ಮೈಕ್ರೋಸಾಫ್ಟ್‌ ಟೀಂ ನಿಂದ ಹೊಸ ಮಾದರಿಯ ಫೀಚರ್ಸ್‌ ಬಿಡುಗಡೆ!

|

ಸಾಫ್ಟವೇರ್‌ ದಿಗ್ಗಜ ಎನಿಸಿಕೊಂಡಿರುವ ಮೈಕ್ರೋಸಾಫ್ಟ್‌ ಕಂಪೆನಿ ಈಗಾಗಲೇ ಮೈಕ್ರೋಸಾಫ್ಟ್ನ ವೀಡಿಯೊ ಕಾನ್ಫರೆನ್ಸಿಂಗ್ ಸೇವೆಯನ್ನ ಪರಿಚಯಿಸಿದೆ. ಇದಕ್ಕಾಗಿ ಮೈಕ್ರೋಸಾಫ್ಟ್ ಟೀಂ ಅನ್ನು ಪರಿಚಯಿಸಿದೆ. ಈಗಾಗಲೇ ಮೈಕ್ರೋಸಾಫ್ಟ್‌ ಟೀಂ ಮೂಲಕ ಬಳಕೆದಾರರಿಗೆ ಹಲವು ಹೊಸ ಮಾದರಿಯ ಫೀಚರ್ಸ್‌ಗಳನ್ನ ಪರಿಚಯಿಸಿದೆ. ಸದ್ಯ ಇದೀಗ ಮೈಕ್ರೋಸಾಫ್ಟ್‌ ಟೀಂನಲ್ಲಿ ಮತ್ತೊಂದು ಹೊಸ ಮಾದರಿಯ ಫೀಚರ್ಸ್‌ಗಳನ್ನ ಪರಿಚಯಿಸಿದೆ.

ಮೈಕ್ರೋಸಾಫ್ಟ್‌

ಹೌದು, ಮೈಕ್ರೋಸಾಫ್ಟ್‌ ಕಂಪೆನಿ ತನ್ನ ಬಳಕೆದಾರರಿಗೆ ಹೊಸ ಫೀಚರ್ಸ್‌ ಅನ್ನು ಪರಿಚಯಿಸಿದೆ. ಸದ್ಯ ಬಳಕೆದಾರರು ಟೀಂ ಕಾಲಿಂಗ್‌ ಟೈಂನಲ್ಲಿ ಕಸ್ಟಮ್ ಫೋಟೋಗಳನ್ನು ಬ್ಯಾಂಕ್‌ಗ್ರೌಂಡ್‌ ಚಿತ್ರಗಳಾಗಿ ಬಳಸಿಕೊಳ್ಳಬಹುದಾದ ಹೊಸ ಮಾದರಿಯ ಆಪ್ಡೇಟ್‌ ಅನ್ನು ಮಾಡಿದೆ. ಜೊತೆಗೆ ಮೈಕ್ರೋಸಾಫ್ಟ್ ಟೀಂಗಳ ಉಚಿತ ಆವೃತ್ತಿಯ ಬಳಕೆದಾರರು ಈಗ ಸಭೆಗಳನ್ನು ನಿಗದಿಪಡಿಸಬಹುದಾಗಿದ್ದು, ಗೂಗಲ್ ಕ್ಯಾಲೆಂಡರ್ ಮೂಲಕ ಲಿಂಕ್‌ಗಳನ್ನು ಹಂಚಿಕೊಳ್ಳಬಹುದಾಗಿದೆ. ಸದ್ಯ ಮೈಕ್ರೋಸಾಫ್ಟ್‌ ಪರಿಚಯಿಸಿರುವ ಫೀಚರ್ಸ್‌ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಮೈಕ್ರೋಸಾಫ್ಟ್‌

ಸದ್ಯ ಮೈಕ್ರೋಸಾಫ್ಟ್‌ ಟೀಂ ಪ್ಲಾಟ್‌ಫಾರ್ಮ್‌ಗೆ ಹೊಸ ಮಾದರಿಯ ಆಪ್ಡೇಟ್‌ಗಳನ್ನು ಮಾಡಿದೆ. ಬ್ಯಾಕ್‌ಗ್ರೌಂಡ್‌ ಎಫೆಕ್ಟ್‌, ಅಲ್ಲದೆ ಬಳಕೆದಾರರು ಸ್ವಂತ ಚಿತ್ರಗಳನ್ನು ಅಪ್‌ಲೋಡ್ ಮಾಡುವ ಮೂಲಕ ಅಥವಾ ಆನ್‌ಲೈನ್‌ನಲ್ಲಿ ಲಭ್ಯವಿರುವ ಹಿನ್ನೆಲೆಗಳ ಸಂಗ್ರಹಗಳಲ್ಲಿ ಒಂದನ್ನು ಆರಿಸುವ ಮೂಲಕ ಹಿನ್ನೆಲೆ ಗ್ರಾಹಕೀಯಗೊಳಿಸಬಹುದಾಗಿದೆ ಎಂದು ಕಂಪನಿ ಹೇಳಿಕೊಂಡಿದೆ. ಇದಲ್ಲದೆ ಬ್ಯಾಕ್‌ಗ್ರೌಂಡ್‌ ಡಿಮ್‌ ಮಾಡುವ ಆಯ್ಕೆಯ ಜೊತೆಗೆ, ವೀಡಿಯೊ ಕರೆಯ ಸಮಯದಲ್ಲಿ ವಿಶೇಷ ಬ್ಯಾಕ್‌ಗ್ರೌಂಡ್‌ಗಳನ್ನ ಆಯ್ಕೆ ಮಾಡಲು ಬಳಕೆದಾರರಿಗೆ ಅವಕಾಶ ನೀಡಿದೆ.

ಮೈಕ್ರೋಸಾಫ್ಟ್

ಇದಲ್ಲದೆ ಮೈಕ್ರೋಸಾಫ್ಟ್ ತನ್ನ ಬಳಕೆದಾರರಿಗಾಗಿ ಈವೆಂಟ್-ನಿರ್ದಿಷ್ಟವಾದ ಬ್ಯಾಕ್‌ಗ್ರೌಂಡ್‌ ಸ್ಟೋರೇಜ್‌ ಗಳನ್ನ ಸಹ ಪರಿಚಯಿಸುತ್ತಿದೆ. ಜೊತೆಗೆ ಜೂನ್ 16 ರಿಂದ ಬಳಕೆದಾರರು ವಿಶೇಷ LGBTQI + ಹಿನ್ನೆಲೆ ಫೋಟೋಗಳನ್ನು ಸಹ ಡೌನ್‌ಲೋಡ್ ಮಾಡಬಹುದಾಗಿದೆ. ಅಲ್ಲದೆ ಟೀಂ ವೀಡಿಯೊ ಕರೆಯ ಸಮಯದಲ್ಲಿ ಕಸ್ಟಮ್ ಫೋಟೋವನ್ನು ಅಪ್‌ಲೋಡ್ ಮಾಡಲು, ಬಳಕೆದಾರರು ಡಿಸ್‌ಪ್ಲೇ ಸ್ಕ್ರೀನ್‌ ಮೇಲೆ ಬ್ಲಿಂಕ್‌ ಆಗುವ > ಬ್ಯಾಕ್‌ಗ್ರೌಂಡ್‌ ಎಫೆಕ್ಟ್‌ > ನ್ಯೂ ಆಡ್‌ ಅನ್ನು ಕ್ಲಿಕ್ ಮಾಡಬೇಕಿದೆ. ಇದಲ್ಲದೆ ಮೈಕ್ರೋಸಾಫ್ಟ್ ತನ್ನ ವೀಡಿಯೊ ಕಾನ್ಫರೆನ್ಸಿಂಗ್ ಪ್ಲಾಟ್‌ಫಾರ್ಮ್‌ನ ಉಚಿತ ಆವೃತ್ತಿಗೆ ಹೊಸ ವೈಶಿಷ್ಟ್ಯಗಳನ್ನು ಸಹ ಪರಿಚಯಿಸಿದೆ.

ಮೈಕ್ರೋಸಾಫ್ಟ್‌

ಇನ್ನು ಮೈಕ್ರೋಸಾಫ್ಟ್‌ ಟೀಂ ಉಚಿತ ಆವೃತ್ತಿಯ ಬಳಕೆದಾರರು ಈಗ ಸಭೆಗಳನ್ನು ನಿಗದಿಪಡಿಸಲು ಮತ್ತು ಇನವೈಟ್‌ ಅನ್ನು ಕಳುಹಿಸಲು ಅವಕಾಶವನ್ನ ನೀಡಿದೆ. ಇದಲ್ಲದೆ ಸಭೆಯ ವೇಳಾಪಟ್ಟಿಗಳು ಹಾಗೂ ಟೀಂ ಮೇಟ್‌ಗಳಿಗೆ ಮಿಟಿಂಗ್‌ ಲಿಂಕ್ ಅನ್ನು ಕಾಪಿ ಮಾಡುವ ಅಥವಾ ಗೂಗಲ್ ಕ್ಯಾಲೆಂಡರ್ ಮೂಲಕ ಆಹ್ವಾನವನ್ನು ಕಳುಹಿಸುವ ಆಯ್ಕೆಯನ್ನು ನೀಡಲಾಗಿದೆ. ಜೊತೆಗೆ ಇದೀಗ ಸೈನ್ ಅಪ್ ಆಗುತ್ತಿರುವ ಬಳಕೆದಾರರು ಕಾಲಿಂಗ್‌ ಟೈಂನಲ್ಲಿ ಶೀಘ್ರದಲ್ಲೇ ಲೈವ್ ಶೀರ್ಷಿಕೆಗಳನ್ನು ಬಳಸಲು ಸಾಧ್ಯವಾಗುತ್ತದೆ. ಅಲ್ಲದೆ ಟೀಂ ಕಾಲಿಂಗ್‌ನಲ್ಲಿ ಭಾಗವಹಿಸುವವರ ಮಿತಿಯನ್ನು 250 ಕ್ಕೆ ಹೆಚ್ಚಿಸಲು ಪ್ರಯತ್ನ ಮಾಡುತ್ತಿದ್ದೇವೆ ಎಂದು ಕಂಪನಿ ಹೇಳಿಕೊಂಡಿದೆ.

Most Read Articles
Best Mobiles in India

English summary
Microsoft Teams, the video conferencing service by Microsoft, is getting a host of new updates.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X