ಸದ್ಯದಲ್ಲೇ ಭಾರತಕ್ಕೆ ಎಂಟ್ರಿ ಕೊಡಲಿದೆ Nokia T20 ಟ್ಯಾಬ್ಲೆಟ್!..ಫೀಚರ್ಸ್‌ ಏನು?

|

ಇತ್ತೀಚಿಗಷ್ಟೆ ನೋಕಿಯಾ ಕಂಪೆನಿ ಜಾಗತಿಕವಾಗಿ ಬಿಡುಗಡೆ ಮಾಡಿರುವ ನೋಕಿಯಾ T20 ಟ್ಯಾಬ್ಲೆಟ್ ಈಗಾಗಲೇ ಗ್ರಾಹಕರ ಗಮನ ಸೆಳೆದಿದೆ. ಆದ್ರೆ ಹೊಸ ಸುದ್ದಿ ಏನೆಂದರೇ ಈ ನೋಕಿಯಾ T20 ಟ್ಯಾಬ್ಲೆಟ್ ಸದ್ಯದಲ್ಲೇ ಭಾರತೀಯ ಮಾರುಕಟ್ಟೆಗೂ ಎಂಟ್ರಿ ಕೊಡಲಿದೆ. ಜನಪ್ರಿಯ ಇ ಕಾಮರ್ಸ್‌ ತಾಣ ಫ್ಲಿಪ್‌ಕಾರ್ಟ್ ತನ್ನ ಟ್ಯಾಬ್ಲೆಟ್‌ಗಳ ವಿಭಾಗದಲ್ಲಿ ನೋಕಿಯಾ T20 ಕಾಣಿಸಿದ್ದು,ಈ ಮೂಲಕ ಭಾರತದಲ್ಲಿ ಸದ್ಯದಲ್ಲೇ ಬಿಡುಗಡೆ ಆಗಲಿದೆ ಎನ್ನುವ ಸುಳಿವು ನೀಡಿದೆ.

ಬಾಳಿಕೆಯನ್ನು

ಹೌದು, ನೋಕಿಯಾ ಕಂಪೆನಿ ಹೊಸ ನೋಕಿಯಾ T20 ಟ್ಯಾಬ್ಲೆಟ್‌ ಸದ್ಯದಲ್ಲೇ ದೇಶಿಯ ಮಾರುಕಟ್ಟೆಯಲ್ಲಿ ಲಾಂಚ್ ಆಗಲಿದೆ. ಆದರೆ ಅಧಿಕೃತ ದಿನಾಂಕ ಸ್ಪಷ್ಟಪಡಿಸಿಲ್ಲ. ಇನ್ನು ಈ ಹೊಸ ಟ್ಯಾಬ್ಲೆಟ್‌ 4 GB RAM ಮತ್ತು 32 GB ಇಂಟರ್‌ ಸ್ಟೋರೇಜ್‌ ಅನ್ನು ಹೊಂದಿದೆ. ಜೊತೆಗೆ ಗೂಗಲ್ ಕಿಡ್ಸ್ ಸ್ಪೇಸ್ ಮತ್ತು ಒಂದು ದಿನದ ಬ್ಯಾಟರಿ ಬಾಳಿಕೆಯನ್ನು ಒಳಗೊಂಡಿದೆ. ಈ ಟ್ಯಾಬ್ಲೆಟ್‌ ರಗಡ್ ಕೇಸ್ + ಫ್ಲಿಪ್ ಕವರ್, ಸ್ಟ್ಯಾಂಡ್ ಮತ್ತು ನೋಕಿಯಾ ಮೈಕ್ರೋ ಇಯರ್‌ಬಡ್ಸ್ ಪ್ರೊ ಅನ್ನು ಹೊಂದಿದೆ. ಹಾಗಾದರೇ ನೋಕಿಯಾ T20 ಟ್ಯಾಬ್ಲೆಟ್‌ ಇತರೆ ಫೀಚರ್ಸ್‌ಗಳು ಏನು ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.

ಡಿಸ್‌ಪ್ಲೇ ರಚನೆ ಹೇಗಿದೆ

ಡಿಸ್‌ಪ್ಲೇ ರಚನೆ ಹೇಗಿದೆ

ನೋಕಿಯಾ T20 ಟ್ಯಾಬ್ಲೆಟ್‌ 2,000x1,200 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 10.4-ಇಂಚಿನ 2K ಇನ್-ಸೆಲ್ ಡಿಸ್‌ಪ್ಲೇಯನ್ನು ಹೊಂದಿದೆ. ಇನ್ನು ಈ ಡಿಸ್‌ಪ್ಲೇ 400 ನಿಟ್ಸ್‌ ಗರಿಷ್ಠ ಬ್ರೈಟ್‌ನೆಸ್‌ ಅನ್ನು ಹೊಂದಿದೆ. ಈ ಡಿಸ್‌ಪ್ಲೇಯನ್ನು ಗಟ್ಟಿಯಾದ ಗ್ಲಾಸ್‌ ಪ್ರೊಟೆಕ್ಷನ್‌ ಅನ್ನು ಹೊಂದಿದೆ.

ಪ್ರೊಸೆಸರ್‌ ಪವರ್ ಎಷ್ಟು

ಪ್ರೊಸೆಸರ್‌ ಪವರ್ ಎಷ್ಟು

ನೋಕಿಯಾ T20 ಟ್ಯಾಬ್ಲೆಟ್‌ ಆಕ್ಟಾ-ಕೋರ್ ಯುನಿಸೋಕ್ ಟಿ 610SoC ಪ್ರೊಸೆಸರ್‌ ಅನ್ನು ಹೊಂದಿದ್ದು, ಆಂಡ್ರಾಯ್ಡ್ 11 ನಲ್ಲಿ ಕಾರ್ಯನಿರ್ವಹಿಸುತ್ತದೆ. ಎರಡು ವರ್ಷಗಳ ಓಎಸ್ ಅಪ್‌ಗ್ರೇಡ್‌ಗಳು ಮತ್ತು ಮೂರು ವರ್ಷಗಳ ಸಕಾಲಿಕ ಭದ್ರತಾ ಅಪ್‌ಡೇಟ್‌ಗಳನ್ನು ಪಡೆಯುವ ಭರವಸೆ ಇದೆ. ಜೊತೆಗೆ 3GBRAM ಮತ್ತು 64GB ಸ್ಟೋರೇಜ್‌ ವೇರಿಯೆಂಟ್‌ ಆಯ್ಕೆಯನ್ನು ಹೊಂದಿದೆ. ಇದಲ್ಲದೆ ಮೈಕ್ರೊ ಎಸ್ಡಿ ಕಾರ್ಡ್ ಮೂಲಕ 512 GB ವರೆಗೆ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸಬಹುದಾಗಿದೆ.

ಕ್ಯಾಮೆರಾ ಸೆನ್ಸಾರ್

ಕ್ಯಾಮೆರಾ ಸೆನ್ಸಾರ್

ನೋಕಿಯಾ T20 ಟ್ಯಾಬ್ಲೆಟ್‌ ಫೋಟೋಗಳು ಮತ್ತು ವಿಡಿಯೋಗಳಿಗಾಗಿ 8 ಮೆಗಾ ಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸಿಂಗಲ್‌ ರಿಯರ್‌ ಕ್ಯಾಮೆರಾ ಹೊಂದಿದೆ. ಇದಲ್ಲದೆ 5 ಮೆಗಾ ಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾ ಹೊಂದಿದೆ. ರಿಯರ್‌ ಕ್ಯಾಮೆರಾ ಸೆಟ್‌ಅಪ್ ಎಲ್ಇಡಿ ಫ್ಲ್ಯಾಷ್‌ ಅನ್ನು ಸಹ ಪಡೆದುಕೊಂಡಿದೆ.

ಬ್ಯಾಟರಿ ಮತ್ತು ಇತರೆ ಸೌಲಭ್ಯಗಳು

ಬ್ಯಾಟರಿ ಮತ್ತು ಇತರೆ ಸೌಲಭ್ಯಗಳು

ನೋಕಿಯಾ T20 ಟ್ಯಾಬ್ಲೆಟ್‌ ಡಿವೈಸ್ 8,200mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 15W ಚಾರ್ಜರ್ ಮೂಲಕ ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸಲಿದೆ. ಸಿಂಗಲ್‌ ಚಾರ್ಜ್‌ನಲ್ಲಿ ಇಡೀ ದಿನ ಬ್ಯಾಟರಿ ಅವಧಿಯನ್ನು ನೀಡಲಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ 4 ಜಿ ಎಲ್ ಟಿಇ (ಐಚ್ಛಿಕ), ವೈ-ಫೈ 802.11 ಎಸಿ, ಬ್ಲೂಟೂತ್ ವಿ 5.0, ಯುಎಸ್ ಬಿ ಟೈಪ್-ಸಿ ಮತ್ತು 3.5 ಎಂಎಂ ಹೆಡ್ ಫೋನ್ ಜ್ಯಾಕ್ ಅನ್ನು ಬೆಂಬಲಿಸಲಿದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ನೋಕಿಯಾ T20 ಟ್ಯಾಬ್ಲೆಟ್‌ Wi-Fi ಒನ್ಲಿ ರೂಪಾಂತರದ ಬೆಲೆ EUR 199 (ಭಾರತದಲ್ಲಿ ಅಂದಾಜು 17,200ರೂ ಎನ್ನಲಾಗಿದೆ) . ಇನ್ನು Wi-Fi + 4G ಮಾದರಿ EUR 239 (ಸರಿಸುಮಾರು 20,600ರೂ. ಎನ್ನಲಾಗಿದೆ) ಬೆಲೆ ಹೊಂದಿದೆ.

ಭಾರತದಲ್ಲಿ

ಹಾಗೆಯೇ ನೋಕಿಯಾ ಕಂಪನಿಯು ಇತ್ತೀಚಿಗಷ್ಟೆ ಭಾರತದಲ್ಲಿ ತನ್ನ ನೋಕಿಯಾ C30 ಸ್ಮಾರ್ಟ್‌ಫೋನ್‌ ಪರಿಚಯಿಸಿದೆ. ಈ ಫೋನ್ 1600 x 720 ಪಿಕ್ಸೆಲ್‌ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದ 6.82 ಇಂಚಿನ ಎಚ್‌ಡಿ + ಎಲ್‌ಸಿಡಿ ಡಿಸ್‌ಪ್ಲೇ ಹೊಂದಿದೆ. ಇದು ಆಕ್ಟಾ ಕೋರ್ Unisoc SC9863A SoC ಪ್ರೊಸೆಸರ್‌ ಅನ್ನು ಒಳಗೊಂಡಿದೆ. ಇದರೊಂದಿಗೆ 3GB RAM + 32GB ಮತ್ತು 4GB RAM + 64GB ಸ್ಟೋರೇಜ್ ವೇರಿಯಂಟ್ ಆಯ್ಕೆಗಳನ್ನು ಪಡೆದಿದೆ. ಹಾಗೆಯೇ ಡ್ಯುಯಲ್ ಕ್ಯಾಮೆರಾ ಸೆಟ್‌ಅಪ್‌ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 13 ಮೆಗಾ ಪಿಕ್ಸೆಲ್ ಸೆನ್ಸಾರ್‌ ಒಳಗೊಂಡಿದೆ. ಜೊತೆಗೆ 6,000mAh ಸಾಮರ್ಥ್ಯದ ಬ್ಯಾಟರಯನ್ನು ಹೊಂದಿದೆ. ಇದು 10W ಚಾರ್ಜಿಂಗ್ ಬೆಂಬಲವನ್ನು ಹೊಂದಿದೆ.

Most Read Articles
Best Mobiles in India

English summary
Nokia T20 Tablet May Launch Soon In India, Confirms Flipkart Teaser.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X