Just In
Don't Miss
- Movies
ಸಾಕಷ್ಟು ಆಕ್ಟರ್ಗಳಿಗೆ ಡ್ರೆಸ್ ಡಿಸೈನ್ ಮಾಡೋರು ಇವರೇ?
- Automobiles
ಥರ್ಡ್ ಪಾರ್ಟಿ ಇನ್ಸುರೆನ್ಸ್: ಜೂನ್ 1ರಿಂದ ವಾಹನ ಮಾಲೀಕತ್ವ ಮತ್ತಷ್ಟು ದುಬಾರಿ!
- News
ವಿಡಿಯೋ: 'ಬಂತು ಬಂತು ಟ್ರೈನ್ ಬಂತು' ಖುಷಿಯಲ್ಲಿ ನೃತ್ಯ ಮಾಡಿದ ಪ್ರಯಾಣಿಕರು
- Finance
ಮೂರು ದಿನದ ಕುಸಿತಕ್ಕೆ ಬ್ರೇಕ್: ಸೆನ್ಸೆಕ್ಸ್, ನಿಫ್ಟಿ ಜಿಗಿತ
- Sports
ಬಾಂಗ್ಲಾದೇಶ vs ಶ್ರೀಲಂಕಾ 2nd ಟೆಸ್ಟ್: ಗೆಲುವಿನ ಸನಿಹದಲ್ಲಿ ಲಂಕಾ: ಸೋಲಿನಿಂತ ತಪ್ಪಿಸಿಕೊಳ್ಳುತ್ತಾ ಬಾಂಗ್ಲಾ?
- Lifestyle
ಕಿಚನ್ ಟಿಪ್ಸ್: ಫ್ರಿಡ್ಜ್ನಲ್ಲಿ ಆಹಾರಗಳನ್ನು ಹೀಗೆ ಇಟ್ಟರೆ ಆರೋಗ್ಯಕ್ಕೆ ಕುತ್ತು ಎಚ್ಚರ..!
- Education
Karnataka SSLC Revaluation 2022 : ಮರುಮೌಲ್ಯಮಾಪನ ಮತ್ತು ಮರುಎಣಿಕೆಗೆ ಅರ್ಜಿ ಆಹ್ವಾನ
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಶೀಘ್ರದಲ್ಲೇ ವಾಟ್ಸಾಪ್ ಸೇರಲಿವೆ ಹೊಸ ಡ್ರಾಯಿಂಗ್ ಟೂಲ್ ಫೀಚರ್ಸ್!
ವಾಟ್ಸಾಪ್ ವಿಶ್ವದಲ್ಲಿಯೇ ಹೆಚ್ಚಿನ ಸಕ್ರಿಯ ಬಳಕೆದಾರರನ್ನು ಹೊಂದಿರುವ ಮೆಸೇಜಿಂಗ್ ಅಪ್ಲಿಕೇಶನ್ ಎನಿಸಿಕೊಂಡಿದೆ. ಅಲ್ಲದೆ ಬಳಕೆದಾರರ ಅನುಕೂಲಕ್ಕಾಗಿ ಒಂದಿಲ್ಲೊಂದು ಹೊಸ ಮಾದರಿಯ ಫೀಚರ್ಸ್ಗಳನ್ನು ಪರಿಚಯಿಸುತ್ತಲೇ ಬಂದಿದೆ. ಸದ್ಯ ಇದೀಗ ವಾಟ್ಸಾಪ್ ತನ್ನ ಆಂಡ್ರಾಯ್ಡ್ ಮತ್ತು ಡೆಸ್ಟ್ಟಾಪ್ ಆವೃತ್ತಿಯಲ್ಲಿ ಹೊಸ ಫೀಚರ್ಸ್ಗಳನ್ನು ಪರಿಚಯಿಸಲು ಸಿದ್ಧತೆ ನಡೆಸಿದೆ. ಆಂಡ್ರಾಯ್ಡ್ ಅಪ್ಲಿಕೇಶನ್ನಲ್ಲಿ ಹೊಸ ಡ್ರಾಯಿಂಗ್ ಟೂಲ್ಗಳನ್ನು ನೀಡಲು ಮುಂದಾಗಿದ್ದು, ಮುಂದಿನ ಅಪ್ಡೇಟ್ನಲ್ಲಿ ಹೊಸ ಪೆನ್ಸಿಲ್ ಟೂಲ್ಸ್ ಪಡೆಯಲಿದೆ. ಇನ್ನು ಡೆಸ್ಕ್ಟಾಪ್ ಆವೃತ್ತಿಯಲ್ಲಿ ಹೊಸ ಚಾಟ್ ಬಬಲ್ ಕಲರ್ ಪರಿಚಯಿಸಲು ಸಿದ್ದತೆ ನಡೆಸಿದೆ.

ಹೌದು, ವಾಟ್ಸಾಪ್ ಆಂಡ್ರಾಯ್ಡ್ ಮತ್ತು ಡೆಸ್ಕಟ್ಟಾಪ್ ಆವೃತ್ತಿಯಲ್ಲಿ ಹೊಸ ಫೀಚರ್ಸ್ ಪರಿಚಯಿಸುತ್ತಿದೆ. ಡೆಸ್ಕ್ಟಾಪ್ ಅಪ್ಲಿಕೇಶನ್ನಲ್ಲಿ ಹೊಸ ಚಾಟ್ ಬಬಲ್ ಟೂಲ್ ಪರಿಚಯಿಸಲಿದ್ದು, ಹೊಸ ಗಾಢ ನೀಲಿ ಬಣ್ಣವನ್ನು ಪಡೆದುಕೊಳ್ಳಲಿದ್ದು, ಡಾರ್ಕ್ ಥೀಮ್ ಮೋಡ್ ಬಳಸುವಾಗ ಮಾತ್ರ ಗೋಚರಿಸುತ್ತದೆ. ಹಾಗೆಯೇ ಆಂಡ್ರಾಯ್ಡ್ ಆವೃತ್ತಿಯಲ್ಲಿ ಡ್ರಾಯಿಂಗ್ ಟೂಲ್ನಲ್ಲಿ ಬದಲಾವಣೆ ಮಾಡಲು ವಾಟ್ಸಾಪ್ ಮುಂದಾಗಿದೆ. ಇದರಿಂದ ಪೆನ್ಸಿಲ್ ಟೂಲ್ ಬದಲಾಗಲಿದೆ ಎಂದು ವರದಿಯಾಗಿದೆ. ಹಾಗಾದ್ರೆ ಈ ಎರಡು ಫೀಚರ್ಸ್ಗಳ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ವಾಟ್ಸಾಪ್
ವಾಟ್ಸಾಪ್ ತನ್ನ ಆಂಡ್ರಾಯ್ಡ್ ವರ್ಷನ್ನಲ್ಲಿ ಹೊಸ ಡ್ರಾಯಿಂಗ್ ಟೂಲ್ ಪರಿಚಯಿಸಲಿದೆ. ಇದರಿಂದ ಹೊಸ ಮಾದರಿಯ ಪೆನ್ಸಿಲ್ ಟೂಲ್ ಲಭ್ಯವಾಗಲಿದೆ. ಈ ಟೂಲ್ ಮೂಲಕ ಚಿತ್ರಗಳು ಮತ್ತು ವೀಡಿಯೊಗಳನ್ನು ಸೆಳೆಯಲು ವಾಟ್ಸಾಪ್ ಪ್ಲಾನ್ ರೂಪಿಸಿದೆ ಎಂದು ಹೇಳಲಾಗುತ್ತದೆ. ವಾಟ್ಸಾಪ್ ಸದ್ಯ ಒಂದು ಮಾದರಿಯ ಪೆನ್ಸಿಲ್ ಅನ್ನು ಹೊಂದಿದೆ. ಆದರೆ ಮುಂದಿನ ದಿನಗಳಲ್ಲಿ ಎರಡು ಮಾದರಿಯ ಹೊಸ ಪೆನ್ಸಿಲ್ಗಳನ್ನು ಪಡೆದುಕೊಳ್ಳಲಿದೆ. ಇದರಲ್ಲಿ ಒಂದು ತೆಳವಾದ ಪೆನ್ಸಿಲ್ ಆಗಿದ್ದರೆ, ಮತ್ತೊಂದು ದಪ್ಪಬೆಯ ಗಾತ್ರವನ್ನು ಹೊಂದಿರಲಿದೆ ಎಂದು ನಿರೀಕ್ಷಿಸಲಾಗಿದೆ.

ಇದಲ್ಲದೆ, ವಾಟ್ಸಾಪ್ ಬ್ಲರ್ ಇಮೇಜ್ ಟೂಲ್ನಲ್ಲಿ ಕೂಡ ಕಾರ್ಯನಿರ್ವಹಿಸುತ್ತಿದೆ ಎಂದು ವರದಿಯಾಗಿದೆ. ಇದರಿಂದ ನಿಮಗೆ ಬೇಕಾದ ಬೆಳಕಿನ ವಿನ್ಯಾಸದಲ್ಲಿ ನೋಡಲು ಸಾಧ್ಯವಾಗಲಿದೆ. ಸದ್ಯ ಈ ಫೀಚರ್ಸ್ ಅನ್ನು ಆಂಡ್ರಾಯ್ಡ್ 2.22.3.5 ಅಪ್ಡೇಟ್ನಲ್ಲಿ ಬೀಟಾ ವರ್ಷನ್ನಲ್ಲಿ ಕಾಣಬಹುದಾಗಿದೆ. ಆದರೆ ಡೀಫಾಲ್ಟ್ ಆಗಿ ನಿಷ್ಕ್ರಿಯಗೊಳಿಸಲಾಗಿದೆ. ಈ ಎಲ್ಲಾ ಫೀಚರ್ಸ್ಗಳು ಇನ್ನು ಅಭಿವೃದ್ದಿ ಹಂತದಲ್ಲಿರುವುದರಿಂದ ವಾಟ್ಸಾಪ್ ಬೀಟಾ ಪರೀಕ್ಷಕರಿಗೆ ಲಬ್ಯವಾಗುವುದಕ್ಕೆ ಇನ್ನು ಕೆಲವು ಸಮಯ ಬೇಕಾಗಬಹುದು ಎಂದು ವರದಿಯಾಗಿದೆ.

ಇನ್ನು ವಾಟ್ಸಾಪ್ನ ಡೆಸ್ಕ್ಟಾಪ್ ಆವೃತ್ತಿಯಲ್ಲಿ ಚಾಟ್ಬಬಲ್ ಕಲರ್ ಪರಿಚಯಿಸಲಿದೆ ಎನ್ನಲಾಗಿದೆ. ತನ್ನ ವಿಂಡೋಸ್ ಮತ್ತು ಮ್ಯಾಕೋಸ್ ಅಪ್ಲಿಕೇಶನ್ಗಳಿಗೆ ಹೊಸ ಬಣ್ಣವನ್ನು ತರುತ್ತಿದೆ ಎಂದು ಹೇಳಲಾಗಿದೆ. ಈ ಹೊಸ ಕಲರ್ ಪ್ಲಾನ್ ಡಾರ್ಕ್ ಥೀಮ್ನಲ್ಲಿ ಗೋಚರಿಸುತ್ತದೆ ಎಂದು ವರದಿಯಾಗಿದೆ. ಅಲ್ಲದೆ ಚಾಟ್ ಬಬಲ್ಗಳು ಹಸಿರು ಬಣ್ಣದ್ದಲ್ಲಿವೆ, ಮುಂದಿನ ದಿನಗಳಲ್ಲಿ ಇವುಗಳ ಬಣ್ಣ ಬದಲಾಗಲಿದೆ ಎನ್ನಲಾಗಿದೆ. ಚಾಟ್ ಬಾರ್ ಮತ್ತು ಬ್ಯಾಕ್ಗ್ರೌಡ್ ಬಣ್ಣವು ಈಗ ಬ್ಲೂ ಕಲರ್ ಅನ್ನು ಪಡೆದುಕೊಳ್ಳುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.

ಇದಲ್ಲದೆ ವಾಟ್ಸಾಪ್ ಬ್ಯುಸಿನೆಸ್ ಅಕೌಂಟ್ ಬಳಸುವವರಿಗಾಗಿ ಸರ್ಚ್ ಫಿಲ್ಟರ್ ಅನ್ನು ಹೆಚ್ಚು ಮಾಡಲು ಮುಂದಾಗಿದೆ. ಬ್ಯುಸಿನೆಸ್ ಅಕೌಂಟ್ ಮೂಲಕ ಬಳಕೆದಾರರು ತಮ್ಮ ಹತ್ತಿರದ ವ್ಯವಹಾರಗಳನ್ನು ಫಿಲ್ಟರ್ ಮಾಡಲು ಅನುಕೂಲವಾಗಲಿದೆ. ಸರ್ಚ್ ಫಿಲ್ಟರ್ ಫೀಚರ್ಸ್ ಆಂಡ್ರಾಯ್ಡ್ ಮತ್ತು ಐಒಎಸ್ನಲ್ಲಿನ ವಾಟ್ಸಾಪ್ ಬ್ಯುಸಿನೆಸ್ ಬೀಟಾ ಆವೃತ್ತಿಯಲ್ಲಿ ಪರಿಯಿಸಲಾಗಿದೆ. ನಿಮ್ಮ ಚಾಟ್ಗಳು ಮತ್ತು ಸಂದೇಶಗಳಿಗಾಗಿ ನೀವು ಸರ್ಚ್ ಮಾಡಿದರೆ ನಿಮಗೆ ಅನೇಕ ಆಯ್ಕೆಗಳನ್ನು ನೀಡಲಿದೆ. ಸಂಪರ್ಕಗಳು, ಸಂಪರ್ಕವಿಲ್ಲದವರು ಮತ್ತು ಓದದಿರುವುದು ಎನ್ನುವ ಆಯ್ಕೆಗಳನ್ನು ನೀಡಲಿದೆ ಎಂದು ವಾಟ್ಸಾಪ್ ಹೇಳಿದೆ.

ಈ ಆಯ್ಕೆಗಳ ಮೂಲಕ ಬಳಕೆದಾರರು ಅಗತ್ಯವಿರುವ ಮಾಹಿತಿಯನ್ನು ಸುಲಭವಾಗಿ ಪ್ರವೇಶಿಸಬಹುದು. ಫೋಟೋಗಳು, gifಗಳು, ವೀಡಿಯೊಗಳು, ಆಡಿಯೋ, ಲಿಂಕ್ಗಳು ಮತ್ತು ಡಾಕ್ಯುಮೆಂಟ್ಗಳನ್ನು ಸರ್ಚ್ ಮಾಡಲು ಇದರಿಂದ ಸುಲಭವಾಗಲಿದೆ. ಇದರಿಂದ ನೀವು ಹುಡುಕಲು ಬಯಸುವ ಪೈಲ್ ಸಂಪರ್ಕದಲ್ಲಿರುವವರು, ಸಂಪರ್ಕವಿಲ್ಲದವರು, ಓದದಿರುವುದು ಆಯ್ಕೆಗಳಲ್ಲಿ ಹುಡುಕಬಹುದಾಗಿದೆ. ಈ ಹೆಚ್ಚುವರಿ ವರ್ಗಗಳು ಬಳಕೆದಾರರಿಗೆ ಸರ್ಚ್ ಅನ್ನು ಪರಿಣಾಮಕಾರಿಯಾಗಿ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಈ ಫೀಚರ್ಸ್ ವಾಟ್ಸಾಪ್ ಬ್ಯುಸಿನೆಸ್ ಆವೃತ್ತಿಯಲ್ಲಿ ಮಾತ್ರ ಲಭ್ಯವಾಗಲಿದೆ. ಸಾಮಾನ್ಯ ವಾಟ್ಸಾಪ್ ಅಕೌಂಟ್ನಲ್ಲಿ ಈ ಫೀಚರ್ಸ್ ಲಭ್ಯವಿರುವುದಿಲ್ಲ. ಏಕೆಂದರೆ ಈ ಫೀಚರ್ಸ್ ವಾಟ್ಸಾಪ್ ಬ್ಯುಸಿನೆಸ್ ಅಕೌಂಟ್ನಲ್ಲಿ ಮಾತ್ರ ಉಪಯುಕ್ತವಾಗಿರಲಿದೆ ಎಂದು ಹೇಳಲಾಗಿದೆ.
-
54,535
-
1,19,900
-
54,999
-
86,999
-
49,975
-
49,990
-
20,999
-
1,04,999
-
44,999
-
64,999
-
20,699
-
49,999
-
11,499
-
54,999
-
7,999
-
8,980
-
17,091
-
10,999
-
34,999
-
39,600
-
25,750
-
33,590
-
27,760
-
44,425
-
13,780
-
1,25,000
-
45,990
-
1,35,000
-
82,999
-
17,999