60 ದಿನ ನಿದ್ರೆ ಮಾಡಿದರೆ 13 ಲಕ್ಷ ರೂ.ಸಂಬಳ: ನಾಸಾದಿಂದ ಆಫರ್!!

|

ಜನಪ್ರಿಯವಾಗಿ ಆಚರಿಸಲ್ಪಡುವ ಮೂರ್ಖರ ದಿನವಾದ ಇಂದು (ಏಪ್ರಿಲ್ 1) ಇಂತಹದೊಂದು ಸುದ್ದಿಯನ್ನು ನಂಬದೇ ಇರಬಹುದು. ಆದರೆ, ಇದು ಸತ್ಯ. ವಿಶ್ವದ ಪ್ರತಿಷ್ಠಿತ ಸಂಸ್ಥೆಯೊಂದು ನಿದ್ರೆ ಮಾಡುವವರಿಗೆ ಲಕ್ಷ ಲಕ್ಷ ರೂ ಸಂಬಳ ನೀಡುವುದಾಗಿ ಹೇಳಿದೆ. ಕೇವಲ 60 ದಿನ ಸತತವಾಗಿ ನಿದ್ರೆ ಮಾಡಿದರೆ 13 ಲಕ್ಷ ರೂ ನೀಡುವುದಾಗಿ ಬಾಹ್ಯಾಕಾಶ ಸಂಸ್ಥೆ ಘೋಷಣೆ ಮಾಡಿದೆ.

ಹೌದು, ಕೆಲಸ ಮಾಡುವ ವೇಳೆ ನಿದ್ರೆ ಮಾಡಿ ಸಾಕಷ್ಟು ಜನ ಕೆಲಸ ಕಳೆದುಕೊಂಡಿದ್ದಾರೆ. ಆದರೆ ನಿದ್ರೆ ಮಾಡೋದೇ ಕೆಲಸವನ್ನಾಗಿ ನೀಡಲು ಅಮೆರಿಕದ ಖ್ಯಾತ ಬಾಹ್ಯಾಕಾಶ ಸಂಸ್ಥೆ ನಾಸಾ ಮುಂದಾಗಿದ್ದು, ಗುರುತ್ವಾಕರ್ಷಣೆಯಲ್ಲಿನ ಬಾಹ್ಯಾಕಾಶ ಅಧ್ಯಯನವೊಂದರ ನಿಮಿತ್ತ ನಾಸಾ ಸಂಸ್ಥೆ ಕೇವಲ ನಿದ್ರೆ ಮಾಡುವವರಿಗಾಗಿ 13 ಲಕ್ಷ ರೂ ಸಂಬಳ ನೀಡುವುದಾಗಿ ಆಫರ್ ನೀಡಿದೆ.

60 ದಿನ ನಿದ್ರೆ ಮಾಡಿದರೆ 13 ಲಕ್ಷ ರೂ.ಸಂಬಳ: ನಾಸಾದಿಂದ ಆಫರ್!!

ಅಮೆರಿಕದ ನಾಸಾ ಸಂಸ್ಥೆ ಮಂಗಳ ಹಾಗೂ ಚಂದ್ರನಲ್ಲಿಗೆ ಮಾನವ ಸಹಿತ ಉಡಾವಣೆ ಯೋಜನೆ ಹಮ್ಮಿಕೊಂಡಿದೆ. ಇದರ ನಿಮಿತ್ತ ಹಲವು ಅಧ್ಯಯನಗಳನ್ನು ಕೈಗೊಂಡಿರುವ ನಾಸಾ, ಅದಕ್ಕಾಗಿ ಗುರುತ್ವಾಕರ್ಷಣೆಯ ಬಾಹ್ಯಾಕಾಶ ವಾತಾವರಣದಲ್ಲಿ ನಿದ್ರೆ ಮತ್ತು ಇತರೆ ಆರೋಗ್ಯ ಸಂಬಂಧಿ ವ್ಯತ್ಯಾಸಗಳನ್ನು ಕಂಡು ಹಿಡಿಯಲು ವಿಜ್ಞಾನಿಗಳು ಈ ಅಧ್ಯಯನ ನಡೆಸುತ್ತಿದ್ದಾರೆ.

ಹಾಗಾಗಿ 60 ದಿನ ನಿದ್ರೆ ಮಾಡಿದರೆ 13 ಲಕ್ಷ ರೂ ನೀಡುವುದಾಗಿ ನಾಸಾ ಆಫರ್ ಮಾಡಿದ್ದು, ಈ ಉದ್ಯೋಗವನ್ನು ಪಡೆಯುವವರು ಕೃತಕ ಗುರುತ್ವದಲ್ಲಿ ನಿದ್ರೆ ಮಾಡಬೇಕಿದೆ. ಇದಕ್ಕಾಗಿ ಕೃತಕ ಗುರುತ್ವಾಕರ್ಷಣೆಯಲ್ಲಿ 2 ತಿಂಗಳ ಕಾಲ ನಿದ್ರೆ ಮಾಡುವ ಜನರನ್ನು ನಾಸಾ ಹುಡುಕುತ್ತಿದೆ. ಈ ಸಂಶೋಧನೆಗೆ ನಾಸಾಗೆ 12 ಪುರುಷರು ಹಾಗೂ 12 ಮಹಿಳೆಯರ ಅವಶ್ಯಕತೆಯಿದೆ.

60 ದಿನ ನಿದ್ರೆ ಮಾಡಿದರೆ 13 ಲಕ್ಷ ರೂ.ಸಂಬಳ: ನಾಸಾದಿಂದ ಆಫರ್!!

ಈ ಹಿಂದೆ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಲ್ಲಿ ಕೆಲಸ ಮಾಡಿ ಬಂದ ಸಾಕಷ್ಟು ವಿಜ್ಞಾನಿಗಳ ಆರೋಗ್ಯದಲ್ಲಿ ವ್ಯತ್ಯಾಸ ಕಂಡುಬಂದಿತ್ತು. ಮೂಳೆಯ ಸಮಾರ್ಥ್ಯ ಕುಂಠಿತ, ಹೃದಯದ ಮೇಲಿನ ಒತ್ತಡದಂತಹ ಸಮಸ್ಯೆಗಳು ಕಂಡುಬಂದಿದ್ದವು. ಹಾಗಾಗಿ, ಕೃತಕ ಗುರುತ್ವದಲ್ಲಿ ಜನರನ್ನು ಸತತ ಮಲಗುವಂತೆ ಮಾಡಿ ಅದರ ಅಧ್ಯಯನ ನಡೆಸಲು ನಾಸಾ ಮುಂದಾಗಿದೆ.

Most Read Articles
Best Mobiles in India

English summary
To study how weightlessness affects the human body, Nasa and ESA project is offering the volunteers nearly Rs 13 lakh to lie in bed for around two months.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more