Just In
- 6 hrs ago
ಜಬ್ರೋನಿಕ್ಸ್ ಡ್ರಿಪ್ ಸ್ಮಾರ್ಟ್ವಾಚ್ ಬಿಡುಗಡೆ! ಲಾಂಗ್ ಬ್ಯಾಟರಿ ಬ್ಯಾಕ್ಅಪ್ ವಿಶೇಷ!
- 8 hrs ago
ಡಿಜಿಟಲ್ ಇಂಡಿಯಾಗಾಗಿ ನಾಲ್ಕು ಹೊಸ ಯೋಜನೆಗಳನ್ನು ಪರಿಚಯಿಸಿದ ಪ್ರಧಾನಿ ಮೋದಿ!
- 9 hrs ago
ಭಾರತದಲ್ಲಿ ಬಹುನಿರೀಕ್ಷಿತ ಐಫೋನ್ 14 ಪ್ರೊ ಬೆಲೆ ಎಷ್ಟಿರಬಹುದು?..ಫೀಚರ್ಸ್ ಏನು?
- 11 hrs ago
ಸಾರ್ವಜನಿಕರೇ ನಿಮ್ಮ ಮನೆ ಮೇಲೆ ಮೊಬೈಲ್ ಟವರ್ ಹಾಕಿಸುವ ಮುನ್ನ ಎಚ್ಚರ?
Don't Miss
- Sports
ವಿಂಡೀಸ್ ಪ್ರವಾಸದಲ್ಲಿ ಹಿರಿಯ ಆಟಗಾರರಿಗೆ ವಿಶ್ರಾಂತಿ, ಸಂಜು ಸ್ಯಾಮ್ಸನ್ಗೆ ಸಿಗಲಿದೆ ಮತ್ತೊಂದು ಅವಕಾಶ?
- News
ಅಮೃತ್ ನಗರೋತ್ಥಾನ ಯೋಜನೆಯಡಿ ಬೆಂಗಳೂರು ಪೂರ್ವ ವಲಯಕ್ಕೆ 450 ಕೋಟಿ ಮಂಜೂರು
- Movies
ಹಿಂದಿಗೆ ಹೋಗುತ್ತಿದೆ ಏಳು ವರ್ಷ ಹಳೆಯ ಕನ್ನಡ ಸಿನಿಮಾ: ಅಕ್ಷಯ್-ಶಾಹಿದ್ ನಡುವೆ ಪೈಪೋಟಿ!
- Finance
ಸರ್ವೀಸ್ ಚಾರ್ಜ್ ಬಗ್ಗೆ ಗ್ರಾಹಕರು ದೂರು ನೀಡುವುದು ಹೇಗೆ?
- Lifestyle
ಯಾರೂ ಇಲ್ಲದಿದ್ದಾಗ ಪುರುಷ ಈ ರೀತಿ ವಿಲಕ್ಷಣವಾಗಿ ವರ್ತಿಸುತ್ತಾನೆ, ಗೊತ್ತಾ? ಇದನ್ನು ಓದಿದ್ರೆ ನೀವು ಶಾಕ್ ಆಗೋದು ಪಕ್ಕಾ!
- Automobiles
ದೇಶದ ಮೊದಲ 150kWh ಡಿಸಿ ಇವಿ ಫಾಸ್ಟ್ ಚಾರ್ಜರ್ ಸ್ಥಾಪಿಸಿದ ಕಿಯಾ ಇಂಡಿಯಾ
- Education
Karnataka Second PUC Results 2022 : ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಉತ್ತರ ಪತ್ರಿಕೆಯ ಪ್ರತಿಗಳು ಜು.6ರಿಂದ ಲಭ್ಯ
- Travel
ಸೂರ್ಯ, ಅಲೆಗಳು ಮತ್ತು ಮರಳು ಇವುಗಳ ಸಮ್ಮಿಲನ ಕಡಲತೀರದ ಪಟ್ಟಣ - ಮಲ್ಪೆ
ಬಳಕೆದಾರರಿಗೆ ಲೈವ್ ಸ್ಟ್ರೀಮಿಂಗ್ ಆಯ್ಕೆ ಪರಿಚಯಿಸಲು ಮುಂದಾದ ನೆಟ್ಫ್ಲಿಕ್ಸ್!
ನೆಟ್ಫ್ಲಿಕ್ಸ್ ಜನಪ್ರಿಯ ಒಟಿಟಿ ಪ್ಲಾಟ್ಫಾರ್ಮ್ಗಳಲ್ಲಿ ಒಂದೆನಿಸಿಕೊಂಡಿದೆ. ತನ್ನ ಚಂದಾದಾರರಿಗಾಗಿ ಹೊಸ ಫೀಚರ್ಸ್ಗಳನ್ನು ಪರಿಚಯಿಸುತ್ತಾ ಬಂದಿದೆ. ಸದ್ಯ ಇದೀಗ ತನ್ನ ಪ್ಲಾಟ್ಫಾರ್ಮ್ನಲ್ಲಿ ಹೊಸ ಚಂದಾದಾರರನ್ನು ಪರಿಚಯಿಸುವುದಕ್ಕಾಗಿ ಹೊಸ ಆಯ್ಕೆಗಳನ್ನು ಪರಿಚಯಿಸಲು ಮುಂದಾಗಿದೆ. ತನ್ನ ಪ್ರತಿಸ್ಪರ್ಧಿಗಳಾದ ಅಮೆಜಾನ್, ಡಿಸ್ನಿ ಪ್ಲಸ್ ಹಾಟ್ಸ್ಟಾರ್ಗೆ ಪೈಪೋಟಿ ನೀಡುವುದಕ್ಕಾಗಿ ಹಲವು ಹೊಸ ಆಯ್ಕೆಗಳನ್ನು ನೀಡುತ್ತಿದೆ. ಇದೀಗ ಲೈವ್ ಸ್ಟ್ರೀಮಿಂಗ್ ಆಯ್ಕೆಯನ್ನು ಪರಿಚಯಿಸಲು ಮುಂದಾಗಿದೆ.

ಹೌದು, ನೆಟ್ಫ್ಲಿಕ್ಸ್ ತನ್ನ ಪ್ಲಾಟ್ಫಾರ್ಮ್ನಲ್ಲಿ ಲೈವ್ ಸ್ಟ್ರೀಮಿಂಗ್ ಅನ್ನು ಪರಿಚಯಿಸಲು ಸಿದ್ಧತೆ ನಡೆಸಿದೆ. ಈ ಹೊಸ ಆಯ್ಕೆಯಲ್ಲಿ ಸ್ಟ್ಯಾಂಡ್-ಅಪ್ ಸ್ಪೇಷಲ್ಸ್, ಲೈವ್ ಕಾಮಿಡಿ ಶೋಗಳು ಮತ್ತು ಅನ್ಸ್ಕ್ರಿಪ್ಟೆಡ್ ಶೋಗಳಿಗೆ ಅವಕಾಶ ನೀಡಲಿದೆ. ಇನ್ನು ಲೈವ್-ಸ್ಟ್ರೀಮಿಂಗ್ ಫೀಚರ್ಸ್ ಅಭಿವೃದ್ಧಿಯ ಆರಂಭಿಕ ಹಂತಗಳಲ್ಲಿದೆ ಎಂದು ವರದಿಯಾಗಿದೆ. ಇದು ಕಾರ್ಯಗತವಾದರೆ ನೆಟ್ಫ್ಲಿಕ್ಸ್ ಚಂದಾದಾರರ ಸಂಖ್ಯೆಯಲ್ಲಿ ಏರಿಕೆಯಾಗಲಿದೆ ಎಂದು ನಿರೀಕ್ಷಿಸಲಾಗಿದೆ. ಹಾಗಾದ್ರೆ ಈ ಹೊಸ ಆಯ್ಕೆಯ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ನೆಟ್ಫ್ಲಿಕ್ಸ್ ತನ್ನ ಪ್ಲಾಟ್ಫಾರ್ಮ್ನಲ್ಲಿ ಲೈವ್ ಸ್ಟ್ರೀಮಿಂಗ್ ಆಯ್ಕೆಯನ್ನು ಸಧ್ಯದಲ್ಲೇ ಪರಿಚಯಿಸಲಿದೆ. ಇದರಿಂದ ಸ್ಟ್ಯಾಂಡ್ ಅಪ್ ಸ್ಪೇಷಲ್ಸ್, ಲೈವ್ ಕಾಮಿಡಿ ಶೋಗಳನ್ನು ನೆಟ್ಫ್ಲಿಕ್ಸ್ನಲ್ಲಿ ಲೈವ್ ಸ್ಟ್ರೀಮ್ ಮಾಡಬಹುದಾಗಿದೆ. ಜೊತೆಗೆ ಈ ಮಾದರಿಯ ಶೋಗಳಿಗೆ ಚಂದಾದಾರರು ವೋಟ್ ಮಾಡುವುದಕ್ಕೆ ಕೂಡ ಅವಕಾಶ ಸಿಗಲಿದೆ. ಇದಕ್ಕಾಗಿ ನೆಟ್ಫ್ಲಿಕ್ಸ್ ಶೀಘ್ರದಲ್ಲೇ ಡ್ಯಾನ್ಸ್ 100 ಅನ್ನು ಸ್ಟ್ರೀಮ್ ಮಾಡಲಿದ್ದು, ಲೈವ್ ವೋಟಿಂಗ್ ಡ್ರೈ ರನ್ ಮಾಡಲಿದೆ.

ಇನ್ನು ಲೈವ್-ಸ್ಟ್ರೀಮಿಂಗ್ ಸ್ಟ್ಯಾಂಡ್-ಅಪ್ ಶೋಗಳು ನೆಟ್ಫ್ಲಿಕ್ಸ್ಗೆ ಹೊಸ ಸ್ಟ್ರೀಮ್ಗಳನ್ನು ತೆರೆಯಲು ಅವಕಾಶ ನೀಡಬಹುದು. ಇದರಿಂದ ಶುಲ್ಕದ ರೂಪದಲ್ಲಿ ಹಣಗಳಿಸುವ ಪ್ಲಾನ್ ನೆಟ್ಫ್ಲಿಕ್ಸ್ ಮಾಡಿದೆ. ಸದ್ಯ ನೆಟ್ಫ್ಲಿಕ್ಸ್ಗೆ ಲೈವ್-ಸ್ಟ್ರೀಮಿಂಗ್ ಆಯ್ಕೆ ಈಗ ಮುಖ್ಯವಾಗಿದೆ. ಏಕೆಂದರೆ ಈಗಾಗಲೇ ನೆಟ್ಫ್ಲಿಕ್ಸ್ ಪ್ರತಿಸ್ಪರ್ಧಿ, ಡಿಸ್ನಿ ಪ್ಲಸ್, ಲೈವ್-ಸ್ಟ್ರೀಮಿಂಗ್ ಶೋಗಳಲ್ಲಿ ತೊಡಗಿಸಿಕೊಂಡಿದೆ. ಅಮೇರಿಕನ್ ಐಡಲ್ ಮತ್ತು ಡ್ಯಾನ್ಸಿಂಗ್ ವಿಥ್ ದಿ ಸ್ಟಾರ್ಸ್ನಂತಹ ಜನಪ್ರಿಯ ಟ್ಯಾಲೆಂಟ್ ಹಂಟ್ ಶೋಗಳು ಡಿಸ್ನಿ ಪ್ಲಸ್ಗೆ ಹೋಗುತ್ತಿರುವುದರಿಂದ, ನೆಟ್ಫ್ಲಿಕ್ಸ್ಗೆ ಪೈಪೋಟಿ ಎದುರಾಗಿದೆ.

ಇದಲ್ಲದೆ ಈಗಾಗಲೇ ನೆಟ್ಫ್ಲಿಕ್ಸ್ ಕಳೆದ ತ್ರೈಮಾಸಿಕದಲ್ಲಿ ತನ್ನ ಬಳಕೆದಾರರ ಸಂಖ್ಯೆಯಲ್ಲಿ ಸಾಕಷ್ಟು ಕುಸಿತವನ್ನು ಕಂಡಿದೆ. ಅಂದಾಜು 10 ವರ್ಷಗಳಲ್ಲಿ ಮೊದಲ ಬಾರಿಗೆ ಅತಿದೊಡ್ಡ ಚಂದಾದಾರರ ನಷ್ಟವನ್ನು ಕಂಡಿದೆ. ಇದರಿಂದ ನೆಟ್ಫ್ಲಿಕ್ಸ್ ಆದಾಯದ ಮೇಲೆ ಪರಿಣಾಮ ಬೀರಿದೆ. ಇದರಿಂದ ನೆಟ್ಫ್ಲಿಕ್ಸ್ ತನ್ನ ಕುಸಿತವನ್ನು ತಡೆಯುವುದಕ್ಕಾಗಿ ಅನೇಕ ಹೊಸ ಆಯ್ಕೆಗಳನ್ನು ಪರಿಚಯಿಸುತ್ತಿದೆ. ಅದರಂತೆ ಈಗಾಗಲೇ ಆಯ್ದ ಮಾರುಕಟ್ಟೆಗಳಲ್ಲಿ ಚಂದಾದಾರರನ್ನು ಹೆಚ್ಚಿಸಲು ಮತ್ತು ಆ ಮೂಲಕ ಆದಾಯವನ್ನು ಹೆಚ್ಚಿಸಲು ಅಗ್ಗದ ಪ್ಲಾನ್ಗಳನ್ನು ಪರಿಚಯಿಸುವ ಸಾಧ್ಯತೆ ಕೂಡ ಇದೆ.

ನಿಮ್ಮ ನೆಟ್ಫ್ಲಿಕ್ಸ್ ಚಂದಾದಾರಿಕೆ ಪ್ಲಾನ್ ಬದಲಾಯಿಸುವುದು ಹೇಗೆ?
ನಿಮ್ಮ ನೆಟ್ಫ್ಲಿಕ್ಸ್ ಚಂದಾದಾರಿಕೆ ಪ್ಲಾನ್ ಅನ್ನು ಅಪ್ಗ್ರೇಡ್ ಮಾಡಲು ಅಥವಾ ಡೌನ್ಗ್ರೇಡ್ ಮಾಡಲು ನೀವು ಪ್ಲಾನ್ ಮಾಡಿದ್ದರೆ ಈ ಕೆಳಗಿನ ಹಂತಗಳನ್ನು ಅನುಸರಿಸಿ.
ಹಂತ:1 ಮೊದಲಿಗೆ ನೆಟ್ಫ್ಲಿಕ್ಸ್ ಅಪ್ಲಿಕೇಶನ್ ತೆರೆಯಿರಿ ಮತ್ತು ಲಾಗಿನ್ ಮಾಡಿ
ಹಂತ:2 ನಂತರ ಮೆನುವಿನಲ್ಲಿ "ಖಾತೆಗಳು" ವಿಭಾಗಕ್ಕೆ ಹೋಗಿ
ಹಂತ:3 ಇದರಲ್ಲಿ "ಪ್ಲಾನ್ ಡಿಟೇಲ್ಸ್" ವರ್ಗದ ಅಡಿಯಲ್ಲಿ, ನೀವು "ಚೇಂಜ್ ಪ್ಲಾನ್" ಆಯ್ಕೆಯನ್ನು ನೋಡುತ್ತೀರಿ
ಹಂತ:4 ಈಗ ನಿಮ್ಮ ಆದ್ಯತೆಯ ಪ್ಲಾನ್ಗಳನ್ನು ಆಯ್ಕೆಮಾಡಿ ಮತ್ತು "ಕಂಟಿನ್ಯೂ" ಕ್ಲಿಕ್ ಮಾಡಿ
ಹಂತ:5 ಅಂತಿಮವಾಗಿ, "ಸೇವ್ ಆಂಡ್ ಅಪ್ಡೇಟ್" ಕ್ಲಿಕ್ ಮಾಡಿ ಮತ್ತು ನೀವು ಬಯಸಿದ ಪ್ಲಾನ್ಗೆ ಬದಲಾಗಿ.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
44,999
-
15,999
-
20,449
-
7,332
-
18,990
-
31,999
-
54,999
-
17,091
-
17,091
-
13,999
-
31,830
-
31,499
-
26,265
-
24,960
-
21,839
-
15,999
-
11,570
-
11,700
-
7,070
-
7,086