ಕಂಪ್ಯೂಟರ್‌ ಮತ್ತು ಲ್ಯಾಪ್‌ಟಾಪ್‌ ಬಳಕೆದಾರರೇ ಇದನ್ನು ತಪ್ಪದೇ ತಿಳಿಯಿರಿ!

|

2020ರ ಜನವರಿ 14ರಿಂದ ಮೈಕ್ರೋಸಾಫ್ಟ್ ವಿಂಡೋಸ್ 7 ಆಪರೇಟಿಂಗ್‌ ಸಿಸ್ಟಮ್‌ ಗೆ ಸೆಕ್ಯುರಿಟಿ ಮತ್ತು ಟೆಕ್ನಿಕಲ್ ಅಪ್‌ಡೇಟ್‌ ಸಿಗಲ್ಲ ಎಂದು ಮೈಕ್ರೋಸಾಫ್ಟ್ ತಿಳಿಸಿದೆ. ಕಂಪ್ಯೂಟರ್ ಅಥವಾ ಲ್ಯಾಪ್ಟಾಪ್‌ಗಳಲ್ಲಿ ವಿಂಡೋಸ್ 7 ಆಪರೇಟಿಂಗ್ ಸಿಸ್ಟಮ್ ಅನ್ನು ಬಳಸುತ್ತಿರುವವರು ಕೂಡಲೇ ಪರಿಷ್ಕೃತ ಹೊಸ ಆವೃತ್ತಿಗೆ ಬದಲಾಗುವಂತೆ ಮೈಕ್ರೋಸಾಫ್ಟ್ ಸಂಸ್ಥೆ ಸೂಚಿಸಿದ್ದು, ಭಾರತದಲ್ಲಿ ಶೇ. 41ರಷ್ಟು ಕಂಪ್ಯೂಟರ್‌ಗಳು ಈಗಲೂ ವಿಂಡೋಸ್‌ 7 ನಲ್ಲಿ ನಡೆಯುತ್ತಿರುವುದರಿಂದ ದೇಶದಲ್ಲಿ ಈ ಬಗ್ಗೆ ಹೆಚ್ಚು ಮಾಹಿತಿ ಸಿಗುವಂತೆ ಮಾಡಬೇಕಿದೆ.

ಮೈಕ್ರೊಸಾಫ್ಟ್‌

ಹೌದು, ಮೈಕ್ರೊಸಾಫ್ಟ್‌ 2020ರ ಜನವರಿ 14ರಿಂದ ವಿಂಡೋಸ್‌ 7 ಆಪರೇಟಿಂಗ್‌ ಸಿಸ್ಟಮ್‌ಗೆ ತನ್ನ ಸಪೋರ್ಟ್ ಅನ್ನು ಸ್ಥಗಿತಗೊಳಿಸಲಿದೆ. ಮೈಕ್ರೋಸಾಫ್ಟ್ ಈ ಹಿಂದೆಯೇ ವಿಂಡೋಸ್ 7 ಬಳಸುತ್ತಿರುವವರು ಅಪ್‌ಗ್ರೇಡ್‌ ಮಾಡಿಕೊಳ್ಳಲು ಸೂಚನೆ ನೀಡಿತ್ತು ಮತ್ತು ಇದಕ್ಕಾಗಿ ಬಹಳಷ್ಟು ಸಮಯಾವಕಾಶವನ್ನು ಸಹ ನೀಡುತ್ತಾ ಬಂದಿತ್ತು. ಇದೀಗ ಕಂಪೆನಿ ಮುಂದಿನ ವರ್ಷದ ಆರಂಭದಿಂದಲೇ ವಿಂಡೋಸ್ ‌7 ಗೆ ಆಪರೇಟಿಂಗ್‌ಗೆ ಸಿಸ್ಟಮ್‌ಗೆ ಮೈಕ್ರೋಸಾಫ್ಟ್‌ನಿಂದ ಯಾವುದೇ ರೀತಿಯ ಸಪೋರ್ಟ್ ಇರುವುದಿಲ್ಲ ಎಂದು ಅಧಿಕೃತವಾಗಿ ಹೇಳಿದೆ.

ವಿಂಡೋಸ್‌ 7

ವಿಂಡೋಸ್‌ 7 ಅನ್ನು ಜ.14ರ ನಂತರವೂ ಸಾಫ್ಟ್‌ವೇರ್‌ ಮತ್ತು ಸೆಕ್ಯುರಿಟಿ ಅಪ್‌ಡೇಟ್‌ ಮಾಡದೆ ಬಳಸಿದರೆ ವೈರಸ್‌ ದಾಳಿಗೆ ಕಂಪ್ಯೂಟರ್‌ ಸಿಲುಕುವ ಸಾಧ್ಯತೆ ಇದೆ. ಹಲವಾರು ವರ್ಷಗಳ ಹಳೆಯ ಕಂಪ್ಯೂಟರ್‌ಗಳು ಹೊಸ ವಿಂಡೋಸ್‌ 10 ಸಿಸ್ಟಮ್‌ಗೆ ಹೊಂದಿಕೆಯಾಗಲಾರದು. ಆಗ ಹೊಸ ಪಿಸಿ ತೆಗೆದುಕೊಳ್ಳಬೇಕಾದ ಅನಿವಾರ್ಯತೆ ಸೃಷ್ಟಿಯಾಗಲಿದೆ. ಸೈಬರ್ ಸೆಕ್ಯುರಿಟಿ ದೃಷ್ಟಿಯಿಂದ ಸಮಸ್ಯೆಗಳು ಎದುರಾದರೆ ಕಂಪನಿಯ ಕಸ್ಟಮರ್ ಸಪೋರ್ಟ್ ಬಳಕೆದಾರರಿಗೆ ರದ್ದಾಗುತ್ತದೆ. ಹೀಗೆ ಸಾಕಷ್ಟು ಸಮಸ್ಯೆಗಳು ಬಳಕೆದಾರರಿಗೆ ಎದುರಾಗುತ್ತವೆ.

ವಿಂಡೋಸ್‌ 10

ಬಳಕೆದಾರರು ಹಳೆಯ ವಿಂಡೋಸ್‌ 7 ಬದಲಿಗೆ ವಿಂಡೋಸ್‌ 10 ಸಾಫ್ಟ್‌ವೇರ್‌ಗೆ ಅಪ್‌ಡೇಟ್‌ ಆಗುವಂತೆ ಮೈಕ್ರೊಸಾಫ್ಟ್‌ ಮನವಿ ಮಾಡಿದೆ. ಹೊಸ ಪಿಸಿಯಲ್ಲಿ (ಕಂಪ್ಯೂಟರ್‌) ವಿಂಡೋಸ್‌ 10 ಅಳವಡಿಸಿ ಬಳಸುವುದು ಉತ್ತಮ. ಹಳೆಯ ಕಂಪ್ಯೂಟರ್‌ನಲ್ಲೂ ವಿಂಡೋಸ್‌ 10 ಅಪ್‌ಡೇಟ್‌ ಮಾಡಬಹುದು. ಆದರೆ ಅದನ್ನು ತಾನು ರೆಕಮೆಂಡ್ ಮಾಡುವುದಿಲ್ಲ, ಹೊಸ ಪಿಸಿ ಉತ್ತಮ ಆಯ್ಕೆ ಎಂದು ಕಂಪೆನಿ ತಿಳಿಸಿದೆ. ಇನ್ನು ನೀವೀಗಲೂ ವಿಂಡೋಸ್ 7 ಬಳಸುತ್ತಿದ್ದರೆ, ಪ್ರಸ್ತುತ ಹೆಚ್ಚು ಬಳಕೆಯಲ್ಲಿರುವ ವಿಂಡೋಸ್ 10 ಆಪ್ರೇಟಿಂಗ್ ಸಿಸ್ಟಂಗೆ ಅಪ್‌ಡೇಟ್ ಆದರೆ ಒಳ್ಳೆಯದು.

ಸಾಫ್ಟ್‌ವೇರ್‌

ವಿಂಡೋಸ್‌ 10 ಸಾಫ್ಟ್‌ವೇರ್‌ಗೆ ಅಪ್‌ಡೇಟ್‌ ಆಗಲು ಲೈಸೆನ್ಸ್ ಇರುವ ಮೂಲ ಒಎಸ್ ಸಿಸ್ಟಮ್‌ ಇದ್ದರೆ ಸಮಸ್ಯೆ ಎದುರಾಗುವುದಿಲ್ಲ. ಲೈಸೆನ್ಸ್ ಇರುವ ಮೂಲ ಒಎಸ್‌ ಸಿಸ್ಟಮ್‌ ಹೊಂದಿದ್ದರೆ ಉಚಿತವಾಗಿ ವಿಂಡೋಸ್‌ 10ಕ್ಕೆ ಬದಲಿಸಿಕೊಳ್ಳಬಹುದು. ಇಲ್ಲದಿದ್ದರೆ ವಿಂಡೋಸ್‌ 10 ಖರೀದಿಸಬೇಕು. ಹೊಸ ವಿಂಡೋಸ್‌ 10 ಖರೀದಿಗೆ 8,000 ರೂ.ಗಳಿಂದ 9,000 ರೂ. ವೆಚ್ಚವಾಗುತ್ತದೆ. ಹೊಸ ಪಿಸಿ ಖರೀದಿಗಾಗಿ ಕೈಗೆಟಕುವ ದರಗಳಲ್ಲಿ ಕಂಪ್ಯೂಟರ್ ಉಪಕರಣಗಳು ಸಿಗುವಂತೆ ಮಾಡಲು ಡೆಲ್‌ ಮತ್ತು ಎಚ್‌ಪಿ ಕಂಪೆನಿಗಳನ್ನು ಮೈಕ್ರೋಸಾಫ್ಟ್ ಸಂಸ್ಥೆ ಕೋರಿದೆ.

Most Read Articles
Best Mobiles in India

English summary
Microsoft has confirmed to end the support for Windows 7 OS by 2020.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X