ಬಹು ನಿರೀಕ್ಷಿತ ನೋಕಿಯಾ 9.3 ಪ್ಯೂರ್ ವ್ಯೂ ಬಿಡುಗಡೆಯ ದಿನಾಂಕ ಬಹಿರಂಗ!

|

ಟೆಕ್‌ ವಲಯದಲ್ಲಿ ಎವರ್‌ಗ್ರೀನ್‌ ಮೊಬೈಲ್‌ ಬ್ರಾಂಡ್‌ ಎನಿಸಿಕೊಂಡಿರುವ ನೋಕಿಯಾ ತನ್ನ ಗುಣಮಟ್ಟದ ಸ್ಮಾರ್ಟ್‌ಫೋನ್‌ಗಳಿಂದ ಗುರುತಿಸಿಕೊಂಡಿದೆ. ಸದ್ಯ ಈ ವರ್ಷ ಮೂರು ಹೊಸ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡುವ ನಿರೀಕ್ಷೆಯಿದೆ. ಅದರಲ್ಲೂ ಮಾರುಕಟ್ಟೆಯಲ್ಲಿ ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿರುವ ನೋಕಿಯಾ 9.3 ಪ್ಯೂರ್ ವ್ಯೂ, ನೋಕಿಯಾ 7.3 ಮತ್ತು ನೋಕಿಯಾ 6.3 ಸ್ಮಾರ್ಟ್‌ಫೋನ್‌ ಈ ವರ್ಷದ ಮೂರನೇ ತ್ರೈಮಾಸಿಕದ ಕೊನೆಯಲ್ಲಿ ಅಥವಾ ನಾಲ್ಕನೇ ತ್ರೈಮಾಸಿಕದ ಆರಂಭದಲ್ಲಿ ಬಿಡುಗಡೆ ಆಗುವ ನಿರೀಕ್ಷೆಯಿದೆ.

ನೋಕಿಯಾ

ಹೌದು, ಮಾರುಕಟ್ಟೆಯಲ್ಲಿ ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿರುವ ನೋಕಿಯಾ 9.3 ಪ್ಯೂರ್ ವ್ಯೂ, ನೋಕಿಯಾ 7.3 ಮತ್ತು ನೋಕಿಯಾ 6.3 ಸ್ಮಾರ್ಟ್‌ಫೋನ್‌ಗಳು ಇದೇ ವರ್ಷ ಬಿಡುಗಡೆ ಆಗುವುದು ಪಕ್ಕಾ ಆಗಿದೆ. ಅದರಲ್ಲೂ ಇದೇ ವರ್ಷದ ಮೂರನೆ ತ್ರೈಮಾಸಿಕದ ಕೊನೆಯಲ್ಲಿ ಈ ಸ್ಮಾರ್ಟ್‌ಫೋನ್‌ಗಳು ಬಿಡುಗಡೆ ಆಗಲಿವೆ ಎಂದು ಕಂಪೆನಿ ಸ್ಪಷ್ಟಪಡಿಸಿದೆ. ಸದ್ಯ ಈಗಾಗಲೇ ಈ ಸ್ಮಾರ್ಟ್‌ಫೋನ್‌ನ ಎಲ್ಲಾ ಹಂತದ ಪರೀಕ್ಷೆಗಳು ಪ್ರಾರಂಭವಾಗಿದ್ದು,ಇನ್ನೇ ಬಿಡುಗಡೆ ಮಾಡಲು ಎಚ್‌ಎಂಡಿ ಗ್ಲೋಬಲ್ ಸಿದ್ದತೆ ನಡೆಸಿದೆ ಎನ್ನಲಾಗ್ತಿದೆ.

ಸ್ಮಾರ್ಟ್‌ಫೋನ್‌

ಇನ್ನು ಈ ಮೂರು ಸ್ಮಾರ್ಟ್‌ಫೋನ್‌ಗಳು ಇದೇ ಆಗಸ್ಟ್ ಅಥವಾ ಸೆಪ್ಟೆಂಬರ್‌ನಲ್ಲಿ ಬಿಡುಗಡೆ ಆಗಲಿವೆ ಎಂದು ವರದಿ ಆಗಿತ್ತು. ಆದರೆ ಇದೀಗ ಮೂರನೇ ತ್ರೈಮಾಸಿಕದ ಕೊನೆಯಲ್ಲಿ ಬಿಡುಗಡೆ ಆಗುವುದು ಪಕ್ಕಾ ಎನಿಸಿದೆ. ಅಲ್ಲದೆ ವಿಳಂಬವಾಗಿದ್ದರೂ ಸಹ ಅದನ್ನು ಆರಂಭಿಕ Q4ಗೆ ವಿಸ್ತರಿಸಲಾಗುತ್ತದೆ. ಕೋವಿಡ್ -19 ಪರಿಸ್ಥಿತಿ ಹೊಸ ನೋಕಿಯಾ ಫೋನ್‌ಗಳ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದರ ಮೇಲೆ ಇದು ಅವಲಂಬಿತವಾಗಿರುತ್ತದೆ ಎಂದು ಎನ್‌ಪಿಯು ವರದಿ ಮಾಡಿದೆ.

ನೋಕಿಯಾ

ಇದಲ್ಲದೆ ನೋಕಿಯಾ 9.3 ಪ್ಯೂರ್ ವ್ಯೂ ಮತ್ತು ಮಿಡ್-ರೇಂಜರ್ಸ್ ನೋಕಿಯಾ 7.3 ಮತ್ತು ನೋಕಿಯಾ 6.3 ಹೊಸ ಮಾದರಿಯ ಸ್ಮಾರ್ಟ್‌ಫೋನ್‌ ಆಗಿದ್ದು, ಯುವಜನತೆಯ ಆಶಯಕ್ಕೆ ತಕ್ಕಂತೆ ಇರಲಿದೆ ಎನ್ನಲಾಗಿದೆ. ನೋಕಿಯಾ 9.3 ಪ್ಯೂರ್ ವ್ಯೂ ಪೆಂಟಾ-ಕ್ಯಾಮೆರಾ ಸೆಟ್‌ಅಪ್‌ ಹೊಂದಿರುವ ನಿರೀಕ್ಷೆಯಿದೆ. ಇವುಗಳಲ್ಲಿ 108 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಇರುತ್ತದೆ ಎಂದು ಹೇಳಲಾಗ್ತಿದೆ. ಇನ್ನು ನೋಕಿಯಾ 9.3 ಪ್ಯೂರ್‌ವ್ಯೂ 120 Hz ಡಿಸ್ಪ್ಲೇಯನ್ನು ಸಹ ಹೊಂದಿದೆ ಎಂದು ಹೇಳಲಾಗುತ್ತಿದೆ. ಅಲ್ಲದೆ ಇದು ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್ 865 ಪ್ರೊಸೆಸರ್ ಹೊಂದಿರುವ ಸಾದ್ಯತೆ ಇದೆ.ಇನ್ನು ನೋಕಿಯಾ 7.3 ಕ್ವಾಡ್-ಕ್ಯಾಮೆರಾ ಸೆಟ್‌ಅಪ್‌ ಹೊಂದಿದ್ದು, 48 ಮೆಗಾಪಿಕ್ಸೆಲ್ ಅಥವಾ 64 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಪ್ರೈಮರಿ ಕ್ಯಾಮೆರಾವನ್ನು ಹೊಂದಿರುವ ಸಾದ್ಯತೆ ಇದೆ. ಇದರೊಂದಿಗೆ ಅಲ್ಟ್ರಾ-ವೈಡ್ ಆಂಗಲ್ ಲೆನ್ಸ್, ಡೆಪ್ತ್ ಸೆನ್ಸಾರ್ ಮತ್ತು ಮ್ಯಾಕ್ರೋ ಲೆನ್ಸ್ ಒಳಗೊಂಡಿರುವ ಸಾದ್ಯತೆ ಇದೆ.

ನೋಕಿಯಾ

ಅಲ್ಲದೆ ನೋಕಿಯಾ 7.3 24 ಮೆಗಾಪಿಕ್ಸೆಲ್ ಅಥವಾ 32 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ ಎಂದು ವದಂತಿಗಳಿವೆ. ಅಲ್ಲದೆ ಈ ನೋಕಿಯಾ ಫೋನ್ 24 ಮೆಗಾಪಿಕ್ಸೆಲ್ ಪ್ರೈಮರಿ ಸೆನ್ಸಾರ್‌,ಎರಡನೇ ಕ್ಯಾಮೆರಾ 12 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಆಂಗಲ್ ಲೆನ್ಸ್, ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಡೆಪ್ತ್‌ ಸೆನ್ಸಾರ್‌, ಮತ್ತು ನಾಲ್ಕನೇ ಮ್ಯಾಕ್ರೋ ಲೆನ್ಸ್ ಹೊಂದಿರುವ ಕ್ವಾಡ್ ಕ್ಯಾಮೆರಾ ಸೆಟಪ್ ಅನ್ನು ಸಹ ಹೊಂದಿದೆ ಎಂದು ಹೇಳಲಾಗಿದೆ. ನೋಕಿಯಾ 6.3 ಸ್ಮಾರ್ಟ್‌ಫೋನ್‌ನಲ್ಲಿ 3GB RAM ಮತ್ತು 64GB ಆಂತರಿಕ ಸಂಗ್ರಹ ಸಾಮರ್ಥ್ಯವನ್ನು ಒಳಗೊಂಡಿವೆ ಎನ್ನಲಾಗ್ತಿದೆ. ಇದರ ಬೆಲೆ ಸುಮಾರು, 20,600 ರೂ, ಆಗಿರಬಹುದು ಎನ್ನಲಾಗ್ತಿದೆ.

Most Read Articles
Best Mobiles in India

English summary
Nokia 9.3 PureView is expected to continue with the penta-camera setup featuring a 108-megapixel primary sensor.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X