸಲಿದೆ.

ಇನ್ನು ಈ ಕ್ಲೌಡ್ನಲ್ಲಿ ವಾಟ್ಸಾಪ್ ಬಳಕೆದರರು ತಮ್ಮ ಉತ್ಪನ್ನಗಳ ಕುರಿತು ಬ್ಯುಸಿನೆಸ್ ಜೊತೆಗೆ ವಿವರವಾದ ಸಂಭಾಷಣೆಗಳನ್ನು ಹೊಂದಲು ಸಾಧ್ಯವಾಗುತ್ತದೆ. ವಾಟ್ಸಾಪ್ ಬಳಕೆದಾರರ ಸುರಕ್ಷತೆ ಮತ್ತು ಗೌಪ್ಯತೆಯ ಬಗ್ಗೆಯೂ ಕೂಡ ಇದರಲ್ಲಿ ವಿಶೇಷ ಗಮನ ಹರಿಸಲಾಗಿದೆ. ಇದರಿಂದ ಜನರು ತಾವು ಚಾಟ್ ಮಾಡುವ ಬ್ಯುಸಿನೆಸ್ಗಳ ಕಂಪ್ಲಿಟ್ ಕಂಟ್ರೋಲ್ ಅನ್ನು ಹೊಂದಿರುತ್ತಾರೆ. ಅಲ್ಲದೆ ಅವರು ಸಂಪರ್ಕಿಸಲು ವಿನಂತಿಸದ ಹೊರತು ಯಾವುದೇ ವ್ಯವಹಾರಗಳು ಜನರಿಗೆ ಸಂದೇಶ ಕಳುಹಿಸಲು ಸಾಧ್ಯವಿಲ್ಲ ಎಂದು ಮೆಟಾ ಕಂಪನಿ ಹೇಳಿದೆ. ಹಾಗೆಯೇ ಬೆಲೆಗೆ ಸಂಬಂಧಿಸಿದಂತೆ, ಇದರಲ್ಲಿರುವ ಫೀಚರ್ಸ್ಗಳು ಐಚ್ಛಿಕವಾಗಿರುತ್ತವೆ.

ವಾಟ್ಸಾಪ್ ಪ್ರೀಮಿಯಂ
ಇನ್ನು ಮೆಟಾ ಕಂಪೆನಿ ವಾಟ್ಸಾಪ್ ಕ್ಲೌಡ್ API ಜೊತೆಗೆ ವಾಟ್ಸಾಪ್ ಬ್ಯುಸಿನೆಸ್ ಬಳಕೆದಾರರಿಗೆ ತನ್ನ ಪ್ರೀಮಿಯಂ ಸೇವೆಯನ್ನು ದೃಢೀಕರಿಸಿದೆ. ಸದ್ಯ ಈ ಟೂಲ್ ಇನ್ನೂ ಅಭಿವೃದ್ಧಿಯ ಹಂತದಲ್ಲಿದೆ. ಇದು ವಾಟ್ಸಾಪ್ ಬ್ಯುಸಿನೆಸ್ ಅಪ್ಲಿಕೇಶನ್ ಬಳಕೆದಾರರಿಗೆ ಯಾವಾಗ ಲಭ್ಯವಿರುತ್ತದೆ ಎಂಬುದರ ಕುರಿತು ಯಾವುದೇ ಮಾಹಿತಿ ಬಹಿಂರಗವಾಗಿಲ್ಲ.

ಇದಲ್ಲದೆ ವಾಟ್ಸಾಪ್ ರಿಚ್-ಪ್ರಿವ್ಯೂ ಎನ್ನುವ ಹೊಸ ಫೀಚರ್ಸ್ನಲ್ಲಿ ಕಾರ್ಯನಿರ್ವಹಿಸುತ್ತಿದೆ. ಇದು ನಿಮ್ಮ ಸ್ಟೇಟಸ್ನಲ್ಲಿ ವೆಬ್ಸೈಟ್ ವಿಳಾಸಗಳನ್ನು ಶೇರ್ ಮಾಡುವುದನ್ನು ಉತ್ತಮವಾಗಿ ಕಾಣುವಂತೆ ಮಾಡಲಿದೆ. ಇದರಿಂದ ವಾಟ್ಸಾಪ್ ಸ್ಟೇಟಸ್ನಲ್ಲಿ ರಿಚ್ ಪ್ರಿವ್ಯೂಗಳನ್ನು ಕ್ರಿಯೆಟ್ ಮಾಡುವ ಮಾರ್ಗಗಳನ್ನು ಪರೀಕ್ಷಿಸುತ್ತಿದೆ ಎನ್ನಲಾಗಿದೆ. ಇದರಿಂದ ವಾಟ್ಸಾಪ್ ಸ್ಟೇಟಸ್ನಲ್ಲಿ ವೆಬ್ಸೈಟ್ ಲಿಂಕ್ ಅನ್ನು ಶೇರ್ ಮಾಡಿಕೊಂಡರೆ, ನೀವು ನಿಜವಾದ ವಿಳಾಸದ ಪಠ್ಯವನ್ನು ಕಾಣಬಹುದಾಗಿದೆ. ಸದ್ಯ ಬಹಿರಂಗವಾಗಿರುವ ಸ್ಕ್ರೀನ್ಶಾಟ್ ಪ್ರಕಾರ, ನಾವು ಸರಳ ಪಠ್ಯದ ಬದಲಿಗೆ ವಿಳಾಸದ ವಿವರವಾದ ಲಿಂಕ್ ಅನ್ನು ಕಾಣಬಹುದು. ಈ ಫೀಚರ್ಸ್ ಅನ್ನು ಇದೀಗ ವಾಟ್ಸಾಪ್ ಅಪ್ಲಿಕೇಶನ್ನ ಬೀಟಾ ಆವೃತ್ತಿಯಲ್ಲಿ ಗುರುತಿಸಲಾಗಿದೆ.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
44,999
-
15,999
-
20,449
-
7,332
-
18,990
-
31,999
-
54,999
-
17,091
-
17,091
-
13,999
-
31,830
-
31,499
-
26,265
-
24,960
-
21,839
-
15,999
-
11,570
-
11,700
-
7,070
-
7,086