ಶಿಯೋಮಿಯಿಂದ ಎರಡು ಹೊಸ ಮಾದರಿಯ ಲ್ಯಾಪ್‌ಟಾಪ್‌ ಬಿಡುಗಡೆ! ವಿಶೇಷತೆ ಏನು?

|

ಜನಪ್ರಿಯ ಶಿಯೋಮಿ ಕಂಪೆನಿ ಸ್ಮಾರ್ಟ್‌ಫೋನ್‌ ಮಾತ್ರವಲ್ಲದೆ ಲ್ಯಾಪ್‌ಟಾಪ್‌ ವಲಯದಲ್ಲೂ ಕೂಡ ಪ್ರಸಿದ್ಧಿ ಪಡೆದುಕೊಂಡಿದೆ. ಈಗಾಗಲೇ ಹಲವು ಮಾದರಿಯ ಲ್ಯಾಪ್‌ಟಾಪ್‌ಗಳನ್ನು ಪರಿಚಯಿಸಿ ಸೈ ಎನಿಸಿಕೊಂಡಿದೆ. ಸದ್ಯ ಇದೀಗ ಹೊಸ ಮಿ ನೋಟ್‌ಬುಕ್ ಪ್ರೊ 15 ಮತ್ತು ಮಿ ನೋಟ್ಬುಕ್ ಪ್ರೊ 14 ಅನ್ನು ಬಿಡುಗಡೆ ಮಾಡಿದೆ. ಇನ್ನು ಈ ಎರಡು ಲ್ಯಾಪ್‌ಟಾಪ್‌ಗಳು 11 ನೇ ಜನರಲ್ ಇಂಟೆಲ್ ಟೈಗರ್ ಲೇಕ್ ಸಿಪಿಯುಗಳು ಮತ್ತು ಎನ್ವಿಡಿಯಾ ಜೀಫೋರ್ಸ್ ಗ್ರಾಫಿಕ್ಸ್ ಹೊಂದಿದೆ.

ಶಿಯೋಮಿ

ಹೌದು, ಶಿಯೋಮಿ ಸಂಸ್ಥೆ ಹೊಸ ಮಿ ನೋಟ್‌ಬುಕ್‌ ಪ್ರೊ 15, ಮಿ ನೋಟ್ಬುಕ್ ಪ್ರೊ 14 ಅನ್ನು ಚೀನಾದಲ್ಲಿ ಬಿಡುಗಡೆ ಮಾಡಿದೆ. ಇನ್ನು ಈ ಎರಡೂ ಲ್ಯಾಪ್‌ಟಾಪ್‌ಗಳು ಒಂದೇ ಬಣ್ಣದ ಆಯ್ಕೆಗಳಲ್ಲಿ ಬರಲಿವೆ. ಜೊತೆಗೆ ಈ ಎರಡೂ ಲ್ಯಾಪ್‌ಟಾಪ್‌ ಮಾದರಿಗಳು ಥಂಡರ್‌ಬೋಲ್ಟ್‌ 4 ಪೋರ್ಟ್‌ಗಳೊಂದಿಗೆ ಬರುತ್ತವೆ. ಇನ್ನುಳಿದಂತೆ ಈ ಲ್ಯಾಪ್‌ಟಾಪ್‌ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಮಿ ನೋಟ್‌ಬುಕ್ ಪ್ರೊ 15

ಮಿ ನೋಟ್‌ಬುಕ್ ಪ್ರೊ 15

ಮಿ ನೋಟ್‌ಬುಕ್ ಪ್ರೊ 15 ಲ್ಯಾಪ್‌ಟಾಪ್‌ 3,456x2,160 ಪಿಕ್ಸೆಲ್ ರೆಸಲ್ಯೂಶನ್ ಸಾಮರ್ಥ್ಯದ 15.6-ಇಂಚಿನ ಒಎಲ್ಇಡಿ ಡಿಸ್‌ಪ್ಲೇಯನ್ನು ಹೊಂದಿದೆ. ಇನ್ನು ಈ ಡಿಸ್‌ಪ್ಲೇ 16:10 ರಚನೆಯ ಅನುಪಾತವನ್ನು ಹೊಂದಿದ್ದು, 261 ಪಿಪಿಐ ಪಿಕ್ಸೆಲ್ ಸಾಂದ್ರತೆಯನ್ನು ಪಡೆದುಕೊಂಡಿದೆ. ಜೊತೆಗೆ 400 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್‌ ಮತ್ತು 93% ಸ್ಕ್ರೀನ್-ಟು-ಬಾಡಿ ಅನುಪಾತವನ್ನು ಹೊಂದಿದೆ. ಇದು ಪ್ರಮಾಣಿತ 60Hz ರಿಫ್ರೆಶ್ ರೇಟ್‌ಅನ್ನು ಹೊಂದಿದೆ. ಅಲ್ಲದೆ 100 ಪ್ರತಿಶತ sRGB ಮತ್ತು 100 ಪ್ರತಿಶತ DCI-P3 ಬಣ್ಣದ ಹರವು ಹೊಂದಿದೆ. ಇದು ಟಿಯುವಿ ರೈನ್‌ಲ್ಯಾಂಡ್ ಬ್ಲೂ ಲೈಟ್ ಪ್ರಮಾಣೀಕರಣವನ್ನು ಸಹ ಹೊಂದಿದೆ. ಇನ್ನು ಮಿ ನೋಟ್‌ಬುಕ್ ಪ್ರೊ 15 66 ವಿಆರ್ ಬ್ಯಾಟರಿಯನ್ನು ಹೊಂದಿದ್ದು ಅದು ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ ಮತ್ತು 35 ನಿಮಿಷಗಳಲ್ಲಿ 50 ಪ್ರತಿಶತದಷ್ಟು ಚಾರ್ಜ್ ಮಾಡಬಹುದು.

ಮಿ ನೋಟ್ಬುಕ್ ಪ್ರೊ 14

ಮಿ ನೋಟ್ಬುಕ್ ಪ್ರೊ 14

ಮಿ ನೋಟ್ಬುಕ್ ಪ್ರೊ 14 ಲ್ಯಾಪ್‌ಟಾಪ್‌ 2,560x1,600 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 14 ಇಂಚಿನ 2K ಡಿಸ್‌ಪ್ಲೇಯನ್ನು ಹೊಂದಿದೆ. ಇನ್ನು ಈ ಡಿಸ್‌ಪ್ಲೇ 120Hz ರಿಫ್ರೆಶ್ ರೇಟ್‌, 88% ಸ್ಕ್ರೀನ್-ಟು-ಬಾಡಿ ಅನುಪಾತ, 16:10 ರಚನೆಯ ಅನುಪಾತವನ್ನು ಹೊಂದಿದೆ. ಇನ್ನು ಈ ಡಿಸ್‌ಪ್ಲೇ 216 ಪಿಪಿಐ ಪಿಕ್ಸೆಲ್ ಸಾಂದ್ರತೆ ಮತ್ತು 300 ನಿಟ್ ಗರಿಷ್ಠ ಬ್ರೈಟ್‌ನೆಸ್‌ ಅನ್ನು ಹೊಂದಿದೆ. ಇದು 100 ಪ್ರತಿಶತ ಎಸ್‌ಆರ್‌ಜಿಬಿ ಬಣ್ಣದ ಹರವು ಮತ್ತು ಟಿಯುವಿ ರೈನ್‌ಲ್ಯಾಂಡ್ ಕಡಿಮೆ ನೀಲಿ ಬೆಳಕಿನ ಪ್ರಮಾಣೀಕರಣದೊಂದಿಗೆ ಬರುತ್ತದೆ. ಮಿ ನೋಟ್ಬುಕ್ ಪ್ರೊ 14 ಚಿಕ್ಕದಾದ 56 Whr ಬ್ಯಾಟರಿಯನ್ನು ಹೊಂದಿದ್ದು ಅದು 37 ನಿಮಿಷಗಳಲ್ಲಿ 50 ಪ್ರತಿಶತದಷ್ಟು ಚಾರ್ಜ್ ಮಾಡಬಹುದು.

ಲ್ಯಾಪ್‌ಟಾಪ್

ಇನ್ನು ಈ ಎರಡೂ ಲ್ಯಾಪ್‌ಟಾಪ್ ಮಾದರಿಗಳು ಇಂಟೆಲ್ 11 ನೇ ಜನ್ ಕೋರ್ ಐ 7-11370 ಹೆಚ್ ಸಿಪಿಯು ಮತ್ತು ಎನ್ವಿಡಿಯಾ ಜೀಫೋರ್ಸ್ ಎಂಎಕ್ಸ್ 450 ಜಿಪಿಯು ವರೆಗೆ ಹೊಂದಿವೆ. ಅಲ್ಲದೆ ಈ ಲ್ಯಾಪ್‌ಟಾಪ್‌ಗಳು 16 GB RAM ಅನ್ನು 3,200 MHz ಮತ್ತು 512GB ಇಂಟರ್‌ ಸ್ಟೋರೇಜ್ ಸಾಮರ್ಥ್ಯವನ್ನು ಪಡೆದುಕೊಂಡಿವೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ವೈ-ಫೈ 6, ಬ್ಲೂಟೂತ್ ವಿ 5.1, ಎರಡು ಯುಎಸ್‌ಬಿ ಟೈಪ್-ಸಿ ಪೋರ್ಟ್‌ಗಳು, ಥಂಡರ್ಬೋಲ್ಟ್ 4 ಪೋರ್ಟ್ ಮತ್ತು 3.5 ಎಂಎಂ ಹೆಡ್‌ಫೋನ್ ಜ್ಯಾಕ್ ಅನ್ನು ಬೆಂಬಲಿವೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಮಿ ನೋಟ್‌ಬುಕ್ ಪ್ರೊ 15 ಬೆಲೆ ಸಿಎನ್‌ವೈ 6,499 (ಸರಿಸುಮಾರು ರೂ. 72,900) ರಿಂದ ಪ್ರಾರಂಭವಾಗುತ್ತದೆ. ಅಲ್ಲದೆ ಎನ್ವಿಡಿಯಾ ಜೀಫೋರ್ಸ್ ಎಮ್ಎಕ್ಸ್ 450 ಜಿಪಿಯು ಹೊಂದಿರುವ ಲ್ಯಾಪ್‌ಟಾಪ್‌ ಸಿಎನ್‌ವೈ 6,999 (ಸರಿಸುಮಾರು ರೂ. 78,500)ಬೆಲೆ ಹೊಂದಿದೆ. ಇನ್ನು ಜಿಪಿಯು ಕಾನ್ಫಿಗರೇಶನ್‌ನೊಂದಿಗೆ ಕೋರ್ ಐ 7 ಗೆ ಅಪ್‌ಗ್ರೇಡ್ ಮಾಡಲು ಸಿಎನ್‌ವೈ 7,999 (ಸರಿಸುಮಾರು 90,000 ರೂ.) ವೆಚ್ಚವಾಗಲಿದೆ.

ಮಿ ನೋಟ್ಬುಕ್ ಪ್ರೊ 14 ಪ್ರೊ 15 ರಂತೆಯೇ ಮೂರು ಸಂರಚನೆಗಳನ್ನು ಹೊಂದಿದೆ. ಇದು ಮೂಲ ರೂಪಾಂತರಕ್ಕಾಗಿ ಸಿಎನ್‌ವೈ 5,299 (ಸರಿಸುಮಾರು ರೂ. 59,400) ನಿಂದ ಪ್ರಾರಂಭವಾಗುತ್ತದೆ ಮತ್ತು ಪ್ಯಾಕ್ ಕಾನ್ಫಿಗರೇಶನ್‌ನ ಮಧ್ಯದಲ್ಲಿ ಸಿಎನ್‌ವೈ 5,999 (ಸರಿಸುಮಾರು 67,300 ರೂ.) ವೆಚ್ಚವಾಗುತ್ತದೆ. ಉನ್ನತ ಶ್ರೇಣಿಯ ರೂಪಾಂತರವು ಸಿಎನ್‌ವೈ 6,999 ವೆಚ್ಚವಾಗುತ್ತದೆ.

Most Read Articles
Best Mobiles in India

English summary
Mi Notebook Pro 15 and Mi Notebook Pro 14 laptop models launched.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X