Just In
Don't Miss
- Sports
ಕ್ರಿಕೆಟ್ ಅಭಿಮಾನಿಗಳಿಗೆ ಸಿಹಿ ಸುದ್ದಿ: ರೋಹಿತ್ ಶರ್ಮಾ ಕೋವಿಡ್ ವರದಿ ನೆಗೆಟಿವ್; ಟಿ20 ಸರಣಿಗೆ ರೆಡಿ
- Movies
ಗುಬ್ಬಿ ವೀರಣ್ಣ ಪುತ್ರಿ, ಹಿರಿಯ ನಟಿ ಹೇಮಲತಾ ನಿಧನ
- News
ISWA: ಆಸ್ಟ್ರೇಲಿಯಾದ ಅನಿವಾಸಿ ಭಾರತೀಯರೊಂದಿಗೆ ಸಚಿವ ಪ್ರಲ್ಹಾದ್ ಜೋಶಿ ನಿಯೋಗ ಭೇಟಿ
- Finance
Gold Rate Today: ಚಿನ್ನ ಸ್ಥಿರ: ಪ್ರಮುಖ ನಗರಗಳಲ್ಲಿ ಜು.3ರಂದು ಬೆಲೆ ಎಷ್ಟು
- Automobiles
ಜೂನ್ ತಿಂಗಳಿನಲ್ಲಿ 4.84 ಲಕ್ಷಕ್ಕೂ ಹೆಚ್ಚು ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿದ ಹೀರೋ ಮೋಟೊಕಾರ್ಪ್
- Lifestyle
Weekly Horoscope: ಜುಲೈ 3ರಿಂದ ಜುಲೈ 9ರ ವಾರ ಭವಿಷ್ಯ: ಮೇಷ, ಮಿಥುನ, ಮಕರ, ಕುಂಭ ರಾಶಿಯ ವ್ಯಾಪಾರಸ್ಥರು ಆರ್ಥಿಕ ಲಾಭ ಪಡೆಯಬಹುದು
- Education
JNV Result 2022 : 6ನೇ ತರಗತಿ ತಾತ್ಕಾಲಿಕ ಆಯ್ಕೆ ಪಟ್ಟಿ ಜು.10ರಂದು ಪ್ರಕಟ ಸಾಧ್ಯತೆ
- Travel
ಕೆಮ್ಮಣ್ಣು ಗುಂಡಿ - ಒಂದು ಮನಮೋಹಕ ತಾಣ!
ಮೆಟಾ ಕಂಪೆನಿಯಿಂದ ಭಾರತದಲ್ಲಿ 3D ಅವತಾರ್ ಬಿಡುಗಡೆ! ವಿಶೇಷತೆ ಏನು?
ಮೆಟಾ ಕಂಪೆನಿ ತನ್ನ ಜನಪ್ರಿಯ ಸೊಶೀಯಲ್ ಮೀಡಿಯಾ ಪ್ಲಾಟ್ಫಾರ್ಮ್ಗಳಾದ ಫೇಸ್ಬುಕ್, ಮೆಸೆಂಜರ್ ಮತ್ತು ಇನ್ಸ್ಟಾಗ್ರಾಮ್ನಲ್ಲಿ ಹೊಸ 3D ಅವತಾರ್ಗಳನ್ನು ಪರಿಚಯಿಸಿದೆ. ಸದ್ಯ ಭಾರತದಲ್ಲಿ ಮೊದಲ ಬಾರಿಗೆ ಈ ಹೊಸ ಫೀಚರ್ಸ್ ಅನ್ನು ಪರಿಚಯಿಸಿದ್ದು, ಬಳಕೆದಾರರಿಗೆ ತಾವೇ 3D ಅವತಾರಗಳನ್ನು ರಚಿಸಲು ಅವಕಾಶ ಮಾಡಿಕೊಟ್ಟಿದೆ. ಇನ್ನು ನಿಮ್ಮ 3D ಅವತಾರ್ ನಿಮ್ಮ ಕಾರ್ಟೂನ್ ಆವೃತ್ತಿಯಾಗಿರಲಿದ್ದು, ವರ್ಚುವಲ್ ಸೆಟ್ಟಿಂಗ್ನಲ್ಲಿ ನೀವು ಹೇಗೆ ಕಾಣುತ್ತೀರಿ ಅನ್ನೊದನ್ನ ಸೆರೆಹಿಡಿಯಲಿದೆ.

ಹೌದು, ಮೆಟಾ ಕಂಪೆನಿ ಭಾರತದಲ್ಲಿ ಇದೇ ಮೊದಲ ಬಾರಿಗೆ ತ್ರಿಡಿ ಅವತಾರಗಳನ್ನು ಪರಿಚಯಿಸಿದೆ. ಇದರಿಂದ ನೀವು ಕೂಡ ಇನ್ಮುಂದೆ ಫೇಸ್ಬುಕ್, ಇನ್ಸ್ಟಾಗ್ರಾಮ್ ಮತ್ತು ಮೆಸೆಂಜರ್ನಲ್ಲಿ ತ್ರಿಡಿ ಅವತಾರಗಳನ್ನು ಕ್ರಿಯೆಟ್ ಮಾಡಬಹುದಾಗಿದೆ. ಈ ತ್ರಿಡಿ ಅವತಾರಗಳನ್ನು ನೀವು ಫೇಸ್ಬುಕ್, ಮೆಸೆಂಜರ್ ಅಪ್ಲಿಕೇಶನ್, ಇನ್ಸ್ಟಾಗ್ರಾಮ್ ಸ್ಟೋರೀಸ್ ಮತ್ತು ಡಿಎಂಗಳಲ್ಲಿ ಗಳು ಮತ್ತು ಮೆಟಾ ಕ್ವೆಸ್ಟ್ ಹೆಡ್ಸೆಟ್ನಲ್ಲಿ ಬಳಸಬಹುದಾಗಿದೆ. ಹಾಗಾದ್ರೆ ಮೆಟಾ ಪರಿಚಯಿಸಿರುವ ಹೊಸ ತ್ರಿಡಿ ಅವತಾರಗಳ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಮೆಟಾ ಪರಿಚಯಿಸಿರುವ ಅಪ್ಡೇಟ್ 3D ಅವತಾರ್ ಫೀಚರ್ಸ್ ನಿಮ್ಮ ಫೇಸ್ಬುಕ್, ಇನ್ಸ್ಟಾಗ್ರಾಮ್ನಲ್ಲಿ ಹೊಸ ಅನುಭವ ನೀಡಲಿದೆ. ಇನ್ನು ಈ ತ್ರಿಡಿ ಅವತಾರ್ನಲ್ಲಿ ಕಾಕ್ಲಿಯರ್ ಇಂಪ್ಲಾಂಟ್ಗಳು ಮತ್ತು ಕಿವಿಯ ಮೇಲಿನ ಶ್ರವಣ ಡಿವೈಸ್ಗಳನ್ನು ಸೇರಿಸುವ ಆಯ್ಕೆಗಳನ್ನು ಕೂಡ ನೀಡಿದೆ. ಇದು ವೀಲ್ಚೇರ್ಗಳನ್ನು ಸಹ ಒಳಗೊಂಡಿದ್ದು, ಫೇಸ್ಬುಕ್ ಸ್ಟಿಕ್ಕರ್ಗಳಲ್ಲಿ ಕಾಣಿಸುತ್ತದೆ. ನಿಮ್ಮ ತ್ರಿಡಿ ಅವತಾರಗಳನ್ನು ಹೆಚ್ಚು ಅಧಿಕೃತಗೊಳಿಸಲು ಕೆಲವು ಮುಖದ ಆಕಾರಗಳು ಮತ್ತು ಸ್ಕಿನ್ ಶೇಡರ್ಗಳಿಗೆ ಮೆಟಾ ಸೂಕ್ಷ್ಮ ಸೆಟ್ಟಿಂಗ್ಸ್ಗಳನ್ನು ಕೂಡ ನೀಡಿದೆ.

ಇದೀಗ ಮೆಟಾ ಪರಿಚಯಿಸಿರುವ ತ್ರೀಡಿ ಅವತಾರ್ ಫೀಚರ್ಸ್ ಭಾರತೀಯ ಬಳಕೆದಾರರಿಗೆ ಲಭ್ಯವಿದೆ. ಇದರ ಮೂಲಕ ನಿಮ್ಮದೇ ಆದ ತ್ರೀಡಿ ಅವತಾರ್ಗಳನ್ನು ಕ್ರಿಯೆಟ್ ಮಾಡಬಹುದು. ಅಲ್ಲದೆ ಇದನ್ನು ಫೇಸ್ಬುಕ್ ಮೊಬೈಲ್ ಅಪ್ಲಿಕೇಶನ್ನಲ್ಲಿ ನಿಮ್ಮದೆ ಆದ ಅವತಾರ್ ಅನ್ನು ರಚಿಸಬಹುದಾಗಿದೆ. ಇದಕ್ಕಾಗಿ ಈ ಕೆಳಗಿನ ಹಂತಗಳನ್ನು ಅನುಸರಿಸಿ.
* ಮೊದಲಿಗೆ ನೀವು ನಿಮ್ಮ ಫೋನ್ನಲ್ಲಿ ಫೇಸ್ಬುಕ್ ಅಪ್ಲಿಕೇಶನ್ ತೆರೆಯಿರಿ ಮತ್ತು ಮೆನುಗೆ ಹೋಗಿ.
* ನಂತರ ಅವತಾರ್ಗಳಿಗೆ ಕೆಳಗೆ ಸ್ಕ್ರಾಲ್ ಮಾಡಿ ಮತ್ತು "ನಿಮ್ಮ ಅವತಾರ್ ಎಡಿಟ್ ಮಾಡಿ" ಆಯ್ಕೆಯ ಮೇಲೆ ಟ್ಯಾಪ್ ಮಾಡಿ
* ಇದರಲ್ಲಿ, ಉಡುಗೆಗಳು, ಮುಖದ ಆಕಾರಗಳು, ಕಣ್ಣಿನ ಆಕಾರಗಳು, ಕೇಶವಿನ್ಯಾಸ ಇತ್ಯಾದಿಗಳನ್ನು ಒಳಗೊಂಡಂತೆ ನಿಮ್ಮ ಅವತಾರ್ ಅನ್ನು ಕಸ್ಟಮೈಸ್ ಮಾಡಲು ಫೇಸ್ಬುಕ್ ನಿಮಗೆ ಅನೇಕ ಆಯ್ಕೆಗಳನ್ನು ನೀಡುತ್ತದೆ.
* ಇದರಲ್ಲಿ ನಿಮ್ಮ ಅವತಾರವನ್ನು ನಿಮ್ಮ ಇಚ್ಛೆಯಂತೆ ಕಸ್ಟಮೈಸ್ ಮಾಡಿ ಮತ್ತು ಅದನ್ನು ಕ್ರಿಯೆಟ್ ಮಾಡಿ.
* ನಂತರ ನೀವು ಕ್ರಿಯೆಟ್ ಮಾಡಿರುವ ಹೊಸ 3D ಅವತಾರ್ ಅನ್ನು ಶೇರ್ ಮಾಡಬಹುದಾಗಿದೆ.
* ಇದಕ್ಕಾಗಿ ನೀವು ಅವತಾರಗಳಿಗೆ ಹೋಗಿ
* ನಂತರ ಕೆಳಗಿರುವ "Share to Feed ಆಯ್ಕೆಯನ್ನು ಟ್ಯಾಪ್ ಮಾಡಿ
* ಇದೀಗ ನಿಮ್ಮ ಅವತಾರವನ್ನು ನಿಮ್ಮ ಫೀಡ್ನಲ್ಲಿ ಶೇರ್ ಮಾಡಬಹುದು.
ನೀವು ನಿಮ್ಮ ಪ್ರೊಫೈಲ್ ಚಿತ್ರದ ಮೇಲೆ ಟ್ಯಾಪ್ ಮಾಡುವ ಮೂಲಕ ಮತ್ತು "ಅವತಾರ್" ಅನ್ನು ಟ್ಯಾಪ್ ಮಾಡುವ ಮೂಲಕ ತ್ರಿಡಿ ಅವತಾರ್ ಅನ್ನು ಶೇರ್ ಮಾಡಬಹುದಾಗಿದೆ.

ಇನ್ನು ಫೇಸ್ಬುಕ್ ಮೆಸೆಂಜರ್ನಲ್ಲಿ ತ್ರೀಡಿ ಅವತಾರ್ಗಳನ್ನು ಶೇರ್ ಮಾಡುವುದು ಹೇಗೆ?
ಮೆಸೆಂಜರ್ ಚಾಟ್ಗಳಲ್ಲಿ ನಿಮ್ಮ ಅವತಾರ್ನ ಸ್ಟಿಕ್ಕರ್ಗಳನ್ನು ನೀವು ಹೇಗೆ ಕಳುಹಿಸಬಹುದು ಅನ್ನೊದನ್ನ ಕೆಳಗಿನ ಹಂತಗಳಲ್ಲಿ ತಿಳಿಯಿರಿ.
* ಮೊದಲಿಗೆ ನೀವು ಮೆಸೆಂಜರ್ ಅಪ್ಲಿಕೇಶನ್ ತೆರೆಯಿರಿ ಮತ್ತು ಚಾಟ್ ಮೇಲೆ ಟ್ಯಾಪ್ ಮಾಡಿ
* ನೀವು ನಿಮ್ಮ ಅವತಾರ್ ಸ್ಟಿಕ್ಕರ್ ಪ್ಯಾಕ್ ವೀಕ್ಷಿಸಲು ಸ್ಟಿಕ್ಕರ್ಗಳ ಮೇಲೆ ಟ್ಯಾಪ್ ಮಾಡಿ
* ನಂತರ ನೀವು ಕಳುಹಿಸಲು ಬಯಸುವ ಸ್ಟಿಕ್ಕರ್ ಅನ್ನು ಆರಿಸಿ ಮತ್ತು ಸೆಂಡ್ ಮಾಡಲು ಅದರ ಮೇಲೆ ಟ್ಯಾಪ್ ಮಾಡಿ.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
44,999
-
15,999
-
20,449
-
7,332
-
18,990
-
31,999
-
54,999
-
17,091
-
17,091
-
13,999
-
31,830
-
31,499
-
26,265
-
24,960
-
21,839
-
15,999
-
11,570
-
11,700
-
7,070
-
7,086