ಮೈಕ್ರೋಸಾಫ್ಟ್ ಸರ್ಫೇಸ್ ಲ್ಯಾಪ್‌ಟಾಪ್ ಗೋ ಲಾಂಚ್‌!..ಬೆಲೆ ಎಷ್ಟು?

|

ಸಾಫ್ಟ್‌ವೇರ್‌ ದೈತ್ಯ ಮೈಕ್ರೋಸಾಫ್ಟ್‌ ಲ್ಯಾಪ್‌ಟಾಪ್‌ವಲಯದಲ್ಲಿ ಬಿನ್ನ ಮಾದರಿಯ ಲ್ಯಾಪ್‌ಟಾಪ್‌ಗಳಿಗೆ ಹೆಸರುವಾಸಿಯಾಗಿದೆ. ಸದ್ಯ ಇದೀಗ ಮೈಕ್ರೋಸಾಫ್ಟ್ ಸರ್ಫೇಸ್ ಲ್ಯಾಪ್‌ಟಾಪ್ ಗೋ ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಇನ್ನು ಸರ್ಫೇಸ್ ಗೋ ಟ್ಯಾಬ್ಲೆಟ್‌ಗಳಂತಲ್ಲದೆ, ಸರ್ಫೇಸ್ ಲ್ಯಾಪ್‌ಟಾಪ್ ಗೋ ಬೇರ್ಪಡಿಸಲಾಗದ ಕೀಬೋರ್ಡ್‌ನೊಂದಿಗೆ ಬರುತ್ತದೆ. ಇದು 10 g-ಪೀಳಿಗೆಯ ಇಂಟೆಲ್ ಕೋರ್ ಐ 5 ಪ್ರೊಸೆಸರ್ ಹಾಗೂ 16GB ಸಾಮರ್ಥ್ಯವನ್ನು ಹೊಂದಿದೆ.

ಮೈಕ್ರೋಸಾಫ್ಟ್‌

ಹೌದು, ಮೈಕ್ರೋಸಾಫ್ಟ್‌ ಕಂಪೆನಿ ತನ್ನ ಹೊಸ ಸರ್ಫೇಸ್ ಲ್ಯಾಪ್‌ಟಾಪ್ ಗೋ ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಇದು ಟಚ್-ಬೆಂಬಲಿತ ಡಿಸ್‌ಪ್ಲೇಯನ್ನು ಹೊಂದಿದೆ. ಇನ್ನು ಭಾರತೀಯ ಮಾರುಕಟ್ಟೆಯಲ್ಲಿ ಸರ್ಫೇಸ್ ಲ್ಯಾಪ್‌ಟಾಪ್ ಗೋ ಹೊಸ ಸಂಚಲನ ಸೃಷ್ಟಿಸುವ ಸಾಧ್ಯತೆ ಇದೆ. ಈಗಾಗಲೇ ಮನೆಯಿಂದಲೇ ಕಾರ್ಯನಿರ್ವಹಿಸುತ್ತಿರುವ ಉದ್ಯೋಗಿಗಳಿಗೆ ಇದು ಉತ್ತಮ ಆಯ್ಕೆಯಾಗಿದೆ. ಇನ್ನುಳಿದಂತೆ ಈ ಲ್ಯಾಪ್‌ಟಾಪ್‌ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಮೈಕ್ರೋಸಾಫ್ಟ್

ಮೈಕ್ರೋಸಾಫ್ಟ್ ಸರ್ಫೇಸ್ ಲ್ಯಾಪ್‌ಟಾಪ್ ಗೋ ವಿಂಡೋಸ್ 10 ಹೋಮ್‌ನಲ್ಲಿ S ಮೋಡ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಇದು 3:2 ಸ್ಕ್ರೀನ್ ಅನುಪಾತದೊಂದಿಗೆ 12.45-ಇಂಚಿನ ಪಿಕ್ಸೆಲ್‌ ಸೆನ್ಸ್ ಡಿಸ್‌ಪ್ಲೇ ಹೊಂದಿದೆ. ಇನ್ನು ಈ ಲ್ಯಾಪ್‌ಟಾಪ್ 10 ನೇ ತಲೆಮಾರಿನ ಇಂಟೆಲ್ ಕೋರ್ I5 ಪ್ರೊಸೆಸರ್ ಹೊಂದಿದೆ, ಜೊತೆಗೆ 16GB RAM ಮತ್ತು 256GB ಇಂಟರ್‌ ಸ್ಟೋರೇಜ್‌ ಅನ್ನು ಹೊಂದಿದೆ. ಆದಾಗ್ಯೂ, ಬೇಸ್ ಮಾಡೆಲ್‌ 64GB ಸ್ಟೋರೇಜ್‌ ಅನ್ನು ಹೊಂದಿದೆ. ಇದಲ್ಲದೆ ಈ ಲ್ಯಾಪ್‌ಟಾಪ್ 1.3mm ಕೀ ಪ್ರಯಾಣ ಮತ್ತು ನಿಖರ ಟ್ರ್ಯಾಕ್‌ಪ್ಯಾಡ್‌ನೊಂದಿಗೆ ಪೂರ್ಣ ಗಾತ್ರದ ಕೀಬೋರ್ಡ್ ಅನ್ನು ಸಹ ಹೊಂದಿದೆ.

ಲ್ಯಾಪ್‌ಟಾಪ್‌

ಇನ್ನು ಈ ಲ್ಯಾಪ್‌ಟಾಪ್‌ ಮೈಕ್ರೋಸಾಫ್ಟ್ ಯುಎಸ್‌ಬಿ ಟೈಪ್-ಸಿ ಮತ್ತು ಯುಎಸ್‌ಬಿ-ಎ ಪೋರ್ಟ್‌ಗಳನ್ನು ಒಳಗೊಂಡಿದೆ. ಇದಲ್ಲದೆ ಈ ಲ್ಯಾಪ್‌ಟಾಪ್ ಫಿಂಗರ್‌ಪ್ರಿಂಟ್ ರೀಡರ್-ಇಂಟಿಗ್ರೇಟೆಡ್ ಪವರ್ ಬಟನ್‌ನೊಂದಿಗೆ ಬರುತ್ತದೆ. ಇದು ವಿಂಡೋಸ್ ಹಲೋ ಮತ್ತು ಒನ್ ಟಚ್ ಸೈನ್-ಇನ್ ಫೀಚರ್ಸ್‌ಗಳನ್ನು ಬೆಂಬಲಿಸುತ್ತದೆ. ಡಾಲ್ಬಿ ಆಡಿಯೋ ಮತ್ತು ‘ಸ್ಟುಡಿಯೋ ಮೈಕ್ಸ್' ಬೆಂಬಲಿತ ಒಮ್ನಿಸಾನಿಕ್‌ ಸ್ಪೀಕರ್‌ಗಳನ್ನು ಹೊಂದಿದೆ. ಇದಲ್ಲದೆ ಮೈಕ್ರೋಸಾಫ್ಟ್ ಸರ್ಫೇಸ್ ಲ್ಯಾಪ್‌ಟಾಪ್ ಗೋ ವೀಡಿಯೊ ಕರೆಗಳಿಗಾಗಿ 720p ಎಚ್‌ಡಿ ವೆಬ್‌ಕ್ಯಾಮ್ ಅನ್ನು ಸಹ ಒಳಗೊಂಡಿದೆ.

ಮೈಕ್ರೋಸಾಫ್ಟ್

ಮೈಕ್ರೋಸಾಫ್ಟ್ ಸರ್ಫೇಸ್ ಲ್ಯಾಪ್‌ಟಾಪ್ ಗೋ ಸಹ ವಿಂಡೋಸ್ ಆಟೊಪೈಲಟ್ ಅನ್ನು ಒಳಗೊಂಡಿದೆ, ಮನೆಯಿಂದ ಕೆಲಸಕ್ಕಾಗಿ ಲ್ಯಾಪ್‌ಟಾಪ್ ಅನ್ನು ತಮ್ಮ ಉದ್ಯೋಗಿಗಳಿಗೆ ನಿಯೋಜಿಸಲು ಸಂಸ್ಥೆಗಳಿಗೆ ಸಹಾಯ ಮಾಡುತ್ತದೆ. ಮೈಕ್ರೋಸಾಫ್ಟ್ ಎಂಡ್‌ಪಾಯಿಂಟ್ ಮ್ಯಾನೇಜರ್ ಮತ್ತು ಡಿವೈಸ್ ಫರ್ಮ್‌ವೇರ್ ಕಾನ್ಫಿಗರೇಶನ್ ಇಂಟರ್ಫೇಸ್ (ಡಿಎಫ್‌ಸಿಐ) ಗೆ ಸಹ ಬೆಂಬಲವಿದೆ. ಸದ್ಯ ಭಾರತದಲ್ಲಿ ಮೈಕ್ರೋಸಾಫ್ಟ್ ಸರ್ಫೇಸ್ ಲ್ಯಾಪ್‌ಟಾಪ್ ಗೋ ಬೆಲೆ ಇಂಟೆಲ್ ಕೋರ್ I5 ಪ್ರೊಸೆಸರ್ ಜೊತೆಗೆ 4GB RAM ಮತ್ತು 64GB ಇಂಟರ್‌ ಸ್ಟೋರೇಜ್‌ ಒಳಗೊಂಡಿರುವ ಬೇಸ್ ಕಾನ್ಫಿಗರೇಶನ್‌ಗಾಗಿ 63,499 ರೂ. ಆಗಿದೆ. 8GB RAM + 128GB ಸ್ಟೋರೇಜ್ ರೂಪಾಂತರದ ಬೆಲೆ ರೂ. 71,999, ಆಗಿದೆ.

Most Read Articles
Best Mobiles in India

English summary
Microsoft Surface Laptop Go With 12.4-Inch Touchscreen Launched in India.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X