ಸದ್ಯದಲ್ಲಿಯೇ ಭಾರತಕ್ಕೆ ಎಂಟ್ರಿ ನೀಡಲಿವೆ ನೋಕಿಯಾದ ಎರಡು ಸ್ಮಾರ್ಟ್‌ಟಿವಿಗಳು!

|

ಜನಪ್ರಿಯ ಮೊಬೈಲ್ ಸಂಸ್ಥೆ ನೋಕಿಯಾ ಈಗಾಗಲೇ ಸ್ಮಾರ್ಟ್‌ ಟಿವಿ ವಲಯದಕ್ಕೂ ಎಂಟ್ರಿ ಕೊಟ್ಟಿರುವುದು ನಿಮಗೆ ತಿಳಿದಿದೆ. ಭಿನ್ನ ಪ್ರೈಸ್‌ಟ್ಯಾಗ್‌ನಲ್ಲಿ ಸ್ಮಾರ್ಟ್‌ಟಿವಿಗಳನ್ನು ಪರಿಚಯಿಸಿ ಗ್ರಾಹಕರಿಂದ ಸೈ ಅನಿಸಿಕೊಂಡಿದೆ. ಅದರ ಮುಂದುವರಿದ ಆವೃತ್ತಿಯಾಗಿ ನೋಕಿಯಾ ಇದೀಗ 43 ಇಂಚಿನ ಮತ್ತು 65 ಇಂಚಿನ ಎರಡು ಹೊಸ ಸ್ಮಾರ್ಟ್‌ ಟಿವಿಗಳನ್ನು ಭಾರತೀಯ ಮಾರುಕಟ್ಟೆಗೆ ಪರಿಚಯಿಸಲು ಸಜ್ಜಾಗಿದೆ.

ನೋಕಿಯಾ

ಹೌದು, ನೋಕಿಯಾ ಈಗ 32 ಇಂಚಿನ ಮತ್ತು 50 ಇಂಚಿನ ವೇರಿಯಂಟ್‌ ಮಾದರಿಗಳಲ್ಲಿ ಬರಲಿವೆ. ಈ ಎರಡು ಸ್ಮಾರ್ಟ್ ಟಿವಿಗಳು ಕ್ರಮವಾಗಿ 32TAHDN ಮತ್ತು 50TAUHDN ಮಾದರಿ ಸಂಖ್ಯೆಗಳನ್ನು ಹೊಂದಿವೆ. ನೋಕಿಯಾ ತನ್ನ 65 ಇಂಚಿನ ಸ್ಮಾರ್ಟ್ ಟಿವಿಯನ್ನು ಭಾರತದಲ್ಲಿ ಬಿಡುಗಡೆ ಮಾಡಿದ ನಂತರ ಈ ಸರಣಿ ಲಾಂಚ್ ಆಗಲಿದೆ. ಆದರೆ ಈ ಎರಡು ಸ್ಮಾರ್ಟ್‌ಟಿವಿಗಳ ಫೀಚರ್ಸ್‌ ಬಗ್ಗೆ ಸಾಕಷ್ಟು ನಿರೀಕ್ಷೆ ಮೂಡಿವೆ.

ಡಿಸ್‌ಪ್ಲೇಗಳು

ನೋಕಿಯಾ ಕಂಪನಿಯು ಇತ್ತೀಚೆಗೆ ಬಿಡುಗಡೆ ಮಾಡಿದ 65 ಇಂಚಿನ ಮಾದರಿಯಂತೆ, ಎಲ್ಲಾ ಹೊಸ ಸ್ಮಾರ್ಟ್ ಟಿವಿ 4K ಡಿಸ್‌ಪ್ಲೇಯನ್ನು ಒಳಗೊಂಡಿರಲಿವೆ. ಈ ಡಿಸ್‌ಪ್ಲೇಗಳು 480nits ಬ್ರೈಟ್ನೆಸ್‌ ಒದಗಿಸುವ ಸಾಮರ್ಥ್ಯ ಪಡೆದಿರಲಿವೆ. ಹಾಗೆಯೇ ಟಿವಿಗಳು ಡಾಲ್ಬಿ ವಿಷನ್‌ಗೆ ಸೌಲಭ್ಯದ ಬೆಂಬಲವನ್ನು ಪಡೆದಿರಲಿವೆ. ಮತ್ತು ಬುದ್ಧಿವಂತ ಡಿಮ್ಮಿಂಗ್ ಫೀಚರ್‌ನೊಂದಿಗೆ 178- ಡಿಗ್ರಿ ವೀಕ್ಷಣಾ ಕೋನ ಸಕ್ರಿಯಗೊಂಡಿರಲಿದೆ.

 9.0 ಓಎಸ್

ಇತ್ತೀಚಿಗಷ್ಟೆ ಬಿಡುಗಡೆ ಆಗಿರುವ ನೋಕಿಯಾ 65-ಇಂಚಿನ ಸ್ಮಾರ್ಟ್ ಟಿವಿ ಪ್ಯೂರ್ಎಕ್ಸ್ ಕ್ವಾಡ್-ಕೋರ್ ಪ್ರೊಸೆಸರ್ ಜೊತೆಗೆ Mali 450ಎಂಪಿ 4 ಗ್ರಾಫಿಕ್ಸ್‌ ಸೌಲಭ್ಯವನ್ನು ಪಡೆದಿದೆ. ಹಾಗೆಯೇ ಈ ಸ್ಮಾರ್ಟ್‌ ಟಿವಿಯು 2.25GB RAM ಮತ್ತು 16GB ಆಂತರಿಕ ಸಂಗ್ರಹ ವ್ಯವಸ್ಥಯನ್ನು ಒಳಗೊಂಡಿದೆ. ಇನ್ನು ಈ ಸ್ಮಾರ್ಟ್‌ಟಿವಿಯು ಆಂಡ್ರಾಯ್ಡ್ 9.0 ಓಎಸ್‌ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸುತ್ತದೆ.

ಆಡಿಯೊ ಸಪೋರ್ಟ್

ಇನ್ನು ಈ ಸ್ಮಾರ್ಟ್‌ಟಿವಿಯು 24W ಸಾಮರ್ಥ್ಯದ ಬಾಟಮ್‌ನಲ್ಲಿ ಫೈರಿಂಗ್ ಸ್ಪೀಕರ್ಸ್‌ಗಳಿವೆ. ಹಾಗೆಯೇ ಜೆಬಿಎಲ್‌ ಸ್ಪೀಕರ್ಸ್‌ಗಳನ್ನು ಒಳಗೊಂಡಿದ್ದು, ಡಾಲ್ಬಿ ಆಡಿಯೊ ಸಪೋರ್ಟ್‌ ಸಹ ಇದೆ. ಮತ್ತು ಡಿಟಿಎಸ್‌ TruSurround ತಂತ್ರಜ್ಞಾನದ ಸೌಂಡ್‌ ಕ್ವಾಲಿಟಿ ಸೌಲಭ್ಯಗಳನ್ನು ಪಡೆದುಕೊಂಡಿದೆ. ನೋಕಿಯಾದ ಹೊಸ ಸ್ಮಾರ್ಟ್‌ಟಿವಿಯು ನೆಟ್‌ಫ್ಲಿಕ್ಸ್‌, ಯೂಟ್ಯೂಬ್ ಹಾಗೂ ಗೂಗಲ್ ಅಸಿಸ್ಟಂಟ್ ಸೌಲಭ್ಯಗಳನ್ನು ಹೊಂದಿದೆ. ಹಾಗೆಯೇ ಕ್ರೋಮ್‌ಕಾಸ್ಟ್‌ ಕನೆಕ್ಟ್ ಆಯ್ಕೆ ನೀಡಲಾಗದ್ದು, ಈ ಆಯ್ಕೆ ಮೂಲಕ ಸ್ಮಾರ್ಟ್‌ಫೋನ್‌ಗೆ ಸರಳವಾಗಿ ಕನೆಕ್ಟ್‌ ಮಾಡಬಹುದಾಗಿದೆ. ಫ್ಲಿಪ್‌ಕಾರ್ಟ್‌ ತಾಣದಲ್ಲಿ ಈ ಟಿವಿಯ ಬೆಲೆ 64,999ರೂ.ಆಗಿದೆ.

Most Read Articles
Best Mobiles in India

English summary
Nokia's upcoming Smart TVs will come in 32-inch and 50-inch variants.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X