Just In
Don't Miss
- Automobiles
ಪತ್ನಿ ಕಷ್ಟ ನೋಡಲಾಗದೆ 90 ಸಾವಿರ ಮೌಲ್ಯದ ಮೊಪೆಡ್ ಗಿಫ್ಟ್ ಕೊಟ್ಟ ಭಿಕ್ಷುಕ
- Movies
'ಕೆಜಿಎಫ್ 2' ಕಲೆಕ್ಷನ್ ಬಿತ್ತು: 42ನೇ ದಿನಕ್ಕೆ ಗಳಿಸಿದ್ದೆಷ್ಟು?
- Education
ITBP Recruitment 2022 : 248 ಹೆಡ್ ಕಾನ್ಸ್ಟೇಬಲ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Lifestyle
ಹೀಗೆ ಮಾಡಿ ನೋಡಿ ಐದೇ ನಿಮಿಷದಲ್ಲಿ ನಿಮ್ಮ ಸ್ಟ್ರೆಸ್ ದೂರಾಗುವುದು
- News
ಪ್ಯಾಂಗೊಂಗ್ ತ್ಸೋ ತೀರದಲ್ಲಿ ಚೀನಾ ಅವಳಿ ಸೇತುವೆಗೆ ಭಾರತದ ಪ್ರತ್ಯುತ್ತರ!
- Finance
ಇನ್ಫೋಸಿಸ್ ಸಿಇಒ ವೇತನ ಶೇ.88 ಹೆಚ್ಚಳ, ವಾರ್ಷಿಕ ಗಳಿಕೆಯೆಷ್ಟು?
- Sports
RCB vs LSG: ಎಲಿಮಿನೇಟರ್ನಲ್ಲಿ ಲಕ್ನೋಗೆ ಸೋಲು ತಂದ ಪಾಟಿದಾರ್ಗೆ ಪ್ರಶಸ್ತಿಗಳ ಸುರಿಮಳೆ; ಸಿಕ್ಕ ಹಣವೆಷ್ಟು?
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಮೈಕ್ರೋಸಾಫ್ಟ್ ತೆಕ್ಕೆಗೆ ಆಕ್ಟಿವಿಸನ್ ಬ್ಲಿಝಾರ್ಡ್!..ಗೇಮಿಂಗ್ ಉದ್ಯಮದಲ್ಲೇ ಇದು ದೊಡ್ಡ ಡೀಲ್!
ಟೆಕ್ ದೈತ್ಯ ಮೈಕ್ರೋಸಾಫ್ಟ್ ಸಂಸ್ಥೆಯು ಯುಎಸ್ ಮೂಲದ ಪ್ರಮುಖ ಗೇಮ್ ಡೆವಲಪರ್ ಆಕ್ಟಿವಿಸನ್ ಬ್ಲಿಝಾರ್ಡ್ (Activision Blizzard) ಅನ್ನು ತನ್ನ ತೆಕ್ಕೆಗೆ ಪಡೆದಿರುವುದಾಗಿ ಘೋಷಿಸಿದೆ. ಮೈಕ್ರೋಸಾಫ್ಟ್ ಬರೋಬ್ಬರಿ $68.7 ಶತಕೋಟಿಗೆ ಆಕ್ಟಿವಿಸನ್ ಬ್ಲಿಝಾರ್ಡ್ ಅನ್ನು ಸ್ವಾಧೀನಪಡಿಸಿಕೊಂಡಿದ್ದು, ಇದು ಗೇಮಿಂಗ್ ಉದ್ಯಮ ವಲಯದ ಇತಿಹಾಸದಲ್ಲಿ ಅತಿ ದೊಡ್ಡ ಮೊತ್ತದ ಸ್ವಾಧೀನ ಎನಿಸಲಿದೆ.

ಜನಪ್ರಿಯ ಗೇಮಿಂಗ್ ಡೆವಲಪರ್ ಆಗಿರುವ ಆಕ್ಟಿವಿಸನ್ ಬ್ಲಿಝಾರ್ಡ್ ಈಗ ಮೈಕ್ರೋಸಾಫ್ಟ್ ತೆಕ್ಕೆ ಸೇರಿದೆ. ಮೈಕ್ರೋಸಾಫ್ಟ್ನ ಗೇಮಿಂಗ್ ಡಿವಿಷನ್ ಎಕ್ಸ್ಬಾಕ್ಸ್ ಮತ್ತು ಆಕ್ಟಿವಿಸನ್ ಈ ಎರಡೂ ಸೇರಿ ಮುಂದಿನ ಗೇಮ್ಗಳಿಗಾಗಿ ಒಟ್ಟಿಗೆ ಕೆಲಸ ಮಾಡುವ ಯೋಜನೆಗಳನ್ನು ಘೋಷಿಸಿವೆ. ಮೈಕ್ರೋಸಾಫ್ಟ್ ಪ್ರಕಾರ, ಇದು ಕಂಪನಿಯು ಮೊಬೈಲ್ ಗೇಮಿಂಗ್ ಪೋರ್ಟ್ಫೋಲಿಯೊದಲ್ಲಿ ತನ್ನ ಶಕ್ತಿಯನ್ನು ವೃದ್ಧಿಸಲು ನೆರವಾಗಲಿದೆ. ಇನ್ನು ಈ ಒಪ್ಪಂದವು ಆದಾಯದಿಂದ ವಿಶ್ವದ ಮೂರನೇ ಅತಿದೊಡ್ಡ ಗೇಮಿಂಗ್ ಕಂಪನಿ ಆಗಲಿದೆ ಎಂದು ಮೈಕ್ರೋಸಾಫ್ಟ್ ಹೇಳುತ್ತದೆ.

ಈ ಒಪ್ಪಂದದಿಂದ ಎಕ್ಸ್ಬಾಕ್ಸ್ (Xbox Users) ಗೇಮ್ಪಾಸ್ ಬಳಕೆದಾರರಿಗೆ ಒಳ್ಳೆಯ ಸುದ್ದಿ ಎಂದರೆ ಎಕ್ಸ್ಬಾಕ್ಸ್ ಗೇಮ್ಪಾಸ್ ಬಳಕೆದಾರರು ಎಕ್ಸ್ಬಾಕ್ಸ್ ಮತ್ತು ಪಿಸಿಯಲ್ಲಿ ಆಕ್ಟಿವಿಸನ್ ಗೇಮ್ಗಳನ್ನು ಉಚಿತವಾಗಿ ಪ್ರವೇಶಿಸಲು ಲಭ್ಯ. ವಾರ್ಕ್ರಾಫ್ಟ್, ಓವರ್ವಾಚ್, ಡಯಾಬ್ಲೊ, ಕ್ಯಾಂಡಿ ಕ್ರಶ್ ಮತ್ತು 'ಕಾಲ್ ಆಫ್ ಡ್ಯೂಟಿ'ನಂತಹ ಹಲವಾರು ಫ್ರಾಂಚೈಸಿಗಳ ಗೇಮ್ಗಳು ಎಕ್ಸ್ಬಾಕ್ಸ್ ಗೇಮ್ಪಾಸ್ ಚಂದಾದಾರರಿಗೆ ಲಭ್ಯವಿರುತ್ತವೆ.
ಮೈಕ್ರೋಸಾಫ್ಟ್ 2021 ರಲ್ಲಿ ವಿಡಿಯೋ ಗೇಮ್ ಸ್ಟುಡಿಯೋ ಆದ ಬೆಥೆಸ್ಡಾವನ್ನು ಸ್ವಾಧೀನಪಡಿಸಿಕೊಂಡಿತು. ಇದು ಫಾಲ್ಔಟ್, ಡೆತ್ಲೂಪ್ ಮತ್ತು ಡೂಮ್ ಎಟರ್ನಲ್ಸ್ನಂತಹ ಗೇಮ್ಗಳಿಂದ ಜನಪ್ರಿಯತೆ ಗಳಿಸಿತ್ತು. ಇನ್ನು ಈ ಒಪ್ಪಂದಕ್ಕಾಗಿ ಮೈಕ್ರೋಸಾಫ್ಟ್ $7.5 ಬಿಲಿಯನ್ ಪಾವತಿಸಿತು. ಇದೀಗ ಆಕ್ಟಿವಿಸನ್ ಬ್ಲಿಝಾರ್ಡ್ಗೆ ಮೈಕ್ರೋಸಾಫ್ಟ್ ಪಾವತಿ ಶೇಕಡಾ 10 ರಷ್ಟಾಗಿದೆ.

ಮೈಕ್ರೋಸಾಫ್ಟ್ ಮತ್ತು ಆಕ್ಟಿವಿಸನ್ ಬ್ಲಿಝಾರ್ಡ್ ವಿವಿಧ ದೇಶಗಳಿಂದ ಸಾಕಷ್ಟು ನಿಯಂತ್ರಕ ಅನುಮೋದನೆಗಳನ್ನು ಪೂರ್ಣಗೊಳಿಸಲು ಸಮಯಾವಕಾಶ ಬೇಕಿರುತ್ತದೆ. ಹೀಗಾಗಿ ಮೈಕ್ರೋಸಾಫ್ಟ್ ಮತ್ತು ಆಕ್ಟಿವಿಸನ್ ಬ್ಲಿಝಾರ್ಡ್ ನಡುವಿನ ಈ ಒಪ್ಪಂದವು 2023 ರ ಆರ್ಥಿಕ ವರ್ಷದಲ್ಲಿ ಮುಕ್ತಾಯಗೊಳ್ಳುವ ನಿರೀಕ್ಷೆಯಿದೆ ಎಂದು ಮೈಕ್ರೋಸಾಫ್ಟ್ ಹೇಳುತ್ತದೆ. ಅಂದಹಾಗೇ ಈ ಒಪ್ಪಂದವು ನಗದು ವ್ಯವಹಾರ ಎನ್ನಲಾಗಿದೆ.
ವಿಡಿಯೋ ಗೇಮಿಂಗ್ ಕ್ಷೇತ್ರವು ಬಿಲಿಯನ್-ಡಾಲರ್ ಉದ್ಯಮ ಆಗಿದೆ. ಈ ಒಪ್ಪಂದದಿಂದಾಗಿ ಮೈಕ್ರೋಸಾಫ್ಟ್ ಎಕ್ಸ್ಬಾಕ್ಸ್ಗೆ ಮುಂದಿನ ದಿನಗಳಲ್ಲಿ ರೋಚಕ ಗೇಮ್ಗಳು ಸೇರ್ಪಡೆ ಆಗುವ ನಿರೀಕ್ಷೆಗಳಿವೆ. ಹಾಗೆಯೇ ಮೈಕ್ರೋಸಾಫ್ಟ್ ಕಂಪನಿಗೆ ಮತ್ತಷ್ಟು ಹೆಚ್ಚಿನ ಗೇಮಿಂಗ್ ಪ್ರಿಯ ಗ್ರಾಹಕರು ಆಕರ್ಷಕ ಆಗುವ ಆಟಗಳನ್ನು ಮಾಡುವ ನಿರೀಕ್ಷೆಗಳು ಇವೆ.
-
54,535
-
1,19,900
-
54,999
-
86,999
-
49,975
-
49,990
-
20,999
-
1,04,999
-
44,999
-
64,999
-
20,699
-
49,999
-
11,499
-
54,999
-
7,999
-
8,980
-
17,091
-
10,999
-
34,999
-
39,600
-
25,750
-
33,590
-
27,760
-
44,425
-
13,780
-
1,25,000
-
45,990
-
1,35,000
-
82,999
-
17,999