Just In
Don't Miss
- Sports
ಕ್ರಿಕೆಟ್ ಅಭಿಮಾನಿಗಳಿಗೆ ಸಿಹಿ ಸುದ್ದಿ: ರೋಹಿತ್ ಶರ್ಮಾ ಕೋವಿಡ್ ವರದಿ ನೆಗೆಟಿವ್; ಟಿ20 ಸರಣಿಗೆ ರೆಡಿ
- Movies
ಗುಬ್ಬಿ ವೀರಣ್ಣ ಪುತ್ರಿ, ಹಿರಿಯ ನಟಿ ಹೇಮಲತಾ ನಿಧನ
- News
ISWA: ಆಸ್ಟ್ರೇಲಿಯಾದ ಅನಿವಾಸಿ ಭಾರತೀಯರೊಂದಿಗೆ ಸಚಿವ ಪ್ರಲ್ಹಾದ್ ಜೋಶಿ ನಿಯೋಗ ಭೇಟಿ
- Finance
Gold Rate Today: ಚಿನ್ನ ಸ್ಥಿರ: ಪ್ರಮುಖ ನಗರಗಳಲ್ಲಿ ಜು.3ರಂದು ಬೆಲೆ ಎಷ್ಟು
- Automobiles
ಜೂನ್ ತಿಂಗಳಿನಲ್ಲಿ 4.84 ಲಕ್ಷಕ್ಕೂ ಹೆಚ್ಚು ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿದ ಹೀರೋ ಮೋಟೊಕಾರ್ಪ್
- Lifestyle
Weekly Horoscope: ಜುಲೈ 3ರಿಂದ ಜುಲೈ 9ರ ವಾರ ಭವಿಷ್ಯ: ಮೇಷ, ಮಿಥುನ, ಮಕರ, ಕುಂಭ ರಾಶಿಯ ವ್ಯಾಪಾರಸ್ಥರು ಆರ್ಥಿಕ ಲಾಭ ಪಡೆಯಬಹುದು
- Education
JNV Result 2022 : 6ನೇ ತರಗತಿ ತಾತ್ಕಾಲಿಕ ಆಯ್ಕೆ ಪಟ್ಟಿ ಜು.10ರಂದು ಪ್ರಕಟ ಸಾಧ್ಯತೆ
- Travel
ಕೆಮ್ಮಣ್ಣು ಗುಂಡಿ - ಒಂದು ಮನಮೋಹಕ ತಾಣ!
ಫೇಸ್ಬುಕ್ನಿಂದ 24.6 ಮಿಲಿಯನ್ ಬ್ಯಾಡ್ ಕಂಟೆಂಟ್ ರಿಮೂವ್ ಮಾಡಿದ ಮೆಟಾ!
ಭಾರತದಲ್ಲಿ ಮೆಟಾ ಒಡೆತನದ ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಮ್ ಜನಪ್ರಿಯ ಸಾಮಾಜಿಕ ಜಾಲತಾಣಗಳು ಎನಿಸಿಕೊಂಡಿವೆ. ಈ ಎರಡು ಅಪ್ಲಿಕೇಶನ್ಗಳು ತಮ್ಮ ವಿಶೇಷವಾದ ಫೀಚರ್ಸ್ಗಳಿಂದ ಬಳಕೆದಾರರ ಗಮನ ಸೆಳೆದಿವೆ. ಸದ್ಯ ಇದೀಗ ಮೆಟಾ ಕಂಪೆನಿ ಹೊಸ ಐಟಿ ನಿಯಮಗಳು 2021ರ ಅನ್ವಯ ಈ ಎರಡು ಪ್ಲಾಟ್ಫಾರ್ಮ್ಗಳ ಕುಂದುಕೊರತೆ ಕಾರ್ಯವಿಧಾನದ ವರದಿಯನ್ನು ಬಿಡುಗಡೆ ಮಾಡಿದೆ. ಇದು ಮಾರ್ಚ್ 1 ಮತ್ತು ಮಾರ್ಚ್ 31ರ ನಡುವಿನ ವರದಿಯಾಗಿದೆ.

ಹೌದು, ಮೆಟಾ ಕಂಪೆನಿ ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಮ್ನ ಮಾರ್ಚ್ ತಿಂಗಳ ಕುಂದುಕೊರತೆ ಕಾರ್ಯವಿಧಾನದ ವರಧಿಯನ್ನು ಬಿಡುಗಡೆ ಮಾಡಿದೆ. ಅದರಂತೆ ಮಾರ್ಚ್ ತಿಂಗಳಿನಲ್ಲಿ ಒಟ್ಟು 27.3 ಮಿಲಿಯನ್ ಬ್ಯಾಡ್ ಕಂಟೆಂಟ್ ಅನ್ನು ಪ್ಲಾಟ್ಫಾರ್ಮ್ಗಳಿಂದ ತೆಗೆದುಹಾಕಿರುವುದಾಗಿ ಹೇಳಿದೆ. ಇದರಲ್ಲಿ ಫೇಸ್ಬುಕ್ನಿಂದ 24.6 ಮಿಲಿಯನ್ ಬ್ಯಾಡ್ ಕಂಟೆಂಟ್ ಪಿಸಸ್ ಅನ್ನು ತೆಗೆದುಹಾಕಲಾಗಿದೆ. ಹಾಗೆಯೇ ಇನ್ಸ್ಟಾಗ್ರಾಮ್ನಿಂದ 2.7 ಮಿಲಿಯನ್ ಬ್ಯಾಡ್ ಕಂಟೆಂಟ್ ತೆಗೆದುಹಾಕಲಾಗಿದೆ. ಇನ್ನುಳಿದಂತೆ ಮಾರ್ಚ್ ತಿಂಗಳ ವರದಿಯಲ್ಲಿ ಏನೆಲ್ಲಾ ವಿಷಯವನ್ನು ಉಲ್ಲೇಖಿಸಲಾಗಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಮೆಟಾ ಕಂಪೆನಿ ಮಾರ್ಚ್ 1 ಮತ್ತು ಮಾರ್ಚ್ 31 ರ ನಡುವೆ, ಫೇಸ್ಬುಕ್ ನಲ್ಲಿ ಭಾರತೀಯ ಕುಂದುಕೊರತೆ ಕಾರ್ಯವಿಧಾನದ ಮೂಲಕ ಒಟ್ಟು 656 ರಿಪೋರ್ಟ್ಗಳನ್ನು ಸ್ವೀಕರಿಸಿದೆ ಎಂದು ಹೇಳಲಾಗಿದೆ. ಈ ರಿಪೋರ್ಟ್ಗಳಿಗೆ ಫೇಸ್ಬುಕ್ 100% ರಿಪ್ಲೇ ಮಾಡಿದೆ. ಅಲ್ಲದೆ 556 ಪ್ರಕರಣಗಳಲ್ಲಿ ಸಮಸ್ಯೆಗಳನ್ನು ಪರಿಹರಿಸಿದೆ. ಇನ್ನು ಇನ್ಸ್ಟಾಗ್ರಾಮ್ನಲ್ಲಿ ಮೆಟಾ ಕಂಪೆನಿ ಒಟ್ಟು 1,150 ರಿಪೋರ್ಟ್ಗಳನ್ನು ಸ್ವೀಕರಿಸಿದೆ. ಇದರಲ್ಲಿಯು ಕೂಡ 100% ವರದಿಗಳಿಗೆ ಪ್ರತಿಕ್ರಿಯಿಸಿದೆ. ಇವುಗಳಲ್ಲಿ, ಕಂಪನಿಯು 556 ಪ್ರಕರಣಗಳಲ್ಲಿ ಸಮಸ್ಯೆಗಳನ್ನು ಪರಿಹರಿಸಿದೆ. ಅಲ್ಲದೆ ಇತರ 594 ರಿಪೋರ್ಟ್ಗಳಲ್ಲಿ ಕಂಪನಿಯ ನೀತಿಗಳನ್ನು ಗಮನದಲ್ಲಿಟ್ಟುಕೊಂಡು 20 ಪ್ರಕರಣಗಳಲ್ಲಿ ಕ್ರಮ ಕೈಗೊಂಡಿದೆ.

ಇನ್ನು ಮೆಟಾ ಕಂಪೆನಿ ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಮ್ನಿಂದ ಹಾನಿಕಾರಕ ವಿಷಯವನ್ನು ತೆಗೆದುಹಾಕುವುದಕ್ಕೆ ಹೊಸ ಪ್ರಯತ್ನಗಳನ್ನು ನಡೆಸುತ್ತಲೇ ಬಂದಿದೆ. ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಮ್ ಅನ್ನು ಸುರಕ್ಷಿತ ಹಾಗೂ ಬಳಕೆದಾರರ ಗೌಪ್ಯತೆ ಕಾಪಾಡುವುದಕ್ಕಾಗಿ ಬದ್ದ ಎಂದು ಹೇಳಿಕೊಂಡಿದೆ. ಇದಲ್ಲದೆ ನಮ್ಮ ನೀತಿಗಳಿಗೆ ವಿರುದ್ಧವಾದ ಕಂಟೆಂಟ್ ಅನ್ನು ಗುರುತಿಸಲು ಮತ್ತು ಪರಿಶೀಲಿಸಲು ನಾವು ಕೃತಕ ಬುದ್ಧಿಮತ್ತೆ ಮತ್ತು ನಮ್ಮ ತಂಡಗಳ ವಿಮರ್ಶೆಗಳ ಸಂಯೋಜನೆಯನ್ನು ಬಳಸುತ್ತೇವೆ ಎಂದು ಮೆಟಾ ಕಂಪನಿ ಹೇಳಿಕೊಂಡಿದೆ.

ಇನ್ನು ಮೆಟಾ ಕಂಪೆನಿಯ ಮಾಸಿಕ ವರದಿಯಲ್ಲಿ ಕಂಪನಿಯು ತಾನು ನಡೆಸಿದ ಒಟ್ಟು ವರದಿಗಳಲ್ಲಿ 14.9 ಮಿಲಿಯನ್ ವಿಷಯಗಳು ಸ್ಪ್ಯಾಮ್, 2.5 ಮಿಲಿಯನ್ ಪೋಸ್ಟ್ಗಳು ಹಿಂಸಾತ್ಮಕ ಮತ್ತು ಗ್ರಾಫಿಕ್ ವಿಷಯವನ್ನು ಒಳಗೊಂಡಿವೆ ಎಂದು ಹೇಳಿದೆ. ಹಾಗೆಯೇ 2.1 ಮಿಲಿಯನ್ ಕಂಟೆಂಟ್ಗಳು ವಯಸ್ಕ ನಗ್ನತೆ ಮತ್ತು ಲೈಂಗಿಕ ಚಟುವಟಿಕೆಗೆ ಸಂಬಂಧಿಸಿವೆ ಎಂದು ತನ್ನ ವರದಿಯಲ್ಲಿ ಬಹಿರಂಗಪಡಿಸಿದೆ. ಇದಲ್ಲದೆ ಮೆಟಾ ಒಡೆತನದ ವಾಟ್ಸಾಪ್ ಕೂಡ ಮಾರ್ಚ್ ತಿಂಗಳ ಅನುಸರಣಾ ವರದಿಯನ್ನು ಬಿಡುಗಡೆ ಮಾಡಿದೆ. ಈ ವರದಿಯಲ್ಲಿ ಕಳೆದ ಮಾರ್ಚ್ ತಿಂಗಳಿನಲ್ಲಿ ಭಾರತದಲ್ಲಿ ಸುಮಾರು 18 ಲಕ್ಷ ಖಾತೆಗಳನ್ನು ಬ್ಯಾನ್ ಮಾಡಿರುವುದಾಗಿ ಹೇಳಿಕೊಂಡಿದೆ. ಇದರಲ್ಲಿ ಒಟ್ಟು 597 ಕುಂದುಕೊರತೆ ವರದಿಗಳನ್ನು ಸ್ವೀಕರಿಸಿದೆ ಎಂದು ಹೇಳಿದೆ.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
44,999
-
15,999
-
20,449
-
7,332
-
18,990
-
31,999
-
54,999
-
17,091
-
17,091
-
13,999
-
31,830
-
31,499
-
26,265
-
24,960
-
21,839
-
15,999
-
11,570
-
11,700
-
7,070
-
7,086