Just In
Don't Miss
- Automobiles
ಬರೋಬ್ಬರಿ 40 ವೆರಿಯೆಂಟ್ಗಳನ್ನು ಹೊಂದಿರಲಿದೆ ಹೊಸ ಮಹೀಂದ್ರಾ ಸ್ಕಾರ್ಪಿಯೋ-ಎನ್
- News
ಬಿಜೆಪಿಯ ರಾಷ್ಟ್ರಪತಿ ಅಭ್ಯರ್ಥಿ ದ್ರೌಪದಿಗೆ ಬಿಎಸ್ಪಿ ಬೆಂಬಲ
- Finance
ಅತೀ ಕಡಿಮೆ ಬಡ್ಡಿದರದಲ್ಲಿ ವೈಯಕ್ತಿಕ ಸಾಲ ನೀಡುತ್ತೆ ಈ ಬ್ಯಾಂಕುಗಳು!
- Sports
1983ರ ವಿಶ್ವಕಪ್ ವಿಜಯೋತ್ಸವಕ್ಕೆ 39 ವರ್ಷಗಳು: ಇಡೀ ದೇಶಕ್ಕೆ ಸ್ಫೂರ್ತಿ ನೀಡಿದ್ದ ಕಪಿಲ್ ದೇವ್ ತಂಡ!
- Movies
ಹಿಟ್ಲರ್ ಕಲ್ಯಾಣ: ತನ್ನ ತಾಯಿಗೆ ಪಾಠ ಕಲಿಸುತ್ತಾಳ ಲೀಲಾ?
- Education
BIMS Belagavi Recruitment 2022 : 10 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
- Lifestyle
ಪುರುಷರಲ್ಲಿ ಲೈಂಗಿಕ ಶಕ್ತಿಯ ಸಮಸ್ಯೆಗೆ ಈ ಹಣ್ಣುಗಳೇ ಪವರ್ಫುಲ್ ಮದ್ದು
- Travel
ನಿಮ್ಮ ಮುಂದಿನ ಪ್ರವಾಸದ ಪಟ್ಟಿಯಲ್ಲಿ ಕರ್ನಾಟಕದ ಬಾದಾಮಿ ಯಾಕಿರಬೇಕು? ಇಲ್ಲಿದೆ ಕಾರಣ!
ಮೋಟೋ E32s ಸ್ಮಾರ್ಟ್ಫೋನ್ ಬಿಡುಗಡೆ! ಫೀಚರ್ಸ್ ಹೇಗಿದೆ ಗೊತ್ತಾ?
ಮೊಟೊರೊಲಾ ಕಂಪೆನಿ ತನ್ನ ವೈವಿಧ್ಯಮಯ ಸ್ಮಾರ್ಟ್ಫೋನ್ಗಳಿಗೆ ಹೆಸರುವಾಸಿಯಾಗಿದೆ. ಈಗಾಗಲೇ ಹಲವು ಆಕರ್ಷಕ ಸ್ಮಾರ್ಟ್ಫೋನ್ಗಳನ್ನು ಪರಿಚಯಿಸಿ ಸೈ ಎನಿಸಿಕೊಂಡಿದೆ. ಸದ್ಯ ಇದೀಗ ಮೋಟೋ E32s ಸ್ಮಾರ್ಟ್ಫೋನ್ ಲಾಂಚ್ ಮಾಡಿದೆ. ಇನ್ನು ಈ ಸ್ಮಾರ್ಟ್ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದು ಆಂಡ್ರಾಯ್ಡ್ 12 ಔಟ್-ಆಫ್-ದಿ ಬಾಕ್ಸ್ನೊಂದಿಗೆ ಬರುತ್ತದೆ.

ಹೌದು, ಮೊಟೊರೊಲಾ ಕಂಪೆನಿ ಹೊಸ ಮೋಟೋ E32s ಸ್ಮಾರ್ಟ್ಫೋನ್ ಬಿಡುಗಡೆ ಮಾಡಿದೆ. ಇನ್ನು ಈ ಸ್ಮಾರ್ಟ್ಫೋನ್ ಮಿಡಿಯಾಟೆಕ್ ಹಿಲಿಯೋ G37 SoC ಪ್ರೊಸೆಸರ್ ಬಲವನ್ನು ಪಡೆದಿದೆ. ಜೊತೆಗೆ 5,000mAh ಸಾಮರ್ಥ್ಯ ಬ್ಯಾಟರಿಯನ್ನು ಹೊಂದಿದೆ. ಈ ಫೋನ್ ಮಿಸ್ಟಿ ಸಿಲ್ವರ್ ಮತ್ತು ಸ್ಲೇಟ್ ಗ್ರೇ ಬಣ್ಣಗಳಲ್ಲಿ ಲಭ್ಯವಾಗಲಿದೆ. ಇನ್ನುಳಿದಂತೆ ಈ ಸ್ಮಾರ್ಟ್ಫೋನ್ ಫೀಚರ್ಸ್ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಡಿಸ್ಪ್ಲೇ ರಚನೆ ಮತ್ತು ವಿನ್ಯಾಸ
ಮೋಟೋ E32s ಸ್ಮಾರ್ಟ್ಫೋನ್ 720 x 1600 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದ 6.5-ಇಂಚಿನ HD+ ಡಿಸ್ಪ್ಲೇಯನ್ನು ಹೊಂದಿದೆ. ಈ ಡಿಸ್ಪ್ಲೇ 90Hz ರಿಫ್ರೆಶ್ ರೇಟ್ ಅನ್ನು ಒಳಗೊಂಡಿದೆ. ಇನ್ನು ಈ ಡಿಸ್ಪ್ಲೇ ಪಂಚ್-ಹೋಲ್ ವಿನ್ಯಾಸ ಮತ್ತು ಥಿಕ್ ಚಿನ್ ಡಿಸೈನ್ ಅನ್ನು ಹೊಂದಿದೆ.

ಪ್ರೊಸೆಸರ್
ಇದು ಆಕ್ಟಾ-ಕೋರ್ ಮೀಡಿಯಾಟೆಕ್ ಹಿಲಿಯೋ G37 SoC ಪ್ರೊಸೆಸರ್ ಸಾಮರ್ಥ್ಯವನ್ನು ಹೊಂದಿದ್ದು, ಆಂಡ್ರಾಯ್ಡ್ 12 ಔಟ್-ಆಫ್-ದಿ ಬಾಕ್ಸ್ ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಹಾಗೆಯೇ 3GB RAM ಮತ್ತು 64GB ಹಾಗೂ 4GB RAM ಮತ್ತು 64GB ಇಂಟರ್ ಸ್ಟೋರೇಜ್ ಆಯ್ಕೆಗಳಲ್ಲಿ ಬರಲಿದೆ.

ಕ್ಯಾಮೆರಾ ವಿಶೇಷ
ಮೋಟೋ E32s ಸ್ಮಾರ್ಟ್ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 16 ಮೆಗಾಪಿಕ್ಸೆಲ್ ಸೆನ್ಸಾರ್ ಅನ್ನು ಹೊಮದಿದೆ. ಎರಡನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಮ್ಯಾಕ್ರೋ ಶೂಟರ್ ಮತ್ತು ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಡೆಪ್ತ್ ಸೆನ್ಸಾರ್ ಅನ್ನು ಹೊಂದಿದೆ. ಇದಲ್ಲದೆ 16 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ.

ಬ್ಯಾಟರಿ ಮತ್ತು ಇತರೆ
ಮೋಟೋ E32s ಸ್ಮಾರ್ಟ್ಫೋನ್ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ 4G LTE, ವೈಫೈ, ಬ್ಲೂಟೂತ್, GPS/ A-GPS, ಮತ್ತು USB ಟೈಪ್-C ಪೋರ್ಟ್ ಬೆಂಬಲಿಸಲಿದೆ. ಈ ಫೋನ್ ಸೈಡ್-ಮೌಂಟೆಡ್ ಫಿಂಗರ್ ಪ್ರಿಂಟ್ ಸೆನ್ಸಾರ್ ಅನ್ನು ಒಳಗೊಂಡಿದೆ.

ಬೆಲೆ ಮತ್ತು ಲಭ್ಯತೆ
ಮೋಟೋ E32s ಸ್ಮಾರ್ಟ್ಫೋನ್ ಯುರೋಪಿಯನ್ ಮಾರುಕಟ್ಟೆಯಲ್ಲಿ ಲಾಂಚ್ ಆಗಿದೆ. ಈ ಸ್ಮಾರ್ಟ್ಫೋನ್ ಬೆಲೆ EUR 149.99 (ಸುಮಾರು 12,400ರೂ)ಹೊಂದಿದೆ. ಇನ್ನು ಈ ಫೋನ್ ಆರಂಭದಲ್ಲಿ ಮಿಸ್ಟಿ ಸಿಲ್ವರ್ ಮತ್ತು ಸ್ಲೇಟ್ ಗ್ರೇ ಬಣ್ಣಗಳಲ್ಲಿ ಆಯ್ದ ಯುರೋಪಿಯನ್ ಮಾರುಕಟ್ಟೆಗಳಲ್ಲಿ ಲಭ್ಯವಿದೆ. ಇದು ಸದ್ಯದಲ್ಲೇ ಭಾರತದ ಮಾರುಕಟ್ಟೆಯಲ್ಲಿ ಕೂಡ ಎಂಟ್ರಿ ನೀಡಲಿದೆ ಎಂದು ಹೇಳಲಾಗಿದೆ. ಆದರೆ ಭಾರತದಲ್ಲಿ ಇದು ಬಿಡುಗಡೆಯಾಗುವ ನಿಖರವಾದ ದಿನಾಂಕವನ್ನು ಇನ್ನೂ ಬಹಿರಂಗಪಡಿಸಲಾಗಿಲ್ಲ.

ಇನ್ನು ಇತ್ತೀಚಿಗೆ ಮೊಟೊರೊಲಾ ಕಂಪೆನಿ ಭಾರತದಲ್ಲಿ ತನ್ನ ಹೊಸ ಮೋಟೋ ಎಡ್ಜ್ 30 ಸ್ಮಾರ್ಟ್ಫೋನ್ ಲಾಂಚ್ ಮಾಡಿದೆ. ಈ ಸ್ಮಾರ್ಟ್ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಜೊತೆಗೆ 4,020mAh ಸಾಮರ್ಥ್ಯದ ಬ್ಯಾಟರಿಯನ್ನು ಒಳಗೊಂಡಿದೆ. ಇದು 33W ಟರ್ಬೋಪವರ್ ಚಾರ್ಜಿಂಗ್ ಬೆಂಬಲಿಸಲಿದೆ. ಇನ್ನು ಈ ಸ್ಮಾರ್ಟ್ಫೋನ್ ಆರಂಭಿಕ ಬೆಲೆ 27,999 ರೂ ಆಗಿದೆ.
-
54,535
-
1,19,900
-
54,999
-
86,999
-
49,975
-
49,990
-
20,999
-
1,04,999
-
44,999
-
64,999
-
20,699
-
49,999
-
11,499
-
54,999
-
7,999
-
8,980
-
17,091
-
10,999
-
34,999
-
39,600
-
25,750
-
33,590
-
27,760
-
44,425
-
13,780
-
1,25,000
-
45,990
-
1,35,000
-
82,999
-
17,999