ಸದ್ಯದಲ್ಲೇ ಮಾರುಕಟ್ಟೆಗೆ ಎಂಟ್ರಿ ನೀಡಲಿದೆ 'ಮೊಟೊ G51 5G' ಸ್ಮಾರ್ಟ್‌ಫೋನ್‌!

|

ಲೆನೊವೊ ಮಾಲೀಕತ್ವದ ಮೊಟೊರೊಲಾ ಸಂಸ್ಥೆಯು ಭಿನ್ನ ಶ್ರೇಣಿಯ ಫೋನ್‌ಗಳ ಮೂಲಕ ಮಾರುಕಟ್ಟೆಯಲ್ಲಿ ಸದ್ದು ಮಾಡಿದೆ. ಈಗಾಗಲೇ ಮೊಟೊ G ಸರಣಿಯಲ್ಲಿ ಕೆಲವು ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸಿರುವ ಸಂಸ್ಥೆಯು ಅದೇ ಸರಣಿಯಲ್ಲಿ ಇದೀಗ ಮತ್ತೊಂದು ಫೋನ್ ಲಾಂಚ್ ಮಾಡುವ ತಯಾರಿಯಲ್ಲಿದೆ. ಅದುವೇ ಮೊಟೊ G51 5G ಸ್ಮಾರ್ಟ್‌ಫೋನ್‌ ಆಗಿದ್ದು, ಇದೊಂದು ಬಜೆಟ್‌ ಮಾಡೆಲ್‌ ಆಗಿರಲಿದೆ ಎಂದು ಹೇಳಲಾಗುತ್ತಿದೆ.

ಸದ್ಯದಲ್ಲೇ ಮಾರುಕಟ್ಟೆಗೆ ಎಂಟ್ರಿ ನೀಡಲಿದೆ 'ಮೊಟೊ G51 5G' ಸ್ಮಾರ್ಟ್‌ಫೋನ್‌!

ಹೌದು, ಮೊಟೊರೊಲಾ ನೂತನವಾಗಿ ಮೊಟೊ G51 5G ಫೋನ್‌ನಲ್ಲಿ ಕೆಲಸ ಮಾಡುತ್ತಿದೆ ಎಂದು ವರದಿಯಾಗಿದೆ. ಈ ಬಗ್ಗೆ ಬೆಂಚ್‌ಮಾರ್ಕಿಂಗ್ ವೆಬ್‌ಸೈಟ್ ಗೀಕ್‌ಬೆಂಚ್‌ನಲ್ಲಿ ಗುರುತಿಸಲಾಗಿದೆ. ಕಳೆದ ಆಗಸ್ಟ್ ಅಂತ್ಯದಲ್ಲಿ ಲಾಂಚ್ ಆಗಿದ್ದ ಮೊಟೊ G50 5G ಯ ಮುಂದುವರಿದ ಭಾಗವಾಗಿ ಈ ಸ್ಮಾರ್ಟ್‌ಫೋನ್‌ ಎಂದು ಹೇಳಲಾಗಿದೆ. ಇನ್ನು ಈ ಫೋನ್‌ ಕ್ವಾಲ್ಕಾಮ್ ಪ್ರೊಸೆಸರ್‌ ಅನ್ನು ಒಳಗೊಂಡಿರಲಿದೆ ಎನ್ನಲಾಗಿದೆ.

ಸದ್ಯದಲ್ಲೇ ಮಾರುಕಟ್ಟೆಗೆ ಎಂಟ್ರಿ ನೀಡಲಿದೆ 'ಮೊಟೊ G51 5G' ಸ್ಮಾರ್ಟ್‌ಫೋನ್‌!

ಗೀಕ್‌ಬೆಂಚ್ ವೆಬ್‌ಸೈಟ್ ಪ್ರಕಾರ ಮೊಟೊ G51 5G ಸ್ಮಾರ್ಟ್‌ಫೋನ್‌ ಮೀಡಿಯಾ ಟೆಕ್ ಡೈಮೆನ್ಸಿಟಿ ಪ್ರೊಸೆಸರ್ ಬದಲಿಗೆ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ ಪ್ರೊಸೆಸರ್‌ನಿಂದ ಶಕ್ತಿಯನ್ನು ಪಡೆಯುತ್ತದೆ ಎಂದು ತಿಳಿಸಿದೆ. ಹಾಗೆಯೇ ಈ ಫೋನ್ 4GB RAM ಸಾಮರ್ಥ್ಯದ ಆಯ್ಕೆಯಲ್ಲಿ ಲಾಂಚ್ ಆಗುವ ನಿರೀಕ್ಷೆಯಿದೆ. ಇದರೊಂದಿಗೆ 6GB RAM ವೇರಿಯಂಟ್ ಆಯ್ಕೆ ಸಹ ಹೊಂದಿರಬಹುದು. ಈ ಫೋನ್ ಆಂಡ್ರಾಯ್ಡ್ 11 ಓಎಸ್‌ ಹೊಂದಿರಲಿದೆ. ಆದರೆ ಆಂಡ್ರಾಯ್ಡ್ 12 ಗೆ ಅಪ್ ಗ್ರೇಡ್ ಮಾಡುವ ಅವಕಾಶ ಹೊಂದಿರಲಿದೆ.

ಮೊಟೊ G51 5G ಸ್ಮಾರ್ಟ್‌ಫೋನ್‌ ಮಿಡ್ ರೇಂಜರ್ ಅಥವಾ ಬಜೆಟ್ ಸ್ಮಾರ್ಟ್‌ಫೋನ್‌ ಆಗಿರುವ ಸಾಧ್ಯತೆಗಳಿವೆ. ಈ ಫೋನ್ ಸುಮಾರು 15,000ರೂ ಕ್ಕಿಂತ ಕಡಿಮೆ ಬೆಲೆಯಲ್ಲಿ ಬಿಡುಗಡೆ ಆಗಲಿದೆ ಎಂದು ಅಂದಾಜಿಸಲಾಗಿದೆ .ಮೊಟೊರೊಲಾ ಈ ವರ್ಷದ ಅಂತ್ಯದ ವೇಳೆಗೆ ಮೊಟೊ G51 5G ಸ್ಮಾರ್ಟ್‌ಫೋನ್‌ ಅನ್ನು ಬಿಡುಗಡೆ ಮಾಡುವ ನಿರೀಕ್ಷೆಯಿದೆ. ಆದರೆ ಮೊಟೊ G51 5G ಸ್ಮಾರ್ಟ್‌ಫೋನ್‌ ಭಾರತದಲ್ಲಿ ಬಿಡುಗಡೆಯಾಗುತ್ತದೆಯೋ ಇಲ್ಲವೋ ಎಂಬುದು ಇನ್ನು ಸ್ಪಷ್ಟವಾಗಿಲ್ಲ.

ಸದ್ಯದಲ್ಲೇ ಮಾರುಕಟ್ಟೆಗೆ ಎಂಟ್ರಿ ನೀಡಲಿದೆ 'ಮೊಟೊ G51 5G' ಸ್ಮಾರ್ಟ್‌ಫೋನ್‌!

ಇನ್ನು ಮೊಟರೊಲಾ ಕಂಪೆನಿ ಭಾರತದಲ್ಲಿ ಹೊಸ ಮೊಟೊ E40 ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡಿದೆ. ಇದು ಆಕ್ಟಾ-ಕೋರ್ ಯೂನಿಸೋಕ್ T700 SoC ಪ್ರೊಸೆಸರ್‌ ಬಲವನ್ನು ಪಡೆದಿದೆ. ಜೊತೆಗೆ 10W ಚಾರ್ಜಿಂಗ್ ಬೆಂಬಲಿಸುವ 5,000 mAh ಸಾಮರ್ಥ್ಯದ ಬ್ಯಾಟರಿಯನ್ನು ಒಳಗೊಂಡಿದೆ. ಇನ್ನು ಈ ಸ್ಮಾರ್ಟ್‌ಫೋನ್‌ ಕಾರ್ಬನ್ ಗ್ರೇ ಮತ್ತು ಪಿಂಕ್ ಕ್ಲೇ ಬಣ್ಣಗಳ ಆಯ್ಕೆಯಲ್ಲಿ ಬರುತ್ತದೆ. ಇನ್ನುಳಿದಂತೆ ಈ ಸ್ಮಾರ್ಟ್‌ಫೋನ್‌ ಯಾವೆಲ್ಲಾ ಫೀಚರ್ಸ್‌ ಒಳಗೊಂಡಿದೆ ಮುಂದೆ ನೋಡೋಣ.

ಮೊಟೊ E40 ಸ್ಮಾರ್ಟ್‌ಫೋನ್‌ 720x1,600 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 6.5-ಇಂಚಿನ ಮ್ಯಾಕ್ಸ್ ವಿಷನ್ ಹೆಚ್‌ಡಿ+ ಪ್ಲಸ್‌ ಡಿಸ್‌ಪ್ಲೇ ಹೊಂದಿದೆ. ಇನ್ನು ಈ ಡಿಸ್‌ಪ್ಲೇ IPS LCD ಡಿಸ್‌ಪ್ಲೇ ಆಗಿದ್ದು, 20:9 ರಚನೆಯ ಅನುಪಾತವನ್ನು ಪಡೆದುಕೊಂಡಿದೆ. ಈ ಡಿಸ್‌ಪ್ಲೇ 81.6% ಸ್ಕ್ರೀನ್-ಟು-ಬಾಡಿ ಅನುಪಾತವನ್ನು ಹೊಂದಿದೆ. ಅಲ್ಲದೆ ಈ ಡಿಸ್‌ಪ್ಲೇ 90Hz ರಿಫ್ರೆಶ್ ರೇಟ್‌ ಅನ್ನು ಹೊಂದಿದೆ. ಯೂನಿಸೋಕ್ T700 SoC ಪ್ರೊಸೆಸರ್‌ ಸಾಮರ್ಥ್ಯವನ್ನು ಹೊಂದಿದ್ದು, ಆಂಡ್ರಾಯ್ಡ್‌ 11 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಜೊತೆಗೆ 4GB RAM ಮತ್ತು 64GB ಇಂಟರ್‌ ಸ್ಟೋರೇಜ್‌ ಸಾಮರ್ಥ್ಯವನ್ನು ಹೊಂದಿದೆ.

ಮೊಟೊ E40 ಸ್ಮಾರ್ಟ್‌ಫೋನ್‌ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಅಪ್ ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 48 ಮೆಗಾ ಪಿಕ್ಸೆಲ್ ಪ್ರಾಥಮಿಕ ಸೆನ್ಸಾರ್ ಜೊತೆಗೆ f/1.79 ಲೆನ್ಸ್ ಹೊಂದಿದೆ. ಹಾಗೆಯೇ 8 ಮೆಗಾ ಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾ ಹೊಂದಿದೆ. ಇನ್ನು ರಿಯರ್‌ ಕ್ಯಾಮೆರಾಗಳು ಪೋರ್ಟ್ರೇಟ್ ಮೋಡ್, ಪನೋರಮಾ, ಫೇಸ್ ಬ್ಯೂಟಿ, ಎಚ್‌ಡಿಆರ್ ನೈಟ್ ವಿಷನ್, ಮ್ಯಾಕ್ರೋ ವಿಷನ್ ಮತ್ತು ಪ್ರೊ ಮೋಡ್ ಫೀಚರ್ಸ್‌ಗಳನ್ನು ಬೆಂಬಲಿಸುತ್ತವೆ. ಇದರೊಂದಿಗೆ ಈ ಫೊನ್ 5,000 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಹೊಂದಿದ್ದು, 10W ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಇನ್ನು ಈ ಫೋನಿನ 4GB RAM + 64GB ಸ್ಟೋರೇಜ್ ರೂಪಾಂತರಕ್ಕೆ 9,499.ರೂ ಬೆಲೆ ಹೊಂದಿದೆ.

Most Read Articles
Best Mobiles in India

English summary
Moto G51 5G Listed On Geekbench With Snapdragon 750G Processor.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X