ಯೂಟ್ಯೂಬ್‌ನಲ್ಲಿ ಮತ್ತೊಂದು ಕುತೂಹಲಕಾರಿ ಫೀಚರ್ ಸೇರ್ಪಡೆ; ಅದು ಏನು ಗೊತ್ತೆ?

|

ಗೂಗಲ್‌ ಮಾಲೀಕತ್ವದ ಜನಪ್ರಿಯ ವಿಡಿಯೊ ಪ್ಲಾಟ್‌ಫಾರ್ಮ್ ತಾಣವಾಗಿರುವ ಯೂಟ್ಯೂಬ್ ಇದೀಗ ಹೊಸದೊಂದು ಫೀಚರ್ಸ್‌ ಅಳವಡಿಸಿದೆ. ಇತ್ತೀಚಿಗಷ್ಟೆ ವಿಡಿಯೋ ಸರ್ಚ್ ಫೀಚರ್ ಪರಿಚಯಿಸಿರುವ ವಿಡಿಯೋ ಸ್ಟ್ರೀಮಿಂಗ್ ದೈತ್ಯ ಯೂಟ್ಯೂಬ್ ಇದೀಗ ಹೊಸದಾಗಿ ನಿಫ್ಟಿ ಫೀಚರ್ ಅನ್ನು ಪರಿಚಯಿಸಿದೆ. ಈ ಫೀಚರ್ ಬಳಕೆದಾರರಿಗೆ ಕಾಮೆಂಟ್‌ಗಳನ್ನು ಭಾಷಾಂತರಿಸಲು ಅವಕಾಶ ಮಾಡಿ ಕೊಡುತ್ತದೆ.

ಕಾಮೆಂಟ್‌ಗಳನ್ನು

ಹೌದು, ಜನಪ್ರಿಯ ಯೂಟ್ಯೂಬ್ ತಾಣವು ನೂತನವಾಗಿ ನಿಫ್ಟಿ ಫೀಚರ್ ಪರಿಚಯಿಸಿದೆ. ಬಳಕೆದಾರರು ಈ ಆಯ್ಕೆಯ ಬಟನ್ ಅನ್ನು ಟ್ಯಾಪ್ ಮಾಡುವ ಮೂಲಕ 100 ಕ್ಕೂ ಹೆಚ್ಚು ವಿವಿಧ ಭಾಷೆಗಳ ಕಾಮೆಂಟ್‌ಗಳನ್ನು ಭಾಷಾಂತರಿಸಲು ಅನುಮತಿಸುತ್ತದೆ. ಇನ್ನು ಈ ವಿಶೇಷ ಫೀಚರ್ ಐಒಎಸ್ ಮತ್ತು ಆಂಡ್ರಾಯ್ಡ್‌ ಬಳಕೆದಾರರಿಗಾಗಿ ಯೂಟ್ಯೂಬ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. ಯೂಟ್ಯೂಬ್ ಇತ್ತೀಚೆಗೆ ಅಧಿಕೃತ ಟ್ವಿಟ್ ಮೂಲಕ ಈ ಫೀಚರ್‌ ಅನ್ನು ಘೋಷಿಸಿತು. ಆದರೆ ಕಾಮೆಂಟ್ ಅನುವಾದವು ಈಗ ಪ್ರಾಯೋಗಿಕ ಹಂತದಲ್ಲಿದೆ.

ಭಾಷೆಯಲ್ಲಿರುವ

ಈಗ, ಪ್ಲಾಟ್‌ಫಾರ್ಮ್‌ನಲ್ಲಿ ವೀಡಿಯೋಗಳನ್ನು ಬ್ರೌಸ್ ಮಾಡುವಾಗ ನೀವು ಬಯಸಿದ ಭಾಷೆಯಲ್ಲದೇ ಬೇರೆ ಭಾಷೆಯಲ್ಲಿರುವ ಒಂದು ಕಾಮೆಂಟ್ ನಿಮಗೆ ಬಂದರೆ, ಯೂಟ್ಯೂಬ್ ಈಗ ಆ ಕಾಮೆಂಟ್‌ಗಾಗಿ ಹೊಸ (Translate to [your language]) ನಿಮ್ಮ ಭಾಷೆಗೆ ಭಾಷಾಂತರಿಸಿ ಬಟನ್ ಆಯ್ಕೆ ಅನ್ನು ತೋರಿಸಲಿದೆ. ಹಾಗೆಯೇ ಈಗಾಗಲೇ ಯೂಟ್ಯೂಬ್ ಕೆಲವು ಕುತೂಹಲಕರ ಫೀಚರ್ಸ್‌ಗಳನ್ನು ಒಳಗೊಂಡಿದೆ. ಆ ಫೀಚರ್ಸ್‌ಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಡಾರ್ಕ್‌ ಮೋಡ್ ಆಯ್ಕೆ

ಡಾರ್ಕ್‌ ಮೋಡ್ ಆಯ್ಕೆ

ಯೂಟ್ಯೂಬ್‌ನಲ್ಲಿಯೂ ಡಾರ್ಕ್‌ ಮೋಡ್ ಆಯ್ಕೆ ಲಭ್ಯ ವಿದೆ. ಬಳಕೆದಾರರು ಡಾರ್ಕ್‌ ಮೋಡ್ ಆಯ್ಕೆಯನ್ನು ಸಕ್ರಿಯ ಮಾಡಿಕೊಳ್ಳಬಹುದಾಗಿದೆ. YouTube ನಲ್ಲಿ ಡಾರ್ಕ್ ಮೋಡ್ ಅನ್ನು ಆನ್ ಮಾಡಲು, ಸೆಟ್ಟಿಂಗ್‌ಗಳು -> ಜನರಲ್‌ -> ಡಾರ್ಕ್ ಥೀಮ್‌ಗೆ ಹೋಗಿ ಮತ್ತು ಸ್ಲೈಡರ್ ಆನ್ ಮಾಡಿ.

Incognito ಮೋಡ್ ಆಯ್ಕೆ ಇದೆ

Incognito ಮೋಡ್ ಆಯ್ಕೆ ಇದೆ

ಯೂಟ್ಯೂಬ್‌ನಲ್ಲಿ ಕೀ ವರ್ಡ್ ಎಂಟ್ರಿ ಮಾಡಿ ಸರ್ಚ್ ಮಾಡುವಾಗ ಎಂಟ್ರಿ ಮಾಡಿರುವ ಕೀ ವರ್ಡ್ / ಹುಡುಕಾಡಿದ ಪದಗಳು ಮತ್ತೆ ಕಾಣಿಸಬಾರದು ಎಂದು ನೀವು ಬಯಸದಿದ್ದರೆ ಅದಕ್ಕೆ ಈ ಆಯ್ಕೆ ಪೂರಕವಾಗಿದೆ. ಈ ಆಯ್ಕೆ ಬಳಸಿ ಗೌಪ್ಯ ಸರ್ಚ್ ಮಾಡಬಹುದಾಗಿದೆ. ಪ್ರೊಫೈಲ್ ಫೋಟೊ ಕ್ಲಿಕ್ ಮಾಡಿ ಅಲ್ಲಿ ಕಾಣಿಸುವ ಆಯ್ಕೆಗಳಲ್ಲಿ incognito mode ಆಯ್ಕೆ ಮಾಡಿಕೊಳ್ಳಿರಿ.

ಹಿಸ್ಟರಿ ಕ್ಲಿಯರ್ ಮಾಡುವ ಆಯ್ಕೆ ಇದೆ

ಹಿಸ್ಟರಿ ಕ್ಲಿಯರ್ ಮಾಡುವ ಆಯ್ಕೆ ಇದೆ

ಯೂಟ್ಯೂಬ್‌ ಸರ್ಚ್‌ನಲ್ಲಿ ಏನೇ ಹುಡುಕಿದರೂ, ಅದು ಬೇರೊಬ್ಬರು ಸೋಡಿದಾಗ ಕಾಣದಂತೆ ಇಡಲು ಆಗಾಗಾ ಹಿಸ್ಟರಿ ಕ್ಲಿಯರ್ ಮಾಡುತ್ತಿರಿ. ಹಿಸ್ಟರಿ ಕ್ಲಿಯರ್ ಮಾಡಲು ಸರಳ ಆಯ್ಕೆಗಳು ಇವೆ. ಪ್ರೊಫೈಲ್ ಚಿತ್ರ> ಸೆಟ್ಟಿಂಗ್‌ಗಳು> ಇತಿಹಾಸ ಮತ್ತು ಗೌಪ್ಯತೆ> ಮತ್ತು ವಾಚ್ ಹಿಸ್ಟರಿ ಕ್ಲಿಯರ್ ನ್ಯಾವಿಗೇಟ್ ಮಾಡುವ ಮೂಲಕ ಹುಡುಕಾಟ ಹಿಸ್ಟರಿ ಅಳಿಸಬಹುದು.

ಡೇಟಾ ಬಳಕೆಯ ಮಿತಿ ಆಯ್ಕೆ

ಡೇಟಾ ಬಳಕೆಯ ಮಿತಿ ಆಯ್ಕೆ

ಯೂಟ್ಯೂಬ್ ವಿಡಿಯೊ ವೀಕ್ಷಿಸುವಾಗ ಡೇಟಾ ಬಳಕೆಯಲ್ಲಿ ಮಿತಿಗೊಳಿಸುವ ಆಯ್ಕೆ ಇದಾಗಿದೆ. ಪ್ರೊಫೈಲ್ ಚಿತ್ರವನ್ನು ಟ್ಯಾಪ್ ಮಾಡುವುದು> ಸೆಟ್ಟಿಂಗ್‌ಗಳು> ಸಾಮಾನ್ಯ> ಮೊಬೈಲ್ ಡೇಟಾ ಬಳಕೆಯನ್ನು ಮಿತಿಗೊಳಿಸಿ. ಇದು Wi-Fi ಗೆ ಸಂಪರ್ಕಗೊಂಡಾಗ ಮಾತ್ರ HD ವೀಡಿಯೊವನ್ನು ಸ್ಟ್ರೀಮ್ ಮಾಡುತ್ತದೆ.

ಸ್ವಿಪ್‌ ಡೌನ್‌ ಆಯ್ಕೆ ಇದೆ

ಸ್ವಿಪ್‌ ಡೌನ್‌ ಆಯ್ಕೆ ಇದೆ

ಸ್ವಿಪ್‌ ಡೌನ್‌ ಆಯ್ಕೆಯು ಲ್ಯಾಂಡ್‌ಸ್ಕೇಪ್ ಮೋಡ್‌ನಿಂದ ವೀಡಿಯೊವನ್ನು ನಿರ್ಗಮಿಸುವ ಇನ್ನೊಂದು ಮಾರ್ಗವಾಗಿದೆ. ವೀಡಿಯೊ ನೋಡುವಾಗ ಮೇಲಿನಿಂದ ಕೆಳಕ್ಕೆ ಸ್ವೈಪ್ ಮಾಡಿ ಮತ್ತು ನೀವು ಹಿಂದಿನ ಪರದೆಯತ್ತ ಹಿಂತಿರುಗುತ್ತೀರಿ. ನ್ಯಾವಿಗೇಷನ್ ಕೀಲಿಯನ್ನು ಹಿಂದಕ್ಕೆ ಟ್ಯಾಪ್ ಮಾಡುವ ಅಗತ್ಯವಿಲ್ಲ ಅಥವಾ ಸಾಧನವನ್ನು ಅಡ್ಡಲಾಗಿ ತಿರುಗಿಸುವ ಅಗತ್ಯವಿಲ್ಲ.

ಯೂಟ್ಯೂಬ್‌ನಲ್ಲಿ ಈ ಕುತೂಹಲಕಾರಿ ಫೀಚರ್ಸ್‌ಗಳನ್ನು ನೀವು ಬಳಕೆ ಮಾಡಿದ್ದಿರಾ?

ಯೂಟ್ಯೂಬ್‌ನಲ್ಲಿ ಈ ಕುತೂಹಲಕಾರಿ ಫೀಚರ್ಸ್‌ಗಳನ್ನು ನೀವು ಬಳಕೆ ಮಾಡಿದ್ದಿರಾ?

ಸ್ವಿಪ್‌ ಡೌನ್‌ ಆಯ್ಕೆ
ಸ್ವಿಪ್‌ ಡೌನ್‌ ಆಯ್ಕೆಯು ಲ್ಯಾಂಡ್‌ಸ್ಕೇಪ್ ಮೋಡ್‌ನಿಂದ ವೀಡಿಯೊವನ್ನು ನಿರ್ಗಮಿಸುವ ಇನ್ನೊಂದು ಮಾರ್ಗವಾಗಿದೆ. ವೀಡಿಯೊ ನೋಡುವಾಗ ಮೇಲಿನಿಂದ ಕೆಳಕ್ಕೆ ಸ್ವೈಪ್ ಮಾಡಿ ಮತ್ತು ನೀವು ಹಿಂದಿನ ಪರದೆಯತ್ತ ಹಿಂತಿರುಗುತ್ತೀರಿ. ನ್ಯಾವಿಗೇಷನ್ ಕೀಲಿಯನ್ನು ಹಿಂದಕ್ಕೆ ಟ್ಯಾಪ್ ಮಾಡುವ ಅಗತ್ಯವಿಲ್ಲ ಅಥವಾ ಸಾಧನವನ್ನು ಅಡ್ಡಲಾಗಿ ತಿರುಗಿಸುವ ಅಗತ್ಯವಿಲ್ಲ.

Incognito ಮೋಡ್ ಆಯ್ಕೆ
ಯೂಟ್ಯೂಬ್‌ನಲ್ಲಿ ಕೀ ವರ್ಡ್ ಎಂಟ್ರಿ ಮಾಡಿ ಸರ್ಚ್ ಮಾಡುವಾಗ ಎಂಟ್ರಿ ಮಾಡಿರುವ ಕೀ ವರ್ಡ್ / ಹುಡುಕಾಡಿದ ಪದಗಳು ಮತ್ತೆ ಕಾಣಿಸಬಾರದು ಎಂದು ನೀವು ಬಯಸದಿದ್ದರೆ ಅದಕ್ಕೆ ಈ ಆಯ್ಕೆ ಪೂರಕವಾಗಿದೆ. ಈ ಆಯ್ಕೆ ಬಳಸಿ ಗೌಪ್ಯ ಸರ್ಚ್ ಮಾಡಬಹುದಾಗಿದೆ. ಪ್ರೊಫೈಲ್ ಫೋಟೊ ಕ್ಲಿಕ್ ಮಾಡಿ ಅಲ್ಲಿ ಕಾಣಿಸುವ ಆಯ್ಕೆಗಳಲ್ಲಿ incognito mode ಆಯ್ಕೆ ಮಾಡಿಕೊಳ್ಳಿರಿ.

Most Read Articles
Best Mobiles in India

English summary
Now You Can Translate YouTube Comments Instantly: Supports Over 100 Languages.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X