ಮೊಟೊರೊಲಾ ಸಂಸ್ಥೆಯಿಂದ ತ್ರಿ ಇನ್‌ ಒನ್‌ ಇಯರ್‌ಫೋನ್‌ ಬಿಡುಗಡೆ!

|

ಜನಪ್ರಿಯ ಸ್ಮಾರ್ಟ್‌ಫೋನ್‌ ತಯಾರಕ ಮೊಟೊರೊಲಾ ಸಂಸ್ಥೆ ತನ್ನ ಗುಣಮಟ್ಟದ ಇಯರ್‌ಫೋನ್‌ಗಳಿಗೂ ಹೆಸರುವಾಸಿಯಾಗಿದೆ. ಈಗಾಗಲೇ ಹಲವು ಮಾದರಿಯ ಇಯರ್‌ಫೋನ್‌ಗಳನ್ನ ಮಾರುಕಟ್ಟೆಗೆ ಪರಿಚಯಿಸಿ ಸೈ ಎನಿಸಿಕೊಂಡಿದೆ. ಸದ್ಯ ಇದೀಗ ಮೊಟೊರೊಲಾ ತನ್ನ ಹೊಸ ಟೆಕ್ 3 ಟ್ರೈಕ್ಸ್ ಥ್ರೀ ಇನ್ ಒನ್ ಇಯರ್‌ಫೋನ್‌ಗಳನ್ನ ಭಾರತದಲ್ಲಿ ಬಿಡುಗಡೆ ಮಾಡಿದೆ. ಇನ್ನು ಈ ಇಯರ್‌ಫೋನ್‌ ಅನ್ನು ಬಳಕೆದಾರರು ಅವರ ಆದ್ಯತೆಗಳ ಆಧಾರದ ಮೇಲೆ wires, wireless, ಮತ್ತು ಟ್ರೂ ವಾಯರ್‌ಲೆಸ್‌ ಮಾದರಿಯಲ್ಲಿ ಬಳಸುವ ಅವಕಾಶ ನೀಡಿದೆ. ಅಲ್ಲದೆ ಮೊಟೊರೊಲಾ ಟೆಕ್ 3 ಟ್ರೈಎಕ್ಸ್ ಅನ್ನು TWS ಇಯರ್‌ಬಡ್ಸ್‌ಗಳಾಗಿ ಬಳಸಬಹುದಾಗಿದೆ.

ಮೊಟೊರೊಲಾ

ಹೌದು, ಮೊಟೊರೊಲಾ ಸಂಸ್ಥೆ ತನ್ನ ಹೊಸ ಟೆಕ್ 3 ಟ್ರೈಕ್ಸ್ ಥ್ರೀ ಇನ್ ಒನ್ ಇಯರ್‌ಫೋನ್‌ಗಳನ್ನ ಭಾರತದ ಮಾರುಕಟ್ಟೆಯಲ್ಲಿ ಪರಿಚಯಿಸಿದೆ. ಈ ಇಯರ್‌ಫೋನ್‌ಗಳನ್ನು ಟ್ರೂಲಿ ವಾಯರ್‌ಲೆಸ್‌ ಇಯರ್‌ಬಡ್ಸ್‌ ಆಗಿಯೂ ಸಹ ಬಳಸಬಹುದು. ಅಷ್ಟೇ ಅಲ್ಲ ಬಳಕೆದಾರರು ಬಯಸಿದಲ್ಲಿ ನೆಕ್‌ಬ್ಯಾಂಡ್ ಅಥವಾ ವೈರ್ಡ್ ಹೆಡ್ಸೆಟ್ ಆಗಿ ಸಹ ಬಳಸುವ ಅವಕಾಶವನ್ನು ಇದರಲ್ಲಿ ನೀಡಲಾಗಿದೆ. ಇದಲ್ಲದೆ ಈ ಇಯರ್‌ಬಡ್ಸ್‌ ಚಾರ್ಜಿಂಗ್ ಕೇಸ್ ಮತ್ತು ಬ್ಲೂಟೂತ್ 5.0 ಕನೆಕ್ಟಿವಿಟಿಯನ್ನು ಬೆಂಬಲಿಸಲಿದ್ದು, 18 ಗಂಟೆಗಳ ಬ್ಯಾಟರಿ ಅವಧಿಯನ್ನು ನೀಡಲಿದೆ. ಇನ್ನುಳಿದಂತೆ ಈ ಇಯರ್‌ಬಡ್ಸ್‌ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಮೊಟೊರೊಲಾ

ಇನ್ನು ಮೊಟೊರೊಲಾ ಟೆಕ್ 3 ಟ್ರೈಎಕ್ಸ್‌ ಇಯರ್‌ಫೋನ್‌ ವಿಶೇಷತೆ ಏನೆಂದರೆ ಇದನ್ನು ವೈರ್ಡ್ ಅಥವಾ ವಾಯರ್‌ಲೆಸ್ ಇಯರ್‌ಬಡ್‌ಗಳಾಗಿ ಬಳಸಲು ಅವಕಾಶ ನೀಡಿರುವುದು. ಅಲ್ಲದೆ ಈ ಇಯರ್‌ಬಡ್ಸ್‌ ವಿಶಿಷ್ಟವಾದ ಹೈಬ್ರಿಡ್ ವಿನ್ಯಾಸವನ್ನು ಹೊಂದಿದೆ. ಇದು ವೈರ್ಡ್, ವಾಯರ್‌ಲೆಸ್ ಮತ್ತು ಟ್ರೂಲಿ ವಾಯರ್‌ಲೆಸ್‌ ಅನ್ನು ಮೂರು ವಿಭಿನ್ನ ರೀತಿಯಲ್ಲಿ ಬಳಸಿಕೊಳ್ಳುತ್ತದೆ. TWS ಮೋಡ್‌ನಲ್ಲಿ, ಮೊಟೊರೊಲಾ ಟೆಕ್ 3 ಟ್ರೈಎಕ್ಸ್ ಇಯರ್‌ಬಡ್‌ಗಳು ಬ್ಲೂಟೂತ್ 5.0 ಕನೆಕ್ಟಿವಿಟಿ ಸಹಾಯದಿಂದ ಸ್ಮಾರ್ಟ್‌ಫೋನ್‌ನೊಂದಿಗೆ ಸಂಪರ್ಕ ಸಾಧಿಸಬಹುದಾಗಿದೆ.

ಇಯರ್‌ಬಡ್ಸ್‌

ಅಲ್ಲದೆ ಸ್ಪೋರ್ಟ್ ಲೂಪ್ ಎಂದು ಕರೆಯಲ್ಪಡುವ ವಾಯರ್‌ಲೆಸ್ ಮೋಡ್, ಇಯರ್‌ಬಡ್‌ಗಳನ್ನು ನೆಕ್‌ಬ್ಯಾಂಡ್‌ ಮಾದರಿಯಲ್ಲಿ ಬಳಸುವುದಕ್ಕೆ ಅನುವು ಮಾಡಿಕೊಡುತ್ತದೆ. ಇನ್ನು ಬ್ಯಾಟರಿ ಚಾರ್ಜ್ ಅನ್ನು ಬಳಸದ ನೇರ ಪ್ಲಗ್-ಇನ್ ಮೋಡ್‌ನಲ್ಲಿ ಇಯರ್‌ಫೋನ್‌ಗಳನ್ನು ಬಳಸಲು ಹೆಚ್ಚುವರಿ ಕೇಬಲ್ ನಿಮಗೆ ಅನುಮತಿಸುತ್ತದೆ. ಈ ಕೇಬಲ್ ಮ್ಯಾಗ್ನೆಟಿಕ್ ಡಾಕ್ ಮೂಲಕ ಸ್ಪೋರ್ಟ್ ಲೂಪ್‌ ಕನೆಕ್ಟಿವಿಟಿಯನ್ನು ಹೊಂದಿದೆ. ಇದಲ್ಲದೆ ಮೊಟೊರೊಲಾ ಟೆಕ್ 3 ಟ್ರೈಎಕ್ಸ್ ಇಯರ್‌ಫೋನ್‌ಗಳು ಅಲೆಕ್ಸಾ, ಗೂಗಲ್ ಅಸಿಸ್ಟೆಂಟ್ ಮತ್ತು ಸಿರಿ ವಾಯ್ಸ್‌ ಅಸಿಸ್ಟೆಟೆಂಟ್‌ ಮತ್ತು ವೆರ್ವ್ ಲೈಫ್ ಆಪ್‌ ಮೂಲಕ ಸ್ಮಾರ್ಟ್‌ಫೋನ್ ಹೊಂದಿರುವ ಜೋಡಿಗಳನ್ನು ಬೆಂಬಲಿಸುತ್ತವೆ.

ಇಯರ್‌ಫೋನ್‌‌

ಈ ಇಯರ್‌ಫೋನ್‌‌ ಕಳೆದು ಹೋದರೆ ಇದನ್ನು ಕಂಡುಹಿಡಿಯಲು ಇಯರ್ ಡಿಟೆಕ್ಟ್ ಫೀಚರ್ಸ್‌ ಅನ್ನು ಸಹ ನೀಡಲಾಗಿದೆ. ಜೊತೆಗೆಮೊಟೊರೊಲಾ ಟೆಕ್ 3 ಟ್ರೈಕ್ಸ್ ಅನ್ನು ಪ್ಲಗ್ ಇನ್ ಮಾಡಿದಾಗ ಆನ್ ಮಾಡುತ್ತದೆ ಮತ್ತು ಎರಡೂ ಇಯರ್‌ಬಡ್‌ಗಳನ್ನು ಕಿವಿಯಿಂದ ತೆಗೆದುಹಾಕಿದಾಗ ಆಫ್ ಮಾಡುತ್ತದೆ. ಅಲ್ಲದೆ IPX5 ವಾಟರ್‌ಪ್ರೂಪ್‌ ವ್ಯವಸ್ಥೆಯನ್ನು ಹೊಂದಿದೆ.

ಮೊಟೊರೊಲಾ

ಇನ್ನು ಹೊಸ ಮೊಟೊರೊಲಾ ಟೆಕ್ 3 ಟ್ರೈಎಕ್ಸ್ ಇಯರ್‌ಫೋನ್‌ಗಳು ಭಾರತದಲ್ಲಿ 9,999 ರೂ.ಬೆಲೆಯನ್ನು ಹೊಂದಿವೆ. ಆದರೆ ಫ್ಲಿಪ್‌ಕಾರ್ಟ್‌ ನ ದಿ ಬಿಗ್‌ ಬಿಲಿಯನ್‌ ಡೇಸ್‌ ಸೇಲ್‌ ಪ್ರಯುಕ್ತ ರಿಯಾಯಿತಿ ದರದಲ್ಲಿ ಕೇವಲ 5,999 ರೂ.ಗೆ ಲಭ್ಯವಾಗಲಿದೆ. ಇನ್ನು ಈ ತ್ರಿ ಇನ್ ಒನ್ ಇಯರ್‌ಫೋನ್‌ ಕಪ್ಪು ಬಣ್ಣದ ಆಯ್ಕೆಯಲ್ಲಿ ಲಭ್ಯವಾಗಲಿದೆ.

Most Read Articles
Best Mobiles in India

English summary
Motorola Tech3 TriX three-in-one earphones have launched in India. Motorola licensee Binatone released the hybrid headsets ahead of the Flipkart Big Billion Days sale.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X