ಇಂದಿನಿಂದ 'ನುಬಿಯಾ ರೆಡ್ ಮ್ಯಾಜಿಕ್ 3S' ಫೋನ್ ಸೇಲ್‌ ಆರಂಭ!

|

ಭಾರತೀಯ ಮಾರುಕಟ್ಟೆಯಲ್ಲಿ ಗೇಮಿಂಗ್ ಸ್ಮಾರ್ಟ್‌ಫೋನ್‌ಗಳಿಗೂ ಹೆಚ್ಚಿನ ಬೇಡಿಕೆಯಿದ್ದು, ಈ ನಿಟ್ಟಿನಲ್ಲಿ ಹಲವು ದೈತ್ಯ ಗೇಮಿಂಗ್ ಸ್ಮಾರ್ಟ್‌ಫೋನ್‌ಗಳು ಎಂಟ್ರಿಕೊಡುತ್ತಲಿವೆ. ಇತ್ತೀಚಿಗೆ ಲಾಂಚ್ ಆದ ನುಬಿಯಾ ಕಂಪನಿಯ ಬಹುನಿರೀಕ್ಷಿತ 'ರೆಡ್‌ ಮ್ಯಾಜಿಕ್ 3S' ಗೇಮಿಂಗ್ ಸ್ಮಾರ್ಟ್‌ಫೋನ್‌ ಇಂದಿನಿಂದ (ಅ.21) ಗ್ರಾಹಕರ ಖರೀದಿಗೆ ಲಭ್ಯವಿದೆ. ಫ್ಲಿಪ್‌ಕಾರ್ಟ್‌ನಲ್ಲಿ ಇ-ಕಾಮರ್ಸ್‌ ತಾಣದಲ್ಲಿ ಆರಂಭಿಕ ಕೊಡುಗೆಗಳು ಸಹ ಸಿಗಲಿವೆ.

ನುಬಿಯಾ ರೆಡ್ ಮ್ಯಾಜಿಕ್

ಹೌದು, ಚೀನಾದ ನುಬಿಯಾ ಸಂಸ್ಥೆಯು 'ನುಬಿಯಾ ರೆಡ್ ಮ್ಯಾಜಿಕ್ 3S' ಸ್ಮಾರ್ಟ್‌ಫೋನ್ ಇಂದಿನಿಂದ (ಅ.21) ದೇಶಿದಲ್ಲಿ ಸೇಲ್ ಆರಂಭಿಸಿದ್ದು, ಜನಪ್ರಿಯ ಇ-ಕಾಮರ್ಸ್ ಫ್ಲಿಪ್‌ಕಾರ್ಟ್ ತಾಣದಲ್ಲಿ ಖರೀದಿಗೆ ಸಿಗಲಿದೆ. 8GB RAM ಹಾಗೂ 12GB RAM ವೇರಿಯಂಟ್‌ ಆಯ್ಕೆಗಳನ್ನು ಹೊಂದಿರುವ ಈ ಗೇಮಿಂಗ್ ಫೋನ್ ಸ್ನ್ಯಾಪಡ್ರಾಗನ್ 855 ಪ್ಲಸ್‌ ಪ್ರೊಸೆಸರ್‌ನಲ್ಲಿ ಕೆಲಸ ಮಾಡಲಿದೆ.

8GB RAM ವೇರಿಯಂಟ್‌

ಸೈಬರ್‌ ಶೇಡ್‌ ಮತ್ತು ಸಿಲ್ವರ್ ಬಣ್ಣಗಳ ಆಯ್ಕೆಗಳಲ್ಲಿ ಲಭ್ಯವಾಗುವ ಈ ಗೇಮಿಂಗ್ ಸ್ಮಾರ್ಟ್‌ಫೋನಿನ ಆರಂಭಿಕ 8GB RAM ವೇರಿಯಂಟ್‌ ಬೆಲೆಯು 35,999ರೂ.ಗಳಾಗಿದೆ. ಹಾಗೆಯೇ 12GB RAM ವೇರಿಯಂಟ್‌ ಬೆಲೆಯು 47,999ರೂ.ಗಳಾಗಿದೆ. ಫ್ಲಿಪ್‌ಕಾರ್ಟ್‌ನಲ್ಲಿ ಗ್ರಾಹಕರು ಎಸ್‌ಬಿಐ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್‌ ಬಳಸಿ ಖರೀದಿಸಿದರೇ ಶೇ.10% ಇನ್‌ಸ್ಟಂಟ್ ಡಿಸ್ಕೌಂಟ್‌ ಲಭ್ಯವಾಗಲಿದೆ. ಹಾಗಾದರೇ 'ನುಬಿಯಾ ರೆಡ್ ಮ್ಯಾಜಿಕ್ 3S' ಗೇಮಿಂಗ್ ಸ್ಮಾರ್ಟ್‌ಫೋನ್‌ ಇತರೆ ಫೀಚರ್ಸ್‌ಗಳೆನು ಮತ್ತು ಬೆಲೆ ಎಷ್ಟು ಎಂಬುದನ್ನು ತಿಳಿಯಲು ಮುಂದೆ ಓದಿರಿ.

ಹೈ ರೆಸಲ್ಯೂಶನ್ ಡಿಸ್‌ಪ್ಲೇ

ಹೈ ರೆಸಲ್ಯೂಶನ್ ಡಿಸ್‌ಪ್ಲೇ

ನುಬಿಯಾ ರೆಡ್ ಮ್ಯಾಜಿಕ್ 3S' ಗೇಮಿಂಗ್ ಸ್ಮಾರ್ಟ್‌ಫೋನ್‌ 1080x2340 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯದೊಂದಿಗೆ 6.65 ಇಂಚಿನ ಪೂರ್ಣ ಹೆಚ್‌ಡಿ ಪ್ಲಸ್‌ AMOLED ಡಿಸ್‌ಪ್ಲೇಯನ್ನು ಹೊಂದಿದ್ದು, ಡಿಸ್‌ಪ್ಲೇಯ ಅನುಪಾತವು 19.5:9 ಆಗಿದೆ. ಹಾಗೆಯೇ ಈ ಗೇಮಿಂಗ್ ಫೋನಿನ ಡಿಸ್‌ಪ್ಲೇ ರೀಫ್ರೆಶ್‌ ರೇಟ್‌ 90Hz ಸಾಮರ್ಥ್ಯದಲ್ಲಿದ್ದು, ಸ್ಕ್ರೀನ್‌ ಪ್ರಖರತೆಯ ಸಾಮರ್ಥ್ಯವು ಅಧಿಕವಾಗಿದೆ.

ವೇಗದ ಪ್ರೊಸೆಸರ್

ವೇಗದ ಪ್ರೊಸೆಸರ್

ನುಬಿಯಾ ರೆಡ್ ಮ್ಯಾಜಿಕ್ 3S' ಗೇಮಿಂಗ್ ಸ್ಮಾರ್ಟ್‌ಫೋನ್‌ ಕ್ವಾಲ್ಕಮ್ ಸ್ನ್ಯಾಪಡ್ರಾಗನ್ 855 ಪ್ಲಸ್‌ ಪ್ರೊಸೆಸರ್ ಅನ್ನು ಹೊಂದಿದ್ದು, ಇದರೊಂದಿಗೆ ಆಂಡ್ರಾಯ್ಡ 9 ಪೈ ಓಎಸ್‌ ಸಪೋರ್ಟ್ ಸಹ ಪಡೆದಿದೆ. ಈ ಪ್ರೊಸೆಸರ್ ಗೇಮಿಂಗ್‌ಗೆ ಅತ್ಯುತ್ತಮ ವೇಗ ನೀಡಲಿದ್ದು, ಎರಡು ವೇರಿಯಂಟ್ ಆಯ್ಕೆಗಳನ್ನು ಹೊಂದಿದೆ. ಅವುಗಳು ಕ್ರಮವಾಗಿ 8GB RAM + 128GB ಮತ್ತು 12GB RAM + 256GB ಆಗಿವೆ.

48ಎಂಪಿ ಕ್ಯಾಮೆರಾ

48ಎಂಪಿ ಕ್ಯಾಮೆರಾ

ನುಬಿಯಾ ಸಂಸ್ಥೆ 'ರೆಡ್ ಮ್ಯಾಜಿಕ್ 3S' ಗೇಮಿಂಗ್ ಸ್ಮಾರ್ಟ್‌ಫೋನಿನಲ್ಲಿ ಕ್ಯಾಮೆರಾ ಫೀಚರ್‌ಗೂ ಅಧಿಕ ಮಹತ್ವ ನೀಡಿದ್ದು, ಹಿಂಬದಿಯಲ್ಲಿ f/1.79 ಅಪರ್ಚರ್‌ ಸಾಮರ್ಥ್ಯದಲ್ಲಿ 48ಎಂಪಿ ಸೆನ್ಸಾರ್‌ ಸಿಂಗಲ್ ರಿಯರ್ ಕ್ಯಾಮೆರಾ ನೀಡಲಾಗಿದೆ. ಹಾಗೆಯೇ ಸೆಲ್ಫಿಗಾಗಿ 16ಎಂಪಿ ಸಾಮರ್ಥ್ಯದ ಸೋನಿ ಸೆನ್ಸಾರ್‌ ಕ್ಯಾಮೆರಾ ಒದಗಿಸಲಾಗಿದ್ದು, ಸೆಲ್ಫಿ ಕ್ಯಾಮೆರಾವು f/2.0 ಅಪರ್ಚರ್‌ ಪಡೆದುಕೊಂಡಿದೆ.

ಪವರ್‌ಫುಲ್ ಬ್ಯಾಟರಿ

ಪವರ್‌ಫುಲ್ ಬ್ಯಾಟರಿ

ನುಬಿಯಾ ರೆಡ್ ಮ್ಯಾಜಿಕ್ 3S' ಗೇಮಿಂಗ್ ಸ್ಮಾರ್ಟ್‌ಫೋನ್‌ 5,000mAh ಸಾಮರ್ಥ್ಯದ ಪವರ್‌ಫುಲ್‌ ಬ್ಯಾಟರಿ ನೀಡಲಾಗಿದ್ದು, ಇದರೊಂದಿಗೆ 27W ಸಾಮರ್ಥ್ಯದ ಫಾಸ್ಟ್ ಚಾರ್ಜಿಂಗ್ ಸೌಲಭ್ಯವನ್ನು ಒದಗಿಸಲಾಗಿದೆ. ಒಮ್ಮೆ ಪೂರ್ಣ ಬ್ಯಾಟರಿ ಚಾರ್ಜ್ ಮಾಡಿದರೇ ಸುಮಾರು 6ಗಂಟೆಗಳ ನಿರಂತರ ಗೇಮ್ಸ್‌ ಪ್ಲೇ ಬ್ಯಾಕ್‌ಅಪ್‌ ನೀಡಲಿದೆ. ಇದರೊಂದಿಗೆ DTS:X ಆಡಿಯೊ ಬೆಂಬಲ, ಲಿಕ್ವಿಡ್‌ ಕೂಲಿಂಗ್, ಗೇಮ್‌ ಬೂಸ್ಟ್ ಬಟನ್ ಸೌಲಭ್ಯಗಳನ್ನು ನೀಡಲಾಗಿದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ನುಬಿಯಾ ರೆಡ್ ಮ್ಯಾಜಿಕ್ 3S' ಗೇಮಿಂಗ್ ಸ್ಮಾರ್ಟ್‌ಫೋನ್‌ ಎರಡು ವೇರಿಯಂಟ್‌ಗಳಲ್ಲಿ ಬಿಡುಗಡೆ ಆ ಗಿದ್ದು, (ಅಕ್ಟೋಬರ್ 21) ಇಂದಿನಿಂದ ಮೊದಲ ಸೇಲ್ ಆರಂಭಿಸಲಿದೆ. 8GB RAM + 128GB ವೇರಿಯಂಟ್ ಬೆಲೆಯು 35,999ರೂ ಆಗಿದ್ದು, ಸ್ಪೆಸ್‌ ಗ್ರೇ ಬಣ್ಣದ ಆಯ್ಕೆಯಲ್ಲಿ ಸಿಗಲಿದೆ. ಮತ್ತು 12GB RAM + 256GB ವೇರಿಯಂಟ್ ಬೆಲೆಯು 47,999ರೂ.ಗಳಾಗಿದ್ದು, ರೆಡ್‌ ಮತ್ತು ಬ್ಲೂ ಕಲರ್ ಆಯ್ಕೆಯಲ್ಲಿ ದೊರೆಯಲಿದೆ.

Most Read Articles
Best Mobiles in India

English summary
The Nubia Red Magic 3S comes in two storage variants — 8 GB RAM + 128 GB internal storage. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more