ಪ್ರಧಾನಿ ಅನಾವರಣ ಮಾಡಿದ ನೇತಾಜಿ ಪ್ರತಿಮೆಯ ವಿಶೇಷತೆ ಏನ್‌ ಗೊತ್ತಾ?

|

ದೇಶದೆಲ್ಲೆಡೆ ಜನವರಿ 23ರಂದು ನೇತಾಜಿ ಸುಬಾಷ್‌ ಚಂದ್ರ ಬೋಸ್‌ ಅವರ 125ನೇ ಜನ್ಮದಿನಾಚರಣೆಯನ್ನು ಆಚರಿಸಲಾಗಿದೆ. ಇದೇ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ದೆಹಲಿಯ ಇಂಡಿಯಾ ಗೇಟ್‌ನಲ್ಲಿ ನೇತಾಜಿಯವರ ಪ್ರತಿಮೆಯನ್ನು ಉದ್ಘಾಟನೆ ಮಾಡಿದ್ದಾರೆ. ಈ ಮೂಲಕ ನೇತಾಜಿ ಸುಬಾಷ್‌ ಚಂದ್ರ ಬೋಸ್‌ರವರಿಗೆ ಗೌರವ ಸಲ್ಲಿಸಲಾಗಿದೆ. ಇನ್ನು ಈ ಪ್ರತಿಮೆ ಸಾಕಷ್ಟು ವಿಶೇಷತೆಯನ್ನು ಹೊಂದಿದ್ದು, ಇದು ಹೊಲೊಗ್ರಾಮ್‌ ಪ್ರತಿಮೆಯಾಗಿದೆ. ಗ್ರಾನೈಟ್‌ ಪ್ರತಿಮೆಯನ್ನು ಪ್ರತಿಷ್ಟಾಪಿಸುವ ತನಕ ಹೊಲೊಗ್ರಾಮ್‌ ಪ್ರತಿಮೆ ಇಂಡಿಯಾಗೇಟ್‌ನಲ್ಲಿರಲಿದೆ.

ನೇತಾಜಿ

ಹೌದು, ಜನವರಿ 23ರಂದು ಇಂಡಿಯಾ ಗೇಟ್‌ನಲ್ಲಿ ಪ್ರಧಾನಿ ಮೋದಿ ಉದ್ಘಾಟಿಸಿದ ನೇತಾಜಿ ಪ್ರತಿಮೆ ಹೊಲೊಗ್ರಾಮ್‌ ಪ್ರತಿಮೆಯಾಗಿದೆ. ನಿಜವಾದ ಪ್ರತಿಮೆ ನಿರ್ಮಾಣ ಹಂತದಲ್ಲಿರುವುದರಿಂದ ಹೊಲೊಗ್ರಾಮ್‌ ಪ್ರತಿಮೆಯನ್ನು ಸ್ಥಾಪಿಸಲಾಗಿದೆ. ಈ ಹೊಲೊಗ್ರಾಮ್‌ ಪ್ರತಿಮೆ ಸಾಕಷ್ಟು ವಿಶೇಷವಾಗಿದ್ದು ನೈಜ ಪ್ರತಿಮೆ ಮಾದರಿಯಲ್ಲಿ ಕಾಣಲಿದೆ. ಹಾಗಾದ್ರೆ ಹೊಲೊಗ್ರಾಮ್‌ ಪ್ರತಿಮೆಯ ವಿಶೇಷತೆ ಏನು? ಹೊಲೊಗ್ರಾಮ್‌ ಪ್ರತಿಮೆಯನ್ನು ಸ್ಥಾಪಿಸುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಹೊಲೊಗ್ರಾಮ್ ಎಂದರೇನು?

ಹೊಲೊಗ್ರಾಮ್ ಎಂದರೇನು?

ಹೊಲೊಗ್ರಾಮ್‌ ಎಂದರೆ ವರ್ಚುವಲ್‌ ತ್ರಿಡಿ ಚಿತ್ರವಾಗಿದೆ. ಅಂದರೆ ನೈಜ ವಸ್ತುಗಳಂತೆಯೆ ಪ್ರತಿಬಿಂಬಿಸುವ ಬೆಳಕಿನ ಕಿರಣಗಳ ಸಹಾಯದಿಂದ ರಚಿಸಲಾದ ವರ್ಚುವಲ್ 3D ಚಿತ್ರಗಳಾಗಿವೆ. ಈ ಹೊಲೊಗ್ರಾಮ್‌ ಚಿತ್ರಗಳು ಸಾಕಷ್ಟು ನೈಜವಾಗಿ ಕಾಣಲಿದ್ದು, ಇದು ತ್ರಿಡಿ ಚಿತ್ರ ಎಂದು ಯಾರಿಗೂ ಅನಿಸುವುದಲ್ಲ. ಪ್ರಸ್ತುತ ನೈಜ ಪ್ರತಿಮೆ ಇನ್ನು ನಿರ್ಮಾಣ ಹಂತದಲ್ಲಿರುವುದರಿಂದ ಹೊಲೊಗ್ರಾಮ್ ಪ್ರತಿಮೆಯನ್ನು ಸ್ಥಾಪಿಸಲಾಗಿದೆ. ಇದರ ಹಿಂದಿನ ಉದ್ದೇಶ ಎಂದರೆ ಚಿತ್ರವನ್ನು ನೈಜವಾಗಿ ಮತ್ತು ಎಲ್ಲಾ ಕಡೆಯಿಂದ ಗೋಚರಿಸುವ ರೀತಿಯಲ್ಲಿ ಪ್ರದರ್ಶಿಸುವುದಾಗಿದೆ.

ನೇತಾಜಿಯವರ ಹೊಲೊಗ್ರಾಮ್‌ ಪ್ರತಿಮೆ ಹೇಗಿದೆ?

ನೇತಾಜಿಯವರ ಹೊಲೊಗ್ರಾಮ್‌ ಪ್ರತಿಮೆ ಹೇಗಿದೆ?

ಪ್ರಧಾನ ಮಂತ್ರಿ ಕಚೇರಿ ನೀಡಿರುವ ಮಾಹಿತಿ ಪ್ರಕಾರ ನೇತಾಜಿಯವರ ಹೊಲೊಗ್ರಾಮ್ ಪ್ರತಿಮೆ 30,000 ಲ್ಯೂಮೆನ್ಸ್ 4K ಪ್ರೊಜೆಕ್ಟರ್‌ನಿಂದ ಚಾಲಿತವಾಗಿದೆ. ಈ ಪ್ರತಿಮೆಯನ್ನು ಗ್ರಾನೈಟ್ ಪ್ರತಿಮೆಯನ್ನು ಸಂಪೂರ್ಣವಾಗಿ ಅಭಿವೃದ್ಧಿಪಡಿಸುವವರೆಗೆ ಇರಿಸಲಾಗುತ್ತದೆ ಎನ್ನಲಾಗಿದೆ. ಅಲ್ಲದೆ ಈ ಹೊಲೊಗ್ರಾಮ್‌ ಪ್ರತಿಮೆಯನ್ನು ಸಂದರ್ಶಕರಿಗೆ ಗೋಚರಿಸದ ರೀತಿಯಲ್ಲಿ "90% ಪಾರದರ್ಶಕ" ಹೊಲೊಗ್ರಾಫಿಕ್ ಸ್ಕ್ರೀನ್‌ ಹಾಕಲಾಗಿದೆ ಎಂದು ಹೇಳಲಾಗಿದೆ.

ಹೊಲೊಗ್ರಾಮ್

ಇನ್ನು ಹೊಲೊಗ್ರಾಮ್ ಪ್ರತಿಮೆಯ ಗಾತ್ರವು 28 ಅಡಿ ಎತ್ತರ ಮತ್ತು 6 ಅಡಿ ಅಗಲವಿದೆ. ಇದು ನಿಜವಾದ ಗ್ರಾನೈಟ್ ಪ್ರತಿಮೆಯಂತೆಯೇ ಕಾಣುತ್ತದೆ. ಈ ಪ್ರತಿಮೆಯು ಪ್ರತಿಮೆಯು 30,000 ಲುಮೆನ್‌ಗಳ ಪ್ರಕಾಶಮಾನ ಮಟ್ಟವನ್ನು ತಲುಪಿಸುವ ಸಾಮರ್ಥ್ಯವನ್ನು ಹೊಂದಿರುವ 4K ಪ್ರೊಜೆಕ್ಟರ್‌ನಿಂದ ಚಾಲಿತವಾಗುತ್ತದೆ. ಈ ಗ್ರಾಫಿಕ್ ಮಾದರಿಯನ್ನು ನ್ಯಾಷನಲ್ ಗ್ಯಾಲರಿ ಆಫ್ ಮಾಡರ್ನ್ ಆರ್ಟ್‌ನ ತಂಡವು ಅದರ ಡೈರೆಕ್ಟರ್ ಜನರಲ್ ಅದ್ವೈತ ಗಡನಾಯಕ್ ಅವರ ನೇತೃತ್ವದಲ್ಲಿ ವಿನ್ಯಾಸಗೊಳಿಸಿದೆ. ಸದ್ಯ ನೇತಾಜಿ ಅವರ ಹೊಲೊಗ್ರಾಮ್ ಪ್ರತಿಮೆಯನ್ನು ಸ್ಥಾಪಿಸಲು ಖರ್ಚು ಮಾಡಿದ ಬೆಲೆಯ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಆದರೆ ಗೇಟ್‌ ವೇ ಆಪ್‌ ಇಂಡಿಯಾದಲ್ಲಿ ನೋಡುವವರಿಗೆ ನೇತಾಜಿಯವರ ಪ್ರತಿಮೆ ಗ್ರಾನೈಟ್‌ ಪ್ರತಿಮೆಯ ರೀತಿಯಲ್ಲಿಯೇ ಕಾಣುತ್ತಿದೆ ಎನ್ನಲಾಗಿದೆ.

ಹೊಲೊಗ್ರಾಮ್

ಹೊಲೊಗ್ರಾಮ್ ಪ್ರತಿಮೆಯನ್ನು ರಚಿಸಲು ಪ್ರೊಜೆಕ್ಟರ್ ಜೊತೆಗೆ, 3D ಚಿತ್ರವನ್ನು ಮಾಡಲು ಪಾರದರ್ಶಕ ಹೊಲೊಗ್ರಾಫಿಕ್ ಪರದೆಯ ಅಗತ್ಯವಿದೆ. ಈ ಹೊಲೊಗ್ರಾಫಿಕ್ ಪ್ರತಿಮೆ ಯಾರಿಗೂ ಕೂಡ ತ್ರಿಡಿ ಚಿತ್ರದಂತೆ ಕಾಣುವುದಿಲ್ಲ. ಇದೇ ಕಾರಣಕ್ಕೆ ಹೊಲೊಗ್ರಾಮ್‌ ಪ್ರತಿಮೆಯನ್ನು ಅನಾವರಣಗೊಳಿಸಲಾಗಿದೆ. ಇನ್ನು ಈ ಹೊಲೊಗ್ರಾಫಿಕ್ ಸ್ಕ್ರೀನ್ ಗುಣಮಟ್ಟದ 3D ಚಿತ್ರವು 'ನೈಸರ್ಗಿಕವಾಗಿ' ಗಾಳಿಯಲ್ಲಿ ತೇಲಲಿದೆ. ಆದರೆ ಇದು ವಾಸ್ತವಿಕವಾಗಿ ಮತ್ತು ಎಲ್ಲಾ ಕಡೆಯಿಂದ ಗೋಚರಿಸುತ್ತದೆ. ನೀವು ಅದರ ಸುತ್ತಲೂ ನಡೆಯಲು ಸಾಧ್ಯವಾಗುತ್ತದೆ ಮತ್ತು 3D ಚಿತ್ರವು ನೈಜ ವಸ್ತುವಿನಂತೆ ಕಾಣಲಿದೆ.

Most Read Articles
Best Mobiles in India

Read more about:
English summary
Modi Unveils Netaji Subhash Chandra Bose's Hologram At India Gate: How Does It Work?

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X