Just In
Don't Miss
- News
NEP- ತಿಂಗಳ ಬಳಿಕ ರಾಜ್ಯದ ಶಾಲೆಗಳಲ್ಲಿ ಎನ್ಇಪಿ ಜಾರಿ
- Lifestyle
Today Rashi Bhavishya: ಮಂಗಳವಾರದ ದಿನ ಭವಿಷ್ಯ: ಮೇಷ, ಮಿಥುನ, ಸಿಂಹ, ವೃಶ್ಚಿಕ ರಾಶಿಯವರಿಗೆ ಹಣಕಾಸಿನ ವಿಚಾರದಲ್ಲಿ ಉತ್ತಮ ಸಮಯ
- Sports
DC vs PBKS: ಕೊನೆಯ ನಿಮಿಷದಲ್ಲಿ ಸ್ಟ್ರೈಕ್ ಬದಲಿಸಿ ಗೋಲ್ಡನ್ ಡಕೌಟ್ ಆದ ಡೇವಿಡ್ ವಾರ್ನರ್
- Movies
ಹೆಣ್ ಮಕ್ಕಳ ದಿಲ್ ಕದ್ದ ಅಭಿನವ್: ಹ್ಯಾಂಡ್ಸಮ್ ಹುಡುಗನ ಕಲರ್ ಫುಲ್ ಜಗತ್ತು ಹೇಗಿದೆ?
- Finance
ಮೇ 16ರಂದು ವಾಣಿಜ್ಯ ಬೆಳೆ ಅಡಿಕೆ, ಕಾಫಿ, ಮೆಣಸು, ಏಲಕ್ಕಿ ಪೇಟೆ ಧಾರಣೆ
- Automobiles
ಆಕರ್ಷಕ ಬೆಲೆಯಲ್ಲಿ ಅತ್ಯಧಿಕ ಮೈಲೇಜ್ ಪ್ರೇರಿತ ಡಿ15 ಇವಿ ಸ್ಕೂಟರ್ ಬಿಡುಗಡೆಗೊಳಿಸಿದ ಬಿಗೌಸ್
- Education
Oil India Recruitment 2022 : 16 ನರ್ಸಿಂಗ್ ಟ್ಯೂಟರ್ ಮತ್ತು ಇತರೆ ಹುದ್ದೆಗಳಿಗೆ ನೇರ ಸಂದರ್ಶನ
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಒನ್ಪ್ಲಸ್ 10 ಪ್ರೊ ಲಾಂಚ್ಗೆ ದಿನಾಂಕ ನಿಗದಿ; ಕುತೂಹಲ ಹೆಚ್ಚಿಸಿದ ಬೆಲೆ ಮತ್ತು ಫೀಚರ್ಸ್!
ಜನಪ್ರಿಯ ಒನ್ಪ್ಲಸ್ ಮೊಬೈಲ್ ಸಂಸ್ಥೆಯ ಬಹುನಿರೀಕ್ಷಿತ ಒನ್ಪ್ಲಸ್ 10 (OnePlus 10) ಸರಣಿಯ ಬಿಡುಗಡೆಗೆ ಅಧಿಕೃತ ದಿನಾಂಕ ನಿಗದಿ ಆಗಿದೆ. ಒನ್ಪ್ಲಸ್ ಕಂಪನಿಯ ಈ ಹಿಂದಿನ ಒನ್ಪ್ಲಸ್ 9 ಸರಣಿಯ ಫೋನ್ಗಳು ಹೆಚ್ಚು ಗಮನ ಸೆಳೆದಿವೆ. ಅದರ ಮುಂದುವರಿದ ಭಾಗವಾಗಿ ಇದೀಗ ಲಗ್ಗೆ ಇಡುತ್ತಿರುವ ಒನ್ಪ್ಲಸ್ 10 ಸ್ಮಾರ್ಟ್ಫೋನ್ ಸರಣಿಯ ಹೆಚ್ಚಿನ ನಿರೀಕ್ಷೆ ಹುಟ್ಟು ಹಾಕಿದೆ. ಈ ಫೋನ್ ಫ್ಲ್ಯಾಗ್ಶಿಪ್ ಅಪ್ಗ್ರೇಡ್ ಪ್ರೊಸೆಸರ್, ಅತ್ಯುತ್ತಮ ಕ್ಯಾಮೆರಾ ಆಯ್ಕೆಗಳನ್ನು ಒಳಗೊಂಡಿರಲಿದೆ ಎಂದು ನಿರೀಕ್ಷಿಸಲಾಗಿದೆ.

ಹೌದು, ಒನ್ಪ್ಲಸ್ ಕಂಪನಿಯ ತನ್ನ ಮುಂಬರುವ ಒನ್ಪ್ಲಸ್ 10 ಫೋನ್ ಸರಣಿಯನ್ನು ಇದೇ ಜನವರಿ 11 ರಂದು ಚೀನಾದಲ್ಲಿ ಬಿಡುಗಡೆ ಮಾಡಲಿದೆ. ಈ ಸರಣಿಯಲ್ಲಿ ಒನ್ಪ್ಲಸ್ 10 ಮತ್ತು ಒನ್ಪ್ಲಸ್ 10 ಪ್ರೊ ಸ್ಮಾರ್ಟ್ಫೋನ್ ಲಾಂಚ್ ಆಗುವ ಸಾಧ್ಯತೆಗಳಿವೆ ಎನ್ನಲಾಗಿದೆ. ಒನ್ಪ್ಲಸ್ 10 ಪ್ರೊ ಮೊದಲ ನೋಟವನ್ನು ಕಂಪನಿಯ ಸಹ ಸಂಸ್ಥಾಪಕ ಪೀಟ್ ಲಾವ್ ಹಂಚಿಕೊಂಡಿದ್ದಾರೆ. ಹಂಚಿಕೊಂಡ ಟೀಸರ್ ಚಿತ್ರವು ಮುಂಬರುವ ಪ್ರಮುಖ ಸ್ಮಾರ್ಟ್ಫೋನ್ ಹ್ಯಾಸೆಲ್ಬ್ಲಾಡ್ ಸಹ ಅಭಿವೃದ್ಧಿಪಡಿಸಿದ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟ್ಅಪ್ ಅನ್ನು ಒಳಗೊಂಡಿರುವ ಬಗ್ಗೆ ಖಚಿತಪಡಿಸುತ್ತದೆ.
We've worked hard on multiple upgrades to create a truly well-rounded flagship with the OnePlus 10 Pro. Here's a first look. Personally, I love the refreshed new OnePlus x Hasselblad camera module. pic.twitter.com/M3i5kSHa28
— Pete Lau (@PeteLau) January 4, 2022
ಒನ್ಪ್ಲಸ್ 10 ಪ್ರೊ ನ ಟೀಸರ್ ಪೋಸ್ಟರ್ ಎಲ್ಇಡಿ ಫ್ಲ್ಯಾಷ್ನೊಂದಿಗೆ ಜೋಡಿಸಲಾದ ಹಿಂಭಾಗದಲ್ಲಿ ದೊಡ್ಡ ಟ್ರಿಪಲ್ ಕ್ಯಾಮೆರಾ ಸೆಟ್ಅಪ್ ಅನ್ನು ಬಹಿರಂಗಪಡಿಸುತ್ತದೆ. ಹಿಂದಿನ ವರದಿಗಳ ಪ್ರಕಾರ ಒನ್ಪ್ಲಸ್ 10 ಪ್ರೊ 48MP ಪ್ರಾಥಮಿಕ ಶೂಟರ್, 50MP ಅಲ್ಟ್ರಾ ವೈಡ್ ಲೆನ್ಸ್ ಮತ್ತು 8MP ಟೆಲಿಫೋಟೋ ಲೆನ್ಸ್ ಅನ್ನು ಹೊಂದಿರುತ್ತದೆ. ಮುಂಭಾಗದಲ್ಲಿ, ಒನ್ಪ್ಲಸ್ 10 ಪ್ರೊ ಫೋನ್ 32 ಮೆಗಾ ಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ಪಡೆಯಲು ಹೊಂದಿರಲಿದೆ. ಅಲ್ಲದೇ ಒನ್ಪ್ಲಸ್ 10 ಪ್ರೊ ಫೋನ್ ಧೂಳು ಮತ್ತು ನೀರಿನ ಪ್ರತಿರೋಧಕ್ಕಾಗಿ IP68 ಪ್ರಮಾಣೀಕೃತ ಆಯ್ಕೆ ಪಡೆದಿದೆ. ಇದರೊಂದಿಗೆ 5,000mAh ಬ್ಯಾಟರಿ ಬ್ಯಾಕ್ಅಪ್ ಸೌಲಭ್ಯ ಸಹ ಹೊಂದಿದೆ.

ಒನ್ಪ್ಲಸ್ 10 ಪ್ರೊ ಫೋನ್ ಆಂಡ್ರಾಯ್ಡ್ 12 ಆಧಾರಿತ OxygenOS 12 ನಲ್ಲಿ ಕಾರ್ಯನಿರ್ವಹಿಸುತ್ತದೆ ಎಂದು ಹೇಳಲಾಗುತ್ತದೆ. ಈ ಫೋನ್ 6.7 ಇಂಚಿನ QHD + ಡಿಸ್ಪ್ಲೇಯನ್ನು ಹೊಂದಿರಬಹುದು. ಫೋನ್ LTPO 2.0 ತಂತ್ರಜ್ಞಾನವನ್ನು ಬಳಸುವುದನ್ನು ದೃಢೀಕರಿಸಿದೆ ಮತ್ತು 120Hz ರಿಫ್ರೆಶ್ ದರವನ್ನು ಹೊಂದಿದೆ. ಇದು ಕ್ವಾಲ್ಕಮ್ ಸ್ನ್ಯಾಪ್ಡ್ರಾಗನ್ 8 ಜೆನ್ 1 SoC ನಿಂದ ಚಾಲಿತವಾಗಿದೆ ಎಂದು ಲೀಕ್ ಮಾಹಿತಿಗಳಿಂದ ತಿಳಿದುಬಂದಿದೆ. ಜೊತೆಗೆ ಈ ಫೋನ್ 12GB ವರೆಗೆ LPDDR5 RAM ಮತ್ತು 256 GB ವರೆಗಿನ UFS 3.1 ಸಂಗ್ರಹಣೆಯೊಂದಿಗೆ ಬರಬಹುದು.
ಒನ್ಪ್ಲಸ್ 10 ಪ್ರೊ Hasselblad ಬ್ರ್ಯಾಂಡಿಂಗ್ ಅನ್ನು ಹೊಂದಿದ್ದು, ಹಿಂಭಾಗದಲ್ಲಿ ಒನ್ಪ್ಲಸ್ ಬ್ರ್ಯಾಂಡಿಂಗ್ ಇದೆ. ಸ್ಲೈಡರ್ ಜೊತೆಗೆ ಬಲ ಭಾಗದಲ್ಲಿ ಪವರ್ ಬಟನ್ ಅನ್ನು ಸಹ ಹೊಂದಿದೆ. ಹಾಗೆಯೇ ಒನ್ಪ್ಲಸ್ ಟ್ವಿಟರ್ನಲ್ಲಿನ ಕಿರು ವೀಡಿಯೊ ಕ್ಲಿಪ್ನಲ್ಲಿ ಒನ್ಪ್ಲಸ್ 10 ಪ್ರೊ ಫೋನ್ ವೊಲ್ಕ್ಯಾನಿಕ್ ಕಪ್ಪು ಮತ್ತು ಎಮರಾಲ್ಡ್ ಫಾರೆಸ್ಟ್ ಬಣ್ಣದ ಆಯ್ಕೆಗಳಲ್ಲಿ ಬರಲಿದೆ ಎಂದು ದೃಢಪಡಿಸಿದೆ. ಇನ್ನು ಈ ಫೋನ್ 8 GB + 128 GB, 8 GB + 256 GB, ಮತ್ತು 12 GB + 256 GB ಸಂಗ್ರಹ ಸಾಮರ್ಥ್ಯದ ಮೂರು ವೇರಿಯಂಟ್ ಕಾನ್ಫಿಗರೇಶನ್ಗಳಲ್ಲಿ ಲಭ್ಯವಿರುತ್ತದೆ ಎಂದು ತೋರಿಸುತ್ತದೆ.
-
54,535
-
1,19,900
-
54,999
-
86,999
-
49,975
-
49,990
-
20,999
-
1,04,999
-
44,999
-
64,999
-
20,699
-
49,999
-
11,499
-
54,999
-
7,999
-
8,980
-
17,091
-
10,999
-
34,999
-
39,600
-
25,750
-
33,590
-
27,760
-
44,425
-
13,780
-
1,25,000
-
45,990
-
1,35,000
-
82,999
-
17,999