ಬೆಂಗಳೂರಿನ ಕೆಲವು ಪ್ರದೇಶಗಳಲ್ಲಿ ಭೂಮಿ ಕಂಪಿಸಿದ ಅನುಭವ!

|

ಬೆಂಗಳೂರಿನಲ್ಲಿ ಇಂದು ಬೆ 11.45 ರಿಂದ ಮಧ್ಯಾಹ್ನ 12.15ರ ನಡುವೆ ಭೂಮಿ ಕಂಪಿಸಿದ ಅನುಭವ ಆಗಿದೆ ಎನ್ನುವ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ. ಜನರು ಕೆಂಗೇರಿ, ರಾಜರಾಜೇಶ್ವರಿ ನಗರ, ಯಶವಂತಪುರ ಮತ್ತು ಮೈಸೂರು ರಸ್ತೆಯಲ್ಲಿ ಭೂಮಿ ಕಂಪನ ಅನುಭವ ಆಗಿದೆ ಎಂದಿದ್ದಾರೆ. ಮತ್ತೆ ಕೆಲವರು ದೊಡ್ಡ ಶಬ್ದ ಕೇಳಿಸಿತು, ನಾವು ಜೋರಾಗಿ 'ಬೂಮ್' (boom) ಶಬ್ದವನ್ನು ಕೇಳಿದ್ದೇವೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.

ಬೆಂಗಳೂರಿನ ಕೆಲವು ಪ್ರದೇಶಗಳಲ್ಲಿ ಭೂಮಿ ಕಂಪಿಸಿದ ಅನುಭವ!

ಈ ಭಾಗದ ಕೆಲವು ಬೆಂಗಳೂರಿಗರು ಬಾಗಿಲು ಮತ್ತು ಕಿಟಕಿಗಳು ಕಂಪಿಸಿದವು ಎಂದಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹಲವರು ತಮ್ಮ ಅನುಭವ ಶೇರ್ ಮಾಡಿದ್ದಾರೆ. ಬೆಂಗಳೂರಿಗರು ಹಂಚಿಕೊಂಡ ಟ್ವೀಟ್‌ಗಳ ಪ್ರಕಾರ, ಬೆಂಗಳೂರಿನ ರಾಜರಾಜೇಶ್ವರಿ ನಗರ, ಬನಶಂಕರಿ, ವಿಜಯನಗರ, ಕೆಂಗೇರಿ, ಉತ್ತರಹಳ್ಳಿ ಮತ್ತು ಸುತ್ತಮುತ್ತಲಿನ ಕೆಲವು ಪ್ರದೇಶಗಳಲ್ಲಿ ದೊಡ್ಡ ಶಬ್ದ ಕೇಳಿಬಂದಿದೆ ಎಂದಿದ್ದಾರೆ. ಕೆಲವು ಬಳಕೆದಾರರು ಸ್ವಲ್ಪ ನಡುಕವನ್ನು ಅನುಭವಿಸಿದ್ದಾರೆಂದು ಟ್ವೀಟ್ ಮಾಡಿದ್ದಾರೆ.

ಈ ಬಗ್ಗೆ ವಿಶ್ಲೇಷಕರು ಪರಿಶೀಲನೆ ಮಾಡಿದ್ದು, ಬೆಂಗಳೂರಿನಲ್ಲಿ ಭೂಕಂಪ ಸಂಭವಿಸಿಲ್ಲ ಎಂದು ಕೆಎಸ್‌ಎನ್‌ಡಿಎಮ್‌ಸಿ (KSNDMC) ಸ್ಪಷ್ಟನೆ ನೀಡಿದೆ. ಜೋರಾದ ಸದ್ದು ಕೇಳಿಬಂದ ಬೆ 11.45 ರಿಂದ ಮಧ್ಯಾಹ್ನ 12.15ರ ಅವಧಿಯಲ್ಲಿ ಭೂಕಂಪದ ಸಂಕೇತಗಳು ಕಂಡುಬಂದಿಲ್ಲ ಎಂದು ತಿಳಿಸಿದ್ದಾರೆ.

ಬೆಂಗಳೂರಿನ ರಾಜರಾಜೇಶ್ವರಿ ನಗರ, ಕೆಂಗೇರಿ, ಯಶವಂತಪುರ, ಹೆಮ್ಮಿಗೆಪುರ, ಜ್ಞಾನಭಾರತಿ, ಉಲ್ಲಾಳ ಮತ್ತು ಮೈಸೂರು ರಸ್ತೆಯಲ್ಲಿನ ಕೆಲವು ಪ್ರದೇಶಗಳಲ್ಲಿ ದೊಡ್ಡ ಸದ್ದಿನೊಂದಿಗೆ ಭೂಮಿ ಕಂಪಿಸಿದ ಬಗ್ಗೆ ಅನೇಕರು ಟ್ವಿಟರ್‌ನಲ್ಲಿ ತಮ್ಮ ಅನುಭವ ಹಂಚಿಕೊಂಡಿದ್ದಾರೆ.

Most Read Articles
Best Mobiles in India

English summary
Mysterious Loud ‘Boom’ Sound Heard Some Areas In Bangalore.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X