ಎಪ್ರಿಲ್ 4 ರಿಂದ ಆರಂಭವಾಗಲಿದೆ ಎಂಐನ ಮೂರು ಪ್ರೊಡಕ್ಟ್ ಗಳ ಮಾರಾಟ

By Gizbot Bureau
|

ಶಿಯೋಮಿಯು ತನ್ನ ಎಂಐ ಪುರುಷರ ಸ್ಪೋರ್ಟ್ಸ್ ಶೂ 2, ಎಂಐ ಸ್ಪೋರ್ಟ್ಸ್ ಬ್ಲೂಟೂತ್ ಇಯರ್ ಫೋನ್ಸ್ ಮತ್ತು ಎಂಐ-2 ಇನ್ 1 USB ಕೇಬಲ್ (30cm) ನ್ನು ಎಪ್ರಿಲ್ 4 ರಿಂದ ಭಾರತದಲ್ಲಿ ಮಾರಾಟ ಮಾಡುವ ಬಗ್ಗೆ ಪ್ರಕಟಿಸಿದೆ.

ಎಪ್ರಿಲ್ 4 ರಿಂದ ಆರಂಭವಾಗಲಿದೆ ಎಂಐನ ಮೂರು ಪ್ರೊಡಕ್ಟ್ ಗಳ ಮಾರಾಟ

ಕಳೆದ ತಿಂಗಳು ಭಾರತದಲ್ಲಿ ಎಂಐ ಪುರುಷರ ಸ್ಪೋರ್ಟ್ಸ್ ಶೂಸ್2 ವನ್ನು ಬಿಡುಗಡೆಗೊಳಿಸಲಾಗಿತ್ತು. ಎಂಐ ಸ್ಪೋರ್ಟ್ಸ್ ಬ್ಲೂಟೂತ್ ಇಯರ್ ಫೋನ್ ಮತ್ತು ಎಂಐ 2 ಇನ್ 1 USB ಕೇಬಲ್ ಈಗಷ್ಟೇ ಪ್ರಕಟಗೊಂಡಿವೆ.

ಶಿಯೋಮಿಯು ಈಗಾಗಲೇ ಎಂಐ ಸ್ಪೋರ್ಟ್ಸ್ ಬ್ಲೂಟೂತ್ ಇಯರ್ ಫೋನ್ ಬೇಸಿಕ್ ಮತ್ತು ಎಂಐ 2ಇನ್ 1 ಯುಎಸ್ ಬಿ ಕೇಬಲ್(100cm)ನ್ನು ಅದಾಗಲೇ ಕ್ರಮವಾಗಿ Rs. 1,499 ಮತ್ತು Rs. 249 ಕ್ಕೆ ಮಾರಾಟ ಮಾಡಲಾಗುವುದು ಎಂದು ತಿಳಿಸಿದೆ. ಹಾಗಾದ್ರೆ ಈ ಪ್ರೊಡಕ್ಟ್ ಗಳ ಬಗ್ಗೆ ಹೆಚ್ಚಿನ ವಿವರಗಳನ್ನು ಇಲ್ಲಿ ತಿಳಿಯೋಣ

ಎಂಐ ಪುರುಷರ ಸ್ಪೋರ್ಟ್ಸ್ ಶೂಸ್ 2 ಬೆಲೆ

ಎಂಐ ಪುರುಷರ ಸ್ಪೋರ್ಟ್ಸ್ ಶೂಸ್ 2 ಬೆಲೆ

ಹೊಸ ಶಿಯೋಮಿ ಡಿವೈಸ್ ಗಳ ಬೆಲೆಯ ಬಗ್ಗೆ ಮಾತನಾಡುವುದಾದರೆ ಎಂಐ ಪುರುಷರ ಸ್ಪೋರ್ಟ್ಸ್ ಶೂಸ್ 2 ಗೆ 2,999 ರುಪಾಯಿ ನಿಗದಿಗೊಳಿಸಲಾಗಿದ್ದು ಕಪ್ಪು, ಬೂದು ಮತ್ತು ನೀಲಿ ವರ್ಣಗಳ ಆಯ್ಕೆಯಲ್ಲಿ ಇದು ಲಭ್ಯವಾಗುತ್ತದೆ. ಎಂಐ ಸ್ಪೋರ್ಟ್ಸ್ ಬ್ಲೂಟೂತ್ ಇಯರ್ ಫೋನ್ ಮತ್ತು ಎಂಐ 2ಇನ್ 1 USB ಕೇಬಲ್ (30cm) ಗಳ ಬೆಲೆಯನ್ನು ಇನ್ನಷ್ಟ ಸಂಸ್ಥೆ ಅಂತಿಮಗೊಳಿಸಬೇಕಿದೆ. ಇವೆರಡರ ಬೆಲೆಯೂ ಎಂಐ ಸ್ಪೋರ್ಟ್ಸ್ ಬ್ಲೂಟೂತ್ ಇಯರ್ ಫೋನ್ ಬೇಸಿಕ್ ಮತತು ಎಂಐ 2 ಇನ್ನ ಒನ್ USB ಕೇಬಲ್ (100cm) ನ ಬೆಲೆಯನ್ನೇ ಭಾರತದಲ್ಲಿ ಹೊಂದಿರುವ ಸಾಧ್ಯತೆ ಇದೆ. ಎಲ್ಲಾ ಮೂರು ಡಿವೈಸ್ ಗಳು ಎಂಐ. ಕಾಮ್ ನಲ್ಲಿ ಎಕ್ಸ್ ಕ್ಲೂಸೀವ್ ಆಗಿ ಲಭ್ಯವಾಗುತ್ತದೆ. ಮಧ್ಯರಾತ್ರಿಯಿಂದ ಮಾರಾಟ ಪ್ರಕ್ರಿಯೆ ಆರಂಭವಾಗುತ್ತದೆ.

ಎಂಐ ಪುರುಷರ ಸ್ಪೋರ್ಟ್ಸ್ ಶೂಸ್ 2 ವೈಶಿಷ್ಟ್ಯತೆಗಳು

ಎಂಐ ಪುರುಷರ ಸ್ಪೋರ್ಟ್ಸ್ ಶೂಸ್ 2 ವೈಶಿಷ್ಟ್ಯತೆಗಳು

ಎಂಐ ಪುರುಷರ ಸ್ಪೋರ್ಟ್ಸ್ ಶೂಸ್ 2 ವೈಶಿಷ್ಟ್ಯತೆಗಳ ಬಗ್ಗೆ ಹೇಳುವುದಾದರೆ ಶಾಕ್ ಅಬ್ಸಾರ್ಬೆಂಟ್ ಆಗಿದೆ, ಸ್ಲಿಪ್ ರೆಸಿಸ್ಟೆಂಟ್ ಮತ್ತು ಅತೀ ಹೆಚ್ಚು ಕಾಲ ಬಾಳಿಕೆ ಬರುತ್ತದೆ. ಇದರಲ್ಲಿ ಸ್ಮಾರ್ಟ್ ಫೀಚರ್ ಕೂಡ ಇದೆ ಆದರೆ ಸಿಥೆಂಟಿಕ್ ರಬ್ಬರ್ ಔಟ್ ಸೋಲ್, ವ್ಯಾಕ್ಯೂಮ್ ಪ್ರೆಸ್ ಮಿಡ್ ಸೋಲ್, ಟಿಪಿಯು ಮಿಡ್ ಸೋಲ್ ಬ್ಯಾಲೆಂನ್ಸಿಂಗ್ ಪ್ಯಾಚ್, ಕುಷನ್ ಪ್ಯಾಚ್ ಮತ್ತು PU ಸಪೋರ್ಟಿಂಗ್ ಲೇಯರ್ ಇದರಲ್ಲಿ ಇದೆ. ಇದರಲ್ಲಿ 5-ಇನ್-1 ಯುನಿ-ಮೌಲ್ಡಿಂಗ್ ತಂತ್ರಗಾರಿಕೆಯನ್ನು ಬಳಸಲಾಗಿದೆ ಎಂದು ಶಿಯೋಮಿ ತಿಳಿಸಿದೆ.

ಇದರಲ್ಲಿ 10 ಫಿಶ್ಬೋನ್ ಸ್ಟ್ರಕ್ಚರ್ ಇದ್ದು ಇದು ಮೊಣಕಾಲಿನ ಬೆಂಬಲ ಅಗತ್ಯವಿರುವ ಸಂದರ್ಬದಲ್ಲಿ ಇದು ಆರಾಮದಾಯಕ ಕುಷನ್ನಿಂಗ್ ಮತ್ತು ಬ್ಯಾಲೆನ್ಸ್ ಅಧಿಕಗೊಳಿಸುವಿಕೆಯನ್ನು ಆಫರ್ ಮಾಡುತ್ತದೆ. ಇದು ಮಷಿನ್ ವಾಷೇಬಲ್ ಆಗಿರುತ್ತದೆ.

ಎಂಐ ಸ್ಪೋರ್ಟ್ಸ್ ಬ್ಲೂಟೂತ್ ಇಯರ್ ಫೋನ್ಸ್ ಮಿನಿ:

ಎಂಐ ಸ್ಪೋರ್ಟ್ಸ್ ಬ್ಲೂಟೂತ್ ಇಯರ್ ಫೋನ್ಸ್ ಮಿನಿ:

ಎಂಐ ಸ್ಪೋರ್ಟ್ಸ್ ಬ್ಲೂಟೂತ್ ವೈಶಿಷ್ಟ್ಯತೆಗಳ ಬಗ್ಗೆ ಇದುವರೆಗೂ ನಿಗೂಢತೆ ಇದೆ. ಆದರೆ ಶಿಯೋಮಿಯ ಎಂಐ ಸ್ಪೋರ್ಟ್ಸ್ ಬ್ಲೂಟೂತ್ ಇಯರ್ ಫೋನ್ ಮಿನಿಯಂತೆಯೇ ಇದು ಕೂಡ ಇರುವ ಸಾಧ್ಯತೆ ಇದೆ. ಎಂಐ ಸ್ಪೋರ್ಟ್ಸ್ ಬ್ಲೂಟೂತ್ ಇಯರ್ ಫೋನ್ ಮಿನಿಯಲ್ಲಿ ಸ್ಪೋರ್ಟ್ಸ್ IPX4 ರೇಟೆಡ್ ವಾಟರ್ ರೆಸಿಸ್ಟೆಂಟ್ ಕೆಪಾಸಿಟಿ ಇದೆ ಜೊತೆಗೆ TPU ಬಾಡಿ ಮತ್ತು ಆಂಟಿ-ಸ್ಪಿಪ್ ಸೈಡ್ ನ್ನು ಹೊಂದಿದೆ.ಅತೀ ಕಡಿಮೆ ತೂಕವನ್ನು ಇದು ಹೊಂದಿದೆ.ಒಮ್ಮೆ ಚಾರ್ಜ್ ಮಾಡಿದರೆ 5 ತಾಸು ಬಳಕೆ ಮಾಡಬಹುದು.ಇಯರ್ ಬಡ್ ಗಳು ಅಲ್ಟ್ರಾ ಥಿನ್ PET ಸ್ಪೀಕರ್ ಡೈಫರ್ ಗ್ರಾಮ್ ನದ್ದಾಗಿದ್ದು ಉತ್ತಮ ಆಡಿಯೋ ಪ್ರದರ್ಶನ ಮತ್ತು ಆಕರ್ಷಕ ಬಾಸ್ ನ್ನು ಇದು ನೀಡುತ್ತದೆ.

ಎಂಐ2-ಇನ್-1 USB ಕೇಬಲ್ (30cm)

ಎಂಐ2-ಇನ್-1 USB ಕೇಬಲ್ (30cm)

ಎಂಐ 2 ಇನ್ 1 USB ಕೇಬಲ್ (30cm) ಸದ್ಯ ಮಾರುಕಟ್ಟೆಯಲ್ಲಿ ಲಭ್ಯವಿರುವ 100cm ವರ್ಷನ್ ನಂತೆಯೇ ಇದ್ದು ಕೇಬಲ್ ಸೈಜ್ ನಲ್ಲಿ ಮಾತ್ರವೇ ವ್ಯತ್ಯಾಸವಿದೆ. 100cm ಎಂಐ 2-ಇನ್-1 USB ಕೇಬಲ್ ಎರಡೂ ರೀತಿಯ USB ಟೈಪ್-ಸಿ ಮತ್ತು ಮೈಕ್ರೋ -USB ಔಟ್ ಪುಟ್ ಪೋರ್ಟ್ ಗಳನ್ನು ಹೊಂದಿದೆ. ಇನ್ ಪುಟ್ ಪೋರ್ಟ್ USB 2.0 (ಟೈಪ್ ಎ) ಆಗಿದೆ. 2.4ಎ ವರೆಗಿನ ಕ್ವಿಕ್ ಚಾರ್ಜಿಂಗ್ ಗೆ ಇದು ಬೆಂಬಲ ನೀಡುತ್ತದೆ .TPE ನಲ್ಲಿ ಔಟರ್ ಕೇಬಲ್ ನ್ನು ನಿರ್ಮಿಸಲಾಗಿದೆ.

Most Read Articles
Best Mobiles in India

English summary
Now, the company is hosting a dedicated flash sale on the 4th of July. On this exclusive sale, the company will be selling the Xiaomi Mi Sports Bluetooth Earphones, Mi 2-in-1 USB cable, and the Xiaomi Mi Men's Sports Shoes 2. These lifestyle products or accessories will be available exclusively on Mi.com.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more