ನೋಕಿಯಾ ಕಂಪೆನಿಯ ಮೊದಲ ಲ್ಯಾಪ್‌ಟಾಪ್‌ ಲಾಂಚ್‌! ವಿಶೇಷತೆ ಏನ್‌ ಗೊತ್ತಾ?

|

ಮೊಬೈಲ್‌ ಮಾರುಕಟ್ಟೆಯ ಎವರ್‌ ಗ್ರೀನ್‌ ಬ್ರ್ಯಾಂಡ್‌ ನೋಕಿಯಾ ಕಂಪೆನಿ ಇದೀಗ ಲ್ಯಾಪ್‌ಟಾಪ್‌ ವಲಯದಲ್ಲೂ ತನ್ನ ಪ್ರಾಬಲ್ಯ ಸಾಧಿಸಲು ಮುಂದಾಗಿದೆ. ಈಗಾಗಲೇ ಲ್ಯಾಪ್‌ಟಾಪ್‌ ಮಾರುಕಟ್ಟೆಯಲ್ಲಿ ಹಲವು ಮಾದರಿಯ ಲ್ಯಾಪ್‌ಟಾಪ್‌ಗಳು ಲಭ್ಯವಿದೆ. ಆದರೂ ನೋಕಿಯಾ ಕಂಪೆನಿ ತನ್ನ ಹೊಸ ಮಾದರಿಯ ನೋಕಿಯಾ ಪ್ಯೂರ್‌ಬುಕ್ X14 ಲ್ಯಾಪ್‌ಟಾಪ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಇದು ನೋಕಿಯಾದ ಮೊದಲ ಲ್ಯಾಪ್‌ಟಾಪ್ ಆಗಿದೆ ಮತ್ತು ಇದು ಅಲ್ಟ್ರಾಲೈಟ್ ಫಾರ್ಮ್ ಫ್ಯಾಕ್ಟರ್ ಮತ್ತು "ultra-vivid picture quality" ವನ್ನು ಹೊಂದಿದೆ.

ನೋಕಿಯಾ

ಹೌದು, ನೋಕಿಯಾ ಕಂಪೆನಿ ತನ್ನ ಮೊದಲ ಲ್ಯಾಪ್‌ಟಾಪ್‌ ನೋಕಿಯಾ ಪ್ಯೂರ್‌ಬುಕ್ X14 ಲ್ಯಾಪ್‌ಟಾಪ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಇದು ಇಂಟೆಲ್ 10 ನೇ-ಜನ್ ಪ್ರೊಸೆಸರ್‌ ಅನ್ನು ಹೊಂದಿದ್ದು, ವಿಂಡೋಸ್ 10 ಅನ್ನು ಮೊದಲೇ ಸ್ಥಾಪಿಸಲ್ಪಟ್ಟಿದೆ. ಇದು ಮಾದರಿ ಸಂಖ್ಯೆ NKi510UL85S ನೊಂದಿಗೆ ಒಂದೇ ಸಂರಚನೆಯನ್ನು ಹೊಂದಿದೆ ಮತ್ತು ಇದು ಮ್ಯಾಟ್ ಕಪ್ಪು ಎಂಡಿಂಗ್‌ ಅನ್ನು ಹೊಂದಿದೆ. ಇನ್ನು ಈ ಲ್ಯಾಪ್‌ಟಾಪ್‌ ಪರದೆಯು ಬದಿಗಳಲ್ಲಿ ಸ್ಲಿಮ್ ಬೆಜೆಲ್ ಮತ್ತು ದೊಡ್ಡ ಟಚ್ ಪ್ಯಾಡ್ ಹೊಂದಿದೆ. ಇನ್ನುಳಿದಂತೆ ಈ ಲ್ಯಾಪ್‌ಟಾಪ್‌ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ನೋಕಿಯಾ

ನೋಕಿಯಾ ಪ್ಯೂರ್‌ಬುಕ್ X14 ಹೊಸ ಮಾದರಿಯ ವಿನ್ಯಾಸವನ್ನು ಹೊಂದಿದೆ. ಈ ಲ್ಯಾಪ್‌ಟಾಪ್‌ನಲ್ಲಿ ವಿಂಡೋಸ್ 10 ಹೋಮ್ ಪ್ಲಸ್ ಅನ್ನು ಮೊದಲೇ ಸ್ಥಾಪಿಸಲಾಗಿದೆ. ಇದು 14 ಇಂಚಿನ ಫುಲ್‌-ಹೆಚ್‌ಡಿ ಐಪಿಎಸ್ ಡಿಸ್‌ಪ್ಲೇ ಅನ್ನೊ ಹೊಂದಿದೆ. ಈ ಡಿಸ್‌ಪ್ಲೇ 86% ಸ್ಕ್ರೀನ್-ಟು-ಬಾಡಿ ಅನುಪಾತ, 250 ನಿಟ್ಸ್ ಪೀಕ್ ಬ್ರೈಟ್‌ನೆಸ್ ಮತ್ತು 178 ಡಿಗ್ರಿ ಕೋನಗಳನ್ನು ಹೊಂದಿದೆ. ಜೊತೆಗೆ ನೋಕಿಯಾ ಪ್ಯೂರ್‌ಬುಕ್ X14 ಅನ್ನು 1.6GHz ಬೇಸ್ ಫ್ರೀಕ್ವೆನ್ಸಿ ಮತ್ತು 4.2GHz ಟರ್ಬೊ ಫ್ರೀಕ್ವೆನ್ಸಿ ಹೊಂದಿರುವ ಇಂಟೆಲ್ ಕೋರ್ I5 10 ನೇ ಜನ್ ಪ್ರೊಸೆಸರ್ ಹೊಂದಿದೆ.

ಲ್ಯಾಪ್‌ಟಾಪ್‌

ಇನ್ನು ಈ ಲ್ಯಾಪ್‌ಟಾಪ್‌ 1.1GHz ಟರ್ಬೊ ವೇಗದೊಂದಿಗೆ ಇಂಟಿಗ್ರೇಟೆಡ್ ಇಂಟೆಲ್ ಯುಹೆಚ್‌ಡಿ 620 ಗ್ರಾಫಿಕ್ಸ್ ಮತ್ತು 4 ಕೆ, ಇಂಟೆಲ್ ಕ್ವಿಕ್ ಸಿಂಕ್ ವಿಡಿಯೋ, ಇಂಟೆಲ್ ಇನ್‌ಟ್ರೂ 3 ಡಿ ಟೆಕ್ನಾಲಜಿ, ಮತ್ತು ಇಂಟೆಲ್ ಕ್ಲಿಯರ್ ವಿಡಿಯೋ ಎಚ್‌ಡಿ ಟೆಕ್ನಾಲಜಿಗೆ ಬೆಂಬಲವನ್ನು ಗ್ರಾಫಿಕ್ಸ್ ನಿರ್ವಹಿಸುತ್ತದೆ. ಇದಲ್ಲದೆ ನೋಕಿಯಾ ಪ್ಯೂರ್‌ಬುಕ್ ಎಕ್ಸ್ 14 8GB ರಾಮ್ ಮತ್ತು 512GB ಸಂಗ್ರಹ ಸಾಮರ್ಥ್ಯವನ್ನು ಹೊಂದಿದೆ. ಅಲ್ಲದೆ ಇದು ಡಾಲ್ಬಿ ಅಟ್ಮೋಸ್ ಬೆಂಬಲದೊಂದಿಗೆ ಬರುತ್ತದೆ.

ನೋಕಿಯಾ ಪ್ಯೂರ್‌ಬುಕ್

ನೋಕಿಯಾ ಪ್ಯೂರ್‌ಬುಕ್ ಎಕ್ಸ್ 14 ಸಿಂಗಲ್‌ ಚಾರ್ಜ್‌ನಲ್ಲಿ ಎಂಟು ಗಂಟೆಗಳವರೆಗೆ ಇರುತ್ತದೆ ಮತ್ತು 65W ಚಾರ್ಜರ್‌ನೊಂದಿಗೆ ಬರುತ್ತದೆ ಎಂದು ನೋಕಿಯಾ ಹೇಳಿಕೊಂಡಿದೆ. ವಿಂಡೋಸ್ ಹಲೋ-ಪ್ರಮಾಣೀಕೃತ ಎಚ್‌ಡಿ ಐಆರ್ ವೆಬ್‌ಕ್ಯಾಮ್, 1.4 ಎಂಎಂ ಕೀ ಪ್ರಯಾಣದೊಂದಿಗೆ ಬ್ಯಾಕ್‌ಲಿಟ್ ಕೀಬೋರ್ಡ್ ಮತ್ತು ಬಹು ಗೆಸ್ಚರ್ ಆಯ್ಕೆಗಳೊಂದಿಗೆ ನಿಖರ ಟಚ್‌ಪ್ಯಾಡ್‌ನೊಂದಿಗೆ ಫೇಸ್ ಅನ್‌ಲಾಕ್‌ಗೆ ಸಹ ನೀವು ಬೆಂಬಲವನ್ನು ಪಡೆಯಬಹುದಾಗಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಡ್ಯುಯಲ್-ಬ್ಯಾಂಡ್ ವೈ-ಫೈ, ಬ್ಲೂಟೂತ್ 5.1, ಎರಡು ಯುಎಸ್‌ಬಿ 3.1 ಪೋರ್ಟ್‌ಗಳು, ಯುಎಸ್‌ಬಿ 2.0 ಪೋರ್ಟ್, ಯುಎಸ್‌ಬಿ ಟೈಪ್ ಸಿ 3.1 ಪೋರ್ಟ್, ಎಚ್‌ಡಿಎಂಐ ಪೋರ್ಟ್, ಎತರ್ನೆಟ್ ಜ್ಯಾಕ್, ಆಡಿಯೊ ಔಟ್ ಮತ್ತು ಎಂಐಸಿ ಪೋರ್ಟ್ ಸೇರಿವೆ.

ನೋಕಿಯಾ ಪ್ಯೂರ್‌ಬುಕ್

ನೋಕಿಯಾ ಪ್ಯೂರ್‌ಬುಕ್ ಎಕ್ಸ್ 14 ಬೆಲೆ ರೂ. 59,990 ಮತ್ತು ಡಿಸೆಂಬರ್ 18 ರಿಂದ ಫ್ಲಿಪ್‌ಕಾರ್ಟ್ ಮೂಲಕ ಫ್ರಿ-ಬುಕ್ಕಿಂಗ್‌ಗೆ ಲಭ್ಯವಿರುತ್ತದೆ. ಸದ್ಯ ಕಂಪನಿಯು ಲ್ಯಾಪ್‌ಟಾಪ್‌ ಮಾರಾಟ ದಿನಾಂಕವನ್ನು ಹಂಚಿಕೊಂಡಿಲ್ಲ.

Most Read Articles
Best Mobiles in India

English summary
Nokia PureBook X14 laptop has been launched in India and will be available for purchase from Flipkart. It is the first laptop by Nokia and boasts of an ultralight form factor and “ultra-vivid picture quality.”.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X