Just In
- 18 min ago
ಸ್ಮಾರ್ಟ್ವಾಚ್ ಇಲ್ಲವೇ ಸ್ಮಾರ್ಟ್ಬ್ಯಾಂಡ್ ಖರೀದಿಸುವ ಪ್ಲ್ಯಾನ್ ಇದ್ರೆ, ಈ ಚಾನ್ಸ್ ಕಳ್ಕೋಬೇಡಿ!
- 1 hr ago
ಇಯರ್ಫೋನ್ ಖರೀದಿಸುವವರಿಗೆ ಅಮೆಜಾನ್ನಲ್ಲಿ ಸಿಗಲಿದೆ ಬಿಗ್ ಡಿಸ್ಕೌಂಟ್!
- 3 hrs ago
ವಾಟ್ಸಾಪ್, ಟೆಲಿಗ್ರಾಮ್ನಂತಹ ಆಪ್ಗಳ ನಿಯಂತ್ರಣಕ್ಕೆ ಸರ್ಕಾರದಿಂದ ಹೊಸ ಪ್ಲಾನ್!
- 3 hrs ago
ಇಂದು ಇನ್ಫಿನಿಕ್ಸ್ ಹಾಟ್ 12 ಪ್ರೊ ಫಸ್ಟ್ ಸೇಲ್; ಡಿಸ್ಕೌಂಟ್ ಎಷ್ಟು ಗೊತ್ತಾ?
Don't Miss
- Sports
CWG 2022: ಶ್ರೀಲಂಕಾದ 10 ಕ್ರೀಡಾಪಟುಗಳು ನಾಪತ್ತೆ!: ಲಂಕಾ ಕ್ರೀಡಾಪಟುಗಳ ಈ ಚಾಳಿಯ ಇತಿಹಾಸವೇ ವಿಚಿತ್ರ!
- Finance
ಮುಕೇಶ್ ಅಂಬಾನಿ ಮಾಸಿಕ ವೇತನ ಕೇಳಿದ್ರೆ ಅಚ್ಚರಿ ಮೂಡುತ್ತೆ!
- News
ಬಿಎಂಟಿಸಿ: ನಗರದಲ್ಲಿ ಅರ್ಧದಷ್ಟು ಎಸಿ ಬಸ್ಗಳ ಸೇವೆ ಅಲಭ್ಯ
- Automobiles
ಫೋರ್ಡ್ ಇಂಡಿಯಾದ ಸನಂದ್ ಕಾರ್ಖಾನೆ ಟಾಟಾ ಮೋಟಾರ್ಸ್ ತೆಕ್ಕೆಗೆ: 726 ಕೋಟಿ ರೂ.ಗೆ ಖರೀದಿ
- Movies
ಮುಂದುವರೆದ ದಚ್ಚು- ಅಪ್ಪು ಫ್ಯಾನ್ಸ್ ಪರ ವಿರೋಧ ಚರ್ಚೆ: ಮತ್ತೊಂದು ವಿಡಿಯೋ ವೈರಲ್!
- Lifestyle
ಉಪರಾಷ್ಟ್ರಪತಿಯಾಗಿ ಜಗದೀಪ್ ಧನಕರ್: ಇವರಿಗೆ ಸಿಗುವ ಸಂಬಳ, ಭತ್ಯೆ ಸೌಲಭ್ಯಗಳೇನು?
- Travel
ಭಾರತದಲ್ಲಿರುವ ಕೆಲವು ಸ್ಥಳಗಳು ಅಸ್ತಮಾ ರೋಗಿಗಳಿಗೆ ಸಲ್ಪ ಮಟ್ಟದಲ್ಲಿ ಅಪಾಯಕಾರಿಯಾಗಬಹುದು!
- Education
CSB Recruitment 2022 : 66 ಸೈಂಟಿಸ್ಟ್-ಬಿ ಹುದ್ದೆಗಳಿಗೆ ಅರ್ಜಿ ಆಹ್ವಾನ
ಚಂದಾದಾರರ ಕುಸಿತವನ್ನು ತಡೆಗಟ್ಟಲು ನೆಟ್ಫ್ಲಿಕ್ಸ್ನಿಂದ ಹೊಸ ಪ್ಲಾನ್!
ಇಂದಿನ ದಿನಗಳಲ್ಲಿ ಒಟಿಟಿ ಪ್ಲಾಟ್ಫಾರ್ಮ್ಗಳು ಏರುಗತಿಯ ಜನಪ್ರಿಯತೆಯನ್ನು ಸಾದಿಸಿವೆ. ಬದಲಾದ ಮನರಂಜನೆ ವೇದಿಕೆಯ ಶೈಲಿಯಿಂದ ಒಟಿಟಿ ಪ್ಲಾಟ್ಫಾರ್ಮ್ಗಳು ಬಳಕೆದಾರರ ನೆಚ್ಚಿನ ಆಯ್ಕೆಯಾಗಿದೆ. ಒಟಿಟಿ ಪ್ಲಾಟ್ಫಾರ್ಮ್ಗಳಿಂದ ಮನರಂಜನೆ ಅನ್ನೊದು ಇಂದು ಅಂಗೈನಲ್ಲಿಯೇ ಸಿಗಲಿದೆ. ಇದೇ ಕಾರಣಕ್ಕೆ ಹಲವು ಜನಪ್ರಿಯ ಒಟಿಟಿ ಪ್ಲಾಟ್ಫಾರ್ಮ್ಗಳು ಲಭ್ಯವಿದೆ. ತಮ್ಮ ವಿಭಿನ್ನ ಚಂದಾದಾರಿಕೆ ಪ್ಲಾನ್ಗಳ ಮೂಲಕ ಸ್ಟ್ರೀಮಿಂಗ್ ಸೇವೆಗಳನ್ನು ನೀಡುತ್ತಿವೆ. ಇದರಲ್ಲಿ ನೆಟ್ಫ್ಲಿಕ್ಸ್ ಕೂಡ ಮುಂಚೂಣಿಯಲ್ಲಿ ಗುರುತಿಸಿಕೊಂಡಿದೆ.

ನೆಟ್ಫ್ಲಿಕ್ಸ್ ಜನಪ್ರಿಯ ಒಟಿಟಿ ಪ್ಲಾಟ್ಫಾರ್ಮ್ಗಳಲ್ಲಿ ಒಂದಾಗಿದೆ. ತನ್ನ ಬಳಕೆದಾರರಿಗೆ ವೈವಿಧ್ಯಮಯ ಚಂದಾದಾರಿಕೆ ಪ್ಲಾನ್ಗಳನ್ನು ನೀಡುತ್ತಾ ಬಂದಿದೆ. ಸದ್ಯ ಇದೀಗ ಜಾಹಿರಾತು ಬೆಂಬಲಿತ ಚಂದಾದಾರಿಕೆ ಪ್ಲಾನ್ಗಳನ್ನು ಪರಿಚಯಿಸಲು ಮುಂದಾಗಿದೆ. ಈಗಾಗಲೇ ಚಂದಾದಾರರ ಕುಸಿತವನ್ನು ಅನುಭವಿಸುತ್ತಿರುವ ನೆಟ್ಫ್ಲಿಕ್ಸ್ ಚಂದಾದಾರರನ್ನು ಸೆಳೆಯಲು ಮುಂದಾಗಿದೆ. ಇದಕ್ಕಾಗಿ ಕಡಿಮೆ ಬೆಲೆಯಲ್ಲಿ ಜಾಹಿರಾತು ಬೆಂಬಲಿತ ಪ್ಲಾನ್ಗಳನ್ನು ಪರಿಚಯಿಸುತ್ತಿದೆ.

ಇನ್ನು ನೆಟ್ಫ್ಲಿಕ್ಸ್ ಜಾಹಿರಾತು ಬೆಂಬಲಿತ ಚಂದಾದಾರಿಕೆ ಪ್ಲಾನ್ಗಳನ್ನು ಶೀಘ್ರದಲ್ಲೇ ಪರಿಚಯಿಸುವುದಾಗಿ ಹೇಳಿದೆ. ನೆಟ್ಫ್ಲಿಕ್ಸ್ ಕಂಪನಿಯ ಸಿಇಒ ಟೆಡ್ ಸರಂಡೋಸ್ ಅವರು ಕೇನ್ಸ್ ಲಯನ್ಸ್ ಜಾಹೀರಾತು ಉತ್ಸವದಲ್ಲಿ ಇದರ ಬಗ್ಗೆ ಮಾಹಿತಿ ನೀಡಿದ್ದಾರೆ. ಇನ್ನು ಈ ಫೆಸ್ಟಿವಲ್ನಲ್ಲಿ ನಡೆದ ಸಂದರ್ಶನವೊಂದರಲ್ಲಿ ಜಾಹೀರಾತು-ಬೆಂಬಲಿತ ಚಂದಾದಾರಿಕೆ ಶ್ರೇಣಿಯನ್ನು ಪರಿಚಯಿಸುವುದು ಪಕ್ಕಾ ಎನ್ನುವ ಮಾತನ್ನು ಹೇಳಿದ್ದಾರೆ. ಹಾಗಾದ್ರೆ ನೆಟ್ಫ್ಲಿಕ್ಸ್ನ ಜಾಹಿರಾತು ಬೆಂಬಲಿತ ಪ್ಲಾನ್ಗಳ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ನೆಟ್ಫ್ಲಿಕ್ಸ್ ಈಗಾಗಲೇ ಚಂದಾದಾರರ ಕುಸಿತವನ್ನು ಅನುಭವಿಸುತ್ತಿದೆ. ಹೊಸದಾಗಿ ಚಂದಾದಾರರನ್ನು ಪಡೆದುಕೊಳ್ಳುವ ಅವಶ್ಯಕತೆಯಿದೆ. ಇದಕ್ಕಾಗಿ ಹೊಸ ಗ್ರಾಹಕರನ್ನು ಸೆಳೆಯಲು ಹೊಸ ಟ್ರಿಕ್ಸ್ಗಳನ್ನು ಪಾಲಿಸುತ್ತಿದೆ. ಅದರಂತೆ ಕಡಿಮೆ ಬೆಲೆಯಲ್ಲಿ ಜಾಹಿರಾತು ಬೆಂಬಲಿತ ಚಂದಾದಾರಿಕೆಯನ್ನು ಪರಿಚಯಿಸಲು ಮುಂದಾಗಿದೆ. ಕಡಿಮೆ ಬೆಲೆಯ ಚಂದಾದಾರಿಕೆ ಪ್ಲಾನ್ಗಳಿಂದ ಗ್ರಾಹಕರು ಸುಲಭವಾಗು ನೆಟ್ಫ್ಲಿಕ್ಸ್ ಆಯ್ಕೆ ಮಾಡಿಕೊಳ್ಳಲಿದ್ದಾರೆ ಎನ್ನುವುದು ನೆಟ್ಫ್ಲಿಕ್ಸ್ನ ಪ್ಲಾನ್ ಆಗಿದೆ.

ಜಾಹಿರಾತು ನಡುವೆಯು ನೆಟ್ಫ್ಲಿಕ್ಸ್ ಸ್ಟ್ರೀಮಿಂಗ್ ಬಯಸುವವರಿಗೆ ಈ ಪ್ಲಾನ್ಗಳು ಸೂಕ್ತವಾಘಲಿವೆ. ಏಕೆಂದರೆ ನೆಟ್ಫ್ಲಿಕ್ಸ್ನ ಪ್ಲಾನ್ಗಳು ದುಬಾರಿಯಾಗಿವೆ ಎನ್ನುವ ವಾದವು ಕೂಡ ಇದೆ. ಜಾಹಿರಾತುಗಳ ಬಂದರೂ ಸರಿ ಕಡಿಮೆ ಬೆಲೆಯ ಪ್ಲಾನ್ಗಳನ್ನು ಆಯ್ಕೆ ಮಾಡುವ ಬಳಕೆದಾರರು ಇದ್ದಾರೆ ಎನ್ನುವ ಅಶಾಭಾವ ನೆಟ್ಫ್ಲಿಕ್ಸ್ ಹೊಂದಿದೆ. ಏಕೆಂದರೆ ನೆಟ್ಫ್ಲಿಕ್ಸ್ ಕಳೆದ ಕೆಲವು ದಿನಗಳಿಂದ ಪಾವತಿಸಿದ ಚಂದಾದಾರರ ಕುಸಿತವನ್ನು ಅನುಭವಿಸುತ್ತಿದೆ. ಇದೇ ಕಾರಣಕ್ಕೆ ಆರು ತಿಂಗಳ ಅವಧಿಯಲ್ಲಿ ಕಂಪನಿಯು ಸುಮಾರು 300 ಉದ್ಯೋಗಿಗಳಿಗೆ ಗೇಟ್ಪಾಸ್ ಕೂಡ ನೀಡಿದೆ.

ನೆಟ್ಫ್ಲಿಕ್ಸ್ ಪ್ರಸ್ತುತ 222 ಮಿಲಿಯನ್ ಚಂದಾದಾರರನ್ನು ಹೊಂದಿರುವ ಅತಿದೊಡ್ಡ ಸ್ಟ್ರೀಮಿಂಗ್ ದೈತ್ಯವಾಗಿದೆ. ಆದರೆ 2022 ರ ಮೊದಲ ತ್ರೈಮಾಸಿಕದಲ್ಲಿ ಉಂಟಾಗಿರುವ ಪಾವತಿಸಿದ ಚಂದಾದಾರರ ಕುಸಿತವು ನೆಟ್ಫ್ಲಿಕ್ಸ್ ಆದಾಯದ ಮೇಲೆ ಭಾರಿ ಪರಿಣಾಮ ಬೀರಿದೆ. ಸದ್ಯ ಚಂದಾದಾರರ ನಷ್ಟದಿಂದ ಉಂಟಾದ ಹೊಡೆತದಿಂದ ಹೊರಬರಲು ಕಂಪನಿಯು ಹೊಸ ಪ್ರಯತ್ನಗಳನ್ನು ನಡೆಸುತ್ತಿದೆ. ದಿ ವೆರೈಟಿಯ ಪ್ರಕಾರ, ನೆಟ್ಫ್ಲಿಕ್ಸ್ ಒಟ್ಟು 11,000 ಉದ್ಯೋಗಿಗಳನ್ನು ಹೊಂದಿದೆ ಎಂದು ಹೇಳಲಾಗಿದೆ. ಸದ್ಯ ನೆಟ್ಫ್ಲಿಕ್ಸ್ ಭಾರತದಲ್ಲಿ ನಾಲ್ಕು ರೀತಿಯ ಚಂದಾದಾರಿಕೆ ಪ್ಲಾನ್ಗಳನ್ನು ನೀಡುತ್ತಿದೆ. ಈ ಪ್ಲಾನ್ಗಳಲ್ಲಿ ನಿಮಗೆ ಬೇಕಾಗಿದ್ದನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ.

ನೆಟ್ಫ್ಲಿಕ್ಸ್ ಚಂದಾದಾರಿಕೆ ಪ್ಲಾನ್ಗಳು
149 ರೂ ಮೊಬೈಲ್ ಪ್ಲಾನ್
ನೆಟ್ಫ್ಲಿಕ್ಸ್ 149ರೂ. ಮಾಸಿಕ ಬೆಲೆಯಲ್ಲಿ ಮೊಬೈಲ್ ಪ್ಲಾನ್ ನೀಡುತ್ತಿದೆ. ಈ ಯೋಜನೆಯು ಉತ್ತಮ ವೀಡಿಯೊ ಸ್ಟ್ರೀಮಿಂಗ್ ಗುಣಮಟ್ಟವನ್ನು (480p) ನೀಡುತ್ತದೆ. ಇದು ಒಂದು ಮೊಬೈಲ್ ಮತ್ತು ಒಂದು ಟ್ಯಾಬ್ಲೆಟ್ ಪರದೆಗೆ ಮಾತ್ರ ಪ್ರವೇಶವನ್ನು ಅನುಮತಿಸುತ್ತದೆ.
199ರೂ.ಬೇಸಿಕ್ ಪ್ಲಾನ್
199ರೂ.ಮಾಸಿಕ ಬೆಲೆಯಲ್ಲಿ ಬೇಸಿಕ್ ಪ್ಲಾನ್ ನೀಡುತ್ತಿದೆ. ಈ ಪ್ಲಾನ್ 480p ರೆಸಲ್ಯೂಶನ್ನ ವೀಡಿಯೊ ಗುಣಮಟ್ಟವನ್ನು ನೀಡಲಿದೆ. ಇದರಲ್ಲಿ ಮೊಬೈಲ್, ಟ್ಯಾಬ್ಲೆಟ್, ಟಿವಿ ಮತ್ತು ಕಂಪ್ಯೂಟರ್ನಲ್ಲಿ ಪ್ರವೇಶವನ್ನು ನೀಡುತ್ತದೆ
499ರೂ. ಸ್ಟ್ಯಾಂಡರ್ಡ್ ಪ್ಲಾನ್
ಸ್ಟ್ಯಾಂಡರ್ಡ್ ಯೋಜನೆಯು ತಿಂಗಳಿಗೆ 499ರೂ. ಶುಲ್ಕ ವಿಧಿಸುತ್ತದೆ. ಈ ಪ್ಲಾನ್ನಲ್ಲಿ ನೀವು 1080pರೆಸಲ್ಯೂಶನ್ ವೀಡಿಯೊಗಳನ್ನು ಸ್ಟ್ರೀಮಿಂಗ್ ಮಾಡಬಹುದಾಗಿದೆ. ಇದರಲ್ಲಿ ಬಳಕೆದಾರರು ಮೊಬೈಲ್, ಟ್ಯಾಬ್ಲೆಟ್, ಟಿವಿ ಮತ್ತು ಕಂಪ್ಯೂಟರ್ನಲ್ಲಿ ಸೇವೆಯನ್ನು ಪ್ರವೇಶಿಸಬಹುದು.
649ರೂ.ಪ್ರೀಮಿಯಂ ಪ್ಲಾನ್
ಈ ಪ್ಲಾನ್ ಭಾರತದಲ್ಲಿ ತಿಂಗಳಿಗೆ 649 ರೂ. ಬೆಲೆಯನ್ನು ಹೊಂದಿದೆ. ಇದು 4K+HDR ರೆಸಲ್ಯೂಶನ್ ನೀಡುತ್ತದೆ. ಈ ಪ್ಲಾನ್ನಲ್ಲಿ ಮೊಬೈಲ್, ಟ್ಯಾಬ್ಲೆಟ್, ಟಿವಿ ಮತ್ತು ಕಂಪ್ಯೂಟರ್ನಲ್ಲಿ ಪ್ರವೇಶವನ್ನು ನೀಡುತ್ತದೆ.

ನಿಮ್ಮ ನೆಟ್ಫ್ಲಿಕ್ಸ್ ಚಂದಾದಾರಿಕೆ ಪ್ಲಾನ್ ಬದಲಾಯಿಸುವುದು ಹೇಗೆ?
ನಿಮ್ಮ ನೆಟ್ಫ್ಲಿಕ್ಸ್ ಚಂದಾದಾರಿಕೆ ಪ್ಲಾನ್ ಅನ್ನು ಅಪ್ಗ್ರೇಡ್ ಮಾಡಲು ಅಥವಾ ಡೌನ್ಗ್ರೇಡ್ ಮಾಡಲು ನೀವು ಪ್ಲಾನ್ ಮಾಡಿದ್ದರೆ ಈ ಕೆಳಗಿನ ಹಂತಗಳನ್ನು ಅನುಸರಿಸಿ.
ಹಂತ:1 ಮೊದಲಿಗೆ ನೆಟ್ಫ್ಲಿಕ್ಸ್ ಅಪ್ಲಿಕೇಶನ್ ತೆರೆಯಿರಿ ಮತ್ತು ಲಾಗಿನ್ ಮಾಡಿ
ಹಂತ:2 ನಂತರ ಮೆನುವಿನಲ್ಲಿ "ಖಾತೆಗಳು" ವಿಭಾಗಕ್ಕೆ ಹೋಗಿ
ಹಂತ:3 ಇದರಲ್ಲಿ "ಪ್ಲಾನ್ ಡಿಟೇಲ್ಸ್" ವರ್ಗದ ಅಡಿಯಲ್ಲಿ, ನೀವು "ಚೇಂಜ್ ಪ್ಲಾನ್" ಆಯ್ಕೆಯನ್ನು ನೋಡುತ್ತೀರಿ
ಹಂತ:4 ಈಗ ನಿಮ್ಮ ಆದ್ಯತೆಯ ಪ್ಲಾನ್ಗಳನ್ನು ಆಯ್ಕೆಮಾಡಿ ಮತ್ತು "ಕಂಟಿನ್ಯೂ" ಕ್ಲಿಕ್ ಮಾಡಿ
ಹಂತ:5 ಅಂತಿಮವಾಗಿ, "ಸೇವ್ ಆಂಡ್ ಅಪ್ಡೇಟ್" ಕ್ಲಿಕ್ ಮಾಡಿ ಮತ್ತು ನೀವು ಬಯಸಿದ ಪ್ಲಾನ್ಗೆ ಬದಲಾಗಿ.
ನೆಟ್ಫ್ಲಿಕ್ಸ್ನಲ್ಲಿ ನೀವು ನಿಮ್ಮ ಯೋಜನೆಯನ್ನು ಅಪ್ಗ್ರೇಡ್ ಮಾಡಿದ್ದರೆ, ಅದು ತಕ್ಷಣವೇ ಕಾರ್ಯಗತಗೊಳ್ಳುತ್ತದೆ. ನೆಟ್ಫ್ಲಿಕ್ಸ್ ಪ್ರಿಪೇಯ್ಡ್ ಸೇವೆಯಾಗಿರುವುದರಿಂದ, ನಿಮ್ಮ ಕೊನೆಯ ಪಾವತಿಯ ಉಳಿದ ಬಾಕಿಯ ಆಧಾರದ ಮೇಲೆ ನಿಮ್ಮ ಬಿಲ್ಲಿಂಗ್ ಡೇಟ್ ಬದಲಾಗುತ್ತದೆ. ಆದರೆ ನಿಮ್ಮ ಯೋಜನೆಯನ್ನು ಕಡಿಮೆ ಬೆಲೆಗೆ ನೀವು ಡೌನ್ಗ್ರೇಡ್ ಮಾಡಿದ್ದರೆ, ಅದು ನಿಮ್ಮ ಮುಂದಿನ ಬಿಲ್ಲಿಂಗ್ ದಿನಾಂಕದಂದು ಬದಲಾಗಲಿದೆ. ಆದ್ದರಿಂದ, ಮುಂದಿನ ಬಿಲ್ಲಿಂಗ್ ಡೇಟ್ ತನಕ ನೀವು ಹೈ-ಎಂಡ್ ಪ್ಲಾನ್ ಫೀಚರ್ಸ್ಗಳನ್ನು ಬಳಸಬಹುದು.

ನಿಮ್ಮ ನೆಟ್ಫ್ಲಿಕ್ಸ್ ಅಕೌಂಟ್ ಪಾಸ್ವರ್ಡ್ ಅನ್ನು ಬದಲಾಯಿಸುವುದು ಹೇಗೆ?
ಹಂತ:1 ಮೊದಲಿಗೆ ನೀವು ನಿಮ್ಮ ನೆಟ್ಫ್ಲಿಕ್ಸ್ ಖಾತೆಯನ್ನು ತೆರೆಯಿರಿ.
ಹಂತ:2 ಇದರಲ್ಲಿ ನೀವು ನಿಮ್ಮ ಪ್ರೊಫೈಲ್ ಆಯ್ಕೆಮಾಡಿ.
ಹಂತ:3 ನಂತರ ಡ್ರಾಪ್-ಡೌನ್ನಿಂದ "ಅಕೌಂಟ್" ಮೇಲೆ ಟ್ಯಾಪ್ ಮಾಡಿ.
ಹಂತ:4 ಈಗ "ಚೇಂಜ್ ಪಾಸ್ವರ್ಡ್ " ಆಯ್ಕೆಮಾಡಿ ಮತ್ತು ಸೈಟ್ನಲ್ಲಿನ ಸೂಚನೆಗಳನ್ನು ಅನುಸರಿಸಿ.
ಹಂತ:5 ಒಮ್ಮೆ ಅಪ್ಡೇಟ್ ಮಾಡಿದ ನಂತರ, ನೀವು "ಅಕೌಂಟ್" ವಿಭಾಗಕ್ಕೆ ಹಿಂತಿರುಗಿ,
ಹಂತ:6 ನಂತರ ಕೆಳಗೆ ಸ್ಕ್ರಾಲ್ ಮಾಡಿ ಮತ್ತು "ಎಲ್ಲಾ ಡಿವೈಸ್ಗಳಿಂದ ಸೈನ್ ಔಟ್ ಮಾಡಿ"
ಹಂತ:7 ಇದೀಗ "ದೃಢೀಕರಿಸಿ" ಅನ್ನು ಟ್ಯಾಪ್ ಮಾಡಬಹುದು. ಹೀಗೆ ಮಾಡುವುದರಿಂದ ನೀವು ಎಲ್ಲಾ ಡಿವೈಸ್ಗಳಿಂದ ಲಾಗ್ ಔಟ್ ಆಗುತ್ತೀರಿ.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
44,999
-
15,999
-
20,449
-
7,332
-
18,990
-
31,999
-
54,999
-
17,091
-
17,091
-
13,999
-
31,830
-
31,499
-
26,265
-
24,960
-
21,839
-
15,999
-
11,570
-
11,700
-
7,070
-
7,086