ಶೀಘ್ರದಲ್ಲೇ ನೋಕಿಯಾ ಕಂಪೆನಿ 32 ಮತ್ತು 50 ಇಂಚಿನ ಸ್ಮಾರ್ಟ್‌ಟಿವಿ ಬಿಡುಗಡೆ!

|

ಟೆಕ್‌ ಜಗತ್ತಿನ ಎವರ್‌ಗ್ರೀನ್‌ ಮೊಬೈಲ್‌ ಬ್ರಾಂಡ್‌ ನೋಕಿಯಾ. ತನ್ನ ಭಿನ್ನ ಮಾದರಿಯ ಫೋನ್‌ಗಳ ಮೂಲಕ ಗುರುತಿಸಿಕೊಂಡಿದೆ. ಅಷ್ಟೇ ಅಲ್ಲದೆ ಸ್ಮಾರ್ಟ್‌ಟಿವಿ, ಸೇರಿದಂತೆ ಇತರೆ ಸ್ಮಾರ್ಟ್‌ ಪ್ರಾಡಕ್ಟ್‌ಗಳನ್ನು ಪರಿಚಯಿಸಿ ಗ್ರಾಹಕರಿಂದ ಸೈ ಎನಿಸಿಕೊಂಡಿದೆ. ಸದ್ಯ ಇದೀಗ ನೋಕಿಯಾ ಕಂಪೆನಿ ತನ್ನ ಮತ್ತೆರಡು ಹೊಸ ಸ್ಮಾರ್ಟ್‌ಟಿವಿಗಳನ್ನು ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಮಾಡಲು ಸಿದ್ದತೆ ನಡೆಸಿದೆ ಎಂದು ವರದಿಯಾಗಿದೆ. ಈ ಎರಡು ಸ್ಮಾರ್ಟ್‌ಟಿವಿಗಳು ಕ್ರಮವಾಗಿ 32 ಮತ್ತು 50 ಇಂಚಿನ ಗಾತ್ರದಲ್ಲಿ ಬರಲಿವೆ ಎಂದು ನಿರೀಕ್ಷಿಸಲಾಗಿದೆ.

ಸ್ಮಾರ್ಟ್‌ಟಿವಿ

ಹೌದು, ಭಾರತೀಯ ಮಾರುಕಟ್ಟೆಗೆ ಶೀಘ್ರದಲ್ಲೇ ನೋಕಿಯಾ ಕಂಪೆನಿ 32 ಮತ್ತು 50 ಇಂಚಿನ ಪರದೆ ಗಾತ್ರ ಹೊಂದಿರುವ ಎರಡು ಸ್ಮಾರ್ಟ್‌ಟಿವಿಗಳನ್ನು ಪರಿಚಯಿಸಲಿದೆ. ಇನ್ನು ಈ ಎರಡು ಸ್ಮಾರ್ಟ್ ಟಿವಿಗಳನ್ನು ಬಿಐಎಸ್ ಪ್ರಮಾಣೀಕರಣ ವೆಬ್‌ಸೈಟ್‌ನಲ್ಲಿ ಗುರುತಿಸಲಾಗಿದೆ ಎಂದು ವರದಿ ಆಗಿದೆ. ಸದ್ಯ ಇದರ ಸ್ಪೋರ್ಟಿಂಗ್ ಮಾಡೆಲ್ ಸಂಖ್ಯೆ 32 ಟಿಎಎಚ್‌ಡಿಎನ್ ಆಗಿದೆ. ಅಲ್ಲದೆ 32 ಇಂಚಿನ ನೋಕಿಯಾ ಸ್ಮಾರ್ಟ್ ಟಿವಿ ಫುಲ್‌ ಹೆಚ್‌ಡಿ ರೆಸಲ್ಯೂಶನ್ ಹೊಂದಿದೆ ಎನ್ನಲಾಗ್ತಿದೆ. ಇನ್ನುಳಿದಂತೆ ಈ ಸ್ಮಾರ್ಟ್‌ಟಿವಿ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ನೋಕಿಯಾ

ಇನ್ನು ನೋಕಿಯಾ ಬಿಡುಡೆ ಮಾಡಲಿರುವ 32 ಇಂಚಿನ ಸ್ಮಾರ್ಟ್‌ಟಿವಿ ಭಾರತದಲ್ಲಿ ಬಿಡುಗಡೆ ಆಗಲಿರುವ ನೋಕಿಯಾದ ಮೊದಲ ಫುಲ್‌ ಹೆಚ್‌ಡಿ ಸ್ಮಾರ್ಟ್ ಟಿವಿ ಆಗಿರಲಿದೆ ಎನ್ನಲಾಗ್ತಿದೆ. ಜೊತೆಗೆ 50 ಇಂಚಿನ ಮಾದರಿಯು UHD ರೆಸಲ್ಯೂಶನ್ ಹೊಂದಿರಲಿದೆ ಎನ್ನಲಾಗಿದೆ. ಅಲ್ಲದೆ ನೋಕಿಯಾದ 32 ಇಂಚಿನ ಸ್ಮಾರ್ಟ್ ಟಿವಿಯ ಬೆಲೆ 21,999ರೂ, ಹಾಗೂ 50 ಇಂಚಿನ ಮಾದರಿಗೆ 36,999ರೂ ಬೆಲೆಯನ್ನ ನಿಗದಿ ಪಡಿಸಲಾಗಿದೆ ಎನ್ನಲಾಗ್ತಿದೆ. ಇದಲ್ಲದೆ ಮುಂದಿನ ಪ್ರೀಮಿಯಂ ನೋಕಿಯಾ ಸ್ಮಾರ್ಟ್ ಟಿವಿ ಇಂಟೆಲಿಜೆಂಟ್ ಡಿಮ್ಮಿಂಗ್, ಡಿಟಿಎಸ್ ಟ್ರುಸರ್ರೌಂಡ್, ಡಾಲ್ಬಿ ಆಡಿಯೋ ಮತ್ತು ಜೆಬಿಎಲ್ ಸ್ಪೀಕರ್‌ಗಳೊಂದಿಗೆ ಬರಲಿದೆ ಎಂದು ವರದಿಯಾಗಿದೆ.

ನೋಕಿಯಾ

ನೋಕಿಯಾ ಕಂಪೆನಿಯ ಹೊಸ ಸ್ಮಾರ್ಟ್‌ಟಿವಿ ಇಂಟೆಲಿಜೆಂಟ್ ಡಿಮ್ಮಿಂಗ್, ಡಿಟಿಎಸ್ ಟ್ರುಸರ್ರೌಂಡ್, ಡಾಲ್ಬಿ ಆಡಿಯೋ ಮತ್ತು ಜೆಬಿಎಲ್ ಸ್ಪೀಕರ್‌ ಅನ್ನು ಒಳಗೊಂಡಿರಲಿದೆ ಎನ್ನಲಾಗ್ತಿದೆ. ಇದಲ್ಲದೆ ಸ್ಮಾರ್ಟ್ ಟಿವಿ CA53 ಕ್ವಾಡ್-ಕೋರ್ ಪ್ರೊಸೆಸರ್ ಹೊಂದಿದ್ದು, ಮಾಲಿ 450GPU ಹೊಂದಿರಲಿದೆ. ಇನ್ನು ಈ ಸ್ಮಾರ್ಟ್‌ಟಿವಿ 2.25GB RAM ಮತ್ತು 16GB ಆಂತರಿಕ ಸಂಗ್ರಹಣೆ ಸಾಮರ್ಥ್ಯವನ್ನು ಸಹ ಹೊಂದಿದೆ. ಇದಲ್ಲದೆ ಈ ಸ್ಮಾರ್ಟ್ ಟಿವಿ ಸಹ Chromecast ಇಂಟರ್‌ಬಿಲ್ಟ್‌ ಅನ್ನು ಒಳಗೊಂಡಿದೆ.

ನೋಕಿಯಾ

ಇದಲ್ಲದೆ ನೋಕಿಯಾ ಬ್ರಾಂಡ್ ಬಿಡುಗಡೆ ಮಾಡಿರುವ ಸ್ಮಾರ್ಟ್‌ಟಿವಿಗಳನ್ನ ಗಮನಿಸುವುದಾದರೆ ನೋಕಿಯಾದ ಮೊದಲ ಟಿವಿ ಕಳೆದ ವರ್ಷ ಡಿಸೆಂಬರ್‌ನಲ್ಲಿ ಭಾರತದಲ್ಲಿ ಬಿಡುಗಡೆ ಆಗಿತ್ತು. ಇದರ ಬೆಲೆ 41,999 ರೂ ಆಗಿದ್ದು, ಇದು 55 ಇಂಚಿನ ಯುಹೆಚ್‌ಡಿ ಡಿಸ್ಪ್ಲೇಯನ್ನು ಹೊಂದಿದೆ. ಅಲ್ಲದೆ 24W ಇಂಟರ್‌ಬಿಲ್ಟ್‌ ಸ್ಪೀಕರ್‌, ಜೆಬಿಎಲ್ ವಾಯ್ಸ್‌ , ಮತ್ತು 2.25 GB RAM ಮತ್ತು 16gb ROM ಅನ್ನು ಹೊಂದಿದೆ.

Most Read Articles
Best Mobiles in India

English summary
Nokia is working on a new 32-inch smart TV. It could also be the company’s cheapest smart TV in India so far.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X