ಬಳಕೆದಾರರಿಗೆ ಹೊಸ ಫೀಚರ್ಸ್‌ ಪರಿಚಯಿಸಿದ ಮೈಕ್ರೋಸಾಫ್ಟ್‌ ಟೀಂ!

|

ಸಾಫ್ಟ್‌ವೇರ್‌ ದಿಗ್ಗಜ ಎನಿಸಿಕೊಂಡಿರುವ ಮೈಕ್ರೋಸಾಫ್ಟ್‌ ಈಗಾಗಲೇ ಹಲವು ಮಾದರಿಯ ಅಪ್ಲಿಕೇಶನ್‌ಗಳನ್ನ ಪರಿಚಯಿಸಿದೆ. ಸ್ಮಾರ್ಟ್‌ಪ್ರಡಕ್ಟ್‌ಗಳನ್ನ ಬಿಡುಗಡೆ ಮಾಡಿ ಸೈ ಎನಿಸಿಕೊಂಡಿದೆ. ಆದರೂ ಸಾಫ್ಟ್‌ವೇರ್‌ ಕ್ಷೇತ್ರದಲ್ಲಿ ಭಿನ್ನವಾಗಿ ಗುರುತಿಸಿಕೊಂಡಿರುವ ಮೈಕ್ರೋಸಾಫ್ಟ್‌ ಗುಂಪು ಚಾಟ್‌ ಅನುಕೂಲಕ್ಕಾಗಿ ಮೈಕ್ರೊಸಾಫ್ಟ್‌ ಟೀಂ ಅಪ್ಲಿಕೇಶನ್‌ ಅನ್ನು ಪರಿಚಯಿಸಿರೋದು ನಿಮಗೆಲ್ಲಾ ಗೊತ್ತೇ ಇದೆ. ಇನ್ನು ಲಾಕ್‌ಡೌನ್‌ ಶುರುವಾದ ನಂತರ ಎಲ್ಲಾ ಗ್ರೂಪ್‌ ಚಾಟಿಂಗ್‌, ಗ್ರೂಫ್‌ ವೀಡಿಯೋ ಕಾಲಿಂಗ್‌ ಆಪ್‌ಗಳು ತಮ್ಮ ಹೊಸ ಮಾದರಿಯ ಫೀಚರ್ಸ್‌ಗಳನ್ನ ಪರಿಚಯಿಸಿರೋದು ಸಹ ತಿಳಿದೆ ಇದೆ. ಇದರಲ್ಲಿ ಮೈಕ್ರೊಸಾಫ್ಟ್‌ ಟೀಂ ಕೂಡ ಒಂದಾಗಿದ್ದು, ತನ್ನ ಬಳಕೆದಾರರಿಗೆ ಕಾಲಕಾಲಕ್ಕೆ ತಕ್ಕಂತೆ ಹೊಸ ಮಾದರಿಯ ಫೀಚರ್ಸ್‌ಗಳನ್ನ ಪರಿಚಯಿಸುತ್ತಲೇ ಬಂದಿದೆ.

ಮೈಕ್ರೋಸಾಫ್ಟ್‌

ಹೌದು, ಮೈಕ್ರೋಸಾಫ್ಟ್‌ ತನ್ನ ಬಳಕೆದಾರರಿಗೆ ಇದೀಗ ಮತ್ತೊಂದು ಹೊಸ ಫೀಚರ್ಸ್‌ ಅನ್ನು ಪರಿಚಯಿಸಿದೆ. ಸದ್ಯ ಮೈಕ್ರೋಸಾಫ್ಟ್ ಟೀಂ ವರ್ಕ್‌ಗ್ರೂಪ್ ಚಾಟ್ ಸೇವೆಯಾಗಿದ್ದು, ಇದು ಸ್ಲಾಕ್‌ನಂತಹ ಪ್ರಾಜೆಕ್ಟ್ ಮ್ಯಾನೇಜ್‌ಮೆಂಟ್ ಸಾಫ್ಟ್‌ವೇರ್‌ನಲ್ಲಿ ಪೈಪೋಟಿಯನ್ನ ಒಡ್ಡುತ್ತಿದೆ. ಆರಂಭದಲ್ಲಿ ದೊಡ್ಡ ಮತ್ತು ಸಣ್ಣ ಕಂಪನಿಗಳ ಮೇಲೆ ಅದರ ಬಳಕೆಯ ಮೇಲೆ ಕೇಂದ್ರೀಕರಿಸಿದ ಮೈಕ್ರೋಸಾಫ್ಟ್ ಪ್ರೊಡಕ್ಟಿವಿಟಿ ಸೂಟ್‌ನಲ್ಲಿ ಸಂವಹನಕ್ಕಾಗಿ ಪ್ರಾಥಮಿಕ ಕ್ಲೈಂಟ್ ಆಗಿ ಮಾರ್ಪಟ್ಟಿದೆ. ಸದ್ಯ ಇದೀಗ ಐಒಎಸ್ ಮತ್ತು ಆಂಡ್ರಾಯ್ಡ್‌ಗಾಗಿ ಪ್ರಿವ್ಯೂವ್‌ ಆವೃತ್ತಿಯಲ್ಲಿ ಹೊಸ ಮೈಕ್ರೋಸಾಫ್ಟ್ ಟೀಂ ಮೊಬೈಲ್ ಅಪ್ಲಿಕೇಶನ್ ಅನ್ನು ಪರಿಚಯಿಸಿದ. ಅಷ್ಟಕ್ಕೂ ಇದರ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿದುಕೊಳ್ಳೋಣ ಬನ್ನಿರಿ.

ಮೈಕ್ರೋಸಾಫ್ಟ್‌

ಮೈಕ್ರೋಸಾಫ್ಟ್‌ ತನ್ನ ಮೈಕ್ರೋಸಾಫ್ಟ್‌ ಬಳಕೆದಾರರಿಗೆ ಹೊಸ ಫೀಚರ್ಸ್‌ ಅನ್ನು ಪರಿಚಯಿಸಿದೆ. ಐಒಎಸ್‌ ಮತ್ತು ಆಂಡ್ರಾಯ್ಡ್‌ ವರ್ಷನ್‌ನಲ್ಲಿ ಪ್ರಿವ್ಯೂವ್‌ ಆವೃತ್ತಿಯಲ್ಲಿ ಹೊಸ ಟೀಂ ಮೊಬೈಲ್ ಅಪ್ಲಿಕೇಶನ್‌ ಅನ್ನು ಪರಿಚಯಿಸಿದೆ. ಇದು ಕೇವಲ ಕೆಲಸದ ಬಗ್ಗೆ ಮಾತ್ರ ಚರ್ಚಿಸುವುದಕ್ಕೆ ಮಾತ್ರವಲ್ಲದೆ ಇನ್ನೂ ಹೆಚ್ಚಿನ ವಿಚಾರ ಚರ್ಚೆ ಮಾಡಲು ಬಯಸುವ ಬಳಕೆದಾರರಿಗೆ ಇದು ಉಪಯುಕ್ತವಾಗಲಿದೆ ಎನ್ನಲಾಗಿದೆ. ಅಲ್ಲದೆ ಇದು ಮೊಬೈಲ್‌ ಅಪ್ಲಿಕೇಶನ್‌ ಆಗಿರುವುದರಿಂದ ಇದರಲ್ಲಿ ಸಭೆಯ ಅನುಭವವನ್ನು ಸುಧಾರಿಸುವ ಮೂಲಕ ಸ್ಕೈಪ್ ಅನ್ನು ಬದಲಿಸಿದೆ ಮತ್ತು ವೇಳಾಪಟ್ಟಿ ಸಾಮರ್ಥ್ಯಗಳನ್ನು ಸೇರಿಸಲಾಗಿದೆ. ಕ್ಯಾಲೆಂಡರ್ ಲಭ್ಯತೆಯನ್ನು ಸಂಯೋಜಿಸುತ್ತದೆ.

ಮೈಕ್ರೋಸಾಫ್ಟ್‌

ಇನ್ನು ಮೈಕ್ರೋಸಾಫ್ಟ್‌ ಟೀಂ ಚಾಟ್‌ನಿಂದ ಉತ್ತಮ-ಗುಣಮಟ್ಟದ ವೀಡಿಯೊ ಕಾನ್ಫರೆನ್ಸಿಂಗ್‌ಗೆ ಪರಿವರ್ತಿಸಲು ಇದು ಅನುಕೂಲವಾಗಿದ್ದು. ಮೈಕ್ರೋಸಾಫ್ಟ್ ಟೀಂಗಳನ್ನು ಉಚಿತ ಆವೃತ್ತಿಯಾಗಿ ಬಿಡುಗಡೆ ಮಾಡಲಾಗಿದೆ. ಆದರೆ ಇದು ಈಗ ಆಫೀಸ್ 365 ಸೂಟ್‌ನ ವ್ಯವಹಾರ ಗ್ರಾಹಕರಿಗೆ ಸಾಮಾನ್ಯ ಆವೃತ್ತಿಯನ್ನು ವಿಸ್ತರಿಸಲಾಗಿದೆ. ಅಲ್ಲದೆ ಇದು ಉಚಿತ ಮತ್ತು ಹೆಚ್ಚು ವೈಯಕ್ತಿಕ ಬಳಕೆಯ ಮೇಲೆ ಕೇಂದ್ರೀಕರಿಸಿದೆ. ಇದು ಹಂಚಿದ ಪಟ್ಟಿಗಳು, ದಾಖಲೆಗಳು, ಕ್ಯಾಲೆಂಡರ್‌ಗಳು ಮತ್ತು ಪಠ್ಯ ಚಾಟ್ ಮತ್ತು ವೀಡಿಯೊ ಕಾನ್ಫರೆನ್ಸಿಂಗ್‌ನಂತಹ ವಿಶಿಷ್ಟ ಫೀಚರ್ಸ್‌ಗಳನ್ನು ಒಳಗೊಂಡಿದೆ.

ಮೈಕ್ರೋಸಾಫ್ಟ್

ಇದಲ್ಲದೆ ಟೀಂನಲ್ಲಿ ಹಂಚಿಕೆ ಆಗಿರುವ ಈವೆಂಟ್‌ಗಳು, ಕಾರ್ಯಗಳು ಮತ್ತು ಚಿತ್ರಗಳ ಅಚ್ಚುಕಟ್ಟಾಗಿ ಡ್ಯಾಶ್‌ಬೋರ್ಡ್ ಸಹ ಇದೆ. ವ್ಯವಹಾರಕ್ಕಾಗಿ ಮೈಕ್ರೋಸಾಫ್ಟ್ ಟೀಂ ಗಳ ಉತ್ತಮ ಫೀಚರ್ಸ್‌ಗಳನ್ನು ವೈಯಕ್ತಿಕ ಬಳಕೆಗೆ ತರಲು ಮೈಕ್ರೋಸಾಫ್ಟ್‌ ಕಂಪನಿ ಪ್ರಯತ್ನಿಸುತ್ತಿದೆ. ಜೊತೆಗೆ ಅನೇಕ ಪ್ರತ್ಯೇಕ ಚಾಟ್ ಮತ್ತು ವಿಡಿಯೋ ಕಾನ್ಫರೆನ್ಸಿಂಗ್ ಅಪ್ಲಿಕೇಶನ್‌ಗಳಿವೆ, ಆದರೆ ಐಒಎಸ್ ಮತ್ತು ಆಂಡ್ರಾಯ್ಡ್‌ಗಾಗಿ ಮೈಕ್ರೋಸಾಫ್ಟ್ ಟೀಂ ಗಳ ಮೊಬೈಲ್ ಆವೃತ್ತಿಗಳು ಯಾವುದೇ ಬಳಕೆದಾರರಿಗೆ ವೈಯಕ್ತಿಕ ಮೈಕ್ರೋಸಾಫ್ಟ್ ಖಾತೆಯೊಂದಿಗೆ ಅಪ್ಲಿಕೇಶನ್‌ಗಳಿಗೆ ಲಾಗ್ ಇನ್ ಮಾಡಲು ಅನುಮತಿಸುತ್ತದೆ ಎಂದು ಕಂಪೆನಿ ಹೇಳಿದೆ.

ಮೈಕ್ರೋಸಾಫ್ಟ್

ಅಲ್ಲದೆ ನೀವು ವರ್ಕಿಂಗ್‌ ಖಾತೆಯಿಂದ ಹೋಮ್‌ ಖಾತೆಗೆ ತ್ವರಿತವಾಗಿ ಅಪ್ಲಿಕೇಶನ್‌ಗಳಲ್ಲಿ ಬದಲಾಯಿಸಬಹುದು. ವರ್ಡ್, ಎಕ್ಸೆಲ್ ಮತ್ತು ಪವರ್‌ ಪಾಯಿಂಟ್‌ ನಂತಹ ಇತರ ಆಫೀಸ್ ಅಪ್ಲಿಕೇಶನ್‌ಗಳೊಂದಿಗೆ ಬಳಕೆದಾರರು ವೈಯಕ್ತಿಕ ಆವೃತ್ತಿಯನ್ನು ಸಹ ಬಳಸಬಹುದು. ಇನ್ನು ಹೊಸ ಮೈಕ್ರೋಸಾಫ್ಟ್ ಟೀಂನ ಮೊಬೈಲ್ ಅಪ್ಲಿಕೇಶನ್ ಮುಂದಿನ ಕೆಲವು ವಾರಗಳಲ್ಲಿ ಆಂಡ್ರಾಯ್ಡ್ ಮತ್ತು ಐಒಎಸ್ ನಲ್ಲಿ ಪ್ರಿಪ್ಯೂವ್‌ ಹಂತದಲ್ಲಿ ಲಭ್ಯವಾಗಲಿದೆ. ಬಳಕೆದಾರರ ಪ್ರತಿಕ್ರಿಯೆಯ ಆಧಾರದ ಮೇಲೆ ಹೆಚ್ಚುವರಿ ಫೀಚರ್ಸ್‌ಗಳನ್ನು ಬಿಡುಗಡೆ ಮಾಡಲು ಮೈಕ್ರೋಸಾಫ್ಟ್ ಪ್ಲ್ಯಾನ್‌ ರೂಪಿಸಿದೆ.

Most Read Articles
Best Mobiles in India

Read more about:
English summary
The new Microsoft Teams’ mobile app is rolling out in a preview version for iOS and Android.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X