ಮೈಕ್ರೋಸಾಫ್ಟ್‌ ಟೀಂ ವೆಬ್‌ ಆವೃತ್ತಿಯಲ್ಲಿ ವೀಡಿಯೋ ಕರೆ ಉಚಿತ!

|

ಇತ್ತೀಚಿನ ದಿನಗಳಲ್ಲಿ ವಿಡಿಯೋ ಕಾನ್ಫರೆನ್ಸಿಂಗ್‌ ಆಪ್‌ಗಳು ಸಾಕಷ್ಟು ಜನಪ್ರಿಯತೆಯನ್ನು ಪಡೆದುಕೊಂಡಿವೆ. ಆದರಲ್ಲೂ ಕೊರನಾ ವೈರಸ್‌ನ ಹಾವಳಿ ಹೆಚ್ಚಾದ ನಂತರ ಹೆಚ್ಚಿನ ಜನರು ಮನೆಯಿಂದಲೇ ಕಾರ್ಯನಿರ್ವಹಿಸುತ್ತಿದ್ದು, ವಿಡಿಯೋ ಮೀಟಿಂಗ್‌ ನಡೆಸುವುದಕ್ಕೆ ಈ ಆಪ್‌ಗಳು ಸಾಕಷ್ಟು ಅನುಕೂಲವಾಗಿವೆ. ಈ ನಿಟ್ಟಿನಲ್ಲಿ ಮೈಕ್ರೋಸಾಫ್ಟ್‌ ಟೀಂ ಅಪ್ಲಿಕೇಶನ್‌ ಕೂಡ ಒಂದಾಗಿದೆ. ಮೈಕ್ರೋಸಾಫ್ಟ್‌ ಟೀಂ ಬಳಕೆದಾರರು ತಮ್ಮ ಸ್ನೇಹಿತರು ಮತ್ತು ಕುಟುಂಬ ಸದಸ್ಯರೊಂದಿಗೆ ಸಂಪರ್ಕ ಸಾಧಿಸುವುದನ್ನು ಸಾಕಷ್ಟು ಸುಲಭಗೊಳಿಸಿದೆ. ಇದೀಗ ತನ್ನ ಬಳಕೆದಾರರಿಗೆ ಫ್ರೀ ವೀಡಿಯೋ ಕಾಲ್‌ಗೆ ಅವಕಾಶವನ್ನ ನೀಡಿದೆ.

ವಿಡಿಯೋ

ಹೌದು, ಜನಪ್ರಿಯ ವಿಡಿಯೋ ಕಾನ್ಫೆರೆನ್ಸಿಂಗ್‌ ಪ್ಲಾಟ್‌ಫಾರ್ಮ್‌ ಮೈಕ್ರೋಸಾಫ್ಟ್‌ ಟೀಂ ವೆಬ್ ಮತ್ತು ಡೆಸ್ಕ್‌ಟಾಪ್‌ಗಾಗಿ ಹೊಸ ಆವೃತ್ತಿಯನ್ನ ಪರಿಚಯಿಸಿದೆ. ಮೈಕ್ರೋಸಾಫ್ಟ್ ಟೀಂ ನ ಈ ಆವೃತ್ತಿಯು ತರುವ ಅತ್ಯುತ್ತಮ ಫೀಚರ್ಸ್ ಅಂದರೆ ಎಲ್ಲರಿಗೂ ಉಚಿತ ವೀಡಿಯೊ ಕರೆ ಲಭ್ಯವಾಗಲಿದೆ. ಇನ್ನುಳಿದಂತೆ ಈ ಹೊಸ ಆವೃತ್ತಿಯ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಮೈಕ್ರೋಸಾಫ್ಟ್‌

ಟೆಕ್ ದೈತ್ಯ ಮೈಕ್ರೋಸಾಫ್ಟ್‌ ಡೆಸ್ಕ್‌ಟಾಪ್‌ಗಾಗಿ ಮೈಕ್ರೋಸಾಫ್ಟ್ ಟೀಂ ಗಳನ್ನು ಘೋಷಿಸಿದೆ. ಅಲ್ಲದೆ ವೆಬ್‌ನಲ್ಲಿ ಕರೆಗೆ ಸೇರಲು ಬಳಕೆದಾರರು ಮೈಕ್ರೋಸಾಫ್ಟ್ ಟೀಂಗಳು ಅಥವಾ ಮೈಕ್ರೋಸಾಫ್ಟ್ ಖಾತೆಯನ್ನು ರಚಿಸುವ ಅಗತ್ಯವಿಲ್ಲ ಎಂದು ಕಂಪನಿ ಹೇಳಿದೆ. ವೆಬ್‌ಗಾಗಿ ಮೈಕ್ರೋಸಾಫ್ಟ್ ಟೀಂಗಳು ಗ್ಯಾಲರಿ ವ್ಯೂವ್‌ನಲ್ಲಿ 49 ಸ್ನೇಹಿತರು ಅಥವಾ ಕುಟುಂಬ ಸದಸ್ಯರನ್ನು ಬೆಂಬಲಿಸುತ್ತದೆ ಅಥವಾ ಕಂಪನಿಯು ಟುಗೆದರ್ ಮೋಡ್ ಎಂದು ಕರೆಯುತ್ತದೆ. ಸದ್ಯ ಮೈಕ್ರೋಸಾಫ್ಟ್ ಈ ಫೀಚರ್ಸ್‌ ಅನ್ನು ಪರಿಚಯಿಸಿದ್ದು, ಬಳಕೆದಾರರು ತಮ್ಮ ಪ್ರೀತಿಪಾತ್ರರೊಂದಿಗೆ ಥ್ಯಾಂಕ್ಸ್‌ಗಿವಿಂಗ್‌ಗಾಗಿ ಸಂಪರ್ಕ ಸಾಧಿಸಲು ಸಹಾಯ ಮಾಡುತ್ತದೆ.

ಉಚಿತ

ಇನ್ನು ಉಚಿತ ಬಳಕೆದಾರರಿಗಾಗಿ ಮೈಕ್ರೋಸಾಫ್ಟ್ ಟೀಂ ಗಳ ವೆಬ್ ಆವೃತ್ತಿಯನ್ನು ಬಳಸಲು ಮೊದಲು ಸಭೆಯ ಲಿಂಕ್ ಅನ್ನು ರಚಿಸಬೇಕು. ನಂತರ ಅವನು / ಅವಳು ಸಭೆಗೆ ಸೇರಲು ಬಯಸುವ ಜನರೊಂದಿಗೆ ಶೇರ್‌ಮಾಡಬೇಕು. ಇದಾದ ಮೇಲೆ ಜನರು ಸಭೆಯ ಲಿಂಕ್ ಅನ್ನು ಕ್ಲಿಕ್ ಮಾಡಿ ಮತ್ತು ಸಭೆಗೆ ಸೇರಲು ಸಾಧ್ಯವಾಗುತ್ತದೆ. ಇದರಿಂದಾಗಿ ಸಭೆಗೆ ಸೇರಲು ಅವರು ಮೈಕ್ರೋಸಾಫ್ಟ್ ಟೀಂಗಳ ಖಾತೆಯನ್ನು ರಚಿಸುವ ಅಗತ್ಯವಿಲ್ಲ. ಇನ್ನು ಈ ಉಚಿತ ಸೇವೆಯು ಮೈಕ್ರೋಸಾಫ್ಟ್ ಪ್ಲಾಟ್‌ಫಾರ್ಮ್‌ನಲ್ಲಿ ಹೆಚ್ಚು ಹೆಚ್ಚು ಬಳಕೆದಾರರನ್ನು ಗಳಿಸಲು ಸಹಾಯ ಮಾಡುತ್ತದೆ ಎಂದು ನಿರೀಕ್ಷಿಸಲಾಗಿದೆ.

ಥ್ಯಾಂಕ್ಸ್‌

ಇದಲ್ಲದೆ ಥ್ಯಾಂಕ್ಸ್‌ ಗಿವಿಂಗ್‌ಗಾಗಿ ಜೂಮ್ 40 ನಿಮಿಷಗಳ ವೀಡಿಯೊ ಕರೆ ಮಿತಿಯನ್ನು ಸಹ ತೆಗೆದುಹಾಕುತ್ತಿದೆ. ಗೂಗಲ್ ಮೀಟ್‌ನಂತಹ ಇತರ ವೀಡಿಯೊ ಕರೆ ಮಾಡುವ ಪ್ಲ್ಯಾಟ್‌ಫಾರ್ಮ್‌ಗಳು 60 ನಿಮಿಷಗಳ ಮಿತಿಯನ್ನು ಮತ್ತು ಸಿಸ್ಕೋ ವೆಬೆಕ್ಸ್ 50 ನಿಮಿಷಗಳ ಕಾಲ್ ಮಿತಿಯನ್ನು ಹೊಂದಿದೆ. ಇದೇ ಕಾರಣಕ್ಕೆ ಇದೀಗ ಮೈಕ್ರೋಸಾಫ್ಟ್‌ ಟೀಂ ಕೂಡ ಉಚಿತ ವೀಡಿಯೊ ಕರೆ ಫೀಚರ್ಸ್‌ ಅನ್ನು ಪರಿಚಯಿಸಿದೆ. ಈ ಮೂಲಕ ಕೊರೊನಾ ಹಾವಳಿಯ ಈ ಸಮಯದಲ್ಲಿ ಮನೆಯಿಂದಲೇ ಕಾರ್ಯನಿರ್ವಹಿಸುವ ಜನರಿಗೆ ಉಪಯೋಗವನ್ನು ಕಲ್ಪಿಸಿದೆ.

Most Read Articles
Best Mobiles in India

English summary
To take on Zoom, Google Meet and other video calling platforms Microsoft Teams for web or desktop will allow users to make free calls all day.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X