ಭಾರತದಲ್ಲಿ 'ನೋಕಿಯಾ 5310' ಫೋನ್ ಲಾಂಚ್!..ಬೆಲೆ ಜಸ್ಟ್ 3,399ರೂ!

|

ಮೊಬೈಲ್ ವಲಯದಲ್ಲಿ ಇಂದಿಗೂ ಎವರ್‌ಗ್ರೀನ್ ಸ್ಥಾನ ಪಡೆದಿರುವ ನೋಕಿಯಾ ಕಂಪನಿಯ ಕೆಲವು ಫೋನ್‌ಗಳು ಇಂದಿಗೂ ಡಿಮ್ಯಾಂಡ್ ಹೊಂದಿವೆ. ಆ ಪೈಕಿ ನೋಕಿಯಾ ತನ್ನ ಜನಪ್ರಿಯ ನೋಕಿಯಾ (5310) ಎಕ್ಸ್‌ಪ್ರೆಸ್‌ ಮ್ಯೂಸಿಕ್ ಫೋನ್‌ ಅನ್ನು ಸಂಸ್ಥೆಯು ಇದೀಗ ಭಾರತದಲ್ಲಿ ಬಿಡುಗಡೆ ಮಾಡಿದೆ. ಈ ಫೋನ್ ಹಳೆಯ ಗತ್ತಿನೊಂದಿಗೆ ನೂತನ ಫೀಚರ್ಸ್‌ಗಳ ರಂಗನ್ನು ಮೆತ್ತಿಕೊಂಡು ಮಾರುಕಟ್ಟೆಗೆ ಎಂಟ್ರಿ ಪಡೆದಿದೆ.

ಎಕ್ಸ್‌ಪ್ರೆಸ್‌ ಮ್ಯೂಸಿಕ್

ಹೌದು, ಮೊಬೈಲ್ ಮಾರುಕಟ್ಟೆಯಲ್ಲಿ ಭಾರಿ ಸದ್ದು ಮಾಡಿದ್ದ ನೋಕಿಯಾ ಸಂಸ್ಥೆಯ ಮತ್ತೆ ಹೊಸ ಅವತರಣಿಕೆಯಲ್ಲಿ 'ನೋಕಿಯಾ ಎಕ್ಸ್‌ಪ್ರೆಸ್‌ ಮ್ಯೂಸಿಕ್ (5310)' ಫೋನ್‌ ಅನ್ನು ದೇಶದಲ್ಲಿ ಲಾಂಚ್ ಮಾಡಿದೆ. ಈ ಫೋನ್ MP3 ಮ್ಯೂಸಿಕ್ ಹಾಗೂ FM ರೇಡಿಯೊ ಸೌಲಭ್ಯಗಳನ್ನು ಒಳಗೊಂಡಿದೆ. ಫ್ರಂಟ್ ಫೇಸಿಂಗ್ ಮಾದರಿಯ ಎರಡು ಸ್ಪೀಕರ್‌ಗಳನ್ನು ಹೊಂದಿದ್ದು, ಕ್ಲಾಸಿಕ್ ಡಿಸೈನ್‌ ಲುಕ್‌ನಲ್ಲಿ ಕಂಗೊಳಿಸುತ್ತದೆ.

ವಿನ್ಯಾಸ

ಈ ಫೋನ್ ವೃತ್ತಾಕಾರದ ವಿನ್ಯಾಸ, ಸೊಗಸಾದ ಕೀ ಪ್ಯಾಡ್‌, ಉತ್ತಮ ಡಿಸ್ಪ್ಲೇ ರಚನೆಗಳಿಂದ ಆಕರ್ಷಕವಾಗಿದೆ. ಹಾಗೆಯೇ ಈ ಫೋನ್ ಬ್ಲ್ಯಾಕ್ ಮತ್ತು ರೆಡ್ ಬಣ್ಣಗಳ ಸಮ್ಮಿಶ್ರದಲ್ಲಿ ಬಣ್ಣಗಳ ಆಯ್ಕೆಯನ್ನು ಪಡೆದಿದೆ. ನಂಬರ್ ಕೀ ಪ್ಯಾಡ್ ಮಾದರಿಯನ್ನು ಹೊಂದಿದ್ದು, ಐದು ನ್ಯಾವಿಗೇಶನ್ ಬಟನ್ ಹೊಂದಿದೆ. ಇನ್ನು ಈ ಫೋನ್ ಕ್ಲಾಸಿಕ್ ಹಾಗೂ ಫೀಚರ್‌ ಫೋನ್ ಮಾದರಿಯ ಓಎಸ್‌ನಲ್ಲಿ ಕಾರ್ಯನಿರ್ವಹಿಸಲಿದೆ.

ಬ್ಯಾಟರಿ

ನೋಕಿಯಾ 5310 ಫೋನ್ ಡ್ಯುಯಲ್ ಸಿಮ್ ಸೌಲಭ್ಯವನ್ನು ಪಡೆದಿದ್ದು, ದೀರ್ಘಾವಧಿಯ ಬ್ಯಾಟರಿ ಅವಧಿಯನ್ನು ಹೊಂದಿದೆ. ಸ್ಟ್ಯಾಂಡ್‌ಬೈ ಮೋಡ್‌ನಲ್ಲಿ ಸುಮಾರು 22 ದಿನಗಳವರೆಗೆ ಬ್ಯಾಟರಿ ಬ್ಯಾಕ್‌ಅಪ್‌ ಒದಗಿಸುತ್ತದೆ. ಸಿಂಗಲ್ ಕೋರ್ 0.36GHz ಪ್ರೊಸೆಸರ್ ಜೊತೆಗೆ ಉತ್ತಮ RAM ಹಾಗೂ 32GB ಆಂತರಿಕ ಸ್ಟೋರೇಜ್ ಪಡೆದಿದೆ. ಎಸ್‌ಡಿ ಕಾರ್ಡ್‌ ಮೂಲಕ ಬಾಹ್ಯ ಮೆಮೊರಿ ಹೆಚ್ಚಿಸಿಕೊಳ್ಳಲು ಅವಕಾಶ ಸಹ ಇರಲಿದೆ. ಎಂಪಿ 3 ಸೌಲಭ್ಯ ಸೇರಿದಂತೆ ಇತರೆ ಮಲ್ಟೀಮೀಡಿಯಾ ಆಯ್ಕೆಗಳನ್ನು ಒಳಗೊಂಡಿದೆ.

ಡಿಸ್‌ಪ್ಲೇಯು

ಇನ್ನು ಈ ಫೋನ್ ಡಿಸ್‌ಪ್ಲೇಯು 2.4 ಆಗಿರಲಿದ್ದು, ಡಿಸ್‌ಪ್ಲೇಯು 240x320px ಪಿಕ್ಸಲ್ ರೆಸಲ್ಯೂಶನ್ ಪಡೆದಿದೆ. ಹಾಗೆಯೇ 1,200mAh ಸಾಮರ್ಥ್ಯ ಬ್ಯಾಟರಿ ಬ್ಯಾಕ್‌ಅಪ್ ಅನ್ನು ಹೊಂದಿದೆ. ಫೋನ್ ಹಿಂಬದಿಯಲ್ಲಿ 0.3ಎಂಪಿಯ ಸಿಂಗಲ್ ಕ್ಯಾಮೆರಾ ಇರಲಿದ್ದು, ವಿಡಿಯೊ ರೆಕಾರ್ಡಿಂಗ್ ಸಪೋರ್ಟ್ ಇಲ್ಲ. ಎಲ್‌ಇಡಿ ಫ್ಲ್ಯಾಶ್‌ ಲೈಟ್ ಸೌಲಭ್ಯ ಇರಲಿದೆ. ಈ ಫೋನ್ 13.1mm ದಪ್ಪವಾಗಿದ್ದು, ಜೊತೆಗೆ 88ಗ್ರಾಂ ತೂಕವನ್ನು ಪಡೆದಿದೆ.

ಬೆಲೆಯು

ಭಾರತದಲ್ಲಿ ನೋಕಿಯಾ 5310 ಬೆಲೆಯು 3,399 ರೂ.ಗಳಾಗಿದೆ. ಇನ್ನು ಈ ಫೋನ್ ಇದೇ ಜೂನ್ 23 ರಿಂದ ಅಮೆಜಾನ್ ಹಾಗೂ ನೋಕಿಯಾ ವೆಬ್‌ಸೈಟ್‌ ಇ-ಸ್ಟೋರ್‌ಗಳಲ್ಲಿ ಖರೀದಿಸಲು ಇದು ಲಭ್ಯವಿರುತ್ತದೆ. ಕೆಲವು ವಾರಗಳ ಆನ್‌ಲೈನ್‌ ಮಾರಾಟದ ನಂತರ ಭಾರತದ ರಿಟೇಲ್ ಮಾರಾಟ ಮಳಿಗೆಗಳಲ್ಲಿ ಲಭ್ಯವಾಗಲಿದೆ.

Most Read Articles
Best Mobiles in India

English summary
The Nokia 5310 remixes classic design with a slick new feel and battery that’s built to last, keeping you connected day after day.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X