ನೋಕಿಯಾ C3 ಸ್ಮಾರ್ಟ್‌ಫೋನ್‌ ಬೆಲೆಯಲ್ಲಿ ಭಾರಿ ಇಳಿಕೆ!

|

ನೋಕಿಯಾ ಸಂಸ್ಥೆಯು ಆಕರ್ಷಕ ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸಿ ಸೈ ಅನಿಸಿಕೊಂಡಿದೆ. ಆ ಪೈಕಿ ಎಂಟ್ರಿ ಲೆವೆಲ್‌ ಫೋನ್‌ಗಳಲ್ಲಿ ನೋಕಿಯಾ C3 ಫೋನ್ ಹೆಚ್ಚು ಆಕರ್ಷಕ ಅನಿಸಿದೆ. ಇದೀಗ ಈ ಸ್ಮಾರ್ಟ್‌ಫೋನ್‌ ಬೆಲೆಯಲ್ಲಿ ಭರ್ಜರಿ ಇಳಿಕೆ ಆಗಿದೆ. ಈ ಸ್ಮಾರ್ಟ್‌ಫೋನ್ 3GB RAM +32GB ಸ್ಟೋರೇಜ್‌ ಆಯ್ಕೆಯನ್ನು ಪಡೆದಿದೆ.

ನೋಕಿಯಾ

ಹೌದು, ನೋಕಿಯಾ ಸಂಸ್ಥೆಯ ನೋಕಿಯಾ C3 ಸ್ಮಾರ್ಟ್‌ಫೋನ್ 2GB RAM + 16GB ಬೇಸ್‌ ವೇರಿಯಂಟ್‌ ಮಾಡೆಲ್‌ನಲ್ಲಿ 500ರೂ. ಕಡಿತ ಆಗಿದ್ದು, 3GB RAM +32GB ಸ್ಟೋರೇಜ್‌ ವೇರಿಯಂಟ್‌ ಬೆಲೆಯಲ್ಲಿ 1000ರೂ. ಗಳ ಇಳಿಕೆ ಆಗಿದೆ. ಇನ್ನು ಈ ಸ್ಮಾರ್ಟ್‌ಫೋನ್ ಬ್ಲೂ ಹಾಗೂ ಸ್ಯಾಂಡ್ ಬಣ್ಣಗಳ ಆಯ್ಕೆಯನ್ನು ಹೊಂದಿದೆ. ಇನ್ನುಳಿದಂತೆ ನೋಕಿಯಾ C3 ಸ್ಮಾರ್ಟ್‌ಫೋನ್‌ ಫೀಚರ್ಸ್‌ಗಳು ಹೇಗಿವೆ ಎಂಬುದನ್ನು ಮುಂದೆ ತಿಳಿಯಿರಿ.

ಡಿಸ್‌ಪ್ಲೇ ವಿನ್ಯಾಸ

ಡಿಸ್‌ಪ್ಲೇ ವಿನ್ಯಾಸ

ನೋಕಿಯಾ C3 ಸ್ಮಾರ್ಟ್‌ಫೋನ್ 720×1440 ಪಿಕ್ಸಲ್ ರೆಸಲ್ಯೂಶನ್‌ ಸಾಮರ್ಥದೊಂದಿಗೆ 5.9 ಇಂಚಿನ ಹೆಚ್‌ಡಿ ಪ್ಲಸ್‌ IPS ಡಿಸ್‌ಪ್ಲೇ ಅನ್ನು ಹೊಂದಿದೆ. ಡಿಸ್‌ಪ್ಲೇಯ ಪ್ರತಿ ಇಂಚಿನ ಪಿಕ್ಸಲ್ ಸಾಂದ್ರತೆಯು 269 PPI ಆಗಿದೆ. ಡಿಸ್‌ಪ್ಲೇಯ ಅನುಪಾತವು 18:9 ಆಗಿದ್ದು, ಸ್ಕ್ರೀನ್‌ನಿಂದ ಬಾಹ್ಯ ಬಾಡಿಯ ಅಡುವಿನ ಅಂತರ ಶೇ.75.2% ಆಗಿದೆ.

ಪ್ರೊಸೆಸರ್ ಯಾವುದು

ಪ್ರೊಸೆಸರ್ ಯಾವುದು

ನೋಕಿಯಾ C3 ಸ್ಮಾರ್ಟ್‌ಫೋನ್ 28nm ಬೇಸ್ಡ್ Unisoc SC9863A ಆಕ್ಟಾ-ಕೋರ್ SoC ಪ್ರೊಸೆಸರ್ ಇದರಲ್ಲಿದೆ. ಈ ಪ್ರೊಸೆಸರ್‌ಗೆ ಪೂರಕವಾಗಿ ಆಂಡ್ರಾಯ್ಡ್ 10 ಓಎಸ್‌ ಬೆಂಬಲ ಇದೆ. 3GB RAM + 32GB ಆಂತರಿಕ ಸ್ಟೋರೇಜ್ ಸಾಮರ್ಥ್ಯವನ್ನು ಪಡೆದಿದ್ದು, ಎಸ್‌ಡಿ ಕಾರ್ಡ್‌ ಮೂಲಕ ಬಾಹ್ಯ ಮೆಮೊರಿಯನ್ನು ವಿಸ್ತರಿಸುವ ಅವಕಾಶ ನೀಡಲಾಗಿದೆ.

ಸಿಂಗಲ್ ಕ್ಯಾಮೆರಾ

ಸಿಂಗಲ್ ಕ್ಯಾಮೆರಾ

ನೋಕಿಯಾ C3 ಸ್ಮಾರ್ಟ್‌ಫೋನ್ ಹಿಂಬದಿಯ ಸಿಂಗಲ್ ರಿಯರ್ ಕ್ಯಾಮೆರಾ ರಚನೆ ಪಡೆದಿದ್ದು, ಅದು 8ಎಂಪಿ ಸೆನ್ಸಾರ್‌ನಲ್ಲಿದೆ. ಹಾಗೂ ಮುಂಭಾಗದ ಸೆಲ್ಫಿ ಕ್ಯಾಮೆರಾವು ಸಹ 5ಎಂಪಿ ಸೆನ್ಸಾರ್‌ನಲ್ಲಿದೆ. ಕೆಲವು ಅಗತ್ಯ ಸೆಟ್ಟಿಂಗ್ ಆಯ್ಕೆಗಳು ಇವೆ.

ಬ್ಯಾಟರಿ ಸಾಮರ್ಥ್ಯ

ಬ್ಯಾಟರಿ ಸಾಮರ್ಥ್ಯ

ನೋಕಿಯಾ C3 ಸ್ಮಾರ್ಟ್‌ಫೋನ್ 3,040mAh ಸಾಮರ್ಥ್ಯದ ಬ್ಯಾಟರಿ ಬಾಳಿಕೆಯನ್ನು ಒಳಗೊಂಡಿದ್ದು, 10W ಚಾರ್ಜಿಂಗ್ ಬೆಂಬಲ ಇದೆ. ರಿಯರ್‌ ಮೌಂಟೆಡ್‌ ಫಿಂಗರ್‌ಪ್ರಿಂಟ್ ಸ್ಕ್ಯಾನರ್‌ ಪಡೆದಿದೆ. ಇದರೊಂದಿಗೆ ಗೂಗಲ್ ಅಸಿಸ್ಟಂಟ್ ಕೀ, 5 ವಿ / 1 ಎ ಚಾರ್ಜರ್, ಎಫ್ ಎಂ ರೇಡಿಯೋ, ಬ್ಲೂಟೂತ್, ವೈಫೈ, 1 ಮೈಕ್ರೊಫೋನ್, ಇತರೆ ಆಕರ್ಷಕ ಫೀಚರ್ಸ್‌ಗಳು ಇವೆ.

ಬೆಲೆ ಎಷ್ಟು

ಬೆಲೆ ಎಷ್ಟು

ನೋಕಿಯಾ ತನ್ನ ಹೊಸ ನೋಕಿಯಾ C3 ಸ್ಮಾರ್ಟ್‌ಫೋನ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. 2GB + 16GB ವೇರಿಯಂಟ್ ಬೆಲೆಯು 6,999ರೂ. ಆಗಿದೆ. ಹಾಗೂ 3GB + 32GB ವೇರಿಯಂಟ್ 7,999ರೂ. ಪ್ರೈಸ್‌ಟ್ಯಾಗ್ ಹೊಂದಿದೆ.

Most Read Articles
Best Mobiles in India

English summary
Nokia C3’s base variant received a price cut of Rs. 500, while the 3GB RAM + 32GB storage variant received a price cut of Rs. 1,000.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X