Just In
Don't Miss
- News
"ನಕಲಿ ಪತ್ರಕರ್ತರು, ಯುಟೂಬ್ ಚಾನೆಲ್ ಗಳ ಮೇಲೆ ಸೂಕ್ತ ಕ್ರಮ"
- Movies
ನಟಿ ರಚಿತಾ ರಾಮ್ ಸಹೋದರಿ ಮದುವೆಯಲ್ಲಿ ನಿಖಿಲ್ ಕುಮಾರ್
- Automobiles
ಇನ್ಮುಂದೆ ನಿಮ್ಮ ಮನೆ ಬಾಗಿಲಿಗೆ ಬರಲಿದೆ ಡೀಸೆಲ್..!
- Sports
ತಮಿಳುನಾಡು ಪ್ರೀಮಿಯರ್ ಲೀಗ್ನಲ್ಲಿ ನಡೆದ ಬೆಟ್ ಮೌಲ್ಯವೆಷ್ಟು ಗೊತ್ತ?!
- Education
ರೆಪ್ಕೊ ಬ್ಯಾಂಕ್ ನಲ್ಲಿ 15 ಹುದ್ದೆಗಳ ನೇಮಕಾತಿ
- Finance
7,000 ರುಪಾಯಿ ಗುಜರಿ ಕಾರಿಗೆ 7 ಕೋಟಿ ಕೊಟ್ಟು ಖರೀದಿಸಿದ್ದ ಎಲಾನ್ ಮಸ್ಕ್
- Lifestyle
ರುದ್ರಾಕ್ಷಿ ಮಾಲೆ ಧರಿಸುವವರು ಗಮನಿಸಲೇಬೇಕಾದ ಅಂಶಗಳಿವು
- Travel
ಹಿಮಾಚಲ ಪ್ರದೇಶದ ಈ ಜಲಪಾತಗಳು ನಿಮ್ಮನ್ನು ಬೇರೊಂದು ರಮ್ಯಲೋಕಕ್ಕೆ ಕೊಂಡೊಯ್ಯುವುದು ಖಂಡಿತ
ಪುಟ್ಟ ಗ್ರಹವೊಂದಕ್ಕೆ ರಾಜ್ಯದ ವಿದ್ಯಾರ್ಥಿ ಹೆಸರಿಟ್ಟು ಅಪರೂಪದ ಗೌರವ!..ಯಾರದು ಗೊತ್ತಾ?
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ವಿದ್ಯಾರ್ಥಿಯ ಹೆಸರನ್ನು ಆಕಾಶದಂಗಳದ ಪುಟ್ಟ ಗ್ರಹವೊಂದಕ್ಕೆ (ಮೈನರ್ ಪ್ಲಾನೆಟ್) ಇಡುವ ಮೂಲಕ ರಾಜ್ಯದ ವಿದ್ಯಾರ್ಥಿಯೋರ್ವನಿಗೆ ಅಪರೂಪದ ಗೌರವವನ್ನು ಸಲ್ಲಿಸಲಾಗಿದೆ. ಪುತ್ತೂರಿನ ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ದ್ವಿತೀಯ ವಿಜ್ಞಾನ ವಿಭಾಗದದಲ್ಲಿ ಓದುತ್ತಿರುವ 'ಸ್ವಸ್ತಿಕ್ ಪದ್ಮ' ಅವರ ಹೆಸರು ಈಗ ಒಂದು ಪುಟ್ಟಗ್ರಹದ ಹೆಸರಾಗಿದೆ.
ಹೌದು, ಮೆಸಾಚ್ಯುಸೆಟ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಲಿಂಕನ್ ಲ್ಯಾಬೋರೇಟರಿ ಆಯಂಡ್ ಇಂಟರ್ನ್ಯಾಶನಲ್ ಆಸ್ಟ್ರೋನಾಮಿಕಲ್ ಯೂನಿಯನ್ ಇಂತಹದೊಂದು ಗೌರವವನ್ನು ಪ್ರಧಾನ ಮಾಡಿದ್ದು, ಅಂತಾರಾಷ್ಟ್ರೀಯ ಮಟ್ಟದ ಐಎಸ್ಇಎಫ್-2018 (ಇಂಟರ್ನ್ಯಾಶನಲ್ ಸೈನ್ಸ್ ಆಯಂಡ್ ಎಂಜಿನಿಯರಿಂಗ್ ಫೇರ್- 2018)ರಲ್ಲಿ ಅವರು ಮಾಡಿದ ಸಾಧನೆಯನ್ನು ಪರಿಗಣಿಸಿ ಈ ಗೌರವವನ್ನು ನೀಡಲಾಗಿದೆ.
ಈ ಮೂಲಕ ಸ್ವಸ್ತಿಕ್ ಪದ್ಮ ಅವರು 2019ರ ಮೇ ತಿಂಗಳಲ್ಲಿ ನಡೆಯುವ ಗೂಗಲ್ ಸೈನ್ಸ್ ಫೇರ್ನಲ್ಲಿ ಭಾಗವಹಿಸಲು ಸಹ 'ಸ್ವಸ್ತಿಕ್ ಪದ್ಮ' ಅವರು ಅರ್ಹತೆ ಪಡೆದಿದ್ದಾರೆ. ಹಾಗಾದರೆ, ಯಾರು ಈ ಸ್ವಸ್ತಿಕ್ ಪದ್ಮ? ಪುಟ್ಟ ಗ್ರಹವೊಂದಕ್ಕೆ ಪುತ್ತೂರಿನ ವಿಧ್ಯಾರ್ಥಿಯೋರ್ವನ ಹೆಸರಿಟ್ಟಿದ್ದು ಏಕೆ?, ಗೂಗಲ್ ಸೈನ್ಸ್ ಫೇರ್ನಲ್ಲಿ ಭಾಗವಹಿಸುತ್ತಿರುವ ಸ್ವಸ್ತಿಕ್ ಪದ್ಮ ಅವರ ಮುಂದಿನ ಯೋಜನೆ ಏನು ಎಂಬುದನ್ನು ಮುಂದೆ ಓದಿ ತಿಳಿಯಿರಿ.

ಯಾರು ಈತ ಸ್ವಸ್ತಿಕ್ ಪದ್ಮ?
ಪುತ್ತೂರಿನ ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ದ್ವಿತೀಯ ವಿಜ್ಞಾನ ವಿಭಾಗದದಲ್ಲಿ ಓದುತ್ತಿರುವ 'ಸ್ವಸ್ತಿಕ್ ಪದ್ಮ' ಅವರು ಬಂಟ್ವಾಳ ತಾಃ ಕೆದಿಲ ಮುರ್ಗಜೆ ಶ್ರೀರಾಮ ಭಟ್ ಎಂ. ಮತ್ತು ಮಲ್ಲಿಕಾ ದಂಪತಿ ಪುತ್ರ. ಈ ಹಿಂದೆ ಎರಡು ಬಾರಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ಪ್ರತಿನಿಧಿಸಿದ ಹೆಗ್ಗಳಿಕೆ ಹೊಂದಿರುವ ಇವರು ದೇಶದ ಹೆಮ್ಮೆಯ ಬಾಲ ವಿಜ್ಞಾನ ಸಾಧಕ.!

ಸ್ವಸ್ತಿಕ್ ಪದ್ಮ ಸವರ ಸಾಧನೆಗಳು ಏನು?
2017ರಲ್ಲಿ ಇಂಟರ್ನ್ಯಾಷನಲ್ ಸೈನ್ಸ್ ಆಂಡ್ ಎಂಜಿನಿಯರಿಂಗ್ ಫೇರ್ನಲ್ಲಿ ಪುನರ್ಬಳಕೆ ಆಗದ ಪ್ಲಾಸ್ಟಿಕ್ ಸ್ಲ್ಯಾಗ್ ಬಳಸಿ ಕಬ್ಬಿಣಕ್ಕಿಂತಲೂ ಗಟ್ಟಿಯಾದ ವಸ್ತುವೊಂದನ್ನು ತಯಾರಿಸಿದ್ದರು. 2018ರಲ್ಲಿ ಮಕ್ಕಳ ಅಪೌಷ್ಟಿಕತೆಯನ್ನು 6 ತಿಂಗಳ ಮೊದಲೇ ಕಂಡು ಹಿಡಿಯುವ ಹಾಗೂ ಬಾಯಿಯ ಕ್ಯಾನ್ಸರ್ ಅನ್ನು ಬೇಗನೇ ಕಂಡುಹಿಡಿಯು ಪೇಪರ್ ಸ್ಲಿಪ್ ಅನ್ನು ಕಂಡುಹಿಡಿದಿದ್ದರು.

ರಾಷ್ಟ್ರಪತಿ ಅವರಿಂದ ಬಾಲ ಪುರಸ್ಕಾರ ಪ್ರಶಸ್ತಿ!
ಈ ಹಿಂದೆ ಎರಡು ಬಾರಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ಪ್ರತಿನಿಧಿಸಿದ ಹೆಗ್ಗಳಿಕೆ ಹೊಂದಿರುವ ಇವರು, 2017ರ ನ.14ರಂದು ಭಾರತದ ರಾಷ್ಟ್ರಪತಿ ಅವರಿಂದ ಬಾಲ ಪುರಸ್ಕಾರ ಪಡೆದುಕೊಂಡಿದ್ದರು. ಎನ್ಸಿಎಸ್ಸಿ ಯುವ ವಿಜ್ಞಾನಿ ಪ್ರಶಸ್ತಿ, ಅಹ್ಮದಾಬಾದ್ನಲ್ಲಿ ನಡೆದ ಪ್ಲಾಸ್ಟಿಕ್ ಎಕ್ಸಿಬಿಷನ್ನಲ್ಲಿ ಅಂ.ರಾ. ಪ್ಲಾಸ್ಟ್ ಐಕಾನ್ ಅವಾರ್ಡ್ ಅನ್ನು ಸಹ ಪಡೆದಿದ್ದಾರೆ.

ಪುಟ್ಟ ಗ್ರಹಕ್ಕೆ ಸ್ವಸ್ತಿಕ್ ಹೆಸರಿಟ್ಟಿದ್ದೇಕೆ?
ಕೇವಲ 2 ವರ್ಷಗಳಲ್ಲಿ ಹಲವು ಸಾಧನೆಗಳನ್ನು ಮಾಡಿದ ಸ್ವಸ್ತಿಕ್ ಪದ್ಮ ಅವರು ಪುಟ್ಟ ಗ್ರಹ ಒಂದಕ್ಕೆ ಹೆಸರಿಡಲು ಹಲವು ಕಾರಣಗಳಿದ್ದವು. ಆದರೆ, ಅಂತರರಾಷ್ಟ್ರೀಯ ಮಟ್ಟದ ವಿಜ್ಞಾನ ಮತ್ತು ಎಂಜಿನಿಯರಿಂಗ್ ಮೇಳದಲ್ಲಿ ಅವರು ಸಾಧಿಸಿದ ಸಾಧನೆಗಳನ್ನು ಗಣನೆಗೆ ತೆಗೆದುಕೊಂಡು ಈ ಗೌರವಾರ್ಥವನ್ನು ಸಲ್ಲಿಸಲಾಗಿದೆ ಎಂದು ಐಎಸ್ಇಎಫ್-2018ಯಿಂದ ತಿಳಿದುಬಂದಿದೆ.

ಗೌರವ ದೇಶಕ್ಕೆ ಸಲ್ಲಬೇಕು.
ಪುಟ್ಟಗ್ರಹಕ್ಕೆ ನನ್ನ ಹೆಸರು ಇಡುತ್ತಿರುವುದು ನಿಜಕ್ಕೂ ಒಂದು ಹೆಮ್ಮೆಯ ವಿಷಯ. 85 ದೇಶಗಳ 2,450 ವಿದ್ಯಾರ್ಥಿಗಳು ಈ ಅಂತಾರಾಷ್ಟ್ರೀಯ ಫೇರ್ನಲ್ಲಿ ಭಾಗವಹಿಸುತ್ತಾರೆ. ಇಲ್ಲಿ ಭಾಗವಹಿಸುವಾಗ ಮೊದಲು ನಮ್ಮ ದೇಶದ ಹೆಸರನ್ನೇ ಪ್ರಸ್ತಾಪಿಸುತ್ತಾರೆ. ಆದ್ದರಿಂದ ಈ ಗೌರವ ದೇಶಕ್ಕೆ ಸಲ್ಲಬೇಕು ಎಂದು ವಿಜ್ಞಾನ ಸಾಧಕರಾದ ಸ್ವಸ್ತಿಕ್ ಪದ್ಮ ಅವರು ಹೇಳಿದ್ದಾರೆ.

ಗೂಗಲ್ ಸೈನ್ಸ್ ಫೇರ್ನಲ್ಲಿ ಅವಕಾಶ
ಸ್ವಸ್ತಿಕ್ 2019ರ ಮೇ ತಿಂಗಳಲ್ಲಿ ನಡೆಯುವ ಗೂಗಲ್ ವಿಜ್ಞಾನ ಉತ್ಸವದಲ್ಲಿ ಭಾಗವಹಿಸುವ ಅರ್ಹತೆ ಪಡೆದಿದ್ದಾರೆ. ಅಲ್ಲದೆ ಈ ಸಂದರ್ಭ 'ಡೆಸಾಲ್: ಡೆವಲಪ್ಮೆಂಟ್ ಆಫ್ ಎ ನೋವೆಲ್ ಆಂಡ್ ಫಿಸಿಬಲ್ ಡೆಸಾಲಿನೇಶನ್ ಡಿವೈಸ್' ಎಂಬ ಪ್ರಬಂಧವನ್ನು ಕೂಡಾ ಮಂಡಿಸಲಿದ್ದಾರೆ. ಭಾರತದ ಕೀರ್ತಿಯನ್ನು ಮತ್ತೆ ಮುಗಿಲುಮುಟ್ಟಿಸುವ ಹಂಬಲದಲ್ಲಿ ಸ್ವಸ್ತಿಕ್ ಪದ್ಮ ಅವರಿದ್ದಾರೆ.
-
29,999
-
14,999
-
28,999
-
34,999
-
1,09,894
-
15,999
-
36,990
-
79,999
-
71,990
-
49,999
-
14,999
-
9,999
-
64,900
-
34,999
-
15,999
-
25,999
-
46,354
-
19,999
-
17,999
-
9,999
-
18,200
-
18,270
-
22,300
-
33,530
-
14,030
-
6,990
-
20,340
-
12,790
-
7,090
-
17,090