ಮೊಬೈಲ್‌ನಲ್ಲಿಯೇ ಅತ್ಯುತ್ತಮ ಫೋಟೊ ತೆಗೆಯುವ ಕಲೆ ನಿಮ್ಮಲ್ಲಿದೆಯೇ?..ಹಾಗಿದ್ರೆ ಈ ಸ್ಟೋರಿ ನೋಡಿ!!

|

ಸ್ಮಾರ್ಟ್‌ಫೋನ್ ಬಳಕೆ ಹೆಚ್ಚಾದಂತೆ ಸ್ಮಾರ್ಟ್‌ಫೋನ್ ಕ್ಯಾಮೆರಾದಲ್ಲಿಯೇ ಫೋಟೋಗ್ರಫಿ ಹುಚ್ಚು ಹಿಡಿಸಿಕೊಂಡಿರುವವರು ಹಲವರಿದ್ದಾರೆ.! ಇವರು ಸ್ಮಾರ್ಟ್‌ಫೋನ್ ಕ್ಯಾಮೆರಾದಲ್ಲಿಯೇ ತೆಗೆದ ಒಂದು ಚಿತ್ರದಲ್ಲಿ ನೂರಾರು ಭಾವನೆಗಳನ್ನು ಅರಳಿಸುವಂತಹ ಕೌಶಲ್ಯವನ್ನು ಸಹ ಹೊಂದಿರುತ್ತಾರೆ ಎಂದರೆ ತಪ್ಪಾಗಲಾರದು.!!

ಹಾಗಾಗಿ, ಇಂತಹ ಸ್ಮಾರ್ಟ್‌ಫೋನ್ ಕ್ಯಾಮೆರಾ ಫೋಟೊಗ್ರಫಿ ಪ್ರಿಯರಿಗೆ ಚೆನ್ನೈನ ಅಮೆರಿಕ ಕಾನ್ಸಲೇಟ್ ಜನರಲ್ ಕಚೇರಿಯು ಸಿಹಿಸುದ್ದಿ ನೀಡಿದೆ.! ಮೊಬೈಲ್ ಫೋನ್ ಮೂಲಕ ಫೋಟೊಗ್ರಫಿ ಕಲೆ ಗುರುತಿಸಲು ಚೆನ್ನೈನ ಅಮೆರಿಕ ಕಾನ್ಸಲೇಟ್ ಜನರಲ್ "ಮೊಬೈಲ್ ಫೋನ್ ಫೊಟೊ" ಸ್ಪರ್ಧೆ ಆಯೋಜಿಸಿದೆ.!!

ಮೊಬೈಲ್‌ನಲ್ಲಿಯೇ ಅತ್ಯುತ್ತಮ ಫೋಟೊ ತೆಗೆಯುವ ಕಲೆ ನಿಮ್ಮಲ್ಲಿದೆಯೇ?

ಎಲ್ಲಾ ಮೊಬೈಲ್ ಬಳಕೆದಾರರು ಈ ಸ್ಪರ್ಧೆಯಲ್ಲಿ ಉಚಿತವಾಗಿ ಭಾಗವಹಿಸಿ ತಮ್ಮ ಫೋಟೊಗಳನ್ನು ಕಳುಹಿಸಬಹುದಾಗಿದೆ. ಹಾಗಾದರೆ, ಸ್ಪರ್ಧೆಗೆ ಫೋಟೊಗಳನ್ನು ಕಳುಹಿಸುವುದು ಹೇಗೆ? ಪ್ರಶಸ್ತಿ ಆಯ್ಕೆ ಹೇಗಿರಲಿದೆ ಎಂನಬುದರ ಪೂರ್ತಿ ಮಾಹಿತಿಯನ್ನು ತಿಳಿಯಲು ಮುಂದೆ ಓದಿ.!!

ಸ್ಪರ್ಧೆಯಲ್ಲಿ ಭಾಗವಹಿಸುವ ಅರ್ಹತೆ!?

ಸ್ಪರ್ಧೆಯಲ್ಲಿ ಭಾಗವಹಿಸುವ ಅರ್ಹತೆ!?

ಚೆನ್ನೈನ ಅಮೆರಿಕ ಕಾನ್ಸಲೇಟ್ ಜನರಲ್ ಕಚೇರಿಯು ಆಯೋಜಿಸಿರುವ ಮೊಬೈಲ್ ಫೋನ್ ಫೊಟೊ ಸ್ಪರ್ಧೆಯಲ್ಲಿ ತಮಿಳುನಾಡು, ಕರ್ನಾಟಕ, ಕೇರಳ, ಪುದುಚೇರಿ, ಅಂಡಮಾನ್-ನಿಕೋಬಾರ್ ನಿವಾಸಿಗಳು ಮಾತ್ರ ಭಾಗಿಯಾಗಬಹುದು. ಮತ್ತು ನಿರ್ಧಿಷ್ಟ ವಿಷಯದ ಮೇಲೆ ಮಾತ್ರ ಚಿತ್ರಗಳನ್ನು ಕಳುಹಿಸಬೇಕು.!!

ಫೆಬ್ರುವರಿ 1ರಿಂದ ಫೆಬ್ರುವರಿ 15ರವರೆಗೆ’!!

ಫೆಬ್ರುವರಿ 1ರಿಂದ ಫೆಬ್ರುವರಿ 15ರವರೆಗೆ’!!

‘ನನಗೆ ಸ್ಫೂರ್ತಿ ತುಂಬಿದ ಮಹಿಳೆ' (ವುಮನ್ ಹು ಇನ್‌ಸ್ಪೈರ್ಸ್‌ ಮಿ) ವಿಷಯದ ಅಡಿ ಮೊಬೈಲ್ ಫೋನ್‌ನಲ್ಲಿ ತೆಗೆದ ಮೂರು ಫೋಟೊಗಳನ್ನು ಸ್ಪರ್ಧೆಗೆ ಕಳುಹಿಸಬೇಕು. ಇದಕ್ಕಾಗಿ ಫೆಬ್ರುವರಿ 1ರಿಂದ ಫೆಬ್ರುವರಿ 15ರವರೆಗೆ ಸಮಯಾವಕಾಶವನ್ನು ನೀಡಲಾಗಿದೆ.!!

Xiaomi Mi A1 : ಶಿಯೋಮಿಯ ಮೊದಲ ಡ್ಯುಯಲ್ ಕ್ಯಾಮೆರಾ ಫೋನ್: ಮಿ A1 ಫಸ್‌ಲುಕ್
ಪರಿಶ್ರಮ, ಧೈರ್ಯ ಹಾಗೂ ಪ್ರಗತಿ’!!

ಪರಿಶ್ರಮ, ಧೈರ್ಯ ಹಾಗೂ ಪ್ರಗತಿ’!!

‘ನನಗೆ ಸ್ಫೂರ್ತಿ ತುಂಬಿದ ಮಹಿಳೆ' (ವುಮನ್ ಹು ಇನ್‌ಸ್ಪೈರ್ಸ್‌ ಮಿ) ವಿಷಯದ ಅಡಿ ಕಳುಹಿಸುವ ಮೊಬೈಲ್ ಚಿತ್ರಗಳು ಮಹಿಳೆಯ ಪರಿಶ್ರಮ, ಧೈರ್ಯ ಹಾಗೂ ಪ್ರಗತಿಯನ್ನು ಪ್ರತಿಫಲಿಸುವಂತಿರಬೇಕು. ಅಂದರೆ, ಮೂರು ಫೋಟೊಗಳು ವಿಭನ್ನವಾಗಿರುವ ಭಾವನೆಗಳನ್ನು ಹೊತ್ತಿರಬೇಕು ಎಂಬರ್ಥವಿರಬಹುದು.!!

ಪ್ರಶಸ್ತಿ ಆಯ್ಕೆ ಹೇಗಿರಲಿದೆ?

ಪ್ರಶಸ್ತಿ ಆಯ್ಕೆ ಹೇಗಿರಲಿದೆ?

ನೀವು ಕಳುಹಿಸಿದ ಮೊಬೈಲ್ ಫೋಟೊಗಳನ್ನು ಖ್ಯಾತ ಛಾಯಾಚಿತ್ರಗ್ರಾಹಕರು ಹಾಗೂ ತಜ್ಞರು ಆಯ್ಕೆ ಮಾಡಲಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಆನ್‌ಲೈನ್ ಮತದಾನದ ಮೂಲಕ ಮೂವರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗುತ್ತದೆ.!!

ಅಮೆರಿಕನ್ ಸೆಂಟರ್‌ನಲ್ಲಿ ಪ್ರದರ್ಶನ!!

ಅಮೆರಿಕನ್ ಸೆಂಟರ್‌ನಲ್ಲಿ ಪ್ರದರ್ಶನ!!

ಆನ್‌ಲೈನ್ ಮತದಾನದ ಮೂಲಕ ಪ್ರಶಸ್ತಿ ಗೆದ್ದ ಫೋಟೊಗಳನ್ನು ಅಮೆರಿಕನ್ ಸೆಂಟರ್‌ನಲ್ಲಿ ಪ್ರದರ್ಶಿಸಲಾಗುತ್ತದೆ. ಮಾರ್ಚ್ ತಿಂಗಳಿಡೀ ಶಾಲಾ ಕಾಲೇಜುಗಳು, ಶಾಪಿಂಗ್ ಮಾಲ್‌ಗಳಲ್ಲಿ ಈ ಚಿತ್ರಗಳನ್ನು ಪ್ರದರ್ಶಿಸಲಾಗುವುದಲ್ಲದೇ ಪ್ರಶಸ್ತಿ ಗೆದ್ದವರಿಗೆ ಪ್ರಮಾಣಪತ್ರ ನೀಡಲಾಗುತ್ತದೆ.!! ಹೆಚ್ಚಿನ ಮಾಹಿತಿಗೆ ವೆಬ್‌ಸೈಟ್ https://www.facebook.com/chennai.usconsulate/events/ ಗೆ ಭೇಟಿ ನೀಡಿ.!!

Most Read Articles
Best Mobiles in India

English summary
The U.S. Consulate General in Chennai invites you to participate in a mobile phone photo contest commemorating International Woman’s Day on March 8.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X