ಮೊಬೈಲ್‌ನಲ್ಲಿ ಡೇಟಾ ಸಮಸ್ಯೆ ಎದುರಿಸುತ್ತಿದ್ದೀರಾ?..ಹಾಗಿದ್ರೆ, ಈ ಟಿಪ್ಸ್ ನಿಮಗೆ ಸಹಾಯಕ!

|

ಸದ್ಯ ಸ್ಮಾರ್ಟ್‌ಫೋನ್ ಪ್ರತಿಯೊಬ್ಬರ ಅಗತ್ಯ ಸಾಧನ ಎನಿಸಿಕೊಂಡಿದ್ದು, ಅನೇಕ ಕೆಲಸಗಳನ್ನು ಇಂಟರ್ನೆಟ್‌ ಬಳಕೆ ಮಾಡಿ ಸ್ಮಾರ್ಟ್‌ಫೋನ್‌ ಮೂಲಕವೇ ಮಾಡಿ ಮುಗಿಸುತ್ತಾರೆ. ಆದರೆ ಇಂಟರ್ನೆಟ್ ಸರಿಯಾಗಿ ಕೆಲಸ ಮಾಡಬೇಕು. ಆದರೆ ಕೆಲವೊಮ್ಮೆ ಡೇಟಾ ತೊಂದರೇ ಅಥವಾ ನೆಟ್‌ವರ್ಕ್ ಸಮಸ್ಯೆಯಿಂದ ಇಂಟರ್ನೆಟ್ ಬಳಕೆಯಲ್ಲಿ ಅಡಚಣೆ ಆಗುವ ಸಾಧ್ಯತೆಗಳು ಇರುತ್ತವೆ. ಆದರೆ ಈ ಸಮಸ್ಯೆಯನ್ನು ಸರಿಪಡಿಸಲು ಕೆಲವು ಉಪಯುಕ್ತ ಮಾರ್ಗಗಳಿವೆ.

ಮೊಬೈಲ್‌ನಲ್ಲಿ ಡೇಟಾ ಸಮಸ್ಯೆ ಎದುರಿಸುತ್ತಿದ್ದೀರಾ?..ಈ ಟಿಪ್ಸ್ ನಿಮಗೆ ಸಹಾಯಕ!

ಹೌದು, ಕೆಲವು ವೇಳೆ ಡೇಟಾ ಪ್ಯಾಕ್‌ ಸೌಲಭ್ಯ ಇದ್ದರೂ ಸಹ ಮೊಬೈಲ್‌ನಲ್ಲಿ ಡೇಟಾ ಸರಿಯಾಗಿ ಕೆಲಸ ಮಾಡುವುದುದೇ ಇಲ್ಲ. ಅದಕ್ಕೆ ಹಲವು ಭಿನ್ನ ಕಾರಣಗಳು ಇರುತ್ತವೆ. ಇಂತಹ ವೇಳೆ ಸೆಟ್ಟಿಂಗ್‌ನಲ್ಲಿ ಕೆಲವು ಬದಲಾವಣೆಗಳನ್ನು ಮಾಡುವ ಮೂಲಕ ಅಥವಾ ಪರಿಶೀಲಿಸುವ ಮೂಲಕ ಸಮಸ್ಯೆಯಿಂದ ಸರಿಪಡಿಸಬಹುದು. ಹಾಗಾದರೇ ಮೊಬೈಲ್‌ನಲ್ಲಿ ಡೇಟಾ ಸರಿಯಾಗಿ ಕಾರ್ಯ ನಿರ್ವಹಿಸದಿದ್ದಾಗ ಕೆಲವು ಕ್ರಮಗಳನ್ನು ಅನುಸರಿಸುವ ಮೂಲಕ ಸರಿಪಡಿಸಬಹುದು. ಈ ಬಗ್ಗೆ ಮುಂದೆ ನೋಡೋಣ ಬನ್ನಿರಿ.

ಫ್ಲೈಟ್ ಮೋಡ್ ಅನ್ನು ಸಕ್ರಿಯಗೊಳಿಸಿ ಮತ್ತೆ ಆಫ್‌ ಮಾಡಿ
ಮೊಬೈಲ್ ಡೇಟಾ ಕಾರ್ಯನಿರ್ವಹಿಸುತ್ತಿದ್ದರೆ ಅದನ್ನು ಸರಿಪಡಿಸಲು ಫ್ಲೈಟ್ ಮೋಡ್ ಆನ್‌-ಆಫ್‌ ಮಾಡುವುದು ಮತ್ತೊಂದು ಪರಿಣಾಮಕಾರಿ ಮಾರ್ಗವಾಗಿದೆ. ಫ್ಲೈಟ್ ಮೋಡ್ ಅನ್ನು ಸಕ್ರಿಯಗೊಳಿಸಲು ಬಳಕೆದಾರರು ಫೋನ್‌ ಸೆಟ್ಟಿಂಗ್‌ ಮೆನುಗೆ ನೋಟಿಫಿಕೇಶನ್‌ ಸ್ಲೈಡ್‌ನಲ್ಲಿಯೂ ಮಾಡಬಹುದು.

ಮೊಬೈಲ್‌ನಲ್ಲಿ ಡೇಟಾ ಸಮಸ್ಯೆ ಎದುರಿಸುತ್ತಿದ್ದೀರಾ?..ಈ ಟಿಪ್ಸ್ ನಿಮಗೆ ಸಹಾಯಕ!

ಮೊಬೈಲ್ ಡೇಟಾವನ್ನು ನಿಷ್ಕ್ರಿಯಗೊಳಿಸಿ ಮತ್ತೆ ಆನ್ ಮಾಡುವುದು
ಕೆಲಸ ಮಾಡದ ಮೊಬೈಲ್ ಇಂಟರ್ನೆಟ್ ಅನ್ನು ಸರಿಪಡಿಸಲು ಸುಲಭವಾದ ಮಾರ್ಗವೆಂದರೆ ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿನ ಮೊಬೈಲ್ ಡೇಟಾ ಆಯ್ಕೆಯನ್ನು ಸ್ವಿಚ್ ಆಫ್ ಮಾಡಿ ಮತ್ತು ಕೆಲವು ಸೆಕೆಂಡುಗಳ ನಂತರ ಅದನ್ನು ಮತ್ತೆ ಸಕ್ರಿಯಗೊಳಿಸುವುದು. ಹೀಗೆ ಮಾಡಲು ಬಳಕೆದಾರರು ಫೋನ್ ಸೆಟ್ಟಿಂಗ್‌ಗಳ ಮೆನು ಅಥವಾ ನೋಟಿಫಿಕೇಶನ್‌ ಸ್ಲೈಡ್‌ನಲ್ಲಿಯೂ ಮಾಡಬಹುದು.

ಸ್ಮಾರ್ಟ್‌ಫೋನ್ ರೀ-ಸ್ಟಾರ್ಟ್‌ ಮಾಡುವುದು
ಮೊಬೈಲ್ ಇಂಟರ್ನೆಟ್ ಅನ್ನು ಹೆಚ್ಚಿಸಲು ಸಹಾಯ ಮಾಡುವ ಮತ್ತೊಂದು ಸರಳ ಮಾರ್ಗವೆಂದರೆ ಸ್ಮಾರ್ಟ್‌ಫೋನ್ ರೀ-ಸ್ಟಾರ್ಟ್‌ ಮಾಡುವುದಾಗಿದೆ. ಇದು ನೆಟ್‌ವರ್ಕ್ ಸಮಸ್ಯೆ ಅಥವಾ ಇನ್ನಾವುದೇ ಆಗಿರಲಿ, ಫೋನ್ ಅನ್ನು ರೀ-ಸ್ಟಾರ್ಟ್‌ ಮಾಡುವ ಮೂಲಕ ಮೊಬೈಲ್ ಫೋನ್‌ನಲ್ಲಿನ ಸಮಸ್ಯೆಯನ್ನು ಪರಿಹರಿಸಲು ಸಹಾಯ ಮಾಡುತ್ತದೆ. ಲ್ಯಾಪ್‌ಟಾಪ್‌ಗಳು, ಪಿಸಿಗಳು ಅಥವಾ ಯಾವುದೇ ಗ್ಯಾಜೆಟ್‌ನಲ್ಲಿಯೂ ಈ ಕ್ರಮ ಉತ್ತಮ.

ಮೊಬೈಲ್‌ನಲ್ಲಿ ಡೇಟಾ ಸಮಸ್ಯೆ ಎದುರಿಸುತ್ತಿದ್ದೀರಾ?..ಈ ಟಿಪ್ಸ್ ನಿಮಗೆ ಸಹಾಯಕ!

ಡೇಟಾ ಅವಧಿ ಒಮ್ಮೆ ಚೆಕ್ ಮಾಡುವುದು
ಡೇಟಾ ಸರಿಯಾಗಿ ವರ್ಕ್ ಮಾಡದೆ ಇದ್ದಾಗ, ಬಳಕೆದಾರರು ಮೊಬೈಲ್ ಡೇಟಾ ಯೋಜನೆಯನ್ನು ಒಮ್ಮೆ ಪರಿಶೀಲಿಸುವುದು ಉತ್ತಮ. ಏಕೆಂದರೇ ಒಮ್ಮೆಮ್ಮೆ ಮೊಬೈಲ್ ರೀಚಾರ್ಜ್ ಪ್ಯಾಕ್ ಅವಧಿ ಮುಗಿದಿರುವುದು ಬಳಕೆದಾರರಿಗೆ ತಿಳಿದಿರುವುದಿಲ್ಲ.

ಸಿಮ್ ಕಾರ್ಡ್ ತೆಗೆದು ಹಾಕಿ
ಮೊಬೈಲ್ ಡೇಟಾ ವೇಗವನ್ನು ಸರಿಪಡಿಸಲು ಮತ್ತೊಂದು ಪರಿಣಾಮಕಾರಿ ಮಾರ್ಗವೆಂದರೆ ನಿಮ್ಮ ಮೊಬೈಲ್ ಫೋನ್‌ನಿಂದ ಸಿಮ್ ಕಾರ್ಡ್ ತೆಗೆದುಕೊಂಡು ಮತ್ತೆ ಇನ್‌ಸರ್ಟ್‌ ಮಾಡುವುದು. ಮೊಬೈಲ್ ಡೇಟಾ ಸರಿಯಾಗಿ ಕೆಲಸ ಮಾಡಲು ಪ್ರಯತ್ನಿಸುವ ಮಾರ್ಗಗಳಲ್ಲಿ ಇದು ಸಹ ಒಂದಾಗಿದೆ.

Most Read Articles
Best Mobiles in India

English summary
Mobile Data Not Working Properly? Follow These Tips To Fix The Issue.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X