Just In
Don't Miss
- Sports
ಅಸಾಧಾರಣ ಆಟಗಾರರಿಂದಾಗಿ ಭಾರತದ ವಿರುದ್ಧ ಇಂಗ್ಲೆಂಡ್ ಗೆಲ್ಲಲಿದೆ: ಆ್ಯಂಡಿ ಫ್ಲವರ್
- Finance
ಪ್ರಮುಖ ಮಾರುಕಟ್ಟೆಯಲ್ಲಿ ಅಡಿಕೆ, ಮೆಣಸು, ಕಾಫೀ ಜ. 28ರ ದರ
- News
ಫೆ.28ರವರೆಗೂ ಅಂತಾರಾಷ್ಟ್ರೀಯ ಪ್ರಯಾಣಿಕರ ವಿಮಾನ ಸಂಚಾರಕ್ಕೆ ನಿರ್ಬಂಧ
- Automobiles
ಮೆಕ್ಸಿಕೋ ಮಾರುಕಟ್ಟೆಗೆ ಕಾಲಿಡಲಿದೆ ಹೀರೋ ಮೋಟೊಕಾರ್ಪ್
- Movies
ರಾಬರ್ಟ್, ಪೊಗರು, ಕೋಟಿಗೊಬ್ಬ 3 ಬಗ್ಗೆ ಪುನೀತ್ ರಾಜ್ಕುಮಾರ್ ಮಾತು
- Lifestyle
ಶನಿ ಸಂಚಾರ 2021: ನಿಮ್ಮ ರಾಶಿಯ ಮೇಲೆ ವರ್ಷ ಪೂರ್ತಿ ಇರಲಿದೆ ಶನಿಯ ಪ್ರಭಾವ
- Education
KVAFSU Bidar Recruitment 2021: 9 ಸಹಾಯಕ ಪ್ರಾಧ್ಯಾಪಕ ಹುದ್ದೆಗಳಿಗೆ ನೇರ ಸಂದರ್ಶನ
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ತುರ್ತಾಗಿ ನಿಸರ್ಗದ ಕರೆಗೆ ಓಗೊಡಲು ‘ಓಲಾ ರೆಸ್ಟ್ರೂಂ‘ ಕ್ಯಾಬ್ ಬುಕ್ ಮಾಡಿ!!
ನಗರೀಕರಣಕ್ಕೆ ಆಧುನಿಕತೆ ಪರಿಹಾರವಾಗಬಲ್ಲದು ಎಂಬುದನ್ನು ಜನಪ್ರಿಯ ಆಪ್ ಆಧಾರಿತ ಕ್ಯಾಬ್ ಸೇವೆ ಒದಗಿಸುವ ಓಲಾ ತೋರಿಸಿಕೊಟ್ಟಿದೆ. ನಗರಗಳಲ್ಲಿ ತುರ್ತು ಶೌಚಾಲಯದ ಅನಿವಾರ್ಯತೆಗಾಗಿ ಓಲಾ ಸಂಸ್ಥೆ ಈ ನೂತನ ಯೋಜನೆಯೊಂದನ್ನು ಪರಿಚಯಪಡಿಸಲು ಮುಂದಾಗಿದ್ದು, ತುರ್ತಾಗಿ ನಿಸರ್ಗದ ಕರೆಗೆ ಇನ್ಮುಂದೆ 'ಓಲಾ ರೆಸ್ಟ್ರೂಂ' ಬುಕ್ ಮಾಡಬಹುದು.!
ಹೌದು, ಇದು ತಮಾಷೆಯಂತೆ ಕಂಡರೂಜನಪ್ರಿಯ ಓಲಾ ಕ್ಯಾಬ್ ಸಂಸ್ಥೆ ಗ್ರಾಹಕರಿಗಾಗಿ ಹೊಸದಾದ ಮೊಬೈಲ್ ಶೌಚಾಲಯ ಯೋಜನೆಯೊಂದನ್ನು ಪರಿಚಯ ಪಡಿಸುತ್ತಿದೆ. ಗ್ರಾಹಕರಿಗಾಗಿ ಮೊಬೈಲ್ ಶೌಚಾಲಯ ಎಂಬ ವಿನೂತನ ಸೇವೆಯನ್ನು ಪರಿಚಯ ಪಡಿಸಲು ಓಲಾಮುಂದಾಗಿದ್ದು, ಈ ಕುರಿತಾಗಿ ಓಲಾ ಸಂಸ್ಥೆ ತನ್ನ ಟ್ವಿಟ್ಟರ್ ಖಾತೆಯಲ್ಲಿ ಸಂದೇಶವನ್ನು ಹೊರಡಿಸಿದೆ.
'ಓಲಾ ರೆಸ್ಟ್ರೂಂಗಳನ್ನು ಪರಿಚಯಿಸುತ್ತಿದ್ದೇವೆ. ಎಲ್ಲವೂ ಮೊಬೈಲ್ ಆಗಿರಬೇಕು ಎನ್ನುವ ಯುವ ತಲೆಮಾರಿನವರಿಗೆ ಮತ್ತು ಭೇಟಿ ನೀಡಬಯಸುವ ಎಲ್ಲರಿಗಾಗಿ' ಎಂದು ಓಲಾ ಕ್ಯಾಬ್ ತನ್ನ ಅಧಿಕೃತ ಟ್ವಿಟರ್ ಹ್ಯಾಂಡಲ್ನಲ್ಲಿ ವೀಡಿಯೋ ಒಂದನ್ನು ಪ್ರಕಟಿಸಿದೆ. ಈ ವೀಡಿಯೋ ಇದೀಗ ವೈರಲ್ ಆಗಿದ್ದು, ಭಾರೀ ವೀಕ್ಷಣೆ ಪಡೆದಿರುವ ಈ ವಿಡಿಯೋವನ್ನು ಹಲವರು ಮೆಚ್ಚಿದ್ದಾರೆ.
ಎಲ್ಲೆಲ್ಲೋ ಇರುವಾಗ ತುರ್ತಾಗಿ ನಿಸರ್ಗದ ಕರೆಗೆ ಓಗೊಡುವ ಅನಿವಾರ್ಯತೆ ಬಂದರೆ ಶೌಚಾಲಯ ಹುಡುಕುತ್ತ ಓಡಾಡುವ ಅಗತ್ಯವಿಲ್ಲದೇ ನೀವಿರುವಲ್ಲಿಗೇ ನಿಮ್ಮನ್ನು ಹುಡುಕಿಕೊಂಡು ಓಲಾದ ಮೊಬೈಲ್ ಶೌಚಾಲಯ ಬರುತ್ತದೆ. ಈ ಸೇವೆ ಅತ್ಯಂತ ಅಗತ್ಯವಿತ್ತು. ಇದಕ್ಕಾಗಿ ಓಲಾ ಸಂಸ್ಥೆಗೆ ಧನ್ಯವಾದಗಳು ಎಂದು ಹಲವರು ಟ್ವಿಟರ್ ಬಳಕೆದಾರರು ಇದನ್ನು ಸ್ವಾಗತಿಸಿದ್ದರೆ.
Introducing Ola Restrooms. A place to go, for a generation that’s on the go. #OlaRestrooms #NoPressure pic.twitter.com/H7vQh0JktR
— Ola (@Olacabs) March 29, 2019
ಆದರೆ, ಏಪ್ರಿಲ್ 1ರ ಸಮಯದಲ್ಲಿ ಓಲಾ ಇಂತಹದೊಂದು ಸೇವೆಯನ್ನು ನೀಡಲು ಮುಂದಾಗಿರುವುದನ್ನ ಕೆಲವರು ಇದು ಏಪ್ರಿಲ್ ಫೂಲ್ ಮಾಡುವ ತಂತ್ರವಿರಬಹುದೆ? ಎಂದೂ ಸಂದೇಹ ವ್ಯಕ್ತಪಡಿಸಿದ್ದಾರೆ. ಒಟ್ಟಿನಲ್ಲಿ ಏನೇ ಆದರೂ, ನಗರ ಪ್ರದೇಶಗಳಿಗೆ ಇಂತಹ ಸೌಲಭ್ಯದ ಅವಶ್ಯವಿತ್ತು. ಅದರಲ್ಲೂ ಮಹಿಳೆಯರಿಗೆ ಇಂತಹ ಸೇವೆ ಸಿಕ್ಕರೆ ಅದಕ್ಕಿಂತ ಸಿಹಿಸುದ್ದಿ ಮತ್ತೇನಿದೆ.
-
92,999
-
17,999
-
39,999
-
29,400
-
38,990
-
29,999
-
16,999
-
23,999
-
18,170
-
21,900
-
14,999
-
17,999
-
42,099
-
16,999
-
23,999
-
29,495
-
18,580
-
64,900
-
34,980
-
45,900
-
17,999
-
54,153
-
7,000
-
13,999
-
38,999
-
29,999
-
20,599
-
43,250
-
32,440
-
16,190