Just In
Don't Miss
- Automobiles
ಫೆಬ್ರವರಿ ತಿಂಗಳಿನಲ್ಲಿ 12 ಸಾವಿರಕ್ಕೂ ಹೆಚ್ಚು ಎಂಪಿವಿಗಳನ್ನು ಮಾರಾಟ ಮಾಡಿದ ಮಾರುತಿ ಸುಜುಕಿ
- News
ಕರ್ನಾಟಕದ 25 ಜಿಲ್ಲೆಗಳಲ್ಲಿ ಒಂದಂಕಿ ಕೊರೊನಾವೈರಸ್ ಕೇಸ್!
- Movies
'ತಲೆದಂಡ' ಸಿನಿಮಾಕ್ಕೆ ಅನ್ಯಾಯ: ಮನವಿ ಮಾಡಿದ ಸಂಚಾರಿ ವಿಜಯ್
- Finance
ಅಡಿಕೆ, ಕಾಫೀ, ಮೆಣಸು ಹಾಗೂ ರಬ್ಬರ್ನ ಮಾ. 08ರ ಮಾರುಕಟ್ಟೆ ದರ ಇಲ್ಲಿದೆ
- Sports
ಸೌತಾಂಪ್ಟನ್ನಲ್ಲಿ ಭಾರತ-ನ್ಯೂಜಿಲೆಂಡ್ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್
- Lifestyle
ಹೀಗೆ ಆಯ್ಕೆ ಮಾಡಿದರೆ ನೀವು ಬಯಸಿದಂಥ ಸಂಗಾತಿಯೇ ಸಿಗುವರು
- Education
Indian Postal Circle Recruitment 2021: 1421 ಬಿಪಿಎಂ, ಅಬಿಪಿಎಂ ಮತ್ತು ದಖ್ ಸೇವಕ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಮೈಕ್ರೋಸಾಫ್ಟ್ ಸಂಸ್ಥೆಯಿಂದ ಸರ್ಫೇಸ್ ಲ್ಯಾಪ್ಟಾಪ್ ಗೋ ಬಿಡುಗಡೆ!
ಮೈಕ್ರೋಸಾಫ್ಟ್ ಸಂಸ್ಥೆ ತನ್ನ ಸರ್ಫೆಸ್ ಸರಣಿಯಲ್ಲಿ ಹಲವು ಪ್ರಾಡಕ್ಟ್ಗಳನ್ನ ಪರಿಚಯಿಸಿದೆ. ಇದೀಗ ತನ್ನ ಸರ್ಫೇಸ್ ಲ್ಯಾಪ್ಟಾಪ್ ಗೋ ಮತ್ತು ಸರ್ಫೇಸ್ ಪ್ರೊ ಎಕ್ಸ್ ಅನ್ನು ಪರಿಚಯಿಸಿದೆ. ಇದರಲ್ಲಿ ಸರ್ಫೇಸ್ ಲ್ಯಾಪ್ಟಾಪ್ ಗೋ, ಹೆಸರೇ ಸೂಚಿಸುವಂತೆ, ಸ್ಮಾಲ್ ಸ್ಕ್ರೀನ್, ಕಡಿಮೆ RAM ಮತ್ತು ಶೇಖರಣಾ ಆಯ್ಕೆಗಳನ್ನು ಹೊಂದಿದೆ. ಇದು ಸರ್ಫೇಸ್ ಲ್ಯಾಪ್ಟಾಪ್ 3 ರ ಟೋನ್-ಡೌನ್ ಆವೃತ್ತಿಯಾಗಿದ್ದು, ಇದು ವಿದ್ಯಾರ್ಥಿಗಳನ್ನ ಗುರಿಯಾಗಿರಿಸಿಕೊಂಡು ವಿನ್ಯಾಸಗೊಳಿಸಲಾಗಿದೆ. ಇನ್ನು ಮೈಕ್ರೋಸಾಫ್ಟ್ ಸರ್ಫೇಸ್ ಪ್ರೊ ಎಕ್ಸ್ ಹೆಚ್ಚು ಶಕ್ತಿಶಾಲಿ ಪ್ರೊಸೆಸರ್ ಅನ್ನು ಹೊಂದಿದ್ದು, 2-ಇನ್ -1 ರ ಬ್ಯಾಟರಿ ಅವಧಿಯನ್ನು ಒಳಗೊಂಡಿದೆ.

ಹೌದು, ಮೈಕ್ರೋಸಾಫ್ಟ್ ಸರ್ಫೇಸ್ ಲ್ಯಾಪ್ಟಾಪ್ ಗೋ ಮತ್ತು ಸರ್ಫೇಸ್ ಪ್ರೊ ಎಕ್ಸ್ ಅನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಸರ್ಫೇಸ್ ಲ್ಯಾಪ್ಟಾಪ್ ಗೋ ಲ್ಯಾಪ್ಟಾಪ್ 12.45 ಇಂಚಿನ ಡಿಸ್ಪ್ಲೇಯನ್ನು ಹೊಂದಿದೆ. ಇನ್ನು ಸರ್ಫೇಸ್ ಪ್ರೊ ಎಕ್ಸ್ ಲ್ಯಾಪ್ಟಾಪ್ 13 ಇಂಚಿನ ಡಿಸ್ಪ್ಲೇಯನ್ನು ಹೊಂದಿದೆ. ಇನ್ನುಳಿದಂತೆ ಈ ಲ್ಯಾಪ್ಟಾಪ್ಗಳ ವಿಶೇಷತೆಯೇನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಸರ್ಫೇಸ್ ಲ್ಯಾಪ್ಟಾಪ್ ಗೋ ವಿಶೇಷತೆ
ಸರ್ಫೇಸ್ ಲ್ಯಾಪ್ಟಾಪ್ ಗೋ 1,536x1,024 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಅನ್ನು ಹೊಂದಿದೆ. ಇದು 12.45-ಇಂಚಿನ ಪಿಕ್ಸೆಲ್ ಸೆನ್ಸ್ ಡಿಸ್ಪ್ಲೇ ಹೊಂದಿದೆ. ಅಲ್ಲದೆ ಟಚ್ ಸ್ಕ್ರೀನ್ 10-ಪಾಯಿಂಟ್ ಮಲ್ಟಿ-ಟಚ್ ಅನ್ನು ಬೆಂಬಲಿಸುತ್ತದೆ. ಇನ್ನು ಈ ಲ್ಯಾಪ್ಟಾಪ್ 10 ನೇ-ಜನರಲ್ ಇಂಟೆಲ್ ಕೋರ್ I5-1035G 1 ಪ್ರೊಸೆಸರ್ ಅನ್ನು ಹೊಂದಿದ್ದು, ವಿಂಡೋಸ್ 10 ಹೋಮ್ S ಮೋಡ್ನಲ್ಲಿ ರನ್ ಆಗಲಿದೆ. ಜೊತೆಗೆ ಇದು 3:2 ರಚನೆಯ ಅನುಪಾತವನ್ನು ಒಳಗೊಂಡಿದ್ದು, ಇಂಟೆಲ್ UHD ಗ್ರಾಫಿಕ್ಸ್ ಅನ್ನು ಹೊಂದಿದೆ. ಅಲ್ಲದೆ 4GB RAM, 8GB RAM, ಅಥವಾ 16GB RAM ಅನ್ನು ಹೊಂದಿದ್ದು, 64GB, 128GB ಮತ್ತು 256GB ಇಂಟರ್ ಸ್ಟೋರೇಜ್ ಸಾಮರ್ಥ್ಯವನ್ನು ಹೊಂದಿದೆ.

ಇನ್ನು ಈ ಲ್ಯಾಪ್ಟಾಪ್ 13 ಗಂಟೆಗಳವರೆಗೆ ಬ್ಯಾಟರಿ ಅವಧಿಯನ್ನು ಹೊಂದಿದೆ. ಅಲ್ಲದೆ ಇದು ಕೇವಲ ಒಂದು ಗಂಟೆ ಚಾರ್ಜ್ನೊಂದಿಗೆ ವೇಗವಾಗಿ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. 80% ಪ್ರತಿಶತ ಬ್ಯಾಟರಿಯನ್ನು ನೀಡುತ್ತದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಯುಎಸ್ಬಿ ಟೈಪ್-ಸಿ ಪೋರ್ಟ್, ಯುಎಸ್ಬಿ ಟೈಪ್-ಎ ಪೋರ್ಟ್, 3.5 ಎಂಎಂ ಹೆಡ್ಫೋನ್ ಹ್ಯಾಕ್, ವೈ-ಫೈ, ಮತ್ತು ಬ್ಲೂಟೂತ್ 5.0 ಅನ್ನು ಬೆಂಬಲಿಸಲಿದೆ. ಇದಲ್ಲದೆ 720p ಎಚ್ಡಿ ಎಫ್ 2.0 ಕ್ಯಾಮೆರಾ ಮತ್ತು ಆಂಬಿಯೆಂಟ್ ಲೈಟ್ ಸೆನ್ಸಾರ್ ಅನ್ನು ಸಹ ಒಳಗೊಂಡಿದೆ.

ಮೈಕ್ರೋಸಾಫ್ಟ್ ಸರ್ಫೇಸ್ ಪ್ರೊ ಎಕ್ಸ್ ವಿಶೇಷತೆ
ಮೈಕ್ರೋಸಾಫ್ಟ್ ಸರ್ಫೇಸ್ ಪ್ರೊ ಎಕ್ಸ್ ಲ್ಯಾಪ್ಟಾಪ್ 2,880x1,920 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಹೊಂದಿದೆ. ಇದು 13 ಇಂಚಿನ ಪಿಕ್ಸೆಲ್ ಸೆನ್ಸ್ ಡಿಸ್ಪ್ಲೇಯನ್ನು ಒಳಗೊಂಡಿದೆ. ಇನ್ನು ಈ ಡಿಸ್ಪ್ಲೇ 3: 2 ರಚನೆಯ ಅನುಪಾತ ಮತ್ತು 10-ಪಾಯಿಂಟ್ ಮಲ್ಟಿಟಚ್ ಟಚ್ಸ್ಕ್ರೀನ್ ಹೊಂದಿದೆ. ಇದು ಹೊಸ ಮೈಕ್ರೋಸಾಫ್ಟ್ ಎಸ್ಕ್ಯೂ 2 ಪ್ರೊಸೆಸರ್ ನಿಂದ ನಿಯಂತ್ರಿಸಲ್ಪಡುತ್ತದೆ. ಇನ್ನು ಈ ಲ್ಯಾಪ್ಟಾಪ್ ಬ್ಯಾಟರಿ 15 ಗಂಟೆಗಳವರೆಗೆ ಬಾಳಿಕೆ ಬರಲಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ವೈ-ಫೈ 5, ಬ್ಲೂಟೂತ್ 5.0, ಕ್ವಾಲ್ಕಾಮ್ ಸ್ನಾಪ್ಡ್ರಾಗನ್ ಎಕ್ಸ್ 24 LTE ಮೋಡೆಮ್, ನ್ಯಾನೊ ಸಿಮ್ ಮತ್ತು ಇಸಿಮ್ ಅನ್ನು ಬೆಂಬಲಿಸಲಿದೆ.

ಬೆಲೆ ಮತ್ತು ಲಭ್ಯತೆ
ಮೈಕ್ರೋಸಾಫ್ಟ್ ಸರ್ಫೇಸ್ ಲ್ಯಾಪ್ಟಾಪ್ ಗೋ ಭಾರತದಲ್ಲಿ ಬೆಲೆ ಮತ್ತು ಲಭ್ಯತೆಯನ್ನು ಇನ್ನೂ ಘೋಷಿಸಿಲ್ಲ. ಆದರೆ ಇದು ಯುಎಸ್ನಲ್ಲಿ $549.99 (ಸುಮಾರು 40,300ರೂ.) ಬೆಲೆಯನ್ನು ಹೊಂದಿದೆ. ಇದು ಐಸ್ ಬ್ಲೂ, ಸ್ಯಾಂಡ್ಸ್ಟೋನ್ ಮತ್ತು ಪ್ಲಾಟಿನಂ ಬಣ್ಣದ ಆಯ್ಕೆಗಳಲ್ಲಿ ನೀಡಲಾಗುತ್ತದೆ. ಇನ್ನು ಹೊಸ ಸರ್ಫೇಸ್ ಪ್ರೊ ಎಕ್ಸ್ ಬೆಲೆ ಭಾರತದಲ್ಲಿ 1,49,999 ರೂ ಆಗಿದೆ. ಇದು ಪ್ಲ್ಯಾಟಿನಮ್ ಮತ್ತು ಕಪ್ಪು ಬಣ್ಣದ ಆಯ್ಕೆಗಳಲ್ಲಿ ಬರುತ್ತದೆ.
-
92,999
-
17,999
-
39,999
-
29,400
-
38,990
-
29,999
-
16,999
-
23,999
-
18,170
-
21,900
-
14,999
-
17,999
-
42,099
-
16,999
-
23,999
-
29,495
-
18,580
-
64,900
-
34,980
-
45,900
-
17,999
-
54,153
-
7,000
-
13,999
-
38,999
-
29,999
-
20,599
-
43,250
-
32,440
-
16,190