ಮೈಕ್ರೋಸಾಫ್ಟ್ ಸಹ ಸಂಸ್ಥಾಪಕ 'ಪೌಲ್ ಅಲೆನ್' ನಿಧನ!..ಸಾಧಕನ ಕಥೆಗೆ ಫುಲ್‌ಸ್ಟಾಪ್!

|

ವಿಶ್ವದ ಬೃಹತ್ ಸಾಫ್ಟ್‌ವೇರ್ ದಿಗ್ಗಜ ಸಂಸ್ಥೆ ಮೈಕ್ರೋಸಾಫ್ಟ್ ಕಂಪೆನಿಯ ಸಹ ಸಂಸ್ಥಾಪಕ 'ಪೌಲ್ ಅಲೆನ್' ಅವರು ಸೋಮವಾರ ಕೊನೆ ಉಸಿರೆಳೆದಿದ್ದಾರೆ. ಜಗತ್ತಿನಾದ್ಯಂತ ವಿವಿಧ ವಲಯಗಳಲ್ಲಿನ ಹೂಡಿಕೆ ಹಾಗೂ ಉತ್ತಮ ಕಾರ್ಯಗಳಿಗೆ ನೀಡಿ ವಿಶ್ವದಲ್ಲೇ ಹೆಸರಾಗಿದ್ದ ಪೌಲ್ ಅವರು ರಕ್ತ ಕ್ಯಾನ್ಸರ್‌ನಿಂದಾಗಿ ಮೃತಪಟ್ಟಿರುವುದಾಗಿ ಮಾಧ್ಯಮ ವರದಿಗಳು ತಿಳಿಸಿವೆ.

ಮೈಕ್ರೋಸಾಫ್ಟ್‌ನಿಂದ ಬಂದ ಯಶಸ್ಸನ್ನು ಕ್ರೀಡೆ, ಕೇಬಲ್ ಟಿವಿ ಹಾಗೂ ರಿಯಲ್ ಎಸ್ಟೇಟ್‌ನಲ್ಲೂ ಹೂಡಿಕೆ ಮಾಡಿದ್ದ ಪೌಲ್ ಅಲೆನ್ ಅವರು ತಮ್ಮ 65 ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದಾರೆ. ಹಳೆಯ ಹಾಗೂ ಪ್ರೀತಿಯ ಗೆಳೆಯನ ಅಗಲಿಕೆಗೆ ನೋವು ಹಂಚಿಕೊಂಡಿರುವ ಬಿಲ್‌ಗೇಟ್ಸ್, ತನ್ನ ಹಳೆಯ ಪ್ರೀತಿಯ ಗೆಳೆಯನನ್ನು ನೆನಪಿಸಿಕೊಂಡು ಕಂಬನಿ ಮಿಡಿದಿದ್ದಾರೆ.

ಮೈಕ್ರೋಸಾಫ್ಟ್ ಸಹ ಸಂಸ್ಥಾಪಕ 'ಪೌಲ್ ಅಲೆನ್' ನಿಧನ!..ಸಾಧಕನ ಕಥೆಗೆ ಫುಲ್‌ಸ್ಟಾಪ್!

1975ರಲ್ಲಿ ತನ್ನ ಪೌಲ್ ಅಲೆನ್ ಜತೆ ಸೇರಿಕೊಂಡು ಮೈಕ್ರೋಸಾಫ್ಟ್ ಕಂಪನಿ ಆರಂಭಿಸಿದ ಬಿಲ್‌ಗೇಟ್ಸ್ ಜಗತ್ತಿಗೆ ಚಿರಪರಿಚಿತ. ಆದರೆ, ಸಾವಿರಾರು ಕೋಟಿ ಹಣವನ್ನು ದಾನ ಮಾಡಿಯೂ ಚಿರಪರಿಚತವಾಗದ ವ್ಯಕ್ತಿ ಈ 'ಪೌಲ್ ಅಲೆನ್'.! ಬಳಕೆಗೆ ಸುಲಭವಾಗುವ ರೀತಿಯಲ್ಲಿ ಸಾಫ್ಟ್‌ವೇರ್‌ಗಳನ್ನು ರೂಪಿಸಿದ ಇವರು ಈಗ ನಮ್ಮನ್ನು ಅಗಲಿದರೂ ಅವರು ಉಸಿರಾಗಿ ಉಳಿಸಿದ್ದಾರೆ.

'ಪೌಲ್ ಅಲೆನ್' ಹುಟ್ಟು ಮತ್ತು ಜೀವನ!

'ಪೌಲ್ ಅಲೆನ್' ಹುಟ್ಟು ಮತ್ತು ಜೀವನ!

ಪೌಲ್ ಅಲೆನ್ ಅವರ ಪೂರ್ತಿ ಹೆಸರು 'ಪೌಲ್ ಗಾರ್ಡನರ್ ಅಲೆನ್' ಎಂದು. 1953 ರ ಜನವರಿ 23ರಂದು ಅಮೆರಿಕಾದಲ್ಲಿ ಇವರ ಜನನವಾಯಿತು. ತಂದೆ ಯುನಿವರ್ಸಿಟಿಯ ಗ್ರಂಥಾಲಯದಲ್ಲಿ ಕೆಲಸಕ್ಕಿದ್ದರೆ, ಇವರ ತಾಯಿ ಶಿಕ್ಷಕಿಯಾಗಿದ್ದರು. ಗೇಟ್ಸ್ ಮತ್ತು ಪೌಲ್ ಬಾಲ್ಯದಿಂದಲೇ ಸ್ನೇಹಿತರಾಗಿದ್ದು, ಇವರಿಬ್ಬರ ನೆಚ್ಚಿನ ಕೆಲಸ ಎಂದರೆ ಅದು 'ಕಂಪ್ಯೂಟರ್‌ ಪ್ರೋಗ್ರಾಮಿಂಗ್'!

'ಪೌಲ್ ಅಲೆನ್' ಶಿಕ್ಷಣ ಹೇಗಿತ್ತು?

'ಪೌಲ್ ಅಲೆನ್' ಶಿಕ್ಷಣ ಹೇಗಿತ್ತು?

ವಾಷಿಂಗ್‌ಟನ್ ಯುನಿವರ್ಸಿಟಿಯ ಕಂಪ್ಯೂರ್ ಲ್ಯಾಬ್‌ನಲ್ಲಿ ಯಾರಿದ್ದಾರೆ ಎಂದು ಪ್ರಶ್ನಿಸಿದರೆ ಪೌಲ್ ಅಲೆನ್ ಎಂಬ ಉತ್ತರ ಸಿಗುತ್ತಿತ್ತಂತೆ. ಮೊದಲು ಕಂಪ್ಯೂಟರ್‌ಗಳೊಂದಿಗೆ ಸಮಯ ಕಳೆಯುತ್ತಿದ್ದ ಪೌಲ್ ನಂತರ ಅದನ್ನೇ ಅಭ್ಯಾಸ ಮಾಡಿಕೊಂಡಿಬಿಟ್ಟಿದ್ದರು. ಹೀಗೆ ಕಂಪ್ಯೂಟರ್ ಅನ್ನೇ ತನ್ನ ಸರ್ವಸ್ವವಾಗಿಯೂ ಕಂಡುಕೊಂಡಿದ್ದ ಅವರು ಅಲ್ಲಯೇ ಪದವಿಯನ್ನು ಪಡೆದಿದ್ದರೂ.

ಮೈಕ್ರೋಸಾಫ್ಟ್ ಕಟ್ಟಿದ ಕಥೆ!

ಮೈಕ್ರೋಸಾಫ್ಟ್ ಕಟ್ಟಿದ ಕಥೆ!

1975 ರಲ್ಲಿ ನ್ಯೂ ಮೆಕ್ಸಿಕೊದಲ್ಲಿ ಹುಟ್ಟಿದ ಮೈಕ್ರೋ-ಸಾಫ್ಟ್ ಎಂ ಸಂಸ್ಥೆ ಗೇಟ್ಸ್ ಹಾಗೂ ಪೌಲ್ ಅವರ ಕನಸಿನ ಕೂಸಾಗಿತ್ತು. ಮಷಿನ್‌ಗಳಿಗೆ ಸಾಫ್ಟ್‌ವೇರ್ ಅಗತ್ಯತೆಗಳನ್ನು ಆಗಲೇ ಕಂಡುಕೊಂಡಿದ್ದ ಇವರಿಬ್ಬರು ಮೊದಲು ಐಬಿಎಂ ಮೈಕ್ರೋ ಕಂಪ್ಯೂಟರ್‌ಗಳಿಗೆ ಆಪರೇಟಿಂಗ್ ರೂಪಿಸಲು ಶ್ರಮಿಸಿದರು. ಇಲ್ಲಿಂದ ಮುಂದೆ ಕಂಪ್ಯೂಟರ್ ಬಳಕೆ ಮಹತ್ತರ ಬದಲಾವಣೆ ಕಂಡಿತು.

ಜೀವ ಉಳಿಸಲಿಲ್ಲ ಆಸ್ತಿ!

ಜೀವ ಉಳಿಸಲಿಲ್ಲ ಆಸ್ತಿ!

ಮೈಕ್ರೋಸಾಫ್ಟ್ ಕಂಪನಿಯ ಸಹ ಸಂಸ್ಥಾಪಕನಾಗಿದ್ದ ಪೌಲ್ ಅಲೆನ್ ಇಲ್ಲಿಯವರೆಗೂ ಗಳಿಸಿ ಕಳೆದ ಹಣ ಲೆಕ್ಕಕ್ಕಿಲ್ಲ. ಆದರೆ, ಬ್ಲೂಮ್‌ ಬರ್ಗ್ ಅಂದಾಜು ಮಾಡಿರುವಂತೆ ಪೌಲ್‌ ಅಲೆನ್ ಅವರ ಅಂದಾಜು ಆಸ್ತಿ ಇಂದು 1.92 ಲಕ್ಷ ಕೋಟಿಗಳು. ಇಷ್ಟು ಸಂಪತ್ತಿನ ಒಡೆಯನಾದರೂ ಪೌಲ್ ಅವರು 'ಹಾಡ್ಗ್‌ಕಿನ್ಸ್ ಲಿಂಪೋಮಾ' ಎಂಕ ಕ್ಯಾನ್ಸರ್ ರೋಗಕ್ಕೆ ನೆನ್ನೆ ಬಲಿಯಾದರೂ.

ಕಂಬನಿ ಮಿಡಿದ ಗೇಟ್ಸ್!

ಕಂಬನಿ ಮಿಡಿದ ಗೇಟ್ಸ್!

ಪೌಲ್ ಅವರ ಬಾಲ್ಯದ ಗೆಳೆಯ, ಸಹಪಾಟಿ, ಪಾಲುದಾರನಾಗಿರುವ ಬಿಲ್‌ಗೇಟ್ಸ್ ಅವರು ಪೌಲ್ ಅಲೆನ್ ಸಾವಿಗೆ ಕಂಬನಿ ಮಿಡಿದಿದ್ದಾರೆ. ಹಳೆಯ ಮತ್ತು ಸ್ನೇಹಿತನ ಅಗಲಿಕೆ ಮನಸ್ಸನ್ನು ಛಿದ್ರಗೊಳಿಸಿದೆ. ಸ್ನೇಹಿತ ಮತ್ತು ಪಾಲುದಾರ ಪೌಲ್, ಆತನಿಲ್ಲದಿದ್ದರೆ ಪರ್ಸನಲ್ ಕಂಪ್ಯೂಟಿಂಗ್ ಬಹುಶಃ ಸಾಧ್ಯವೇ ಆಗುತ್ತಿರಲಿಲ್ಲ ಎಂದು ಬಿಲ್‌ಗೇಟ್ಸ್ ನೋವು ಹಂಚಿಕೊಂಡಿದ್ದಾರೆ.

ದೇಣಿಗೆ ನೀಡಿದ್ದು ಅಪಾರ!

ದೇಣಿಗೆ ನೀಡಿದ್ದು ಅಪಾರ!

ಮಿದುಳು ಸಂಬಂಧಿತ ಸಂಶೋಧನೆಗೆಳಿಗೆ 730 ಕೋಟಿ, ಅನ್ಯಗ್ರಹದಲ್ಲಿ ಜೀವ ಸಂಕುಲ ಶೋಧಕ್ಕಾಗಿ 184 ಕೋಟಿ ಸೇರಿದಂತೆ ಸಮಾಜ ಕಾರ್ಯಗಳಿಗೆ ಸಾವಿರಾರು ಕೋಟಿ ಹಣವನ್ನು ದೇಣಿಗೆ ನೀಡಿದ ಕೀರ್ತಿ ಪೌಲ್ ಅಲೆನ್ ಅವರಿಗೆ ಇದೆ. ಸಮಾಜ ಕಾರ್ಯಗಳಿಗೆ ಹಣ ನೀಡುವುದು ಜನಪ್ರಿಯತೆಗಲ್ಲ ಎಂದು ತಿಳಿದಿದ್ದ ಪೌಲ್ ಮಾಧ್ಯಮಗಳಲ್ಲಿ ಸುದ್ದಿಯಾಗದೇ ಉಳಿಯುತ್ತಿದ್ದರು.

ಥ್ಯಾಂಕ್ಯೂ ಪೌಲ್!

ಥ್ಯಾಂಕ್ಯೂ ಪೌಲ್!

ಪೌಲ್ ಅಲೆನ್ ಅವರು ಬಿಲ್‌ಗೇಟ್ಸ್ ಜೊತೆ ಸೇರಿ ಕಟ್ಟಿದ ಮೈಕ್ರೋಸಾಫ್ಟ್ ಕಂಪೆನಿ ಪೌಲ್ ಅಲೆನ್ ಸಾವಿಗೆ ಒಂದೇ ಟ್ವಿಟ್‌ನಲ್ಲಿ ನಮನ ಸಲ್ಲಿಸಿದೆ. ' ಥ್ಯಾಂಕ್ಯೂ ಪೌಲ್' ಎಂದು ಮೈಕ್ರೋಸಾಫ್ಟ್ ಟ್ವಿಟ್ಟಿಸಿರುವುದು ಅವರನ್ನು ಬಣ್ಣಿಸಲು ಸಾಧ್ಯವಾಗದಂತಿದೆ. ಸಂಸ್ಥೆ, ಸಮಯದಾಯ ಹಾಗೂ ವಲಯಕ್ಕೆ ಅವರ ಕೊಡುಗೆ ಮಹತ್ತರ ಎಂದುಮೈಕ್ರೋಸಾಫ್ಟ್ ಸಿಇಒ ಸತ್ಯ ನಾದೆಲ್ಲಾ ಹೇಳಿದ್ದಾರೆ.

Most Read Articles
Best Mobiles in India

English summary
Microsoft Co-Founder Paul Allen died from complications of non-Hodgkin's lymphoma on Monday afternoon.to know more visit to kannada.gizot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more